Homeಮುಖಪುಟಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಫೋಟೊ ಪ್ರಶ್ನಿಸಿದ್ದ ಅರ್ಜಿ ವಜಾ; 1 ಲಕ್ಷ ರೂ. ದಂಡ!

ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಫೋಟೊ ಪ್ರಶ್ನಿಸಿದ್ದ ಅರ್ಜಿ ವಜಾ; 1 ಲಕ್ಷ ರೂ. ದಂಡ!

- Advertisement -
- Advertisement -

ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಇರುವುದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿದೆ. ಮಾತ್ರವಲ್ಲದೆ, ಅರ್ಜಿ ಸಲ್ಲಿಸಿದ್ದವರಿಗೆ ಒಂದು ಲಕ್ಷ ರೂ. ದಂಡವನ್ನೂ ವಿಧಿಸಿದೆ.

ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಪೀಠವು, ಲಸಿಕಾ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ ಇರುವುದನ್ನು ಪ್ರಶ್ನಿಸಿರುವುದು ದುರುದ್ದೇಶದಿಂದ ಕೂಡಿರುವ ಅರ್ಜಿಯಾಗಿದೆ. ಇದು ರಾಜಕೀಯ ಅಜೆಂಡಾವನ್ನು ಒಳಗೊಂಡಿದೆ ಎಂಬ ಅನುಮಾನವು ಇದೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ. ಅಲ್ಲದೆ, ಇದು ರಾಜಕೀಯ ಪ್ರೇರಿತವಾಗಿರುವುದರಿಂದ ಭಾರೀ ಮೊತ್ತದ ದಂಡ ವಿಧಿಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ:ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೊ: ಪ್ರಧಾನಿ ಬಗ್ಗೆ ನಾಚಿಕೆ ಏಕೆ? ಕೇರಳ ಹೈಕೋರ್ಟ್ ಪ್ರಶ್ನೆ

ಪ್ರಮಾಣ ಪತ್ರಕ್ಕೆ ಪ್ರಧಾನಮಂತ್ರಿಯವರ ಭಾವಚಿತ್ರವನ್ನು ಸೇರಿಸಿರುವುದು ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸಿದಂತಾಗುತ್ತದೆ. “ಪ್ರಮಾಣಪತ್ರವು ಖಾಸಗಿ ದಾಖಲೆ ಆಗಿದ್ದು, ದಾಖಲೆಯಲ್ಲಿ ವೈಯಕ್ತಿಕ ವಿವರಗಳನ್ನು ಹೊಂದಿರುತ್ತದೆ. ಆದ್ದರಿಂದ ವ್ಯಕ್ತಿಯ ಗೌಪ್ಯತೆಗೆ ಒಳನುಗ್ಗುವುದು ಸೂಕ್ತವಲ್ಲ” ಎಂದು ಅರ್ಜಿದಾರರ ಪರ ವಕೀಲರ ಪೀಟರ್ ಮೈಲಿಪರಂಪಿಲ್ ಅವರು ಈ ಹಿಂದೆ ವಾದಿಸಿದ್ದರು.

ಪ್ರಮಾಣಪತ್ರದಲ್ಲಿ ಫೋಟೋ ಇದ್ದರೆ ಮತದಾರರ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ. ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದೂ ಅವರು ಹೇಳಿದ್ದರು.

ಇದಕ್ಕೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಕೋರ್ಟ್‌, “ನೀವು (ಅರ್ಜಿದಾರರು) ಪ್ರಧಾನ ಮಂತ್ರಿಯ ಬಗ್ಗೆ ಯಾಕೆ ನಾಚಿಕೆಪಡುತ್ತೀರಿ? ಅವರು ಜನರ ಆದೇಶದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ…ನಾವು ವಿಭಿನ್ನ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರಬಹುದು, ಆದರೆ ಅವರು ನಮ್ಮ ಪ್ರಧಾನಿ” ಎಂದು ಹೇಳಿತ್ತು.

ಇದನ್ನೂ ಓದಿ:ಲಸಿಕೆ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಿರಿ ಎಂದು ಕೇಳುವುದು ಅಪಾಯಕಾರಿ: ಕೇರಳ ಹೈಕೋರ್ಟ್

ಮಾತ್ರವಲ್ಲದೆ, ದೇಶದ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿಯವರ ಫೋಟೊ ಇರುವುದರಿಂದ ತೊಂದರೆಯಾಗಿಲ್ಲ. ‘ನಿಮಗೇಕೆ ತೊಂದರೆ?’ ಎಂದು ಕೇಳಿತ್ತು. ಅರ್ಜಿಗೆ ಯಾವುದೇ ಅರ್ಹತೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಇಲ್ಲವೆಂದಾದರೆ, ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು ಎಂದೂ ಹೇಳಿತ್ತು.

ಇದೀಗ, ಅರ್ಜಿಯ ಪರಿಶೀಲನೆ ನಡೆಸಿರುವ ಕೋರ್ಟ್‌, ನೀವು ನ್ಯಾಯಾಂಗದ ಸಮಯ ಹಾಳು ಮಾಡುತ್ತಿದ್ದೀರಿ ಎಂದು ಅರ್ಜಿಯನ್ನು ವಜಾಗೊಳಿಸಿದ್ದು, ಒಂದು ಲಕ್ಷ ರೂ. ದಂಡ ವಿಧಿಸಿದೆ.

ಇದನ್ನೂ ಓದಿ:ಲಕ್ಷದ್ವೀಪ: ಆಡಳಿತಾಧಿಕಾರಿಯ 2 ವಿವಾದಾತ್ಮಕ ಆದೇಶಗಳಿಗೆ ಕೇರಳ ಹೈಕೋರ್ಟ್ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಲಸಿಕೆ ಪಡೆದವರ ಫೋಟೋ ಏಕೆ ಹಾಕಬಾರದು ಲಸಿಕೆಯನ್ನು ಪಾರ್ಟಿಫಂಡಿನಿಂದ ಕೊಟ್ಟಿಲ್ಲದಿರುವಾಗ ಪ್ರಚಾರವೇಕೆ ಜನರ ಐಡೆಂಡಿ ಮಾಡಿದರೆ ತಪ್ಪೇನಿದೆ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...