Homeಚಳವಳಿತಮಿಳುನಾಡಿನಲ್ಲಿ ನಿನ್ನೆ ಆದ ಟ್ವಿಟ್ಟರ್ ಟ್ರೆಂಡ್ ನ ಹಿನ್ನೆಲೆಯೇನು?

ತಮಿಳುನಾಡಿನಲ್ಲಿ ನಿನ್ನೆ ಆದ ಟ್ವಿಟ್ಟರ್ ಟ್ರೆಂಡ್ ನ ಹಿನ್ನೆಲೆಯೇನು?

- Advertisement -
- Advertisement -

ತಮಿಳುನಾಡಿನ ‘ತಮಿಳ್ ದೇಸೀಯ ಪೆರಿಯಾಕ್ಕಂ’ ನಿನ್ನೆ (ಮೇ 3ರಂದು) ಪೊನ್ ಮಲೈ ರೈಲ್ವೇ ಕಾರ್ಯಾಗಾರದ ಮುಂದೆ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಅದರ ಜೊತೆ ಜೊತೆಗೇ #TamilnaduJobsForTamils ಎಂಬ ಟ್ವಿಟ್ಟರ್ ಟ್ರೆಂಡಿಂಗ್ ಆಯಿತು. ಇದಕ್ಕೇನು ಕಾರಣ?

‘ಪೊನ್ ಮಲೈ ರೈಲ್ವೇ ಕಾರ್ಯಾಗಾರದಲ್ಲಿ 300 ಹುದ್ದೆಗಳು ಖಾಲಿ ಇದ್ದವು. ಅಲ್ಲಿ ಅಪ್ರೆಂಟಿಸ್ ಷಿಪ್ ಕಾನೂನಿನ ಅನ್ವಯ ಅರ್ಜಿಗಳನ್ನು ಆಹ್ವಾನಿಸಿ, 1,765 ಅಭ್ಯರ್ಥಿಗಳನ್ನು ತರಬೇತಿಗಾಗಿ ಕರೆಯಲಾಯಿತು. ಅವರಲ್ಲಿ 100 ಅಭ್ಯರ್ಥಿಗಳು ಮಾತ್ರ ತಮಿಳುನಾಡಿನವರಾಗಿದ್ದರು. ಈ 1,765 ಜನರಲ್ಲಿ 300 ಜನರನ್ನು ನಂತರ ಅಪ್ರೆಂಟಿಸ್ ತರಬೇತಿಗಾಗಿ ಆಯ್ಕೆ ಮಾಡಲಾಯಿತು. ಅವರಲ್ಲಿ ಒಬ್ಬರೂ ತಮಿಳುನಾಡಿನವರಾಗಿರಲಿಲ್ಲ. ಇದೇ ಥರದ ಪರಿಸ್ಥಿತಿ ಕೊಯಮತ್ತೂರು ಮತ್ತು ಚೆನ್ನೈನಲ್ಲೂ ಇದೆ. ಒಟ್ಟು 2,600 ಹುದ್ದೆಗಳಲ್ಲಿ, 2,300 ಜನರು ಉತ್ತರ ಭಾರತದವರಿದ್ದಾರೆ. ರೈಲ್ವೇ ನಿಯುಕ್ತಿ ಕೋಶವು ನಮ್ಮ ರಾಜ್ಯದ ವಿರುದ್ಧ ತಾರತಮ್ಯ ಮಾಡುತ್ತಿದೆ’ ಎಂಬುದು ಈ ಸಂಘಟನೆಯ ಪಿ.ಮಣಿ ಅರಸನ್ ಅವರ ಆರೋಪ.

‘ಈ ರಾಜ್ಯದಲ್ಲಿ ಶೇ.90ರಷ್ಟು ಹುದ್ದೆಗಳು ಸ್ಥಳೀಯರಿಗೇ ಸಿಗಬೇಕು. ಆದರೆ ಬಿಜೆಪಿ ಆಡಳಿತದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ’ ಎಂದು ಹೇಳಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಆ ನಂತರ ಇದೇ ರೀತಿಯ ಟ್ವಿಟ್ಟರ್ ಟ್ರೆಂಡಿಂಗ್ ಗೆ ಕರ್ನಾಟಕದಲ್ಲೂ ಕರೆ ನೀಡಲಾಗಿದೆ.

ಕರ್ನಾಟಕದ ಬೆಳವಣಿಗೆಗಳ ಕುರಿತು ಓದಲು ಇಲ್ಲಿ ಕ್ಲಿಕ್ಕಿಸಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ ಜಾಮೀನು ಆದೇಶವನ್ನು ಮೇ 10ಕ್ಕೆ ಕಾಯ್ದಿರಿಸಿದ ಸುಪ್ರೀಂ...

0
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್ ಮೇ 10 ರಂದು ತನ್ನ...