Homeಕರ್ನಾಟಕಪಠ್ಯ ತಿರುಚೀಕರಣ ವಿವಾದ: ‘ಅಂದು’ ಮತ್ತು ‘ಇಂದು’ ಏನಾಗಿದೆ ಎಂದು ನೋಡೋಣ ಬನ್ನಿ!

ಪಠ್ಯ ತಿರುಚೀಕರಣ ವಿವಾದ: ‘ಅಂದು’ ಮತ್ತು ‘ಇಂದು’ ಏನಾಗಿದೆ ಎಂದು ನೋಡೋಣ ಬನ್ನಿ!

- Advertisement -
- Advertisement -

ಸಂಘ ಪರಿವಾರದ ಬರಹಗಾರ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕಗಳ ಪರಿಶೀಲನೆ ನಡೆದ ಬಳಿಕ ಹಲವಾರು ವಿಷಯಗಳು ಮುನ್ನಲೆಗೆ ಬಂದಿವೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪಠ್ಯದಲ್ಲಿ ಹಲವು ಬದಲಾವಣೆಗಳನ್ನು ತಂದು ಮಕ್ಕಳಿಗೆ ಬೋಧಿಸಲು ಸರ್ಕಾರ ಹೊರಟಿದೆ.

ಜೊತೆಗೆ ಬರಗೂರು ಅವರ ಅಧ್ಯಕ್ಷತೆಯಲ್ಲಿ ಹಲವು ತಪ್ಪುಗಳಾಗಿವೆ ಎಂದು ಕೆಲವು ಸಂಘಟನೆಗಳು ಹೊರಟಿದ್ದು, ರೋಹಿತ್‌ ಚಕ್ರತೀರ್ಥ ಅವರ ವಜಾಕ್ಕೆ ಕೇಳಿ ಬರುತ್ತಿರುವ ಕೂಗನ್ನು ದಮನ ಮಾಡಲು ಯತ್ನಿಸುತ್ತಿವೆ. ಹೀಗಾಗಿ ಪಠ್ಯ ಪುಸ್ತಕ ಪರಿಶೀಲನೆಯಲ್ಲಿ ‘ಅಂದು’ ಮತ್ತು ‘ಇಂದು’ ಏನೇನು ಬದಲಾವಣೆಯಾಗಿದೆ ಎಂದು ಗಮನ ಹರಿಸುವ ಅಗತ್ಯವಿದೆ. ಅಂದಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಹಾಗೂ ಇಂದಿನ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ನಡುವಿನ ವ್ಯತ್ಯಾಸಗಳನ್ನು ಇಲ್ಲಿ ಗುರುತಿಸುವ ಪ್ರಯತ್ನ ಮಾಡಲಾಗಿದೆ.

(ಸೂಚನೆ: ಈ ಪಟ್ಟಿಯೂ ಅಪೂರ್ಣವಾಗಿದ್ದು, ಗಮನಕ್ಕೆ ಬಂದಿರುವ ವಿಷಯಗಳನ್ನಷ್ಟೇ ಇಲ್ಲಿ ಪಟ್ಟಿ ಮಾಡಲಾಗಿದೆ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಅಂದು

ಬೆಂಗಳೂರು ವಿವಿ ಕನ್ನಡ ವಿಭಾಗದ ಪ್ರೊಫೆಸರ್, ಎರಡು ವಿವಿಗಳಿಂದ ಗೌರವ ಡಾಕ್ಟರೇಟ್, ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಅನೇಕ ಪ್ರಶಸ್ತಿಗಳನ್ನು ಪಡೆದ ಲೇಖಕರು, ಸಿನಿಮಾ ನಿರ್ದೇಶಕರು, ಕಥೆಗಾರರೂ ಆದ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ನಡೆಸಲಾಯಿತು.

ಇಂದು

ಬಲಪಂಥೀಯ ಬರಹಗಾರ, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಹಾಗೂ ಅಶ್ಲೀಲ ಭಾಷೆಯ ಮೂಲಕ ಟೀಕೆಗಳಿಗೆ ಒಳಗಾದ ರೋಹಿತ್‌ ಚಕ್ರತೀರ್ಥ ಅವರನ್ನು ಪಠ್ಯ ಪರಿಶೀಲನಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಪ್ರಕಾರ ರೋಹಿತ್‌ ಚಕ್ರತೀರ್ಥ ಅವರು ಐಐಟಿ, ಸಿಇಟಿ ಪ್ರೊಫೆಸರ್‌. ಇದನ್ನು ಸ್ವತಃ ರೋಹಿತ್ ಚಕ್ರತೀರ್ಥ ಅವರೇ ಅಲ್ಲಗಳೆದಿದ್ದಾರೆ!


