Homeಕರ್ನಾಟಕನಮ್ಮ ನೀರು ನಮ್ಮ ಹಕ್ಕು ಘೋಷಣೆಯೊಂದಿಗೆ ಮೇಕೆದಾಟು ಪಾದಯಾತ್ರೆ ಆರಂಭಿಸಿದ ಕಾಂಗ್ರೆಸ್

ನಮ್ಮ ನೀರು ನಮ್ಮ ಹಕ್ಕು ಘೋಷಣೆಯೊಂದಿಗೆ ಮೇಕೆದಾಟು ಪಾದಯಾತ್ರೆ ಆರಂಭಿಸಿದ ಕಾಂಗ್ರೆಸ್

ಹರಿಯೋ ನೀರನ್ನು, ಬೀಸೋ ಗಾಳಿಯನ್ನು, ಉರಿಯೋ ಸೂರ್ಯನನ್ನು ನಿಲ್ಲಿಸಲು ಸಾಧ್ಯವೇ? ಉರಿಯೋ ಸೂರ್ಯನ ಮಕ್ಕಳು ನಾವು. ಹೋರಾಟವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

- Advertisement -
- Advertisement -

“ನಮ್ಮ ನೀರು ನಮ್ಮ ಹಕ್ಕು” ಘೋಷಣೆಯೊಂದಿಗೆ ಪ್ರದೇಶ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಿತು. ಕನಕಪುರ ತಾಲ್ಲೂಕಿನ ‘ಸಂಗಮ’ದಿಂದ ಬೆಂಗಳೂರಿನವರೆಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಅಧಿಕೃತವಾಗಿ ಚಾಲನೆ ಪಡೆಯಿತು.

ಕಾವೇರಿ ನದಿಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ಪೂಜೆ ಸಲ್ಲಿಸಿದರು. ಕಾವೇರಿ ನದಿಯಲ್ಲಿ ಮಿಂದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಪಾದಯಾತ್ರೆಯನ್ನು ಉದ್ಘಾಟಿಸಿದರು.

ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿ, “ಈ ಯೋಜನೆಯು ಬೆಂಗಳೂರಿಗೆ ಕುಡಿಯುವ ನೀರು ಕೊಡುತ್ತದೆ. ಹಲವು ಹಳ್ಳಿಗಳಿಗೆ ನೀರು ಕೊಡುತ್ತದೆ. ನಾಲ್ಕು ನೂರು ಮೆಗಾವ್ಯಾಟ್ ವಿದ್ಯುತ್‌ ಶಕ್ತಿ ಉತ್ಪಾದಿಸಬಹುದು. ಇದೊಂದು ದೊಡ್ಡ ಕೆಲಸ. ಈ ಯೋಜನೆಯ ವೆಚ್ಚ 9,000 ಕೋಟಿ ರೂ.ಗಳು. ಇಂತಹದೊಂದು ದೊಡ್ಡ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಪ್ರಾರಂಭಿಸಿತ್ತು” ಎಂದರು.

ಎಂ.ಬಿ.ಪಾಟೀಲ ಅವರು ನೀರಾವರಿ ಸಚಿವರಾಗಿದ್ದಾಗ ಈ ಯೋಜನೆ ರೂಪ ಪಡೆಯಿತು. ಡಿ.ಕೆ.ಶಿವಕುಮಾರ್‌ ಅವರು ನೀರಾವರಿ ಸಚಿವರಾಗಿದ್ದಾಗ ಮತ್ತಷ್ಟು ಸ್ಪಷ್ಟತೆ ಪಡೆಯಿತು. ಕರ್ನಾಟಕ ರಾಜ್ಯದ ಎಲ್ಲ ಜನತೆಯು ಈ ಯೋಜನೆಗೆ ಸಂಪೂರ್ಣವಾದ ಬೆಂಬಲವನ್ನು ಕೊಡುತ್ತದೆ. ಇದು ಎಲ್ಲರಿಗೂ ಬೇಕಾದ ಯೋಜನೆಯಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಾಗಾಗಿ ಪದೇ ಪದೇ ಕಚ್ಚಾಡುತ್ತಿದ್ದೇವೆ. 67 ಟಿಎಂಸಿ ನೀರು ಸಂಗ್ರಹಿಸುವ ಯೋಜನೆಯ ಪ್ರಯತ್ನಕ್ಕಾಗಿ ಕಾಂಗ್ರೆಸ್‌ ನಾಯಕರನ್ನು ಅಭಿನಂದಿಸುವೆ. ಈ ಯೋಜನೆ ಕಾರ್ಯಗತವಾಗುವವರೆಗೂ ಬಿಡಬಾರದು. ಈ ಛಲ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಲ್ಲಿ ಇದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಾಲ್ಕೈದು ದಿನ ಪಾದಯಾತ್ರೆ ನಡೆಯಲಿದೆ. ಆರೋಗ್ಯ ಕಾಪಾಡಿಕೊಳ್ಳಿ. ಕೋವಿಡ್ ಸೂಚನೆಯನ್ನು ಪಾಲನೆ ಮಾಡಿರಿ. ನಮ್ಮ ವಿರುದ್ಧ ಏನಾದರೂ ಹೇಳಿಕೊಳ್ಳುವಂತಹದ್ದು ಆಗಬಾರದು. ಮಾಸ್ಕ್‌ ಧರಿಸಬೇಕು. ದೈಹಿಕ ಅಂತ ಕಾಪಾಡಿಕೊಂಡು ಸಾಗಬೇಕು. ಹೋರಾಟದ ಕ್ರೆಡಿಟ್‌ ಕಾಂಗ್ರೆಸ್‌ ನಾಯಕರಿಗೆ ಹೋಗುತ್ತದೆ ಎಂದು ಭಾವಿಸಿ ಈ ಹೋರಾಟವನ್ನು ವಿಫಲ ಮಾಡಲು ಯತ್ನಿಸುತ್ತಿದೆ. ಆದರೆ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿ, “ನಾಲ್ಕೈದು ವರ್ಷಗಳಲ್ಲಿ 260 ಟಿಎಂಸಿ ನೀರು ಹೆಚ್ಚುವರಿಯಾಗಿ ಸಮುದ್ರಕ್ಕೆ ಹೋಗಿದೆ. ಮಳೆಗಾಲದಲ್ಲಿ ಹೆಚ್ಚು ನೀರನ್ನು ನಾವು ಶೇಖರಣೆ ಮಾಡಿಕೊಳ್ಳುತ್ತೇವೆ. ಕುಡಿಯಲು ಬೆಂಗಳೂರಿಗೆ ನೀಡುತ್ತೇವೆ. ತಮಿಳುನಾಡಿನಲ್ಲಿ ನೀರಿಲ್ಲದಿದ್ದಾಗ ಅವರಿಗೂ ನೀಡುತ್ತೇವೆ. ಎರಡು ರಾಜ್ಯಕ್ಕೂ ಈ ಯೋಜನೆ ಸೂಕ್ತವಾಗಿದೆ” ಎಂದು ವಿವರಿಸಿದರು.

ಈ ಯೋಜನೆಯ ಕುರಿತು ತರಕಾರು ತೆಗೆಯಲು ಯಾವುದೇ ದಾಖಲಾತಿ, ಆಧಾರಗಳಿಲ್ಲ. ತಮಿಳುನಾಡಿದವರು ಕ್ಯಾತೆ ತೆಗೆದಯುವುದು ಸರಿ, ಇವರು (ಬಿಜೆಪಿಯವರು) ಯಾಕೆ ಅವರ ಜೊತೆ ಸೇರಿಕೊಂಡಿದ್ದಾರೆ. ಅಣ್ಣಾ ಮಲೈ (ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ) ಕರ್ನಾಟಕದಲ್ಲಿ ಇದ್ದ ಅಧಿಕಾರಿ. ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆಂಬಲ ನೀಡುವುದು ಏನನ್ನು ಸೂಚಿಸುತ್ತದೆ. ನಿಮ್ಮ ಶಕ್ತಿಯನ್ನು ವಿಸ್ತರಿಸಲು ಅಲ್ಲಿಗೆ ಸಪೋರ್ಟ್ ಮಾಡುತ್ತೀರಿ. ಈ ಯೋಜನೆ ಮಾಡಬಾರದು ಎಂಬುದು ಬಿಜೆಪಿಯ ಉದ್ದೇಶವಾಗಿದೆ. ಇದು ಕನ್ನಡ ನಾಡಿಗೆ ಮಾಡುವ ದ್ರೋಹ ಅಲ್ಲವಾ? ಅದಕ್ಕಾಗಿ ಈ ಪಾದಯಾತ್ರೆ ಮಾಡಬಾರದಾ? ಎಂದು ಪ್ರಶ್ನಿಸಿದರು.

“ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಿ, ಗ್ಲೌಸ್ ಹಾಕಿಕೊಳ್ಳಿ. ಸ್ಯಾನಿಟೈಸ್ ಮಾಡಿಕೊಳ್ಳಿ. ಮಾಸ್ಕ್‌ ಹಾಕಿಕೊಳ್ಳದವರನ್ನು ವಾಪಸ್‌ ಕಳಿಸುತ್ತೇವೆ. ಸರ್ಕಾರದ ನಿಯಮಗಳಿಗೆ ಗೌರವ ಕೊಡಬೇಕು. ಆ ಜವಾಬ್ದಾರಿಯನ್ನು ನಿರ್ವಹಿಸಿ ಮುನ್ನಡೆಯಬೇಕು” ಎಂದು ಸೂಚಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು “ಕಾವೇರಿ ಹೋರಾಟಕ್ಕೆ ಜಯವಾಗಲಿ”, “ಭಾರತ್‌ ಮಾತಾಕೀ ಜೈ” ಎಂದು ಮಾತು ಆರಂಭಿಸಿದರು. “ಇದೊಂದು ಐತಿಹಾಸಿಕ ಕಾರ್ಯಕ್ರಮ. ಮನುಷ್ಯ ಎಷ್ಟು ದಿನ ಇರುತ್ತಾನೋ ಹೇಳಲು ಆಗಲ್ಲ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ” ಎಂದರು.

“ನಮ್ಮ ಕಾಂಗ್ರೆಸ್ ನಾಯಕರಲ್ಲಿ ಹೋರಾಟ ರಕ್ತಗತವಾಗಿದೆ. ಈ ದೇಶದ ಏಕತೆ, ಸಮಗ್ರತೆಗಾಗಿ ಕಾಂಗ್ರೆಸ್ ಹೋರಾಡಿದೆ. ಕಾಂಗ್ರೆಸ್‌ ನಾಯಕರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್‌ ಇತಿಹಾಸವೇ ದೇಶದ ಇತಿಹಾಸ. ಈ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಬಡಜನರ ಅಭಿವೃದ್ಧಿಗಾಗಿ” ಎಂದು ತಿಳಿಸಿದರು.

ಈ ಹೋರಾಟಕ್ಕೆ ತೊಂದರೆ ಮಾಡಬೇಕೆಂದು ತೊಂದರೆ ಮಾಡುತ್ತಿದ್ದಾರೆ. ಅನೇಕ ರೀತಿಯಲ್ಲಿ ಟೀಕೆ-ಟಿಪ್ಪಣಿಯನ್ನು ನಮ್ಮ ನಡಿಗೆಗೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರೇ ನೀವು ರೈತರ ಮಕ್ಕಳು. ಈ ರಾಜ್ಯವನ್ನು ಪ್ರತಿನಿಧಿಸುತ್ತಿರಿ. ಆದರೆ ಹೋರಾಟವನ್ನು ಮುಗಿಸಬೇಕೆಂದು ನಿಷೇದಾಜ್ಞೆ ಜಾರಿ ಮಾಡಿದ್ದೀರಲ್ಲ, ಇಲ್ಲಿ ಭಾಗವಹಿಸಿರುವ ಧರ್ಮ ಪೀಠದ ಪ್ರತಿನಿಧಿಗಳನ್ನು, ಸಿದ್ದರಾಮಯ್ಯನವರನ್ನು, ಖರ್ಗೆಯವರನ್ನು, ನೂರು ಜನ ಶಾಸಕರನ್ನು ಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು.

ಇಲ್ಲಿ ಹಾರಾಡುತ್ತಿರುವ ಭಾರತದ ಧ್ವಜ, ಕರ್ನಾಟಕದ ಧ್ವಜ, ಕಾಂಗ್ರೆಸ್‌ ಧ್ವಜ, ಈ ಕಾವೇರಿ ನದಿಯ ಮೇಕೆದಾಟಿನ ಹೋರಾಟ ಧ್ವಜವನ್ನು ಮುಟ್ಟಲು ನಿಮ್ಮಿಂದ ಸಾಧ್ಯವಿಲ್ಲ. ಈ ನಡಿಗೆ ನಮ್ಮ ಪಕ್ಷಕ್ಕಲ್ಲ. ನೀರಿಗಾಗಿ. ಎರಡೂವರೆ ಕೋಟಿ ಜನರ ಬದುಕಿಗಾಗಿ ಎಂದು ಸ್ಪಷ್ಟಪಡಿಸಿದರು.

ಹೋರಾಟಕ್ಕೆ ಬೆಂಬಲ ಕೊಡಬೇಡಿ ಎಂದು ನಿಮಗೆ ಕರೆ ಮಾಡಿ ಯಾರಾದರೂ ಹೇಳಬಹುದು. ಹರಿಯೋ ನೀರನ್ನು, ಬೀಸೋ ಗಾಳಿಯನ್ನು, ಉರಿಯೋ ಸೂರ್ಯನನ್ನು ನಿಲ್ಲಿಸಲು ಸಾಧ್ಯವೇ? ಉರಿಯೋ ಸೂರ್ಯದ ಮಕ್ಕಳು ವೇದಿಕೆ ಮೇಲೆ ಕೂತಿದ್ದಾರೆ ಎಂದು ಗುಡುಗಿದರು.

ಸಾಧುಕೋಕಿಲ ಅವರ ತಂಡವು ಮೇಕೆದಾಟು ಕಾವೇರಿ ಗೀತೆಯನ್ನು ಹಾಡಿತು. “ಹರಿಯುತಿಹಳು ನಮಗಾಗಿ. ಹೆಜ್ಜೆ ಹಾಕುತ್ತೇವೆ ನಾವು, ಹೆಜ್ಜೆ ಹಾಕುತ್ತೇವೆ ನಾವು ಹೆಜ್ಜೆ. ಕಾವೇರಿಗಾಗಿ ಹೆಜ್ಜೆ. ನಮ್ಮ ನೀರಿಗಾಗಿ ಹೆಜ್ಜೆ. ನಾಡಿಗಾಗಿ ಹೆಜ್ಜೆ. ನಾಡ ಜನತೆಗಾಗಿ ಹೆಜ್ಜೆ. ಹೆಜ್ಜೆ ಹಾಕುತ್ತೇವೆ ನಾವು ಹೆಜ್ಜೆ. ಕಾವೇರಿ ತಾಯಿಗಾಗಿ ಹೆಜ್ಜೆ” ಎಂದು ಸಾಧು ಕೋಕಿಲ ತಂಡ ಹಾಡಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಕಲಾವಿದ ಸಾಧು ಕೋಕಿಲ, “ನಾವು ಕಲಾವಿದರು. ಎಲ್ಲ ಕಡೆಗೂ ಸಲ್ಲುತ್ತಾರೆ. ಇದು ಪಕ್ಷದ ಕೆಲಸವಲ್ಲ. ನಮ್ಮ ಕೆಲಸ. ಮುಂದಿನ ಪೀಳಿಗೆಯ ಕೆಲಸ. ಇದಕ್ಕೆ ನಮ್ಮ ಪ್ರೋತ್ಸಾಹ ಇರಬೇಕು. ನಮ್ಮ ನೀರು ನಮ್ಮ ಹಕ್ಕು. ಈ ಕಾರ್ಯಕ್ರಮ ಮುಗಿಯುದಿಲ್ಲ. ಅಣೆಕಟ್ಟು ಕಟ್ಟುವವರೆಗೂ ಕಾರ್ಯಕ್ರಮವನ್ನು ನಡೆಸಲೇಬೇಕು” ಎಂದರು.

ಕಾಂಗ್ರೆಸ್ ನಾಯಕಿ ಜಯಮಾಲ ಮಾತನಾಡಿ, “ನಿದ್ದೆ ಬಂದಂತೆ ನಟಿಸುತ್ತಿರುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿಯೇ ಪಾದಯಾತ್ರೆ ಮಾಡಿದ್ದೇವೆ” ಎಂದರು. ಕರ್ನಾಟಕ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದ್, ನಟ ದುನಿಯಾ ವಿಜಯ್‌ ಭಾಗಿಯಾಗಿ ಚಿತ್ರರಂಗದ ಪರ ಬೆಂಬಲ ಸೂಚಿಸಿದರು.

ವೇದಿಕೆ ಕಾರ್ಯಕ್ರಮದ ನಿರೂಪಣೆಯನ್ನು ಕಾಂಗ್ರೆಸ್ ನಾಯಕ ಆರ್‌.ಧ್ರುವನಾರಾಯಣ ಮಾಡಿದರು. ಸ್ವಾಗತ ಹಾಗೂ ಪ್ರಸ್ತಾವಿಕ ಭಾಷಣವನ್ನು ಡಿ.ಕೆ.ಸುರೇಶ್‌ ಮಾಡಿದರು. ಕೆಪಿಸಿಸಿ ಮಾಜಿ ಅಧ್ಯಕ್ಷರಾದ, ಆರ್‌.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್‌‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಚ್‌.ಕೆ.ಪಾಟೀಲ್‌, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್‌, ಕಾಂಗ್ರೆಸ್ ನಾಯಕರಾದ ರಾಮಲಿಂಗರೆಡ್ಡಿ, ಸಲೀಂ ಮಹಮದ್, ಈಶ್ವರ್‌ ಖಂಡ್ರೆ, ಹರಿಪ್ರಸಾದ್‌, ಮಾಜಿ ಸಚಿವರಾದ ಎಂ.ಬಿ.ಪಾಟೀಲ್‌, ಕೆ.ಜೆ.ಜಾರ್ಜ್, ಮೋಟಮ್ಮ, ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ರಮೇಶ್‌ಕುಮಾರ್‌, ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಇದನ್ನೂ ಓದಿರಿ: ಚಂಡೀಗಢ: ಹೆಚ್ಚು ಸ್ಥಾನ ಗೆದ್ದರೂ ಎಎಪಿಗೆ ಒಲಿಯದ ಮೇಯರ್‌ ಸ್ಥಾನ; ಬಿಜೆಪಿ ಅಭ್ಯರ್ಥಿ ಆಯ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...