Homeಮುಖಪುಟಕುಟುಂಬ ರಾಜಕಾರಣ ವಿರೋಧಿಸುವ ಬಿಜೆಪಿ: ಶಾಸಕರ ಮಕ್ಕಳು, ಪತ್ನಿಯರಿಗೆ ಟಿಕೆಟ್ ನೀಡಿದ್ದೇಕೆ?

ಕುಟುಂಬ ರಾಜಕಾರಣ ವಿರೋಧಿಸುವ ಬಿಜೆಪಿ: ಶಾಸಕರ ಮಕ್ಕಳು, ಪತ್ನಿಯರಿಗೆ ಟಿಕೆಟ್ ನೀಡಿದ್ದೇಕೆ?

- Advertisement -
- Advertisement -

ಪಾರ್ಟಿ ವಿತ್ ಎ ಡಿಫರೆನ್ಸ್ ಎಂದು ಹೇಳುವ ಬಿಜೆಪಿ ಪಕ್ಷವು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತದೆ. ದೇಶದಲ್ಲಿ ನೆಹರೂ ಕುಟುಂಬವನ್ನು ಮತ್ತು ರಾಜ್ಯದಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಎಗ್ಗಿಲ್ಲದೇ ಟೀಕೆ ಮಾಡುತ್ತದೆ. ಆದರೆ ಸ್ವತಃ ಬಿಜೆಪಿ ಕುಟುಂಬ ರಾಜಕಾರಣವನ್ನು ಪೋಷಿಸುತ್ತದೆ ಎಂಬುದಕ್ಕೆ ಮಂಗಳವಾರ ಘೋಷಿಸಿರುವ ಅಭ್ಯರ್ಥಿಗಳ ಟಿಕೆಟ್ ಪಟ್ಟಿಯೇ ಸಾಕ್ಷಿಯಾಗಿದೆ.

ಮೊದಲ ಪಟ್ಟಿಯಲ್ಲಿ ಹಲವು ಹಿರಿಯ ನಾಯಕರ ಮಕ್ಕಳಿಗೆ, ಅವರ ಪತ್ನಿಯರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕುಟುಂಬ ರಾಜಕಾರಣವನ್ನು ಬೆಳೆಸುತ್ತಿದೆ. ಅದರ ವಿವರ ಇಲ್ಲಿದೆ.

ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ ರಾಘವೇಂದ್ರ ಹಾಲಿ ಶಿವಮೊಗ್ಗದ ಸಂಸದರು. ಅವರ ಮತ್ತೊಬ್ಬ ಪುತ್ರ ವಿಜಯೇಂದ್ರನಿಗೆ ಶಿಕಾರಿಪುರದಲ್ಲಿ ಟಿಕೆಟ್ ನೀಡಲಾಗಿದೆ.

ಹುಕ್ಕೇರಿಯಲ್ಲಿ ಉಮೇಶ್ ಕತ್ತಿ ಮಗ ನಿಖಿಲ್ ಕತ್ತಿಗೆ ಟಿಕೆಟ್ ನೀಡಲಾಗಿದೆ.

ನಾಗಮಂಗಲದಲ್ಲಿ ಮಾಜಿ ಸಂಸದ, ಮಾಜಿ ಶಾಸಕ ಎಲ್ ಆರ್ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರಿಗೆ ಟಿಕೆಟ್ ನೀಡಲಾಗಿದೆ.

ವಿಜಯನಗರದಲ್ಲಿ ಆನಂದ್ ಸಿಂಗ್ ಮಗ ಸಿದ್ಧಾರ್ಥ ಸಿಂಗ್‌ಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.

ತುಮಕೂರು ನಗರದಲ್ಲಿ ಸಂಸದ ಬಸವರಾಜು ಮಗ ಜ್ಯೋತಿ ಗಣೇಶ್‌ರವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ.

ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ವಿಶ್ವನಾಥ್‌ ಮಾಮನಿಯವರ ಪತ್ನಿ ರತ್ನಾ ವಿಶ್ವನಾಥ್‌ ಮಾಮನಿಯವರಿಗೆ ಟಿಕೆಟ್ ನೀಡಲಾಗಿದೆ.

ಇನ್ನು ವಿ.ಸೋಮಣ್ಣನವರು ತಮ್ಮ ಪುತ್ರ ಅರುಣ್ ಸೋಮಣ್ಣನವರಿಗೆ ಟಿಕೆಟ್ ಕೇಳುತ್ತಿದ್ದು, ಬಹುಶಃ ಗೋವಿಂದರಾಜನಗರದಲ್ಲಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.

ಅದೇ ರೀತಿ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್ ಈಶ್ವರಪ್ಪನವರು ತಮ್ಮ ಪುತ್ರ ಕಾಂತೇಶ್‌ಗೆ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ.

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಮಗ ಜಿ.ಎಸ್. ಅನಿತ್‌ಗಾಗಿ ದಾವಣಗೆರೆ ಉತ್ತರ ಅಥವಾ ಚಿತ್ರದುರ್ಗದಲ್ಲಿದ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ.

ಇದನ್ನೂ ಓದಿ; ಮಂಡ್ಯ: ಕಾರ್ಯಕರ್ತರಿಗಿಲ್ಲ ಬಿಜೆಪಿ ಟಿಕೆಟ್, ಪಕ್ಷಾಂತರಿಗಳಿಗೆ ಮಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕದನ ವಿರಾಮ ಒಪ್ಪಿಗೆ ನಡುವೆಯೇ ರಫಾ ಮೇಲೆ ದಾಳಿ ನಡೆಸಿದ ಇಸ್ರೇಲ್: 12 ಪ್ಯಾಲೆಸ್ತೀನಿಯರು...

0
ಒತ್ತೆಯಾಳುಗಳ ಬಿಡುಗಡೆ ಮೂಲಕ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ ಸೂಚಿಸಿದ ನಡುವೆಯೇ ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಗಾಝಾದ ದಕ್ಷಿಣ ನಗರವಾದ ರಫಾದ ಮೇಲೆ ಸೋಮವಾರ (ಮೇ 6) ರಾತ್ರಿ ವಾಯುದಾಳಿ ನಡೆಸುವ...