Homeಮುಖಪುಟತಮಿಳುನಾಡು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆಗೆ ಭರ್ಜರಿ ಮುನ್ನಡೆ

ತಮಿಳುನಾಡು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆಗೆ ಭರ್ಜರಿ ಮುನ್ನಡೆ

- Advertisement -
- Advertisement -

ತಮಿಳುನಾಡಿನಲ್ಲಿ ಒಂದು ದಶಕದ ನಂತರ ಶನಿವಾರ (ಫೆ.19) ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಆಡಳಿತಾರೂಢ ಡಿಎಂಕೆ ದೊಡ್ಡ ಗೆಲುವಿನತ್ತ ಮುನ್ನುಗ್ಗುತ್ತಿದೆ.

ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಎಐಎಡಿಎಂಕೆಯಿಂದ ಬಿಜೆಪಿ ಬೇರ್ಪಟ್ಟು ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಈ ಚುನಾವಣೆಯ ಫಲಿತಾಂಶವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಒಂಬತ್ತು ತಿಂಗಳ ಕಾರ್ಯಕ್ಷಮತೆಯ ರಿಪೋರ್ಟ್ ಕಾರ್ಡ್‌ನಂತೆ ನೋಡಲಾಗು‌ತ್ತಿದೆ.

ರಾಜ್ಯದ ಒಟ್ಟು 1,374 ಕಾರ್ಪೊರೇಷನ್ ವಾರ್ಡ್‌ಗಳಲ್ಲಿ, ಡಿಎಂಕೆ ಇದುವರೆಗೆ 289, ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ 49, ಡಿಎಂಕೆಯ ಮಿತ್ರಪಕ್ಷ ಸಿಪಿಐ(ಎಂ) 11 ಗೆದ್ದಿದ್ದರೆ, ಪ್ರತಿಸ್ಪರ್ಧಿ ಬಿಜೆಪಿ 3 ರಲ್ಲಿ ಗೆಲುವು ಸಾಧಿಸಿದೆ ಎಂದು ತಮಿಳುನಾಡು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ರಾಷ್ಟ್ರಧ್ವಜ ಕುರಿತ ಹೇಳಿಕೆ: ಈಶ್ವರಪ್ಪಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ಪುರಸಭೆಗಳಲ್ಲಿ (ಒಟ್ಟು ವಾರ್ಡ್ ಸದಸ್ಯ ಸ್ಥಾನಗಳು 3,843), ಡಿಎಂಕೆ 1,211 ಮತ್ತು ಎಐಎಡಿಎಂಕೆ 320, ಕಾಂಗ್ರೆಸ್ 80, ಸಿಪಿಐ 10, ಸಿಪಿಎಂ 24, ಬಿಜೆಪಿ 29 ಮತ್ತು ಡಿಎಂಡಿಕೆ 5 ಸ್ಥಾನಗಳನ್ನು ಗೆದ್ದಿವೆ.

ಪಟ್ಟಣ ಪಂಚಾಯಿತಿಗಳಲ್ಲಿ ಡಿಎಂಕೆ 3,782 ವಾರ್ಡ್‌ಗಳಲ್ಲಿ, ಎಐಎಡಿಎಂಕೆ 1,070, ಕಾಂಗ್ರೆಸ್ 258, ಬಿಜೆಪಿ 132, ಸಿಪಿಎಂ 58 ಮತ್ತು ಸಿಪಿಐ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಫೆಬ್ರವರಿ 19 ರಂದು ನಗರ ನಾಗರಿಕ ಚುನಾವಣೆ ನಡೆದಿದ್ದು, ಇಂದು ರಾಜ್ಯದ 268 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ.

ರಾಜಧಾನಿ ಚೆನ್ನೈ ಸೇರಿದಂತೆ 21 ನಗರಗಳು, 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯತ್‌ಗಳ 12,000 ಕ್ಕೂ ಹೆಚ್ಚು ಸದಸ್ಯರನ್ನು ಈ ಚುನಾವಣೆ ಆಯ್ಕೆ ಮಾಡುತ್ತವೆ. ಕಳೆದ ಐದು ವರ್ಷಗಳಲ್ಲಿ, ಈ ಸಂಸ್ಥೆಗಳಿಗೆ ಚುನಾವಣೆ ನಡೆಯದ ಕಾರಣ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ.

ಎಂ.ಕೆ ಸ್ಟಾಲಿನ್ ಮುಖ್ಯಮಂತ್ರಿಯಾದ ನಂತರ ನಡೆಯುತ್ತಿರುವ ಮೊದಲ ಸಮೀಕ್ಷೆ ಇದಾಗಿದೆ. ಈ ಬಾರಿ, ಆಡಳಿತಾರೂಢ ಡಿಎಂಕೆ ಫೆಡರಲಿಸಂನ ರಾಷ್ಟ್ರೀಯ ಸಮಸ್ಯೆಗಳು ಮತ್ತು ರಾಜ್ಯ ಸ್ವಾಯತ್ತತೆ ವಿಷಯಗಳನ್ನು ಮುಖ್ಯವಾಗಿರಿಸಿಕೊಂಡಿತ್ತು.

ಇನ್ನು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮಿಳು ಸ್ಟಾರ್‌ ನಟರಾದ ರಜನಿಕಾಂತ್, ಧನುಷ್, ಅಜಿತ್, ಶಿವ ಕಾರ್ತಿಕೇಯನ್, ಸಿಂಬು, ನಟಿ ತ್ರಿಶಾ ಕೃಷ್ಣನ್ ಮತದಾನ ಮಾಡದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಚರ್ಚೆಗೆ ಗ್ರಾಸವಾಗಿತ್ತು.


ಇದನ್ನೂ ಓದಿ: ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡದ ಸ್ಟಾರ್‌ ನಟರು: ಜನರ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...