ಅಂದು

ಮೂರು ವರ್ಷಗಳ ಕಾಲ ಪಠ್ಯ ಪರಿಷ್ಕರಣೆ ನಡೆಯಿತು. 2014-15ರಲ್ಲಿ ಬಜೆಟ್‌ನಲ್ಲಿ ತಜ್ಞರ ಸಮಿತಿ ರಚಿಸಲು ಘೋಷಿಸಲಾಯಿತು. ಒಂದರಿಂದ ಹತ್ತನೇ ತರಗತಿಯವರೆಗೆ ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ 27 ಸಮಿತಿಗಳನ್ನು ರಚಿಸಲಾಯಿತು. 2017-18ನೇ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯ ಜಾರಿಯಾಯಿತು. ಪ್ರತಿ ಪಠ್ಯ ಪುಸ್ತಕಕ್ಕೂ ತಜ್ಞರ ನೇತೃತ್ವದಲ್ಲಿ ರಚನಾ ಸಮಿತಿ, ಬರಗೂರು ನೇತೃತ್ವದ ಪರಿಷ್ಕರಣ ಸಮಿತಿ, ಇದಾದ ಬಳಿಕ ಉನ್ನತ ಮಟ್ಟದ ಪರಿಶೀಲನಾ ಸಮಿತಿ ಅಥವಾ ಅನುಮೋದನೆಗೆ ತಜ್ಞರ ಸಮಿತಿ ಇತ್ತು.

ಇಂದು

ಎಲ್ಲ ಪಠ್ಯಗಳನ್ನು ಒಂದೇ ಸಮಿತಿ ಪರಿಶೀಲಿಸಿದೆ. ಆ ಸಮಿತಿ ಮಾಡಿದ ಪರಿಶೀಲನೆಯನ್ನು ಅನುಮೋದನೆ ಮಾಡಿದ್ದು ಯಾರೆಂಬ ವಿವರಣೆಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲ ಪಠ್ಯಗಳನ್ನು ಪರಿಶೀಲಿಸಿ, ತರಾತುರಿಯಲ್ಲಿ ಕೆಲವು ಪಠ್ಯಗಳನ್ನು ಹೊಸದಾಗಿ ಸೇರಿಸಿ, ಹಲವು ಪಠ್ಯಗಳನ್ನು ತೆಗೆದುಹಾಕಲಾಗಿದೆ.


ಅಂದು

ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ ಹಾಗೂ ಲಿಂಗ ಸಮಾನತೆಗೆ ಪಠ್ಯದಲ್ಲಿ ಆದ್ಯತೆ ನೀಡಲಾಯಿತು. 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅನುಸರಿಸಿ ಪಠ್ಯಪುಸ್ತಕ ರಚನೆ ಮಾಡಲಾಯಿತು.

ಇಂದು

ಲಿಂಗ ಸಮಾನತೆ, ಸಾಮಾಜಿಕ ನ್ಯಾಯವನ್ನು ಭಾಷಾ ಪಠ್ಯದಲ್ಲಿ ತುರಕಬಾರದು ಎಂದು ಸಮಿತಿ ಹೇಳಿದೆ. ಪಠ್ಯದ ಮೂಲಕ ಸಂವಿಧಾನ ಆಶಯಗಳನ್ನು ಕಲಿಸಬೇಕೆಂಬುದು ಪಠ್ಯಕ್ರಮ ಚೌಕಟ್ಟು ಸ್ಪಷ್ಟವಾಗಿ ತಿಳಿಸಿದರೂ ಅದನ್ನು ಉಲ್ಲಂಘಿಸಲಾಗಿದೆ.


ಅಂದು

272 ಜನರು ವಿವಿಧ ಸಮಿತಿಗಳಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ವೈವಿಧ್ಯತೆಯನ್ನೂ ಸಮಿತಿ ಒಳಗೊಂಡಿತ್ತು.

