Homeರಾಷ್ಟ್ರೀಯಪಠ್ಯಪುಸ್ತಕ ಹಗರಣ: ಖ್ಯಾತ ಇತಿಹಾಸಗಾರ್ತಿ ರೋಮಿಳ ಥಾಪರ್‌‌ ಸೇರಿದಂತೆ ತಜ್ಞರ ಆಕ್ಷೇಪ

ಪಠ್ಯಪುಸ್ತಕ ಹಗರಣ: ಖ್ಯಾತ ಇತಿಹಾಸಗಾರ್ತಿ ರೋಮಿಳ ಥಾಪರ್‌‌ ಸೇರಿದಂತೆ ತಜ್ಞರ ಆಕ್ಷೇಪ

- Advertisement -
- Advertisement -

ಕರ್ನಾಟಕದ ಪಠ್ಯ ಪುಸ್ತಕಗಳನ್ನು ವಿರೂಪ ಮಾಡುತ್ತಿರುವ ಬಿಜೆಪಿ ಸರ್ಕಾರ ವಿರುದ್ಧ ದೇಶದ ಖ್ಯಾತ ಇತಿಹಾಸ ತಜ್ಞರು ಪ್ರತಿಕ್ರಿಯೆ ನೀಡಿದ್ದು, ತೀವ್ರ ಆಕ್ರೋಶ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷ ಜ್ಞಾನವಿಲ್ಲದ ವ್ಯಕ್ತಿಗಳು ಸಾಮಾಜ ವಿಜ್ಞಾನದಲ್ಲಿನ ಪಠ್ಯಪುಸ್ತಕಗಳಲ್ಲಿ ಯಾಕೆ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಖ್ಯಾತ ಇತಿಹಾಸ ತಜ್ಞೆ ಪ್ರೊಫೆಸರ್‌ ರೋಮಿಳಾ ಥಾಪರ್‌ ಅವರು ಪ್ರಶ್ನಿಸಿದ್ದು, ಇತಿಹಾಸದಂತಹ ಸಮಾಜ ವಿಜ್ಞಾನದ ಪಠ್ಯಪುಸ್ತಕಗಳು ವಿಷಯದ ತಜ್ಞರ ಜವಾಬ್ದಾರಿಯಾಗಿರಬೇಕು ಎಂದು ಅವರು ಹೇಳಿದ್ದಾರೆ.

ಜೆಎ‌ನ್‌ಯು ಪ್ರಾಧ್ಯಾಪಕಿ, NCERT ಪಠ್ಯಪುಸ್ತಕಗಳ ಸಮಿತಿಯ ಅಧ್ಯಕ್ಷರೂ ಆಗಿದ್ದ ರೋಮಿಳಾ ಥಾಪರ್‌ ಅವರು,“ಉತ್ತಮ ಶಿಕ್ಷಣದ ಅಡಿಪಾಯಕ್ಕೆ ಉತ್ತಮ ಪಠ್ಯಪುಸ್ತಕ ಮುಖ್ಯವಾಗಿರುತ್ತದೆ. ಇದು ಎರಡು ಕೆಲಸಗಳನ್ನು ಮಾಡುತ್ತದೆ. ಮೊದಲನೆಯದಾಗಿ, ಇದು ಒಂದು ವಿಷಯದ ಬಗ್ಗೆ ಪಾಠ ಪುಸ್ತಕವು ಮಾಹಿತಿಯನ್ನು ಒದಗಿಸುತ್ತದೆ. ಇತಿಹಾಸ ಪಠ್ಯದಲ್ಲಿ ಏನೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ತಜ್ಞ ಇತಿಹಾಸಕಾರರು ತೀರ್ಮಾನಿಸಬೇಕೇ ವಿನಃ ರಾಜಕಾರಣಿಗಳು ಮತ್ತು ಅಧಿಕಾರಿಗಳು ಅದನ್ನು ಮಾಡಬಾರದು” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಪಠ್ಯಪುಸ್ತಕದಲ್ಲಿ ಸಾರ್ವಜನಿಕ ಅಭಿಪ್ರಾಯ ಅಥವಾ ರಾಜಕೀಯ ಸಿದ್ಧಾಂತವನ್ನು ಹರಡುವ ಕುರಿತು ಇರಬಾರದು. ವಿಷಯ ತಜ್ಞರು ಏನು ಹೇಳಲು ಬಯಸುತ್ತಾರೆಯೋ ಅದು ಅದರಲ್ಲಿ ಇರಬೇಕು. ಒಂದು ವಿಷಯಗಳ ಆಯ್ಕೆಯು ಆ ವಿಷಯ ತಜ್ಞರು ಏನು ಮುಖ್ಯವೆಂದು ಭಾವಿಸುತ್ತಾರೆ ಎಂಬುದನ್ನು ಪ್ರತಿಬಿಂಬಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೂತನ ಪಠ್ಯ: ಘಟನೋತ್ತರ ಆದೇಶ ಸಂವಿಧಾನಬದ್ಧ ಅವಕಾಶ- ಬಿಜೆಪಿ ನಾಯಕ ವಿನಯ್‌ ಬಿದರೆ ಸಮರ್ಥನೆ

“ದ್ರಾವಿಡ ಚಳವಳಿಯ ಇತಿಹಾಸವು ಐತಿಹಾಸಿಕವಾಗಿ ದಕ್ಷಿಣ ಭಾರತದ ಇತಿಹಾಸಕ್ಕೆ ಪ್ರಮುಖವಾಗಿದೆ. ಉತ್ತರ ಭಾರತಕ್ಕೆ ಆರ್ಯ ಸಮಾಜದ ಇತಿಹಾಸವಿದೆ. ಉತ್ತರ ಭಾರತದಲ್ಲಿ ಸುಲ್ತಾನರು, ಡೆಕ್ಕನ್ ಮತ್ತು ಮೊಘಲರ ಇತಿಹಾಸವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಅದು ಭಾರತದ ಉತ್ತಮ ಸಾಂಸ್ಕೃತಿಕ ಬೆಳವಣಿಗೆಯ ಅವಧಿಯಾಗಿದೆ. ವಿಜ್ಞಾನದಲ್ಲಿನ ಪಠ್ಯಪುಸ್ತಕಗಳಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಅದನ್ನು ನಿರ್ಧರಿಸಲು ವಿಜ್ಞಾನಿಗಳಿಗೆ ಬಿಡಲಾಗುತ್ತದೆ. ಹಾಗೆಯೆ, ವಿಶೇಷ ಜ್ಞಾನವಿಲ್ಲದ ವ್ಯಕ್ತಿಗಳು ಸಾಮಾಜ ವಿಜ್ಞಾನದಲ್ಲಿನ ಪಠ್ಯಪುಸ್ತಕಗಳು ಯಾಕೆ ಹಸ್ತಕ್ಷೇಪ ಮಾಡುತ್ತವೆ. ಇತಿಹಾಸದಂತಹ ಸಮಾಜ ವಿಜ್ಞಾನದ ಪಠ್ಯಪುಸ್ತಕಗಳು ಸಹ ವಿಷಯದ ತಜ್ಞರ ಜವಾಬ್ದಾರಿಯಾಗಿರಬೇಕು”

“ಎರಡನೆಯದಾಗಿ, ಇತಿಹಾಸ ಪಠ್ಯಪುಸ್ತಕದ ಉದ್ದೇಶ ವಿದ್ಯಾರ್ಥಿಯು ಹಿಂದಿನ ಮತ್ತು ಇತಿಹಾಸದ ಬಗ್ಗೆ ಯೋಚಿಸುವಂತೆ ಮಾಡುವುದಾಗಿದೆ. ಘಟನೆಗಳು ಹೇಗೆ, ಏನು, ಏಕೆ ಮತ್ತು ಎಲ್ಲಿ ಸಂಭವಿಸಿದವು ಎಂಬುದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವಂತಾಗಬೇಕು. ಪಠ್ಯಪುಸ್ತಕದಲ್ಲಿ ನೀಡಲಾದ ಉತ್ತರಗಳು ಮತ್ತು ಇತಿಹಾಸದ ಹೇಳಿಕೆಗಳು ಸಾಬೀತಾದ ಪುರಾವೆಗಳನ್ನು ಆಧರಿಸಿರಬೇಕು. ಹೇಳಿಕೆಯು ತಾರ್ಕಿಕ ಮತ್ತು ತರ್ಕಬದ್ಧ ಚಿಂತನೆಯನ್ನು ಆಧರಿಸಿರಬೇಕು. ಇತಿಹಾಸವು ಕಾಲ್ಪನಿಕವಲ್ಲ, ಅದು ಸಾಬೀತಾಗಿರುವ ಸತ್ಯಗಳನ್ನು ಆಧರಿಸಿರಬೇಕು” ಎಂದು ರೋಮಿಳಾ ಥಾಪರ್‌ ಅವರು ಹೇಳಿದ್ದಾರೆ.

ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ, ಇತಿಹಾಕಾರ ಪ್ರೊ. ಆದಿತ್ಯ ಮುಖರ್ಜಿ ಅವರು,“ಅತ್ಯುನ್ನತ ಮಟ್ಟದ ಶಿಕ್ಷಣ, ಸಾಂಸ್ಕೃತಿಕ ಸಾಧನೆ ಮತ್ತು ಶ್ರೇಷ್ಠವಾದ ಸಂಪ್ರದಾಯವನ್ನು ಹೊಂದಿರುವ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ಆಘಾತಕಾರಿಯಾಗಿದೆ. ನಮ್ಮ ಜಾತ್ಯತೀತ ಪ್ರಜಾಪ್ರಭುತ್ವವನ್ನು ನಾಶಪಡಿಸುವುದಲ್ಲದೆ, ಅದಕ್ಕೆ ಧಕ್ಕೆ ತರುವ ರೀತಿಯಲ್ಲಿ ಇತಿಹಾಸವನ್ನು ತಿರುಚುವ ಪ್ರಯತ್ನಗಳಿಗೆ ಕರ್ನಾಟಕ ಸಾಕ್ಷಿಯಾಗುತ್ತಿದೆ. ಬ್ರಿಟಿಷರ ಕೋಮುವಾದಿ ಸಹಯೋಗಿಗಳ ಈ ವಿಧ್ವಂಸಕ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಕರ್ನಾಟಕವು ದೇಶವನ್ನು ಮುನ್ನಡೆಸಲಿ. ಇದರಿಂದ ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕರು ಕಲ್ಪಿಸಿದ ರಾಷ್ಟ್ರ, ಅವರು ಕಲ್ಪಿಸಿದ ‘ಭಾರತದ ಕಲ್ಪನೆ’ ಉಳಿದು ಅರಳುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಠ್ಯ ಪರಿಷ್ಕರಣೆಗೆ ವಿರೋಧ: ನಾಳೆ ಕುಪ್ಪಳ್ಳಿಯಿಂದ ತೀರ್ಥಹಳ್ಳಿಗೆ ಪಾದಯಾತ್ರೆ – ಕಿಮ್ಮನೆ ರತ್ನಾಕರ್

ಇತಿಹಾಸ ಮತ್ತು ಪುರಾತತ್ವಶಾಸ್ತ್ರಜ್ಞ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್‌‌ ಅಶೋಕ್‌ ಶೆಟ್ಟರ್‌‌, “ಕನ್ನಡ ಪಠ್ಯದ ಕುರಿತೇ ಬಹಳಷ್ಟು ಮಾತುಗಳಾಗುತ್ತಿವೆ. ಸಮಾಜ ವಿಜ್ಞಾನ ಪಠ್ಯಗಳ ಕುರಿತು, ಅದರಲ್ಲೂ ವಿಶೇಷವಾಗಿ 8 ಹಾಗೂ 9ನೇ ತರಗತಿಯ ಪಾಠಗಳಲ್ಲಿ ಇರುವ ದೋಷಗಳು ಮತ್ತು ಸೇರ್ಪಡೆಗಳ ಕುರಿತು ಯಾರಾದರೂ ಗಮನ ಸೆಳೆಯಿರಿ. ಗುರು ನಾನಕ್ ಅವರನ್ನು ಭಕ್ತಿ ಪಂಥದಲ್ಲಿ ಸೇರಿಸಿದ್ದಾರೆ. ಅವರು ಸಿಖ್ ಧರ್ಮದ ಸ್ಥಾಪಕರೆಂಬ ಉಲ್ಲೇಖವೇ ಇಲ್ಲ. ಹರಪ್ಪನ್ ಸಂಸ್ಕೃತಿಯನ್ನು ಸಿಂಧು- ಸರಸ್ವತಿ ಸಂಸ್ಕೃತಿ ಎಂದು ಕರೆದು ಅದರಲ್ಲಿ ವೇದಕಾಲವನ್ನು ತಳಕುಗೊಳಿಸುವ ಕುತ್ಸಿತ ಪ್ರಯತ್ನ ಮಾಡಲಾಗಿದೆ. ವೇದಕಾಲವನ್ನು ತುಂಬ ಹಿಂದಕ್ಕೆ ಕೊಂಡೊಯ್ಯಲಾಗಿದೆ. ಬಸವಣ್ಣನವರ ಕುರಿತ ಪಾಠದಲ್ಲಿ ಅವರ ಆಂದೋಲನದ ಸಾಮಾಜಿಕ ಆಯಾಮಗಳಕುರಿತ ವಿವರಗಳನ್ನೆಲ್ಲ ಕಡಿತಗೊಳಿಸಲಾಗಿದೆ” ಎಂದು ಹೇಳಿದ್ದಾರೆ.

ಖ್ಯಾತ ಇತಿಹಾಸಕಾರರಾದ ಪ್ರೊ ಸುಮಿತ್ ಸರ್ಕಾರ್ ಮತ್ತು ಪ್ರೊ ತಾನಿಕಾ ಸರ್ಕಾರ್ ಅವರು, “ಕರ್ನಾಟಕ ಶಾಲಾ ಮಟ್ಟದ ಸಮಾಜ ವಿಜ್ಞಾನ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿರುವ ಬದಲಾವಣೆಗಳ ಬಗ್ಗೆ ಓದಿ ಗಾಬರಿಯಾಯಿತು. ವಿದ್ವಾಂಸರ ಘನ ಸಂಶೋಧನೆಯನ್ನು ಆಧರಿಸಿದ ಸತ್ಯಗಳಿಗೆ ಯಾವುದೇ ಸಂಬಂಧವಿಲ್ಲದೆ, ಪುರಾಣಗಳು ಮತ್ತು ಐತಿಹಾಸಿಕ ಪುರಾವೆಗಳ ನಡುವಿನ ಗಡಿಯನ್ನು ಸವೆತ ಮಾಡಲಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಠ್ಯ ಪರಿಷ್ಕರಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ಟಾರ್ಗೆಟ್‌?

“ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಜನರ ಅಗಾಧ ಕೊಡುಗೆಗಳನ್ನು ಅಳಿಸಿಹಾಕಲಾಗಿದೆ. ಹಲವಾರು ಅಪ್ರತಿಮ ಕ್ರಾಂತಿಕಾರಿಗಳ ಆದರ್ಶಗಳನ್ನು ಪ್ರಸ್ತುತ ಆಡಳಿತ ಶಕ್ತಿಗಳ ಹಿಂದಿನ ನಾಯಕರ ಸಂದೇಶಗಳೊಂದಿಗೆ ಬದಲಾಯಿಸಲಾಗಿದೆ. ಶಾಲಾ ಮಕ್ಕಳಿಗೆ ಹಿಂದಿನದು ಇನ್ನು ಮುಂದೆ ತಿಳಿಯಲು ಆಗುವುದಿಲ್ಲ. ಅವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳಿಗೆ ಬಲವಾದ ಬಲಪಂಥೀಯ ತಿರುವು ನೀಡಲಾಗುತ್ತದೆ. ಇದು ಕರ್ನಾಟಕದ ಯುವ ಪೀಳಿಗೆಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸಮಾಜ ವಿಜ್ಞಾನ ಅಧ್ಯಯನದ ಮಾದರಿಗೆ ದೊಡ್ಡ ಹೊಡೆತ ನೀಡಲಿದೆ” ಎಂದು ಇತಿಹಾಸಕಾರರಿಬ್ಬರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...