Homeಕರ್ನಾಟಕಪಬ್ಲಿಕ್‌, ಸುವರ್ಣ, ಟಿವಿ9 ಮತ್ತು ಪಬ್ಲಿಕ್ ಟಿವಿ ಕಚೇರಿ ಮುಂದೆ ಬುಧವಾರ ‘ಆತ್ಮಾವಲೋಕನ ಸತ್ಯಾಗ್ರಹ’

ಪಬ್ಲಿಕ್‌, ಸುವರ್ಣ, ಟಿವಿ9 ಮತ್ತು ಪಬ್ಲಿಕ್ ಟಿವಿ ಕಚೇರಿ ಮುಂದೆ ಬುಧವಾರ ‘ಆತ್ಮಾವಲೋಕನ ಸತ್ಯಾಗ್ರಹ’

ಮಾಧ್ಯಮಗಳು ಎಷ್ಟು ಮಲಿನ ಆಗಿದೆ ಎಂದು ನಾವೆಲ್ಲಾ ನೋಡುತ್ತಿದ್ದೇವೆ. ಇದಕ್ಕೆಲ್ಲಾ ಆಧಾರಗಳು ಬೇಕಾಗಿಲ್ಲ, ಎಲ್ಲವೂ ಕಣ್ಣೆದುರಲ್ಲಿ ನಡೆಯುತ್ತಿದೆ ಎಂದು ಸತ್ಯಾಗ್ರಹಿಯೊಬ್ಬರು ಹೇಳಿದ್ದಾರೆ

- Advertisement -
- Advertisement -

ಕನ್ನಡದ ಸುದ್ದಿ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತು ಜನರನ್ನು ದಾರಿ ತಪ್ಪಿಸುತ್ತಿರುವ ಹಿನ್ನಲೆಯಲ್ಲಿ, ಕನ್ನಡದ ಪ್ರಮುಖ ದೃಶ್ಯ ಮಾಧ್ಯಮಗಳಾದ ಪಬ್ಲಿಕ್ ಟಿವಿ, ಸುವರ್ಣ ಟವಿ, ಟಿವಿ9 ಮತ್ತು ಬಿಟಿವಿ ಕಚೇರಿಗಳ ಮುಂದೆ ‘ಆತ್ಮಾವಲೋಕನ ಸತ್ಯಾಗ್ರಹ’ವನ್ನು ಸಮಾನ ಮನಸ್ಕರ ಗುಂಪೊಂದು ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಬೆಂಗಳೂರಿನಲ್ಲಿ ನಡೆಸಲಿದೆ.

ಸತ್ಯಾಗ್ರಹವು ಬೆಳಿಗ್ಗೆ 09:30ಕ್ಕೆ ಪಬ್ಲಿಕ್‌ ಟಿವಿ ಕಚೇರಿಯಿಂದ ಪ್ರಾರಂಭವಾಗಲಿದೆ. ನಂತರ 11:30ಕ್ಕೆ ಸುವರ್ಣ ಟಿವಿ ಕಚೇರಿಯ ಮುಂದೆ ತಲುಪಿ, ಅದರ ನಂತರ ಮಧ್ಯಾಹ್ನ 2 ಗಂಟೆಗೆ ಬಿಟಿವಿ ಕಚೇರಿ ಬಳಿ ತೆರಳಿ, ಸಂಜೆ 4 ಗಂಟೆಗೆ ಟಿವಿ9 ಕಚೇರಿ ಮುಂದೆ ಸೇರಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬ ಬಗ್ಗೆ ಒಂದು ಆತ್ಮಾವಲೋಕನ ಮಾಡಿಕೊಳ್ಳುವಂತೆ ಸತ್ಯಾಗ್ರಹಿಗಳು ಕನ್ನಡದ ಮಾಧ್ಯಮಗಳಿಗೆ ವಿನಂತಿಸಲಿದ್ದಾರೆ. ಸತ್ಯಾಗ್ರಹದಲ್ಲಿ ಹಲವು ಹಿರಿಯರು, ಸಮಾನ ಮನಸ್ಕರು ಸೇರಲಿದ್ದಾರೆ ಎಂದು ಸತ್ಯಾಗ್ರಹದ ಸಂಚಾಲಕರು ಹೇಳಿದ್ದಾರೆ.

