Homeಕರ್ನಾಟಕಪಠ್ಯಪುಸ್ತಕ ಹಗರಣ ಅಪ್‌ಡೇಟ್‌ | ಬಿಜೆಪಿಗರೆ ನೀವು ತುಕ್ಡೆ ಗ್ಯಾಂಗಿನ ನಾಯಕರು: ಸಿದ್ದರಾಮಯ್ಯ ಆಕ್ರೊಶ

ಪಠ್ಯಪುಸ್ತಕ ಹಗರಣ ಅಪ್‌ಡೇಟ್‌ | ಬಿಜೆಪಿಗರೆ ನೀವು ತುಕ್ಡೆ ಗ್ಯಾಂಗಿನ ನಾಯಕರು: ಸಿದ್ದರಾಮಯ್ಯ ಆಕ್ರೊಶ

- Advertisement -
- Advertisement -

ಖಾಕಿ ಚಡ್ಡಿ ತೊಟ್ಟ ಬಿಜೆಪಿಯು ತಮ್ಮ ಎದುರಾಳಿಗಳನ್ನು ನಿಂದಿಸಲು ತುಕ್ಡೆಗ್ಯಾಂಗ್ ಎಂಬ ಪದವನ್ನು ಬಳಸುತ್ತದೆ. ನಿಜವಾದ ಟೂಲ್ ಕಿಟ್ ರಾಜಕಾರಣ ಅಥವಾ ಪ್ಯಾಕೇಜ್ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಸಂಕಷ್ಟ ಬಂದಾಗಲೆಲ್ಲ ‘ತುಕ್ಡೆ ಗ್ಯಾಂಗು’ ಎಂಬಂತಹ ಮಾಯಾವಿ ಪದಗಳನ್ನು ಪ್ಯಾಕೇಜಿನಂತೆ ಒಬ್ಬರಾದ ಮೇಲೆ ಒಬ್ಬರು ಬಳಸುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬುಧವಾರ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

“ಪಠ್ಯ ಪುಸ್ತಕ ಪರಿಷ್ಕರಣೆ ಪ್ರಕರಣದಿಂದ ಕಂಗೆಟ್ಟಿರುವ ಸರ್ಕಾರ ಮತ್ತು ಅದರ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ತಾವು ಸಚಿವರೆಂಬ ಜವಾಬ್ಧಾರಿಯನ್ನು ಮರೆತು ನಾಡೋಜ ಬರಗೂರು ರಾಮಚಂದ್ರಪ್ಪ ಮುಂತಾದ ದಮನಿತ ವರ್ಗಗಳ ಧ್ವನಿಗಳನ್ನು ಅವಮಾನಿಸಬೇಕೆಂದೆ ‘ತುಕ್ಡೆ ಗ್ಯಾಂಗ್’ ನವರು ಎಂದು ಅವಮಾನಿಸಿದ್ದಾರೆ” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ರೋಹಿತ್ ಚಕ್ರತೀರ್ಥ ಎಂಬ ರೋಗಿಷ್ಠ ಮನಸ್ಥಿತಿಯ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯು, ಉಸಿರಾಡುತ್ತಿರುವ ಜೀವಿಗಳಲ್ಲಿ ಬ್ರಾಹ್ಮಣರು ಶ್ರೇಷ್ಠರು, ಬ್ರಾಹ್ಮಣರಲ್ಲಿ ಮಾಧ್ವರು ಶ್ರೇಷ್ಠರು ಎಂಬ ನಿಲುವಿನಲ್ಲಿ ಪಾಠಗಳನ್ನು ಮಕ್ಕಳಿಗೆ ಕಲಿಸಲು ಶಿಫಾರಸ್ಸು ಮಾಡಿದೆ. ಸರ್ಕಾರ ಇಂಥ ಕೆಟ್ಟ ಮನುಷ್ಯ ವಿರೋಧಿ ನಿಲುವನ್ನು ಮಕ್ಕಳಿಗೆ ಕಲಿಸಲು ಹೊರಟಿದೆ. ಇದರ ಮೂಲಕ ಶೂದ್ರ-ದಲಿತ-ಮಹಿಳೆಯರಿರುವ 98% ರಷ್ಟು ಜನರನ್ನು ದಮನಿಸಲು ಹೊರಟಿದ್ದಾರೆ” ಎಂದು ವಿಪಕ್ಷ ನಾಯಕ ತಿಳಿಸಿದ್ದಾರೆ.

