ಡೆಲ್ಟಾ ಪ್ಲಸ್‌ನಿಂದ ಸೋಂಕಿಗೆ ಒಳಗಾದ 9 ಜನರ ಸಂಪರ್ಕ ಪರಿಶೀಲಿಸುತ್ತಿರುವ ತಮಿಳುನಾಡು ಸರ್ಕಾರ | Naanu Gauri

ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರದಿಂದ ಸೋಂಕಿಗೆ ಒಳಗಾದ ಎಲ್ಲಾ ಒಂಬತ್ತು ಜನರ ಸಂಪರ್ಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಶನಿವಾರ ತಿಳಿಸಿದ್ದಾರೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವರು, ಎಲ್ಲಾ ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣಗಳು ಮೇ ತಿಂಗಳಲ್ಲಿ ಸೋಂಕು ಹೆಚ್ಚು ಇದ್ದ ಅವಧಿಯಲ್ಲಿ ಬಂದಿದ್ದು, ಪ್ರಸ್ತುತ ಅವರೆಲ್ಲರೂ ಸ್ಥಿರವಾಗಿದ್ದಾರೆ ಎಂದು ತಿಳಿದ್ದಾರೆ.

“ರೂಪಾಂತರ ಸೋಂಕಿಗೆ ಒಳಗಾದ ಒಬ್ಬ ವ್ಯಕ್ತಿ ಇತ್ತೀಚೆಗೆ ಮದುವೆಯಾಗಿದ್ದು, ನಾವು ಅವರ ಸಂಪರ್ಕಗಳ ಮೇಲೆ ಕಣ್ಗಾವಲು ನಡೆಸುತ್ತಿದ್ದೇವೆ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ‘ಕೇಂದ್ರ ಸರ್ಕಾರ’ ಅಲ್ಲ, ‘ಒಕ್ಕೂಟ ಸರ್ಕಾರ’: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌‌!

ಡೆಲ್ಟಾ ಪ್ಲಸ್ ರೂಪಾಂತರವು ಕೊರೊನಾ ಮೂರನೆ ಅಲೆಗೆ ಕಾರಣವಾಗುವ ಸಾಧ್ಯತೆಯನ್ನು ತಜ್ಞರು ಸೂಚಿಸಿದ್ದಾರೆ. ಅದನ್ನು ಎದುರಿಸಲು ರಾಜ್ಯವು ಸಿದ್ಧವಾಗಲಿದೆ ಎಂದು ಅವರು ತಿಳಿಸಿದ್ದಾರೆ.

“ಕೊರೊನಾ ನಂತರ ಚೇತರಿಕೆಯ ಚಿಕಿತ್ಸೆಗಾಗಿ ಕ್ಲಿನಿಕ್‌ ಅನ್ನು ಗಿಂಡಿಯ ಕಿಂಗ್ಸ್ ಇನ್ಸ್ಟಿಟ್ಯೂಟ್ನಲ್ಲಿ ಸ್ಥಾಪಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಪ್ರಸ್ತುತವಾಗಿ ರಾಜ್ಯವು ಕೊರೊನಾ ರೋಗಿಗಳಿಗೆ 1.8 ಲಕ್ಷ ಹಾಸಿಗೆಗಳನ್ನು ಹೊಂದಿದೆ. ಕೊರೊನಾ ಮೂರನೇ ಅಲೆ ಅಪ್ಪಳಿಸಲಿರುವ ಸೂಚನೆಯಿರುವ ಕಾರಣ ಈ ಮೂಲಸೌಕರ್ಯಗಳನ್ನು ತೆಗೆದುಹಾಕಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸರ್ಕಾರದ ಆರ್ಥಿಕ ಸಲಹಾ ಮಂಡಳಿಯ ಭಾಗವಾದ ರಘುರಾಂ ರಾಜನ್, ಎಸ್ತರ್ ಡುಫ್ಲೊ

ಇದನ್ನೂ ಓದಿ: ತಮಿಳುನಾಡು : ತೂತುಕುಡಿ ಲಾಕಪ್‌ ಡೆತ್‌ಗೆ 1 ವರ್ಷ, ಕಮರುತ್ತಿದೆ ನ್ಯಾಯದ ನಿರೀಕ್ಷೆ

LEAVE A REPLY

Please enter your comment!
Please enter your name here