Homeಮುಖಪುಟಕೇಂದ್ರ ಸರ್ಕಾರ ಸ್ಥಾಪಿಸಿದ ಸಾಂಕ್ರಮಿಕ ಕಣ್ಗಾವಲು ಯೋಜನೆಯ ಮುಖ್ಯಸ್ಥ ರಾಜೀನಾಮೆ

ಕೇಂದ್ರ ಸರ್ಕಾರ ಸ್ಥಾಪಿಸಿದ ಸಾಂಕ್ರಮಿಕ ಕಣ್ಗಾವಲು ಯೋಜನೆಯ ಮುಖ್ಯಸ್ಥ ರಾಜೀನಾಮೆ

- Advertisement -
- Advertisement -

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ‘ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ’ (INSACOG) ನ ವೈಜ್ಞಾನಿಕ ಸಲಹಾ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವೈರಾಲಜಿಸ್ಟ್ ಶಾಹಿದ್ ಜಮೀಲ್ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಭಾರತದಲ್ಲಿ ಕೊರೊನಾ ತಳಿಗಳ ಪರಿಚಲನೆಯ ಪ್ರಯೋಗಾಲಯ ಮತ್ತು ಸಾಂಕ್ರಾಮಿಕ ರೋಗಗಳ ಕಣ್ಗಾವಲಿಗಾಗಿ ಈ ಒಕ್ಕೂಟವನ್ನು ಸ್ಥಾಪಿಸಲಾಗಿತ್ತು.

ಪ್ರಸ್ತುತ ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕರಾಗಿರುವ ಜಮೀಲ್ ಅವರು ಒಕ್ಕೂಟದ ಮುಖ್ಯ ಸಲಹೆಗಾರ ಸ್ಥಾನದಿಂದ ಯಾಕೆ ಕೆಳಗಿಳಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅವರು ಸರ್ಕಾರದ ಕೋವಿಡ್ ನೀತಿಗಳನ್ನು ಟೀಕಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.

ಇದನ್ನೂ ಓದಿ: ಹಿಂದುತ್ವವಾದಿಗಳು ವಿರೋಧಿಸಿದ್ದ ಪುಸ್ತಕ: ‘ಹಿಂದೂಗಳು – ಬೇರೊಂದು ಚರಿತ್ರೆ’

ತೀರಾ ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್‌ಗೆ ಬರೆದ ಅಂಕಣದಲ್ಲಿ ಅವರು, “ಸಾಕ್ಷ್ಯಾಧಾರಿತ ನೀತಿ ತಯಾರಿಕೆಗೆ ಮೊಂಡುತನದ ಪ್ರತಿಕ್ರಿಯೆಯನ್ನು ಭಾರತದ ವಿಜ್ಞಾನಿಗಳು ಎದುರಿಸುತ್ತಿದ್ದಾರೆ” ಎಂದು ಹೇಳಿದ್ದರು.

ಈ ಹಿಂದೆ ವೆಲ್ಕಂ ಟ್ರಸ್ಟ್ ಡಿಬಿಟಿ ಇಂಡಿಯಾ ಅಲೈಯನ್ಸ್‌ನ ಸಿಇಒ ಆಗಿದ್ದ ಜಮೀಲ್, ಹೆಪಟೈಟಿಸ್ ಇ ವೈರಸ್ ಕುರಿತ ಸಂಶೋಧನೆಗೆ ಹೆಸರುವಾಸಿಯಾಗಿದ್ದರು. ಪ್ರಸ್ತುತ ತನ್ನ ರಾಜೀನಾಮೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.

ಮುಖ್ಯವಾಗಿ SARS CoV-2 ನ ಜೀನೋಮಿಕ್ ರೂಪಾಂತರಗಳನ್ನು ಕಂಡುಹಿಡಿಯಲು INSACOG ಒಕ್ಕೂಟವನ್ನು ಕೇಂದ್ರ ಸರ್ಕಾರವು ಐದು ತಿಂಗಳ ಹಿಂದೆ ಸ್ಥಾಪಿಸಿತ್ತು.

INSACOG ಅಡಿಯಲ್ಲಿ, ವೈರಸ್‌‌ ರೂಪಾಂತರಗಳನ್ನು ಅಧ್ಯಯನ ಮಾಡಲು ಸಜ್ಜುಗೊಂಡ 10 ರಾಷ್ಟ್ರೀಯ ಪ್ರಯೋಗಾಲಯಗಳನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಆಶ್ರಯದಲ್ಲಿ ಒಟ್ಟುಗೂಡಿಸಲಾಗಿತ್ತು. ಆದರೆ, ಇದು ಮೊದಲಿನಿಂದಲೂ ತೀವ್ರ ಅನುದಾನದ ಬಿಕ್ಕಟ್ಟಿನಿಂದ ಬಳಲುತ್ತಿದೆ. ಇದರ ಪರಿಣಾಮ ಇದರ ಕೆಲಸವು ಯೋಜಿಸಿದಕ್ಕಿಂತ ಕಡಿಮೆ ವೇಗದಲ್ಲಿ ನಡೆಯುತ್ತಿದೆ.

ಈ ಯೋಜನೆಗೆ 6 ತಿಂಗಳ ಅವಧಿಗೆ 115 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ಸರ್ಕಾರ ಆರಂಭದಲ್ಲಿ ತಿಳಿಸಿತ್ತಾದರೂ, ಈ ಹಂಚಿಕೆಯನ್ನು ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: ಹರಿಯಾಣ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿಚಾರ್ಜ್- ಹಲವರಿಗೆ ಗಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮನುವಾದಿಗಳಿಗೆ ನೈಜ ವಿಜ್ಞಾನಿಗಳ ಮಾತಿಗಿಂತಲೂ, ಸಗಣಿ ಗಂಜಲದ ಭಕ್ತರ ಮಾತೇ ಮುಖ್ಯವಾಗಿದೆ. ಇದು ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ದೇಶ ತೊರೆಯುವುದನ್ನು ಪ್ರಧಾನಿ ಮೋದಿ ತಡೆದಿಲ್ಲ: ಪ್ರಿಯಾಂಕಾ ಗಾಂಧಿ

0
ಹಾಸನ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಭಾರತ ತೊರೆಯುವುದನ್ನು ಪ್ರಧಾನಿ ನರೇಂದ್ರ ಮೋದಿ ತಡೆದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಅಸ್ಸಾಂನ...