Homeಮುಖಪುಟಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿಗೆ ಬೆದರಿಕೆ ಕರೆ: 5 ದಿನಗಳಾದರೂ ಪೋಲೀಸರು ಕ್ರಮ ಕೈಗೊಳ್ಳದ ಆರೋಪ!

ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿಗೆ ಬೆದರಿಕೆ ಕರೆ: 5 ದಿನಗಳಾದರೂ ಪೋಲೀಸರು ಕ್ರಮ ಕೈಗೊಳ್ಳದ ಆರೋಪ!

’ಕಾಂಗ್ರೆಸ್‌ನಂತಹ ದೊಡ್ಡ ಪಕ್ಷದ ಬೆಂಬಲ ಇರುವ ನನಗೆ ಇಂತಹ ತೊಂದರೆಗಳು ಇರಬೇಕಾದರೇ, ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗಿರಬೇಡ..? ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -
- Advertisement -

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರೆ ಮತ್ತು ಪ್ರಿಯದರ್ಶಿನಿ ರಾಜ್ಯ ಸಂಚಾಲಕಿ ಭವ್ಯ ನರಸಿಂಹಮೂರ್ತಿ ಅವರಿಗೆ ಸತತವಾಗಿ ಕಳೆದ 5 ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಜೂನ್ 9 ರಿಂದ ಶುರುವಾಗಿರುವ ಈ ಬೆದರಿಕೆ ಕರೆಗಳ ಸಂಬಂಧ ಬೆಂಗಳೂರು ಪೊಲೀಸರಿಗೆ ಲಿಖಿತ ದೂರು ನೀಡಲಾಗಿದೆ. ಆದರೆ, 5 ದಿನಗಳಾದರೂ ಈ ಬಗ್ಗೆ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸೋಮವಾರ ಕಮಿಷನರ್‌ ಅವರಿಗೆ ದೂರು ನೀಡುವುದಾಗಿ ಭವ್ಯ ನರಸಿಂಹಮೂರ್ತಿ ತಿಳಿಸಿದ್ದಾರೆ.

ಘಟನೆ ಸಂಬಂಧ ನಾನುಗೌರಿ.ಕಾಂ ಜೊತೆ ಮಾತನಾಡಿದ ಭವ್ಯ ನರಸಿಂಹಮೂರ್ತಿ, ’ಜೂನ್ 8 ರ ಸಂಜೆ ಖಾಸಗಿ ಚಾನೆಲ್ ಒಂದರ ಚರ್ಚೆಯಲ್ಲಿ ಭಾಗವಹಿಸಿದ್ದೆ. ಕೊರೊನಾ ನಿರ್ವಹಣೆ ಬಗ್ಗೆ ಬಿಜೆಪಿ ಸರ್ಕಾರವನನ್ನು ಟೀಕಿಸಿದ್ದೆ. ಆದಾದ ನಂತರ ಜೂನ್ 9 ರ ಮಧ್ಯಾಹ್ನ 12.30 ರಿಂದ ನಿರಂತರವಾಗಿ ಕರೆಗಳು ಬರಲು ಶುರುವಾದವು. ಸುಮಾರು 60 ಕ್ಕೂ ಹೆಚ್ಚು ನಂಬರ್‌ಗಳಿಂದ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಎಲ್ಲರೂ ಕನ್ನಡದಲ್ಲೇ ಮಾತನಾಡುತ್ತಾರೆ. ಆದರೆ, ಟ್ರೂ ಕಾಲರ್‌ನಲ್ಲಿ ಪಂಜಾಬ್, ಒಡಿಶಾ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳ ಹೆಸರು ಬರುತ್ತದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ; ಭವ್ಯ ನರಸಿಂಹಮೂರ್ತಿ ಎಂಬ ದಿಟ್ಟ ಹುಡುಗಿಯ ಪ್ರಶ್ನೆಗಳಿಗೆ ಮೋದಿ-ಶಾ ಬಳಿ ಉತ್ತರವಿವೆಯೇ?

’ಜೂನ್ 9 ರಂದೇ ನಾನು ಸೈಬರ್‌ ಬ್ರಾಂಚ್‌ಗೆ ದೂರು ನೀಡಿದ್ದೆ. ಆದರೆ ಇದು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಕ್ರೈಂ ಬ್ರಾಂಚ್‌ಗೆ ದೂರು ನೀಡಿ ಎಂದರು. ಜೂನ್  10 ರಂದು ಅಲ್ಲಿಯೂ ದೂರು ನೀಡಿದ್ದೇವೆ. ಆದರೆ, ಯಾವುದೇ ಕ್ರಮ ಜರುಗಿಲ್ಲ. ಬೆದರಿಕೆ ಕರೆಗಳು ಬರುವುದು ತಪ್ಪಿಲ್ಲ. ಪೊಲೀಸಿನವರು ತಮ್ಮ ಕೆಲಸ ಮಾಡದೇ, ಸಿಮ್ ಬದಲಾಯಿಸಿ ಎಂಬ ಸಲಹೆ ನೀಡುತ್ತಾರೆ. ನಿಮ್ಮ ನಂಬರ್‌ ಕರೆ ಮಾಡುವವರಿಗೆ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ನನಗೆ ಕೇಳುತ್ತಾರೆ’ ಎಂದು ಅವರು ಕಿಡಿಕಾರಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯ ನಂಬರ್‌ ದೊರೆಯುವುದು ಕಷ್ಟವೇ? ಎಲ್ಲರ ಬಳಿಯೂ ಇರುತ್ತದೆ. ಮಾಧ್ಯಮದವರ ಬಳಿಯೂ ಇರುತ್ತದೆ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಈ ಘಟನೆಯನ್ನು ನಾನು ಇಲ್ಲಿಗೆ ಬಿಟ್ಟು ಸುಮ್ಮನೆ ಇರುವುದಿಲ್ಲ. ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗುವವರೆಗೂ ಹೋರಾಡುತ್ತೇನೆ ಎಂದಿದ್ದಾರೆ.

ಮುಂದುವರೆದು, ’ಈ ಬೆದರಿಕೆ ಕರೆಗಳು ನನಗೆನೂ ಹೊಸದಲ್ಲ. ಸಿಎಎ, ಎನ್‌ಆರ್‌ಸಿ ಪ್ರತಿಭಟನೆಯ ಸಮಯದಲ್ಲಿಯೂ ಇದು ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕೆಟ್ಟ ಪದಗಳಲ್ಲಿ ಕಾಮೆಂಟ್ ಮಾಡುತ್ತಿದ್ದರು. ಫೇಸ್‌ಬುಕ್ ಹ್ಯಾಕ್ ಮಾಡಲಾಗಿತ್ತು. ಆಗಲೇ ನಾನು ಸೈಬರ್‌ ಕ್ರೈಂಗೆ ದೂರು ನೀಡಲು ಹೋಗಿ‌ದ್ದೆ. ಆದರೆ, ಅವರ ನಿಯಮಾವಳಿಗಳನ್ನೂ ನೋಡಿ ಸುಮ್ಮನಾದೆ. ಆದರೆ, ಈಗ ಮತ್ತೆ ಶುರುವಾಗಿದೆ. ಬಿಟ್ಟಷ್ಟು ಮತ್ತೆ ಜಾಸ್ತಿ ಮಾಡುತ್ತಾರೆ. ಹಾಗಾಗಿ ಈ ಬಾರಿ ನಾನು ದೃಢವಾಗಿ ನಿಂತಿದ್ದೇನೆ’ ಎಂದು ಭವ್ಯ ಹೇಳಿದ್ದಾರೆ.

ಇದನ್ನೂ ಓದಿ: ಟಿಎಂಸಿ ಮುಖಂಡರ ಭೇಟಿ – ಬಂಗಾಳದ ಬಿಜೆಪಿ ನಾಯಕ ರಾಜೀಬ್‌ ಬ್ಯಾನರ್ಜಿ ಮತ್ತೆ ಟಿಎಂಸಿಗೆ?

’ಕಾಂಗ್ರೆಸ್‌ನಂತಹ ದೊಡ್ಡ ಪಕ್ಷದ ಬೆಂಬಲ ಇರುವ ನನಗೆ ಇಂತಹ ತೊಂದರೆಗಳು ಇರಬೇಕಾದರೇ, ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗಿರಬೇಡ..? ಈ ಪ್ರಕರಣದ ಕುರಿತು ಮುಖ್ಯಮಂತ್ರಿಗಳು, ಗೃಹ ಸಚಿವರು, ಪಕ್ಷಾತೀತವಾಗಿ ಮಹಿಳಾ ಸಂಸದರು, ಶಾಸಕರಿಗೆ ಪತ್ರ ಬರೆಯುತ್ತೇನೆ. ರಾಜಕೀಯದಲ್ಲಿ ಮಹಿಳೆಯರು ಉಳಿಯಬೇಕು ಎನ್ನುವವರು ಬೆಂಬಲ ನೀಡಿ ಎಂದು ಕೇಳುತ್ತೇನೆ’ ಎಂದು ಹೇಳಿದ್ದಾರೆ.

ಭಾನುವಾರ ಕೂಡ ಸಂಬಂಧಪಟ್ಟ ಪೊಲೀಸರಿಗೆ ಕರೆ ಮಾಡಿ ವಿಚಾರಿಸಿದ್ದೇವೆ. ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಲೇ ಇದ್ದಾರೆ. ಆದರೆ ಏನು ಮಾಡುತ್ತಿಲ್ಲ. ಹಾಗಾಗಿ ಸೋಮವಾರ ಕಮಿಷನರ್‌ ಅವರ ಕಚೇರಿಗೆ ಹೋಗಿ ದೂರು ನೀಡುತ್ತೇನೆ ಎಂದು ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ನಾನುಗೌರಿ.ಕಾಂಗೆ ತಿಳಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಭವ್ಯ ನರಸಿಂಹಮೂರ್ತಿ ತಮಗೆ ಬಂದ ಬೆದರಿಕೆ ಕರೆಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಭವ್ಯ ಅವರಿಗೆ ಬೆಂಬಲ ವ್ಯಕ್ತವಾಗಿದೆ.


ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...