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ: ಖ್ಯಾತ ಇತಿಹಾಸಗಾರ್ತಿ ರೋಮಿಳ ಥಾಪರ್‌‌ ಸೇರಿದಂತೆ ತಜ್ಞರ ಆಕ್ಷೇಪ

“ಬುದ್ಧ, ಮಹಾವೀರ, ಬಸವಣ್ಣ, ಕನಕದಾಸರು, ನಾರಾಯಣ ಗುರುಗಳು, ಸಾವಿತ್ರಿ ಫುಲೆ, ಅಂಬೇಡ್ಕರ್, ಕುವೆಂಪು, ಉತ್ತರ ಕರ್ನಾಟಕದ ಕವಿ ಸಾಹಿತಿಗಳು, ಹೆಮ್ಮೆಯ ನಾಡಗೀತೆ, ಮನುವಾದ ವಿರೋಧಿ ಭಕ್ತಿ ಪಂಥ, ದೇವನೂರ ಮಹಾದೇವ ಮುಂತಾದ ಶೂದ್ರ-ದಲಿತ ಬರೆಹಗಾರರು ಹೀಗೆ ಎಲ್ಲರನ್ನೂ ಅವಮಾನಿಸಿ, ನಿರ್ಲಕ್ಷಿಸಿ ಶ್ರಮ ವಿರೋಧಿಯಾದ, ಕುವೆಂಪು ಅವರು ಹೇಳಿದ ಹಾಗೆ ಉತ್ಪಾದಕ ವರ್ಗದವರನ್ನು ನಿರ್ಲಕ್ಷಿಸಿ, ಕೇವಲ ಸಂಗ್ರಾಹಕ ವರ್ಗದ ಜನರು ರಚಿಸಿದ ಜೊಳ್ಳನ್ನು ಮಕ್ಕಳಿಗೆ ಕಲಿಸಲು ಹೊರಟಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

“ಇದನ್ನು ಪ್ರಶ್ನಿಸಿ ನಾಡಿನಾದ್ಯಂತ ಸ್ವಾಮೀಜಿಗಳು, ಗುರು ಹಿರಿಯರು, ಜನ ಸಾಮಾನ್ಯರು, ವಿದ್ವಾಂಸರು, ಜನಪರರು ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆಯನ್ನು ಕಂಡು ಕಂಗೆಟ್ಟು ಕೂತಿರುವ ಬಿಜೆಪಿಯ ಕೆಲವು ಶೂದ್ರ ಹಾಗೂ ಅಗ್ರಹಾರದ ಗೇಟ್‍ಕೀಪರುಗಳಾದವರು ಸೇರಿದಂತೆ, ಹಲವು ‘ತುಕ್ಡೆ ಗ್ಯಾಂಗ್’ನವರು, ರಾಷ್ಟ್ರೀಯ ಹಿತಾಸಕ್ತಿಗಾಗಿ ಇದೆಲ್ಲ ಸಹಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ”

“ಹಾಗಿದ್ದರೆ ನಿಜವಾದ ತುಕ್ಡೆ ಗ್ಯಾಂಗ್‍ನವರು ಯಾರು? ಎಂದು ಸ್ವಲ್ಪ ಮೆದುಳಿರುವವರು ಯೋಚಿಸಿದರೆ ಅರ್ಥವಾಗುತ್ತದೆ. ಬಿಜೆಪಿಯಲ್ಲಿರುವವರು ಮತ್ತು ಬಿಜೆಪಿಯ ಸಿದ್ಧಾಂತವನ್ನು ಹುಟ್ಟಿಸಿದವರೆ ತುಕ್ಡೆ ಗ್ಯಾಂಗಿನ ಜನ. ಯಾರು ತುಕ್ಡೆ ಗ್ಯಾಂಗನವರು ಹೇಳಿ ಬಿಜೆಪಿಗರೆ?” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ: ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರೂ ಟಾರ್ಗೆಟ್‌?

“ಜಗತ್ತಿನ ಶ್ರೇಷ್ಠ ಸಂಸ್ಕೃತಿಯಾಗಿದ್ದ, ದ್ರಾವಿಡರೆ ನಿರ್ಮಿಸಿದ್ದ ಸಿಂಧೂ ನಾಗರಿಕತೆಯನ್ನು ಧ್ವಂಸ ಮಾಡಿದ ಆರ್ಯರು, ವಿರಾಟ್ ಪುರುಷನ ತಲೆಯಿಂದ ಬ್ರಾಹ್ಮಣ ಹುಟ್ಟಿದ, ಪಾದಗಳಿಂದ ಶೂದ್ರರು ಹುಟ್ಟಿದರು ಎಂದು ಬರೆದು ಅದನ್ನೆ ಕಾನೂನು ಮಾಡಿ ಜನರನ್ನು ಶಾಶ್ವತವಾಗಿ ಒಡೆದು ಹಾಕಿದ ಸಿದ್ಧಾಂತದವರು ತುಕ್ಡೆ ಗ್ಯಾಂಗಿನವರಲ್ಲವೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಇಂದಿನ ತಳಿವಿಜ್ಞಾನ ಹೇಳುತ್ತಿರುವ ಪ್ರಕಾರ 2500 ವರ್ಷಗಳ ಹಿಂದೆ ಅಮಾನುಷವಾದ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿ, ವೃತ್ತಿ, ಹುಟ್ಟುಗಳ ಮೇಲೆ ಮನುಷ್ಯ ಸಮುದಾಯಗಳನ್ನು ಒಡೆದು ಹಾಕಿ ಭಾರತದಲ್ಲಿ ನರಕದಂತಹ ಸಮಸ್ಯೆಗಳನ್ನು ಸೃಷ್ಟಿ ಮಾಡಿದವರು ತುಕ್ಡೆ ಗ್ಯಾಂಗಿನವರಲ್ಲವೆ?”

“ನಾಗಪುರದ ತಮ್ಮ ಕಛೇರಿಯ ಮೇಲೆ ಇತ್ತೀಚಿನವರೆಗೂ ರಾಷ್ಟ್ರಧ್ವಜವನ್ನು ಹಾರಿಸದೆ ನಿರ್ಲಕ್ಷ್ಯ ಮಾಡಿದವರು ತುಕ್ಡೆ ಗ್ಯಾಂಗಿನವರಲ್ಲವೆ?”

“ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಮನುವಾದವನ್ನು ಜಾರಿಗೆ ತರಲು ನಿರಂತರ ಪ್ರಯತ್ನಿಸುತ್ತಿರುವವರು ತುಕ್ಡೆ ಗ್ಯಾಂಗಿನವರಲ್ಲವೆ? ಗಾಂಧೀಜಿಯರನ್ನು ಕೊಂದ ಗೋಡ್ಸೆಯನ್ನು ಆರಾಧಿಸುವ ಸಂಸ್ಕೃತಿಯನ್ನು ಹುಟ್ಟು ಹಾಕಿದವರು ತುಕ್ಡೆ ಗ್ಯಾಂಗಿನವರಲ್ಲವೆ?”

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ ವಿರೋಧಿಸಿ ಜೂನ್‌‌ 18ರ ಶನಿವಾರ ನಡೆಯುವ ಬೃಹತ್‌ ರ್‍ಯಾಲಿಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಭಾಗಿ

“ಇಟಲಿಯ ಮುಸಲೋನಿಯಿಂದ ಫ್ಯಾಸಿಸಂ ಅನ್ನು ಕಲಿತು ಬಂದ ಮೂಂಜೆಯವರು ತಮ್ಮ ಶಿಷ್ಯ ಹೆಡಗೆವಾರ್ ಮೂಲಕ ಆರ್‌ಎಸ್‍ಎಸ್ ಅನ್ನು ಸ್ಥಾಪಿಸಿ ಒಂದು ವರ್ಗದ ಹಿತಾಸಕ್ತಿಯನ್ನು ಪೊರೆಯಲು ಕಂಕಣ ತೊಟ್ಟಿದ್ದು ತುಕ್ಡೆವಾದವಲ್ಲವೆ?”

“ಹಿಟ್ಲಟರನನ್ನು ರಾಕ್ಷಸ ಎಂದೂ ಅವನ ಸಿದ್ಧಾಂತವನ್ನು ದುಷ್ಟ, ಸೈತಾನ ಸಿದ್ಧಾಂತ ಎಂದು ತೀರ್ಮಾನಿಸಿ ಅದನ್ನು ಇಡೀ ಯುರೋಪಿನಿಂದಲೆ ಹೊಡೆದೋಡಿಸುತ್ತಿದ್ದರೂ ಆರ್‌‌ಎಸ್‍ಎಸ್ ಮಾತ್ರ ಹಿಟ್ಲರನ ಯೂನಿಫಾರ್ಮು, ಲಾಂಛನ ಇತ್ಯಾದಿಗಳನ್ನು ಹೊತ್ತುಕೊಂಡು ಮೆರೆಯುತ್ತಿರುವುದು, ತಮ್ಮ ಮೆದುಳು, ಹೃದಯ ಎಲ್ಲವೂ ಇಟಲಿ, ಜರ್ಮನಿಗಳಲ್ಲಿ ಇದ್ದರೂ ಸಹ ಸುಳ್ಳು ಸುಳ್ಳೆ ಭಾರತೀಯರು ಎಂದು ಕರೆದುಕೊಳ್ಳುತ್ತಿರುವ ಈ ಜನರ ವಾದ ತುಕ್ಡೆವಾದವಲ್ಲವೆ?”

“ಮನುಷ್ಯ ಕಲ್ಯಾಣಕ್ಕಾಗಿ ದುಡಿದ ಬುದ್ಧ, ಮಹಾವೀರ, ಬಸವಣ್ಣ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ಕುವೆಂಪು ಮುಂತಾದ ಮಹನೀಯರನ್ನು ಅವಮಾನಿಸಿ, ನಿರ್ಲಕ್ಷಿಸಿರುವ ಮನುವಾದಿ ಸಿದ್ಧಾಂತದವರು ಹಾಗೂ ಒಂದು ಗುಂಪು ಮಾತ್ರ ಶ್ರೇಷ್ಠ ಉಳಿದವರೆಲ್ಲ ನಿಕೃಷ್ಟರು ಎಂದು ಭಾವಿಸಿ ಪಠ್ಯ ಪುಸ್ತಕ ಮಾಡಿರುವ ಸಿದ್ಧಾಂತದವರು ತುಕ್ಡೆ ಗ್ಯಾಂಗಿನವರಲ್ಲವೆ?. ಒಂದು ಗುಂಪಿನ ಹಿತಾಸಕ್ತಿಯನ್ನು ರಾಷ್ಟ್ರೀಯ ಹಿತಾಸಕ್ತಿ ಎಂದು ಬಿಂಬಿಸುತ್ತಿರುವ ಕೆಟ್ಟ ಸಿದ್ಧಾಂತದ ಜನರು ತುಕ್ಡೆ ಗ್ಯಾಂಗಿನವರಲ್ಲವೆ?.

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ – ‘ಬರಗೂರು ಸಮಿತಿ ಹಿಂದೆ ತುಕ್ಡೆ ಗ್ಯಾಂಗ್‌’: ಸಚಿವ ಬಿಸಿ ನಾಗೇಶ್‌ ವಿವಾದಾತ್ಮಕ ಹೇಳಿಕೆ

“ಮನುಷ್ಯ ವಿರೋಧಿ ಮನುವಾದಿಗಳೆ ಕೇಳಿಸಿಕೊಳ್ಳಿ; ನಮ್ಮದು ಬುದ್ಧ, ಮಹಾವೀರ, ಬಸವಣ್ಣ, ಕನಕದಾಸ, ನಾರಾಯಣ ಗುರು, ಅಂಬೇಡ್ಕರ್, ಕುವೆಂಪು ಮುಂತಾದ ಜಗತ್ತಿನ ಶ್ರೇಷ್ಠ ದಾರ್ಶನಿಕರ ತತ್ವ. ಇಡೀ ಜಗತ್ತಿನಲ್ಲಿ ಶೋಷಿತರು, ದುಃಖಿತರು ಇರಬಾರದು ಎಂದು ಹೇಳಿಕೊಟ್ಟವರು ನಮ್ಮ ನಾಯಕರು”

“ಇವನಾರವನೆನ್ನದೆ ಇವ ನಮ್ಮವ ಎಂದು ಹೇಳಿಕೊಟ್ಟ ಅಣ್ಣ ಬಸವಣ್ಣನ ದಾರಿ ನಮ್ಮದು. ಕುಲ ಕುಲವೆಂದು ಹೊಡೆದಾಡಬೇಡಿ ಎಂದ ಕನಕದಾಸರ ಪಥ ನಮ್ಮದು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಪಂಪ ನಮ್ಮ ನಾಯಕ. ನೀನೆಲ್ಲೆ ಇದ್ದರೂ ನೀನೇರುವ ಮಲೆ ಅದೆ ಸಹ್ಯಾದ್ರಿ, ನೀನ್ ಕುಡಿಯುವ ನೀರ್ ಕಾವೇರಿ ಎಂದ, ನಿರಂಕುಶ ಮತಿಗಳಾಗಿ ಎಂದು ಕರೆಕೊಟ್ಟ ಕುವೆಂಪು ಅವರು ನಮ್ಮ ನಾಯಕರು. ಅಸಮಾನತೆಯನ್ನು ತೊಡೆದು ಹಾಕಿ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದ ಬಾಬಾ ಸಾಹೇಬರು ನಮ್ಮ ಮಾರ್ಗದರ್ಶಕರು”

“ನಾವು ಈ ರಾಷ್ಟ್ರದ ವಾರಸುದಾರರು. ತುಕ್ಡೆ ಗ್ಯಾಂಗು ಎಂದು ಬಾಯಿ ಬಡಿದುಕೊಳ್ಳುವ ಬಿಜೆಪಿಗರೆ ಹೇಳಿ ನಿಮ್ಮ ಸಿದ್ಧಾಂತ ಯಾವುದು? ಯಾರು ನಾಯಕರು?” ಎಂದು ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಇದು ಕುಪ್ಪಳ್ಳಿ ಕಹಳೆ’-ಪಠ್ಯಪುಸ್ತಕ ಹಗರಣ ವಿರೋಧಿಸಿ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ಹಂಸಲೇಖ

“ಮತ್ತೂ ಹೇಳುತ್ತೇನೆ ವ್ಯಾಸ, ವಾಲ್ಮೀಕಿ, ಕಾಳಿದಾಸ ನಮ್ಮವರು. ಇಂದ್ರ ಸಂಸ್ಕೃತಿಯ ವಿರುದ್ಧ ತಿರುಗಿ ಬಿದ್ದ ದೇವರುಗಳಾದ ಶಿವ, ರಾಮ, ಕೃಷ್ಣ ನಮ್ಮವರು. ನಿಜವಾದ ಭಾರತದ ರಾಷ್ಟ್ರ ಧರ್ಮವೆಂದರೆ ಶೂದ್ರ ಧರ್ಮವೆ ಹೊರತು, ನಿಮ್ಮದಲ್ಲ. ನಿಮ್ಮದು ಸೀಮಿತ ಗುಂಪಿನ ಧರ್ಮ ಮಾತ್ರ. ಸೀಮಿತ ಹಿತಾಸಕ್ತಿ ಎಂದಿಗೂ ರಾಷ್ಟ್ರೀಯ ಹಿತಾಸಕ್ತಿಯಾಗುವುದಿಲ್ಲ. ಓಟಿಗಾಗಿ ಮಾತ್ರ ನೀವು ರಾಷ್ಟ್ರೀಯ ಹಿತಾಸಕ್ತಿ ಎನ್ನುತ್ತೀರೆ ಹೊರತು ನಿಜವಾದ ಕಾಳಜಿ ನಿಮ್ಮ ಎದೆಯಲ್ಲಿಲ್ಲ. ಇದು ನಿಧಾನಕ್ಕೆ ಬಹುಸಂಖ್ಯಾತ ಜನರಿಗೆ ಅರ್ಥವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾತಿಯಲ್ಲಿ ನಾವೇ ಶ್ರೇಷ್ಠ ಎಂದು ಹುಚ್ಚುನಾಯಿಗಳ ರರಹ ಅರಚುತ್ತಾ, ತಮ್ಮ ಮೌಢ್ಯಯುಕ್ತ ಜೊಳ್ಳು ಸಂಪ್ರದಾಯ ಗಳನ್ನ,ಬಹುಜನ ಮೂಲನಿವಾಸಿಗಳಾದ ದ್ರಾವಿಡರು ಮತ್ತು ಅವರ ಶ್ರೇಷ್ಠ ದ್ರಾವಿಡ ಸಂಸ್ಕೃತಿಯ ಹೇರಲು ಹೊರಟಿರುವ ಹುಚ್ಚುನಾಯಿಗಳಿಗೆ ಸರಿಯಾಗಿ ಚಾಟಿ ಬೀಸಿದ್ದಾರೆ ಸಿದ್ದರಾಮಯ್ಯ, ಅರ್ಥಮಾಡಿಕೊಳ್ಳದೆ ತಮ್ಮದೇ ಶ್ರೇಷ್ಠ ಎಂದು ವಿತ್ತಂಡ ವಾದ ಮಂಡಿಸುವುದೇ ಆದರೆ ,ಸಂಶಯವಿಲ್ಲ, ನೀವು ಅನಾಗರಿಕ ಪರಕೀಯ ಆರ್ಯರೇ.

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...