Homeಕರ್ನಾಟಕಹಿರಿಯ ಸಾಹಿತಿ ದೇಶಾಂಶ ಹುಡಗಿ ನಿಧನ!

ಹಿರಿಯ ಸಾಹಿತಿ ದೇಶಾಂಶ ಹುಡಗಿ ನಿಧನ!

ಬೀದರ್ ಜಿಲ್ಲೆಯವರಾದ ಇವರ ಮೂಲ ಹೆಸರು ಶಾಂತಪ್ಪ ಶರಣಪ್ಪ ದೇವರಾಯ. ಕನ್ನಡ ಭಾಷೆ, ಸಾಹಿತ್ಯ, ಜಾನಪದ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಇವರು ಮಾಡಿರುವ ಸಾಧನೆ ಅವಿಸ್ಮರಣೀಯ.

- Advertisement -
- Advertisement -

ನಾಡಿನ ಹೆಸರಾಂತ ಸಾಹಿತಿ 91 ವರ್ಷದ ದೇಶಾಂಶ ಹುಡಗಿ ವಯೋಸಹಜ ಕಾಯಿಲೆಯಿಂದ ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4 ದಿನದ ಹಿಂದೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಬೀದರ್ ಜಿಲ್ಲೆಯವರಾದ ಇವರ ಮೂಲ ಹೆಸರು ಶಾಂತಪ್ಪ ಶರಣಪ್ಪ ದೇವರಾಯ. ಕನ್ನಡ ಭಾಷೆ, ಸಾಹಿತ್ಯ, ಜಾನಪದ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಇವರು ಮಾಡಿರುವ ಸಾಧನೆ ಅವಿಸ್ಮರಣೀಯ. ಕಥೆ, ಕವನ ಸಂಕಲ, ಶರಣ ಸಾಹಿತ್ಯ, ಜಾನಪದ ಸಾಹಿತ್ಯ ಸೇರಿದಂತೆ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಹಲವು ಪ್ರಶಸ್ತಿಗಳಿಗೂ ಭಾಜನಾಗಿದ್ದಾರೆ.

ಇದನ್ನು ಓದಿ: ಹೈದರಾಬಾದ್: ಅತಿಕ್ರಮಣ ಪ್ರವೇಶ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ!

ಈ ಸಂದರ್ಭದಲ್ಲಿ 2 ವರ್ಷಗಳ ಹಿಂದೆ ನಾನು ಗೌರಿ.ಕಾಂ ನಲ್ಲಿ ದೇಶಾಂಶ ಹುಡಗಿ ಬಗ್ಗೆ ಬರೆದಿದ್ದ ಲೇಖನವನ್ನು ಮತ್ತೊಮ್ಮೆ ಪ್ರಕಟಿಸಲಾಗಿದೆ.

15 ವರ್ಷಗಳ ಅವಿರತ ಶ್ರಮ ಮತ್ತು ಶ್ರದ್ಧೆಯಿಂದ ಕುರಿತು ದೇಶಾಂಶ ಹುಡಗಿಯವರು ರೂಪಿಸಿದ ‘ಬೀದರ ಕನ್ನಡ ಕೋಶ’ ಕೃತಿಯು ಸಾಂಸ್ಕೃತಿಕ, ಸಾಹಿತ್ಯ ಮತ್ತು ಭಾಷಾ ಲೋಕಕ್ಕೆ ನೀಡಿದ ಮಹತ್ವದ ಕೊಡುಗೆ.

ಇದನ್ನು ಓದಿ: ರಾಜ್ಯ ಸರ್ಕಾರ ದಿವಾಳಿಯಾಗಿದೆ, ವೃದ್ಧಾಪ್ಯ ವೇತನ ನೀಡಲು ಕೂಡಾ ಹಣವಿಲ್ಲ: ಸಿದ್ದರಾಮಯ್ಯ

ಕರ್ನಾಟಕದ ತುತ್ತ ತುದಿಯಲ್ಲಿ ಇರುವ ಬೀದರ್ ಹಲವು ಭಾಷೆಗಳ ಆಡುಂಬೊಲ. ವಿವಿಧ ಭಾಷೆಗಳ ಪರಸ್ಪರ ಮುಖಾಮುಖಿ, ಅನುಸಂಧಾನ, ಕೊಡುಕೊಳುವಿಕೆಯಿಂದ ಹೊಸ ಮತ್ತು ವಿಭಿನ್ನ ಭಾಷೆ-ಪದಗಳು ರೂಪುಗೊಂಡಿವೆ. ಜೊತೆಗೆ ಹಳೆಗನ್ನಡದ ಅಚ್ಚದೇಸಿ ಪದಗಳು ಕೂಡ ಇಂದಿಗೂ ಬಳಕೆಯಲ್ಲಿವೆ. ಅವುಗಳನ್ನು ಹುಡುಕಿ ತಂದು ಒಂದೆಡೆ ಸೇರಿಸಿ ನಿಘಂಟು ರಚಿಸುವ ಅನನ್ಯ ಕೆಲಸವನ್ನು ದೇಶಾಂಶ ಹುಡಗಿ ಅವರು ಮಾಡಿದ್ದಾರೆ.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಮತ್ತು ಬದಲಾವಣೆಗಳು ಅನ್ಯ ಭಾಷೆ ಮತ್ತು ಸಾಹಿತ್ಯದ ಜತೆಗಿನ ಒಡನಾಟದೊಂದಿಗೆ ನಡೆದಿದೆ. ಒಂದು ಕಾಲಕ್ಕೆ ಸಂಸ್ಕೃತದೊಂದಿಗೆ ಮುಖಾಮುಖಿಯಾದ ಕನ್ನಡವು ಅನಂತರದಲ್ಲಿ ಅನುಸಂಧಾನ ಮತ್ತು ಆಪ್ತತೆಗಳಿಂದ ಹೊಸ ತಿಳಿವಳಿಕೆ ಪಡೆಯುತ್ತ, ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಾಯ್ದುಕೊಂಡಿದೆ. ಕವಿರಾಜಮಾರ್ಗಕಾರನ ಪರಿಕಲ್ಪನೆಯ ಹಲವು ಕನ್ನಡಗಳು ಇಲ್ಲಿವೆ. ಅದರಲ್ಲಿ ಬೀದರ ಕನ್ನಡವೂ ಒಂದು. ಹಿಂದಿ, ಉರ್ದು, ತೆಲಗು, ಮರಾಠಿ, ಪರ್ಷಿಯನ್, ಇಂಗ್ಲಿಷ್, ಅರೆಬಿಕ್, ಮೊದಲಾದ ಭಾಷೆಗಳ ಸಂಪರ್ಕದಿಂದ ಬೀದರ ಕನ್ನಡ ಪದ ರಚನೆಯಲ್ಲಿ ಅವೆಲ್ಲವು ಬೆರೆತುಹೋಗಿವೆ. ತೆಲಂಗಾಣಾ, ಮಹಾರಾಷ್ಟ್ರ, ಕನ್ನಡದ ಸೀಮಾಂತ ಜಿಲ್ಲೆಯಾದ ಬೀದರನ ಕನ್ನಡದಲ್ಲಿ ಅನ್ಯ ಭಾಷೆಯ ಅನೇಕ ಪದಗಳನ್ನು ಕನ್ನಡೀಕರಿಸುವ ಶಕ್ತಿ ಪಡೆದಿದೆ. ಸಂಸ್ಕೃತದಿಂದ ಕನ್ನಡಿಕರಣಗೊಂಡು ತದ್ಭವವಾಗುವಂಥ ಗುಣ ಈ ಭಾಷೆಗೆ ಇದೆ.

ಇದನ್ನು ಓದಿ: ಯಡಿಯೂರಪ್ಪ ವಿರುದ್ದ ಅಸಮಾಧಾನ ಹೊರಹಾಕಿದ ಶ್ರೀನಿವಾಸ್ ಪ್ರಸಾದ್- ಪಕ್ಷದಲ್ಲಿ ಬಿಕ್ಕಟ್ಟು?

ಇಂಥ ಭಾಷೆಯ ಮೂಡಿಬಂದ ಈ ಕೋಶ ಬೀದರ ಕನ್ನಡದಲ್ಲಿ ಉಳಿದುಕೊಂಡ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ಅಸಂಖ್ಯ ಪದಗಳನ್ನ ಪೋಷಿಸಿ ಅವನ್ನು ಅರ್ಥದ ಆವರಣಕ್ಕೆ ತಂದು ನಿಲ್ಲಿಸಿದ್ದು ವಿಶೇಷವಾಗಿದೆ.

ಕಾಲದಿಂದ ಕಾಲಕ್ಕೆ ಭಾಷೆಯ ಬಳಕೆ ಭಿನ್ನವಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಈ ನೆಲದ ಭಾಷೆಯ ರಚನೆ, ಅದರ ಸ್ವರೂಪ, ಈ ಬಳಕೆಯಾಗುವ ಪ್ರತ್ಯಯಗಳು, ಭಾಷಾ ಪ್ರಯೋಗದ ಬಗೆಗಳು, ಅವುಗಳ ಅರ್ಥಗ್ರಹಿಕೆ ಇವೆಲ್ಲವುದರ ಕುರಿತು ಭಾಷಾ ಅಧ್ಯಯನಕ್ಕೆ ಹೊಸ ಮಾರ್ಗವೊಂದನ್ನು ಸೃಷ್ಟಿಸಬಲ್ಲ ಕೋಶವನ್ನು ಹುಡಗಿಯವರು ಕಟ್ಟಿಕೊಟ್ಟಿದ್ದಾರೆ. ಸ್ಥಳೀಯ ಭಾಷೆ, ಸಂಪ್ರದಾಯ, ಸಂಸ್ಕೃತಿ, ಜನಪದ, ದೇವರು, ದೆವ್ವ, ನಂಬಿಕೆ, ಆಚರಣೆ, ಗಾದೆ, ಬೈಗಳು ಎಲ್ಲವು ಈ ಕೋಶದ ವ್ಯಪ್ತಿಗೆ ಸೇರಿವೆ.

ಇದನ್ನು ಓದಿ: ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರ ಪ್ರತಿಭಟನೆ 17 ನೇ ದಿನಕ್ಕೆ; ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ

1936 ನವೆಂಬರ್ 06ರಂದು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಡಗಿಯಲ್ಲಿ ಜನಿಸಿದ ಶಾಂತಪ್ಪ ದೇವರಾಯ ಅವರು ‘ದೇಶಾಂಶ ಹುಡಗಿ’ ಎಂದೇ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರು. ತಂದೆ ಶರಣಪ್ಪ. ತಾಯಿ ಭೀಮಾಬಾಯಿ. ಕೃಷಿ ಹಿನ್ನಲೆಯ ಕುಟುಂಬದವರು. 1952ರಿಂದ ಕವಿತೆಗಳು ಬರೆಯುತ್ತಿರುವ ಹುಡಗಿಯವರು 1980ರಲ್ಲಿ ‘ಗ್ರಾಮಶಿಲ್ಪಿಗಳು’ ಕೃತಿಯನ್ನು ಮೊದಲಿಗೆ ಪ್ರಕಟಿಸಿದರು. ಕನ್ನಡದ ಜೊತೆಗೆ ಹಿಂದಿ, ಮರಾಠಿ, ಉರ್ದು, ಇಂಗ್ಲೀಷ ಮೊದಲಾದ ಬಹುಭಾಷೆಗಳಲ್ಲಿ ಪ್ರಾವಿಣ್ಯ ಹೊಂದಿದ ದೇಶಾಂಶ ಹುಡಗಿಯವರು ಕವಿ, ಕತೆಗಾರ, ಸಂಪಾದಕ, ಚರಿತ್ರೆಕಾರ, ನಿಘಂಟುತಜ್ಞ, ಅನುವಾದಕ, ಸಂಘಟಕರಾಗಿ ಸಾಹಿತ್ಯ ಜಗತ್ತಿನಲ್ಲಿ ಮಹತ್ವ ಪಡೆದಿದ್ದಾರೆ.

‘ಬದುಕಿನ ಸುತ್ತ’ (1988),’ಅಕ್ಷರಜ್ಯೋತಿ’ (1992), ಕವನ ಸಂಕಲನಗಳನ್ನು ಬರೆದ ಇವರು, ವ್ಯಕ್ತಿ ಮತ್ತು ವ್ಯಕ್ತಿತ್ವದ ಕನ್ನಡಿಯಾಗಿ ‘ಬೀದರ ಜಿಲ್ಲೆಯ ಬರಹಗಾರರು’, ‘ಬೀದರ ಜಿಲ್ಲೆಯಲ್ಲಿ ಕನ್ನಡ ಕಟ್ಟಿದವರು’, ‘ಗ್ರಾಮಶಿಲ್ಪಿಗಳು’ ಕೃತಿಗಳನ್ನು ಬರೆದಿದ್ದಾರೆ. ಸಾವಿರ ರುಬಾಯಿಗಳ ಸಂಗ್ರಹ ‘ಪ್ರಚಲಿತ’, ‘ಬಚ್ಚನ್ನನ ಮಧುಶಾಲಾ’ (ಹರಿವಂಶರಾಯ್ ಬಚ್ಚನ್), ‘ಆಧ್ಯಾತ್ಮವಾದಿ ವಿಶ್ವವಿಭೂತಿ ಮಹಾತ್ಮ ಬಸವೇಶ್ವರರು’ (ಡಾ.ಭಗವಾನದಾಸ ತಿವಾರಿ) ಅನುವಾದಿತ ಶ್ರೀ ಚನ್ನಬಸವ ಚರಿತ್ರೆ (2014 ಮಹಾಕಾವ್ಯ) ಕೃತಿಗಳಾಗಿವೆ.

ಇದನ್ನು ಓದಿ: ಮೆಹಬೂಬ ಮುಫ್ತಿ ಆಪ್ತ ಸಹಾಯಕನನ್ನು ಬಂಧಿಸಿದ ಎನ್‌ಐಎ!

ಬಿ.ಎ, ಬಿ.ಇಡಿ. ಪದವೀಧರರಾದ ಶಾಂತಪ್ಪನವರು ಪ್ರೌಢಶಾಲಾ ಶಿಕ್ಷಕರಾಗಿ, ಸಾಕ್ಷರತಾ ಶಿಕ್ಷಣ ಯೋಜನಾಧಿಕಾರಿಯಾಗಿ, ಶಾಲಾ ತನಿಖಾಧಿಕಾರಿಯಾಗಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ರಂಗಭೂಮಿಯ ನಂಟಿನಿಂದ 25 ನಾಟಕಗಳಲ್ಲಿ ಅಭಿನಯಿಸಿದ್ದು, 20 ನಾಟಕಗಳನ್ನು ನಿರ್ದೇಶಿಸಿದ್ದಾರೆ. 1999ರಲ್ಲಿ ಧರಿನಾಡು ಕನ್ನಡ ಸಂಘ ಹುಟ್ಟು ಹಾಕಿ, ಹೊಸ ಪೀಳಿಗೆಯ ಕನ್ನಡ ಓದುಗ ಮತ್ತು ಬರಹಗಾರರನ್ನು ಬೆಳೆಸಿ ಪ್ರೋತ್ಸಾಹಿಸುತ್ತಿದ್ದಾರೆ. ಧರಿನಾಡು ಕನ್ನಡ ಸಂಘದ ಅಡಿಯಲ್ಲಿ ಪುಸ್ತಕ ಪ್ರಕಟಣೆ, ಕವಿಗೋಷ್ಠಿ, ವಿಚಾರ ಸಂಕಿರಣ, ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ ‘ಕೆ.ಜಿ.ಕುಂದಣಗಾರ ಗಡಿಕನ್ನಡ ಸಾಹಿತ್ಯ ಪ್ರಶಸ್ತಿ’, ಕನಾಟಕ ಜಾನಪದ ಅಕಾಡೆಮಿಯಿಂದ ಜಾನಪದತಜ್ಞ (2012), ಪಿ.ಎಚ್. ಜವರಪ್ಪ ಸಮಾಜಮುಖಿ ಪ್ರಶಸ್ತಿ, ಕಾಯಕ ಸಮ್ಮಾನ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ದೇಶಾಂಶರ ಸಾಹಿತ್ಯ ಸೇವೆಗೆ ಸಂದಿವೆ.

ದೇಶಾಂಶರ ಬಹುಮುಖ ಪ್ರತಿಭೆ, ಕ್ರಿಯಾಶೀಲ ವ್ಯಕ್ತಿತ್ವ, ಸೃಜನ ಮತ್ತು ಸೃಜನೇತರ ಸಾಹಿತ್ಯವು ಕನ್ನಡದ ಒಂದುತಲೆಮಾರಿನ ಓದುಗರಲ್ಲಿ ಗ್ರಾಮ್ಯಪ್ರಜ್ಞೆ ಮತ್ತು ಲೋಕಪ್ರಜ್ಞೆಯನ್ನು ಮೂಡಿಸಿ, ಸಾಂಸ್ಕೃತಿಕ ಪರಕೀಯತೆಯನ್ನು ಹೋಗಲಾಡಿಸಿ, ದೇಶಿಯತೆ ಹಾಗೂ ಸ್ಥಳೀಯತೆಯ ಸಂಗಡ ನಿಕಟ ಸಂಬಂಧವೊಂದನ್ನು ಬೆಳೆಸಿವೆ.


ಇದನ್ನು ಓದಿ: ದೆಹಲಿ ಗಲಭೆ: ಬಿಜೆಪಿ ನಾಯಕರ ವಿರುದ್ಧದ ದೂರುಗಳಿಗೆ ಕ್ರಮವಿಲ್ಲ- ಎನ್‌ಡಿಟಿವಿ ತನಿಖಾ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...