ಇಂದು

ಪರಿಶೀಲನೆಯ ಮುಖ್ಯ ಸಮಿತಿಯಲ್ಲಿ ಏಳು ಮಂದಿ ಇದ್ದು, ಬೆಂಗಳೂರು ಆಸುಪಾಸಿನ ಜಿಲ್ಲೆಯವರಾಗಿದ್ದಾರೆ. ಎಲ್ಲರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ.


ಅಂದು

ಯಜ್ಞಗಳಲ್ಲಿ ಮಾಡಲಾಗುತ್ತಿದ್ದ ಆಹಾರದ ಪೋಲು, ವೇದ ಕಾಲದ ಡಂಬಾಚಾರಗಳಿಂದಾಗಿ ಹೊಸಧರ್ಮಗಳ ಉದಯ ಎಂದು ಹೇಳಲಾಗಿತ್ತು. ಈ ವಿಚಾರಗಳು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬರಹಗಳಲ್ಲಿ ದಾಖಲಾಗಿವೆ.

ಇಂದು

ಯಜ್ಞಗಳನ್ನು ದಾನದ ಸಂಕೇತ ಎಂದು ಬಿಂಬಿಸುವ ಶತಾವಧಾನಿ ಗಣೇಶ್ ಅವರ ಪಠ್ಯವನ್ನು ಹತ್ತನೇ ತರಗತಿ ಪ್ರಥಮ ಭಾಷಾ ವಿಷಯವಾಗಿ ಇಡಲಾಗಿದೆ.


ಅಂದು

ಸಾಹಿತ್ಯ ಕ್ಷೇತ್ರ ವಿವಿಧ ಪ್ರಕಾರಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಹತ್ತನೇ ತರಗತಿ ಪ್ರಥಮ ಭಾಷಾ ಪಠ್ಯವನ್ನು ರೂಪಿಸಲಾಗಿತ್ತು. ವೈಚಾರಿಕ ಚಿಂತಕ ಎ.ಎನ್‌.ಮೂರ್ತಿ ರಾವ್ ಅವರು ಬರೆದ ‘ಲಲಿತ ಪ್ರಬಂಧ’, ಸಾ.ರಾ.ಅಬೂಬುಕರ್‌ ಅವರ ‘ಕಥೆ’, ಲಂಕೇಶ್ ಅವರು ಅನುವಾದಿಸಿರುವ ‘ಕಾ‌ಲ್ಪನಿಕ ಕಥೆ’ಯನ್ನು ನೀಡಲಾಗಿತ್ತು.

ಇಂದು

10ನೇ ತರಗತಿ ಪಠ್ಯದಲ್ಲಿ ಈ ವೈವಿಧ್ಯತೆ ನಾಶವಾದಂತೆ ಕಾಣುತ್ತಿದೆ. ಭಾಷಣ ಹಾಗೂ ಬೋಧಪ್ರದ ಪಠ್ಯಗಳನ್ನು ನೀಡಲಾಗಿದೆ. ಇಂಥವುಗಳೇ ಹೆಚ್ಚಾಗಿವೆ. ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಭಾಷಣ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’, ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’, ಶತವಾಧಾನಿ ಗಣೇಶ್ ಅವರು ಬರೆದಿರುವ ವೈದಿಕತೆಯನ್ನು ವೈಭವೀಕರಿಸುವ ‘ಭಾರತೀಯ ಶ್ರೇಷ್ಠ ಚಿಂತನೆಗಳು’ ಪಾಠಗಳು ಬೋಧಪ್ರಧವಾಗಿವೆ.


ಅಂದು

ಅಕ್ಷರದ ಅವ್ವ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೋರಾಡಿದ ಸಾವಿತ್ರಿಬಾಯಿ ಫುಲೆಯವರ ವಿವರಣೆಗಳನ್ನು ನೀಡಲಾಗಿತ್ತು. ಮಹಿಳಾ ಸಮಾಜ ಸುಧಾರಕಿಯರನ್ನು ಪರಿಚಯಿಸಲಾಯಿತು.

ಇಂದು

ಸಾವಿತ್ರಿಬಾಯಿ ಫುಲೆ ಕುರಿತ ವಿವರಗಳನ್ನು ತೆಗೆಯಲಾಗಿದೆ. ಅಕ್ಷರ ಮಾತೆಯ ವಿಚಾರಗಳಿಗೆ ವಿರುದ್ಧವಾಗಿರುವ ಬನ್ನಂಜೆಯವರ ಪಾಠಗಳನ್ನು ನೀಡಲಾಗಿದೆ. ‘ಕೆಟ್ಟ ನಡತೆಯ ಸಿರಿಯೆಂಬ ಹೆಣ್ಣು’ ಎಂಬ ಸಾಲನ್ನು ಬನ್ನಂಜೆ ಬರೆದಿದ್ದಾರೆ. (ವಿರೋಧಗಳು ಬಂದ ಮೇಲೆ ಹಣವನ್ನು ಹೆಣ್ಣಿಗೆ ಹೋಲಿಸಿರುವುದನ್ನು ತೆಗೆದು ಹಾಕಲಾಗಿದೆ. ಲೇಖಕರೊಬ್ಬರು ತೀರಿಹೋದ ಮೇಲೆ ಅವರ ಲೇಖನವನ್ನು ತಿದ್ದುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ವಿಮರ್ಶಕರು ಕೇಳಿದ್ದಾರೆ.)

ಇದನ್ನೂ ಓದಿರಿ: ಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ


ಅಂದು

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಬೌದ್ಧಧರ್ಮ‌ಕ್ಕೆ ಸೇರಿದ್ದು ಏಕೆಂಬ ವಿವರ ನೀಡಲಾಗಿತ್ತು.

ಇಂದು

ಸಂವಿಧಾನಶಿಲ್ಪಿ ಅಂಬೇಡ್ಕರ್‌ ಏಕೆ ಹಿಂದೂಧರ್ಮ ತ್ಯಜಿಸಿದರೆಂಬ ವಿವರ ಕಿತ್ತುಹಾಕಲಾಗಿದೆ.


ಅಂದು

ಬಸವಣ್ಣನವರ ಸಾಧನೆಯನ್ನು ಸರಿಯಾಗಿ ಚಿತ್ರಿಸಲಾಗಿದೆ.

ಇಂದು

ಬಸವಣ್ಣನವರ ಮೂಲವನ್ನು ತಿರುಚಲಾಗಿದೆ.


ಅಂದು

ಹತ್ತನೇ ತರಗತಿ ಪಠ್ಯದಲ್ಲಿತ್ತು ನಾರಾಯಣಗುರು ಹಾಗೂ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌ ಪಾಠ.

ಇಂದು

ನಾರಾಯಣಗುರು, ಪೆರಿಯಾರ್‌ ಪಾಠ ತೆಗೆಯಲಾಗಿದೆ.


ಅಂದು

ಏಳನೇ ತರಗತಿಯಲ್ಲಿತ್ತು ‘ಭಕ್ತಿ ಪಂಥ ಮತ್ತು ಸೂಫಿ ಪಂಥ ಪರಂಪರೆ’ಯ ಪಾಠ.

ಇಂದು

ಈಗ ಈ ಪಾಠವನ್ನು ತೆಗೆಯಲಾಗಿದೆ.


ಅಂದು

ಪಠ್ಯದಲ್ಲಿತ್ತು ಶಾಂತಿ ಸಾರಿದ ಗೌತಮ ಬುದ್ದನ ಪದ್ಯ

ಬುದ್ದನ ಪದ್ಯ ತೆಗೆಯಲಾಗಿದೆ.


ಅಂದು

ಲೇಖಕರ ಮೂಲ ಪಠ್ಯವನ್ನು ಸಂಕ್ಷಿಪ್ತಗೊಳಿಸಿ ಪಠ್ಯವಾಗಿ ರೂಪಿಸಿದ್ದರು.

ಇಂದು

ಲೇಖಕರ ಮೂಲ ಪಠ್ಯದಲ್ಲಿನ ಲೇಖಕರ ಆಶಯಗಳನ್ನೇ ತಿದ್ದಲಾಗುತ್ತಿದೆ. ಉದಾಹರಣೆಗೆ ‘ಭಗವಾಧ್ವಜ’ ಎಂದಿರುವುದನ್ನು ‘ಧ್ವಜ’ ಎಂದು ತಿದ್ದಲಾಗಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಡಾ.ಬಿ.ಆರ್‌.ಅಂಬೇಡ್ಕರ್‌, ಗಾಂಧೀಜಿ, ಕುವೆಂಪು ಅವರಂತಹ ಮಹಾನೀಯರ ಆಶಯವನ್ನು ತಿರುಚಬಹುದಲ್ಲ, ಎಂಬ ಪ್ರಶ್ನೆ ಮೂಡಿಬಂದಿದೆ.

(ಮುಂದುವರಿಯಲಿದೆ…)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...