ಇದನ್ನೂ ಓದಿ: ‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ನಾನುಗೌರಿ.ಕಾಂ ಜೊತೆಗೆ ಮಾನಾಡಿದ ಸಾಮಾಜಿಕ ಕಾರ್ಯಕರ್ತರಾದ ಎಂ. ಯುವರಾಜ್‌‌, “ಸತ್ಯಾಗ್ರಹದಲ್ಲಿ ಮಾಧ್ಯಮಗಳು ಯಾವ ಸುದ್ದಿಯನ್ನು ವಿಜ್ರಂಭಿಸಬೇಕು, ಯಾವ ಸುದ್ದಿಯನ್ನು ನಿರ್ಲಕ್ಷಿಸಬೇಕು ಎಂದು ಅವರಿಗೆ ನೆನಪಿಸಲಿದ್ದೇವೆ. ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡಬೇಕೆ ಹೊರತು, ಸುದ್ದಿಗಳನ್ನು ಸೃಷ್ಟಿಸಬಾರದು ಎಂಬ ರೀತಿಯ ಕೆಲವು ಮಾಹಿತಿಗಳನ್ನು ಮಾಧ್ಯಮಗಳಿಗೆ ಮನವಿಯಲ್ಲಿ ಹೇಳದ್ದೇವೆ” ಎಂದು ಹೇಳಿದ್ದಾರೆ.

ಮಾಧ್ಯಮಗಳು ಯಾವ ದಾರಿಯಲ್ಲಿ ಸಾಗುತ್ತಿವೆ ಮತ್ತು ಈ ರೀತಿಯ ದಾರಿ ಸರಿಯೇ ಎಂಬ ಪ್ರಶ್ನೆಗಳನ್ನು ಬಹಳ ಪ್ರೀತಿಯಿಂದ ಮಾಧ್ಯಮಗಳಿಗೆ ಕೇಳುತ್ತೇವೆ. ಸತ್ಯಾಗ್ರಹದ ಸಮಯದಲ್ಲಿ ಮಾಧ್ಯಮ ಲೋಕದ ಕಡೆಯಿಂದ ನಮ್ಮ ನಿರೀಕ್ಷೆಯ ಭಿತ್ತಿಚಿತ್ರಗಳ ಅನಾವರಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಸತ್ಯಾಗ್ರಹ ನಡೆಸುವ ಬಗ್ಗೆ ಹತ್ತು ದಿನಗಳ ಹಿಂದೆಯೆ ಮಾಧ್ಯಮಗಳಿಗೆ ಮತ್ತು ಆಯಾ ಮಾಧ್ಯಮಗಳ ಕಚೇರಿ ಇರುವ ವ್ಯಾಪ್ತಿಯ ಪೊಲೀಸ್‌ ಠಾಣೆಗೂ ಮಾಹಿತಿ ನೀಡಿದ್ದೇವೆ ಎಂದು ಯುವರಾಜ್ ಅವರು ನಾನುಗೌರಿ.ಕಾಂಗೆ ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಪ್ಯಾಲೆಸ್ತೀನ್‌‌ನ ದಿಟ್ಟ ಬಾಲಕಿಯನ್ನು ಉಕ್ರೇನ್‌‌‌ನವರು ಎಂದು ವರದಿ ಮಾಡಿದ ಪಬ್ಲಿಕ್ ಟಿವಿ ಮತ್ತು ಸುವರ್ಣ ಟಿವಿ!

