Homeಮುಖಪುಟಪ್ರತಿಪಕ್ಷಗಳ ಭಾರಿ ವಿರೋಧದ ನಡುವೆ ಎರಡು ಕೃಷಿ ಮಸೂದೆ ಅಂಗೀಕಾರ

ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆ ಎರಡು ಕೃಷಿ ಮಸೂದೆ ಅಂಗೀಕಾರ

ದೇಶದ ಜನತೆಗೆ ಈ ವಂಚನೆ ತಿಳಿಯಬಾರದೆಂದು ರಾಜ್ಯಸಭೆಯ ಟಿವಿಯನ್ನು ಸೆನ್ಸರ್ ಮಾಡಲಾಗಿದೆ. ದೇಶದ ಜನರಿಗೆ ಸುಳ್ಳು ಹೇಳಬೇಡಿ, ನಮ್ಮಲ್ಲಿ ಸಾಕ್ಷ್ಯವಿದೆ ಎಂದು ಟಿಎಂಸಿ ಸಂಸದ ಹೇಳಿದ್ದಾರೆ

- Advertisement -
- Advertisement -

ವಿರೋಧ ಪಕ್ಷಗಳ ಭಾರಿ ಪ್ರತಿಭಟನೆಯ ನಡುವೆ ಎರಡು ಕೃಷಿ ಸಂಬಂಧಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ವಿಪಕ್ಷಗಳು ಇದನ್ನು ’ಪ್ರಜಾಪಭುತ್ವದ ಕೊಲೆ’ ಎಂದು ಆರೋಪಿಸಿದ್ದು, ಮಸೂದೆಯ ಅಂಗೀಕಾರದಲ್ಲಿ ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ-2020 (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020, ಅಂಗೀಕಾರ ದೊರೆತ ಎರಡು ಹೊಸ ಮಸೂದೆಗಳಾಗಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗಿಕಾರ ಖಂಡಿಸಿ ‘#KisanVirodhiNarendraModi’ ಟ್ರೆಂಡ್

ಇಂದು ಬೆಳಿಗ್ಗೆ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದ ಸರಕಾರ, ಇದು ರೈತರ ಬದುಕಿನಲ್ಲಿ ಬದಲಾವಣೆ ತರಲಿದೆ ಎಂದು ಹೇಳಿತ್ತು. ಆದರೆ ವಿರೋಧ ಪಕ್ಷಗಳು ಈ ಮಸೂದೆಗೆ ಇನ್ನಷ್ಟು ಚರ್ಚೆಯ ಅಗತ್ಯ ಇದೆಯೆಂದು ಹೇಳಿ ಅವುಗಳನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದವು.

ವಿರೋಧಪಕ್ಷಗಳ ನಿರ್ಣಯ ತಿರಸ್ಕೃತವಾಗಿದ್ದು ಮಸೂದೆಗೆ ಧ್ವನಿಮತದಿಂದ ಅಂಗೀಕಾರ ಪಡೆಯಲು ಸರಕಾರ ನಿರ್ಧರಿಸಿದೆ ಎಂದು ರಾಜ್ಯಸಭೆಯ ಉಪಾಧ್ಯಕ್ಷರು ಘೋಷಿಸಿದಾಗ ಸದನದಲ್ಲಿ ಗದ್ದಲ ಎಬ್ಬಿಸಿದ ವಿರೋಧ ಪಕ್ಷಗಳು, ತಾವು ಸದನದಲ್ಲೇ ಉಪಸ್ಥಿತರಿದ್ದು ಭೌತಿಕ ಮತದಾನದ ಮೂಲಕ ಮಸೂದೆಗೆ ಅಂಗೀಕಾರ ಪಡೆಯಬೇಕು ಎಂದು ಪಟ್ಟುಹಿಡಿದವು.

ಉಪಾಧ್ಯಕ್ಷರು ಇದನ್ನು ನಿರಾಕರಿಸಿದ್ದಕ್ಕೆ ಸಧನದ ಬಾವಿಗೆ ಬಂದ ತೃಣಮೂಲ ಪಕ್ಷದ ಸದಸ್ಯ ಡೆರೆಕ್ ಒಬ್ರೆಯನ್ ಸ್ಫೀಕರ್‌ ಟೇಬಲ್ ಮೇಲಿನ ನಿಯಮಾವಳಿ ಪುಸ್ತಕವನ್ನು ಹರಿದು ಹಾಕಿ, ಜೊತೆಗೆ ಮೈಕನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು.

ಇದನ್ನೂ ಓದಿ: ಕೃಷಿ ಮಸೂದೆಗಳು ಹೇಳುವುದೇನು..?: ವಿರೋಧಕ್ಕೆ ಕಾರಣಗಳೇನು..?

ಪ್ರತಿಪಕ್ಷಗಳ ಗದ್ದಲ, ಘೋಷಣೆ, ಪ್ರತಿಭಟನೆ ಹೆಚ್ಚಿದಾಗ ಸದನದ ಕಲಾಪವನ್ನು 10 ನಿಮಿಷದ ಮಟ್ಟಿಗೆ ಮುಂದೂಡಲಾಯಿತು.

ಇದರ ನಂತರ ಸದನ ಮತ್ತೇ ಪ್ರಾರಂಭವಾದರೂ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದವು, ಪ್ರತಿಭಟನೆಯ ಮಧ್ಯೆಯೇ, ಮಸೂದೆಗೆ ಧ್ವನಿಮತದ ಅಂಗೀಕಾರ ದೊರಕಿದೆ ಎಂದು ಉಪಾಧ್ಯಕ್ಷರು ಘೋಷಿಸಿದರು. ಅಲ್ಲದೆ ಉಪಾಧ್ಯಕ್ಷರ ಆಕ್ಷೇಪವನ್ನು ಮೀರಿ ರಾಜ್ಯ ಸಭೆಯ ಕಲಾಪದ ದೃಶ್ಯಗಳನ್ನು ಪ್ರತಿಪಕ್ಷದ ಸದಸ್ಯರು ಮೊಬೈಲಿನಲ್ಲಿ ದಾಖಲಿಸಿದರು.

“ಸರಕಾರ ಬಳಿ ಸೂಕ್ತ ಬಹುಮತವಿಲ್ಲ. ಇದು ಇಲ್ಲಿಗೇ ಮುಗಿಯದು. ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ಸಂಸತ್ತಿನ ಎಲ್ಲಾ ನಿಯಮಗಳನ್ನೂ ಅವರು ಮುರಿಯುವ ಮೂಲಕ ವಂಚಿಸಿದ್ದಾರೆ. ದೇಶದ ಜನತೆಗೆ ಈ ವಂಚನೆ ತಿಳಿಯಬಾರದೆಂದು ರಾಜ್ಯಸಭೆಯ ಟಿವಿಯನ್ನು ಸೆನ್ಸರ್ ಮಾಡಲಾಗಿದೆ. ದೇಶದ ಜನರಿಗೆ ಸುಳ್ಳು ಹೇಳಬೇಡಿ, ನಮ್ಮಲ್ಲಿ ಸಾಕ್ಷ್ಯವಿದೆ” ಎಂದು ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್ ಒ’ಬ್ರಿಯಾನ್ ಹೇಳಿದ್ದಾರೆ.

ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜಿನಾಮೆ ನೀಡಿದ ಕೇಂದ್ರ ಸಚಿವೆ!

ಮೂರು ಹೊಸ ಮಸೂದೆಗಳ ಪೈಕಿ ಎರಡು ಮಸೂದೆಗೆ ಅಂಗೀಕಾರ ಸಿಕ್ಕಿದ್ದು, ಇನ್ನೊಂದು ಮಸೂದೆಯನ್ನು ಸದನ ನಾಳೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ, “ಸಂಸತ್ತಿನಲ್ಲಿ ಕೃಷಿ ಮಸೂದೆಗೆ ಅಂಗೀಕಾರ ದೊರಕಿರುವುದು ಭಾರತೀಯ ಕೃಷಿ ಇತಿಹಾಸದಲ್ಲೇ ಒಂದು ಐತಿಹಾಸಿಕ ಕ್ಷಣವಾಗಿದೆ, ಕೋಟ್ಯಾಂತರ ರೈತರನ್ನು ಸಶಕ್ತಗೊಳಿಸುವ ಹಾಗೂ ಕೃಷಿ ಕ್ಷೇತ್ರದ ಸಂಪೂರ್ಣ ಪರಿವರ್ತನೆಗೆ ಕಾರಣವಾಗುವ ಪ್ರಮುಖ ಮಸೂದೆಗಳಿಗೆ ಸಂಸತ್ತಿನಲ್ಲಿ ಅಂಗೀಕಾರ ದೊರಕಿದ್ದಕ್ಕೆ ರೈತರನ್ನು ಅಭಿನಂದಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ’ಕೃಷಿ ಮಸೂದೆ’ಗೆ ರೈತ ಬಲಿ: ಕಾಯ್ದೆಗಳ ಬಗ್ಗೆ ಹರ್ಸಿಮ್ರತ್ ಕೌರ್‌ ಯೂಟರ್ನ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

0
ಇವಿಎಂ ಮತ್ತು ವಿವಿಪ್ಯಾಟ್‌ಗಳ ಎಲ್ಲಾ (ಶೇ.100) ಮತಗಳನ್ನು ತಾಳೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ...