Homeಸಾಮಾಜಿಕಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

ಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

- Advertisement -
- Advertisement -

ಸಾಮಾಜಿಕ ಜಾಲತಾಣವೆಂಬುದು ಸ್ಯಾಡಿಸ್ಟ್‍ಗಳ ಆಡಂಬೋಲದಂತೆ ಆಗಿಹೋಗಿದೆ! ಇದು ಮಾಹಿತಿ ತಂತ್ರಜ್ಞಾನದ ಘೋರ ದುರಂತವೇ ಸರಿ. ಪರರ ಪಡಿಪಾಟಲು, ಆಸಹಾಯಕತೆ, ನೋವು, ನಷ್ಟ ಅಪಹಾಸ್ಯ ಮಾಡಿ ಟ್ರೋಲಿಸುವ ವಿಕೃತ ಸಂತಾನವೇ ಭಾರತದಲ್ಲಿ ಬೆಳೆದುನಿಂತಿದೆ. ಮಹಾ ಮಾನವತಾವಾದಿ ಧೀಮಂತ ಪತ್ರಕರ್ತೆಯೂ ಆಗಿದ್ದ ಗೌರಿಲಂಕೇಶ್‍ರ ಹತ್ಯೆ ಸಂಭ್ರಮಿಸಿದ್ದ ಕುಹಾಕಿಗಳನ್ನು ಈ ದೇಶದ ಪ್ರಧಾನಿ ಮೋದಿ ಮಹಾತ್ಮನೇ ಜಾಲತಾಣದಲ್ಲಿ ಫಾಲೋ ಮಾಡುತ್ತಾರೆ! ಸಿದ್ದು ಸಿಎಂ ಆಗಿದ್ದಾಗ ಮಗನನ್ನು ಕಳಕೊಂಡ ನೋವಿನಲ್ಲಿದ್ದ ಸಂದರ್ಭವನ್ನು ಸಾಮಾಜಿಕ ಜಾಲತಾಣದಲ್ಲಿ ಕುಳಿತು ಖುಷಿಯಿಂದ ಅನುಭವಿಸಿದವರೂ ಇದ್ದಾರೆ. ಇಂಥ ಗಲೀಜು ಸಂಸ್ಕøತಿಯ ಟ್ರೋಲಿಗರ ಕುಚೋದ್ಯದಿಂದ ಈಚೆಗೆ ಕೇರಳದಲ್ಲಿ ತಲ್ಲಣವೇ ಆಗಿಹೋಗಿದೆ. ವಿನಾಕಾರಣ ಬಡ-ಮುಗ್ಧ ಹುಡುಗಿಯೊಬ್ಬಳು ಘಾಸಿಗೊಂಡಿದ್ದಾಳೆ!
ಆಕೆಯ ಹೆಸರು ಹನಾನ್ ಹಮೀದ್. ಕೇರಳದ ತ್ರಿಶೂರ್‍ನ ಇಪ್ಪತ್ತೊಂದರ ಬಾಲಕಿ. ಬದುಕು ಕಟ್ಟಿಕೊಳ್ಳಲು ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಲೇ ಕಾಲೇಜಿಗೂ ಹೋಗುತ್ತಿದ್ದಾಳೆ; ಕಾಲೇಜು ಮುಗಿಸಿ ಮೀನು ಮಾರುಕಟ್ಟೆಯಲ್ಲಿ ಕುಳಿತು ಮೀನೂ ಮಾರುತ್ತಾಳೆ. ಆಕೆ ಅವಸರದಲ್ಲೊಮ್ಮೆ ಕಾಲೇಜಿನ ಯೂನಿಫಾರ್ಮ್ ತೊಟ್ಟುಕೊಂಡೇ ಮೀನು ಮಾರಾಟಕ್ಕೆ ಕುಳಿತಿದ್ದಳು. ಇದು ಅದ್ಯಾವುದೋ ಕೀಳು ಅಭಿರುಚಿಯ ಟ್ರೋಲಿಗನ ಕಣ್ಣಿಗೆ ಬಿದ್ದಿದೆ. ಆ ಎವಡಾಸ ಅದ್ಭುತ ಸಂಶೋಧನೆ ಮಾಡಿದವನಂತೆ ಯೂನಿಫಾರ್ಮ್‍ನಲ್ಲಿ ಮೀನು ಮಾರುತ್ತಿದ್ದ ಪಾಪದ ಹುಡುಗಿಯ ಫೋಟೋ, ವೀಡಿಯೋ ಜಾಲತಾಣಕ್ಕೆ ಏರಿಸಿ ಬೀಗಿದ್ದಾನೆ.
ಆತನಂಥದೇ ಗುಣ-ಧರ್ಮದ ಜಾಲತಾಣಿಗರು ಆ ವೀಡಿಯೋ ಅಪಹಾಸ್ಯದಿಂದ ವೈರಲ್ ಮಾಡಿ ತೀಟೆ ತೀರಿಸಿಕೊಂಡಿದ್ದಾರೆ. ಆಕೆ ಮರ್ಯಾದೆಯಿಂದ ಜೀವನೋಪಾಯಕ್ಕೆ ಮಾಡುತ್ತಿದ್ದ ಕೆಲಸವನ್ನು ಆಡಿಕೊಂಡು ಕೇಕೆ ಹಾಕಿದ್ದಾರೆ. “…… ಕಾಲೇಜು ಓದೋದು ಬಿಟ್ಟು ಇದೆಂಥ ಕೆಲ್ಸಾ…….?!” ಎಂದು ಗೇಲಿ ಮಾಡಿದ್ದಾರೆ. ಅಸಹಾಯಕ ಹುಡುಗಿಯೊಬ್ಬಳ ಕಾರ್ಪಣ್ಯದ ಜೀವನಕ್ರಮವನ್ನು ಅಣಕಿಸುತ್ತ ಟ್ರೋಲ್‍ಮಾಡಿ ಮಜಾ ತೆಗೆದುಕೊಳ್ಳುವ ಸಂಗತಿಯಾ? ಮನುಷ್ಯರೂಪದ ಮೃಗಗಳಿಗಿದು ನಾಲ್ಕಾರು ದಿನ ಟೈಮ್‍ಪಾಸ್ ಹಾಸ್ಯವಾಗಿರಬಹುದು. ಆದರೆ ಈ ಅಪಮಾನ-ಅಪನಿಂದನೆಯಿಂದ ಸುದ್ದಿಯಾದ ಪಾಪದ ಹುಡುಗಿಯ ಹಿಂದೊಂದು ಕರುಣಾಜನಕ ಕತೆಯೇ ಇದೆ! ವಯಸ್ಸಿಗೆ ಮೀರಿದ ಸಾಂಸಾರಿಕ ಹೊಣೆ ನಿಭಾಯಿಸುತ್ತ ಊಟ-ನಿದ್ದೆ ಬಿಟ್ಟು ರಾತ್ರಿಹಗಲೆನ್ನದೆ ಬದುಕಲು ಆಕೆ ಸೆಣಸಾಡುತ್ತಿದ್ದಾಳೆ.
ಹನಾನ್ ತ್ರಿಶೂರ್‍ನ ಶ್ರೀಮಂತ ಕುಟುಂಬದ ಕೂಸು. ತಂದೆ ಹಮೀದ್, ತಾಯಿ ಜುಹ್ರಾಬಿ. ಒಬ್ಬ ತಮ್ಮನಿದ್ದಾನೆ. ಚಿಕ್ಕವಳಿದ್ದಾಗ ಆಕೆ ಖುಷಿಖುಷಿಯಾಗೇ ಇದ್ದಳು. ಆಕೆ ಪ್ರೈಮರಿಗೆ ಹೋಗುವಾಗ ಅಪ್ಪ ಇದ್ದಕ್ಕಿದ್ದಂತೆ ವಿಪರೀತ ಹೆಂಡ ಕುಡಿಯಲು ಶುರು ಹಚ್ಚಿಕೊಂಡಿದ್ದಾನೆ. ಅಷ್ಟೇ ಅಲ್ಲ, ದಿನವೂ ಕುಡಿದುಬಂದು ಅಮ್ಮನಿಗೆ ಬಡಿಯುತ್ತಿದ್ದ. ಮನೆಯೆಂಬುದು ರೌರವ ನರಕದಂತಾಗಿಹೋಯಿತು. ಹನಾನ್ ಹೈಸ್ಕೂಲಿಗೆ ಹೋಗುವ ಹೊತ್ತಿಗೆ ಆಕೆಯ ತಂದೆ-ತಾಯಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ತಂದೆಯೊಂದಿಗಿದ್ದರೆ, ಹನಾನ್ ತಾಯಿ ಜತೆ ಉಳಿದಳು. ತನ್ನ ಮತ್ತು ತಾಯಿಯ ತುತ್ತಿನ ಚೀಲ ತುಂಬಿಸುವ ಜವಾಬ್ದಾರಿ ಹನಾನ್ ಮೇಲೆ ಬಿತ್ತು.
ಆ ನತದೃಷ್ಟ ಹುಡುಗಿ ಧೃತಿಗೆಡಲಿಲ್ಲ ದುಡಿಮೆಯ ದಾರಿ ಹುಡುಕಿದಳು ತಾನು ಶಾಲೆಗೆ ಹೋಗುತ್ತಲೇ ಚಿಕ್ಕ ಮಕ್ಕಳಿಗೆ ಟ್ಯೂಶನ್ ಕೊಡಲಾರಂಭಿಸಿದಳು; ಕರಕುಶಲ ವಸ್ತು, ಕಿವಿಯೋಲೆ ತಯಾರಿಸಿ ಬಂದ ಹಣದಲ್ಲಿ ಜೀವನ ಸಾಗಿಸಹತ್ತಿದಳು. ಕೆಲದಿನದ ಬಳಿಕ ಖಾಸಗಿ ಕಂಪನಿಯೊಂದಕ್ಕೆ ಕಾರ್ಮಿಕಳಾಗಿ ಸೇರಿಕೊಂಡಳು. ಹನಾನ್ ಕಷ್ಟಕ್ಕೆ ಹೆದರಲಿಲ್ಲ. ನೈಟ್‍ಶಿಫ್ಟ್, ಮಾರ್ನಿಂಗ್‍ಶಿಫ್ಟ್ ಅಂತಾ ಹಠದಿಂದ ದುಡಿದಳು. ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಯಂತ್ರಗಳ ವಿಪರೀತ ಶಬ್ದ ಇರುತ್ತಿತ್ತು. ಹೀಗಾಗಿ ಹನಾನ್‍ಗೆ ಶ್ರವಣದೋಷ ಬಾಧಿಸಹತ್ತಿತು. ಹಾಗಾಗಿ ಆ ಕೆಲಸ ಆಕೆ ಅನಿವಾರ್ಯವಾಗಿ ಬಿಡಬೇಕಾಗಿಬಂತು. ಬಿಎಸ್ಸಿ ಓದುತ್ತಿದ್ದ ಹನಾನ್‍ಗೆ ಹೇಗಾದರೂ ಮಾಡಿ ಡಾಕ್ಟರ್ ಆಗಬೇಕೆಂಬ ಹಠ. ಕಂಪನಿ ಕೆಲಸ ಅರಸುತ್ತಲೇ ಇದ್ದಳು.
ಕೆಲವು ದಿನಗಳ ನಂತರ ಬೇರೆ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತು. ಇದು ತಾಯಿ-ಮಗಳ ಬದುಕು ಸಾಗಿಸಲು ಸಾಕಾಗುತ್ತಿರಲಿಲ್ಲ. ಮೀನು ಮಾರಾಟ ಮಾಡಿದರೆ ಒಂದಿಷ್ಟು ಹೆಚ್ಚುವರಿ ಕಾಸು ಸಂಪಾದಿಸಬಹುದೆಂದು ಆಕೆಗೆ ಹೊಳೆಯಿತು. ಕಾಲೇಜು ಕ್ಲಾಸ್ ಮುಗಿಯುತ್ತಿದ್ದಂತೆಯೇ ಮೀನು ಮಾರ್ಕೆಟ್ಟಿಗೆ ಹೋಗಿ ಮೀನು ಮಾರಾಟ ಮಾಡಲು ಆರಂಭಿಸಿದಳು. ಒಮ್ಮೊಮ್ಮೆ ಬೆಳಗಿನ ಜಾವ 3.30ಕ್ಕೆ ಮೀನು ಮಾರುಕಟ್ಟೆಗೆ ಹೋಗಿ ಮೀನು ಖರೀದಿಸಿ ಮಾರಾಟ ಮಾಡುತ್ತಿದ್ದಳು. ನಂತರ ಕಾಲೇಜಿನ ಸಮಯಕ್ಕೆ ಸರಿಯಾಗಿ ಅಲ್ಲಿರುತ್ತಿದ್ದಳು. ಇಂಥದೇ ಒಂದು ದಿನ ಆಕೆ ಮೀನು ಮಾರಲು ಹೋಗಿದ್ದಳು. ಗಡಿಬಿಡಿಯಲ್ಲಿ ಯೂನಿಫಾರ್ಮ್ ತೆಗೆಯಲು ಆಕೆಗೆ ಸಾಧ್ಯವಾಗಿರಲಿಲ್ಲ.