ಇಂದಿನ ಮಾಧ್ಯಮಗಳು ಎಷ್ಟು ಮಲಿನ ಆಗಿವೆ ಎಂದು ನಾವೆಲ್ಲಾ ನೋಡುತ್ತಿದ್ದೇವೆ. ಇದಕ್ಕೆಲ್ಲಾ ಆಧಾರಗಳು ಬೇಕಾಗಿಲ್ಲ, ಎಲ್ಲವೂ ಕಣ್ಣೆದುರಲ್ಲಿ ನಡೆಯುತ್ತಿದೆ. ಹೀಗಾಗಿ ಮಾಧ್ಯಮಗಳೊಂದಿಗೆ, ನೀವೂ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಅವರಿಗೆ ಸಂವಿಧಾನದ ಪುಸ್ತಕ ಹಾಗೂ ಗುಲಾಬಿ ಕೊಟ್ಟು ಅವರಿಗೆ ಮನವಿ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಸಮಾಜದಲ್ಲಿ ನಾವು ಇರುವುದರಿಂದ, ಸಮಾಜದ ಆಗುಹೋಗುಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದೇವೆ. ಇಡೀ ಸತ್ಯಾಗ್ರಹ ಗಾಂಧಿ ಮಾರ್ಗದಲ್ಲಿ, ಅತ್ಯಂತ ಶಾಂತಿಯುತವಾಗಿ ನಡೆಯುತ್ತದೆ. ಸತ್ಯಾಗ್ರಹದಲ್ಲಿ ಯಾವುದೆ ರೀತಿಯಾದ ಪ್ರತಿಭಟನೆ, ಆಕ್ರೊಶ ಇರುವುದಿಲ್ಲ. ಒಂದು ವೇಳೆ ಮಾಧ್ಯಮಗಳು ನಮ್ಮೊಂದಿಗೆ ಸಂವಾದ ಮಾಡಲು ಬಂದರೆ ನಾವು ಅವರೊಂದಿಗೆ ಸಂವಾದ ಮಾಡುತ್ತೇವೆ. ಆದರೆ ಯಾವುದೇ ಘರ್ಷಣೆ ನಡೆಯುವ ರೀತಿಯ ಯಾವುದೇ ಘೋಷಣೆಗಳು ಇರುವುದಿಲ್ಲ ಎಂದು ಯುವರಾಜ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮತ್ತು ಇತರ ವಿಚಾರಕ್ಕೆ ಎಂ. ಯುವರಾಜ್ ಅವರನ್ನು ಸಂಪರ್ಕಿಸಬಹುದು +918050802019

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಜನರಿಗೆ ಸತ್ಯವನ್ನು ತಿಳಿಸಿಕೊಡುವ ಮಾಧ್ಯಮಕ್ಕೆ ನನ್ನ ಕಿರು ಕಾಣಿಕೆ

  2. ಕಮ್ಯೂನಿಸ್ಟ್ ಮಾಧ್ಯಮಗಳಷ್ಟು ಸುಳ್ಳುಗಳನ್ನು ಹೇಳೋ ಮಾಧ್ಯಮಗಳು ಯಾವ ದೇಶದಲ್ಲಿ ಸಹ ಇಲ್ಲವೇ ಇಲ್ಲಾ

  3. You people are totally frustrated and mentally imbalanced and sold out don’t have shame to protest something whenever ur do cald peaceful community does and violated the land and taken law on there hand.

    Do you think u people are doing right, no one believes and faith on you and ur lied principles whole India knows very well do be get fool your self

  4. Dayavittu suddenly madyamagalu, janarige sneha, samdagala bele, naitikate, Satya Paramarsge. Vivechane, raita Mitra. Vidyarthi Mitra, sadakara yashogate, mustafa vicharagalannu tilisi. News Andre worst anno tara agide.

LEAVE A REPLY

Please enter your comment!
Please enter your name here

- Advertisment -

Must Read

ಮತ್ತೆ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

0
ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ...