ಅನರ್ಹರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳಿ ಮುಖ್ಯಮಂತ್ರಿಯೇ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ: ಸಿದ್ದು ಆರೋಪ

0

“ಯಡಿಯೂರಪ್ಪನವರು ಮೊನ್ನೆ ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇವೆ, ಅವರಿಗೆ ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಶಂಕರ್‌ಗೆ ಎಂಎಲ್‌ಸಿ ಮಾಡಿ ಮಂತ್ರಿ ಮಾಡುತ್ತೇನೆ” ಎಂದು ಹೇಳಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ? ಒಬ್ಬ ಮುಖ್ಯಮಂತ್ರಿಯೇ ಹೀಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೆ ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವ ಹಕ್ಕಿದೆ? ಯಾವ ನೈತಿಕತೆ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು ಒಬ್ಬ ಮುಖ್ಯಮಂತ್ರಿಯೇ ಹೀಗೆ ಮಾಡಿದರೆ ಈ ಪ್ರಜಾಪ್ರಭುತ್ವದ ಮೌಲ್ಯಗಳು, ಕಾನೂನುಗಳು, ನೀತಿ ಸಂಹಿತೆ ಉಳಿಯುತ್ತವೆಯೇ? ಇನ್ನು ಬಿಜೆಪಿಯ ಸಿ.ಪಿ ಯೋಗಿಶ್ವರ್‌ ಮಹಿಳೆಯರಿಗೆ ಹಂಚಲು 30000 ಸೀರೆ ಸಂಗ್ರಹಿಸಿದ್ದಾರೆ. ಇದು ಚುನಾವಣಾ ಅಕ್ರಮವಲ್ಲವೇ? ಅನ್ಯಾಯದಿಂದ ಬಿಜೆಪಿ ಗೆಲ್ಲಲು ಹೊರಟಿದೆ ಆದರೆ ಬಿಜೆಪಿಯವರು 8 ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಇನ್ನು ಜೆಡಿಎಸ್‌ನವರಿಗೆ ಯಾವುದೇ ನಿಲುವಿಲ್ಲ. ಉಪಚುನಾವಣೆಯ ನಂತರ ಬಿಜೆಪಿಗೆ ಕಾದಿದೆ ಸಂಕಷ್ಟ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅನರ್ಹ ಶಾಸಕರು ಬಾಯಿಗೆ ಬಂದಾಗೆ ಹೇಳುತ್ತಾರೆ. ಅವರಿಗೆ ಏನು ಕಿಮ್ಮತ್ತಿದೆ? ಒಂದು ಪಕ್ಷದಿಂದ ಗೆದ್ದು ಜನ ಇವರನ್ನು ಜನ ಆರ್ಶಿವಾದ ಮಾಡಿ ಕಳಿಸಿದರೆ ಇವರು ಜನರಿಗೆ ದ್ರೋಹ ಮಾಡಿ ಪಕ್ಷಾಂತರ ಮಾಡಿ ಈಗ ಮಾತಾಡಿದರೆ ಯಾರು ಕೇಳುತ್ತಾರೆ ಎಂದು ಕಿಡಿಕಾರಿದ್ದಾರೆ. ಇವರ ಮಾತಿನಲ್ಲಿ ಬದ್ದತೆ ಇದೆಯೇ ಆಗೊಂದು ಈಗೊಂದು ನಾಳೆವೊಂದು ಮಾತಾಡುತ್ತಾರೆ. ಅವರ ಗೌರವ ಅವರೇ ಕಳೆದುಕೊಂಡುಬಿಟ್ಟಿದ್ದಾರೆ ಎಂದು ಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋರ್ಟ್‌ ತೀರ್ಪಿನ ಬಳಿಕೆ ಒಬ್ಬಬ್ಬರೆ ಸತ್ಯ ಹೇಳುತ್ತಿದ್ದಾರೆ. ಆಪರೇಷನ್‌ ಕಮಲ ನಡೆದಿಲ್ಲ ಎನ್ನುತ್ತಿದ್ದವರು ಈಗ ಅವರೆ ವಿವರಿಸುತ್ತಿದ್ದಾರೆ. ಇದೆಲ್ಲವೂ ರಾಜ್ಯದ ಜನರಿಗೆ ಈಗ ಅರ್ಥವಾಗುತ್ತಿದೆ. ಅವರು ಏನೇ ಕಥೆ ಹೇಳಿದರೂ ಸಹ ಅನರ್ಹ ಶಾಸಕರು ಅನರ್ಹ ಶಾಸಕರ ಪಟ್ಟಿಯಲ್ಲಿಯೇ ಇರುತ್ತಾರೆ. ಅನರ್ಹರ ಮಾತಿಗೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ ಎಂದಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here