ಆಕೆಯ ಚಿತ್ರ ತೆಗೆದ ಅಧಮ ಮಾನÀವನೊಬ್ಬ ಸಾಮಾಜಿಕ ಮಾಧ್ಯಮಕ್ಕೆ ಟ್ರೋಲ್ ಮಾಡುತ್ತಿದ್ದಂತೆಯೇ ಕೇರಳದಲ್ಲಿ ಅಲ್ಲೋಲಕಲ್ಲೋಲವೇ ಆಯ್ತು. ಈ ಚಿತ್ರ ಶೇರ್ ಮಾಡಿ ಕುಣಿದು ಕುಪ್ಪಳಿಸಿದವರಿಗೆ ಜನ ಉಗಿದರು. ಪರ-ವಿರುದ್ಧ ಅಂತರ್ಜಾಲ ಯುದ್ಧ ನಡೆಯಿತು. ಒಪ್ಪತ್ತು ಗಂಜಿಗಾಗಿ ಹೆಣಗಾಡುತ್ತಿದ್ದ ಹನಾನ್ ದೌರ್ಭಾಗ್ಯವನ್ನು ಜೋಕ್ ಮಾಡಿ ನಕ್ಕ ಟ್ರೋಲಿಗರನ್ನು ಕೇರಳದ ಪಿಣರಾಯಿವಿಜಯನ್ ಸರ್ಕಾರ ಛೀಮಾರಿ ಹಾಕಿತು. ಇಷ್ಟಾದರೂ ನೈತಿಕ ಸ್ಥೈರ್ಯದ ಹನಾನ್ ಅಂಜಲಿಲ್ಲ, ಅಳುಕಲಿಲ್ಲ ತನ್ನ ಪಾಡಿಗೆ ತಾನು ಕಾಲೇಜು, ಮೀನು ಮಾರಾಟ, ಕಂಪನಿ ಚಾಕರಿ, ತಾಯಿಯ ದೇಖರೇಖೆಯ ಜೀವನ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದಳು. ಇದು ಧೂರ್ತರಿಗೆ ನೋಡಲಾಗಲಿಲ್ಲ ಇದು ಹನಾನ್‍ನ ಪ್ರಚಾರದ ತಂತ್ರಗಾರಿ ಎಂದು ಆಲಾಪಿಸಿದರು.
ಇದು ಕೇರಳದಲ್ಲಿ ದೊಡ್ಡ ಸುದ್ದಿ ಸದ್ದು ಮಾಡಿತು. ಸೆಲಿಬ್ರಿಟಿಗಳು ಹನಾನ್ ಪರ ನಿಂತರು. ಸಾಮಾಜಿಕ ಕಾರ್ಯಕರ್ತರು ಸಹಾಯಕ್ಕೆ ಬಂದರು. ಆಕೆಗೆ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶವೂ ಅರಸಿ ಬಂದಿದೆ. ಮೊನ್ನೆ ಹನಾನ್ ತಿರುವನಂತಪುರಂನ ಓಣಮ್, ಬಕ್ರೀದ್ ಖಾದಿ ಎಕ್ಸ್‍ಪೋನಲ್ಲಿ ‘ನಡಿಗೆ’ ಹಾಕಿದ್ದಾಳೆ. ತನ್ಮೂಲಕ ಕುಹಕದ ಕೊಳಕು ಟ್ರೋಲಿಗರಿಗೆ ಕೇರ್ ಮಾಡುವ ಪೈಕಿ ತಾನಲ್ಲವೆಂದು ತೋರಿಸಿಕೊಂಡಿದ್ದಾಳೆ. ಈ ಇಡೀ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಕುಳಿತು ಅಮಾಯಕರ ಬದುಕಲ್ಲಿ ಆಟ ಆಡೋರಿಗೆ ಪಾಠ ಕಲಿಸಬೇಕಾದ ಅನಿವಾರ್ಯತೆಯ ಎಚ್ಚರಿಕೆ ಕೊಟ್ಟಿದೆ!

-ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...