Homeಮುಖಪುಟಉಬರ್‌ ಚಾಲಕನ ನೈತಿಕ ಪೊಲೀಸ್‌ಗಿರಿ : ಸಿಎಎ ಪ್ರತಿಭಟನಾಕಾರ ಮುಂಬೈ ಪೊಲೀಸ್‌ ವಶಕ್ಕೆ

ಉಬರ್‌ ಚಾಲಕನ ನೈತಿಕ ಪೊಲೀಸ್‌ಗಿರಿ : ಸಿಎಎ ಪ್ರತಿಭಟನಾಕಾರ ಮುಂಬೈ ಪೊಲೀಸ್‌ ವಶಕ್ಕೆ

ಕೆಂಪು ಸ್ಕಾರ್ಫ್ ಧರಿಸಬೇಡಿ.  "ವಾತಾವರಣವು ಉತ್ತಮವಾಗಿಲ್ಲ ಮತ್ತು ಏನು ಬೇಕಾದರೂ ಆಗಬಹುದು" ಎಂದು ಪೊಲೀಸರು ಎಂದು ಸಲಹೆ ನೀಡಿದ್ದಾರೆ

- Advertisement -
- Advertisement -

ಮುಂಬೈ ಉಬರ್ ಕ್ಯಾಬ್ ಚಾಲಕನೊಬ್ಬ, ಸಿಎಎ ಪ್ರತಿಭಟನೆಯ ಕುರಿತು ಫೋನ್‌ನಲ್ಲಿ ಮಾತನಾಡುತ್ತಿದ್ದ ತನ್ನ ಪ್ರಯಾಣಿಕ (ಕವಿ ಮತ್ತು ಸಾಮಾಜಿಕ ಕಾರ್ಯಕರ್ತ)ನನ್ನು ದೇಶದ್ರೋಹಿ ಎಂದು ಭಾವಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.

ಹೋರಾಟಗಾರ್ತಿ ಕವಿತಾ ಕೃಷ್ಣನ್ ಈ ಘಟನೆಯನ್ನು “ಭಯಾನಕ ಪ್ರಸಂಗ” ಎಂದು ಕರೆದು ಟ್ವೀಟ್‌ ಮಾಡಿದ್ದಾರೆ. ಈ ಕುರಿತು ಕ್ಯಾಬ್‌ ಚಾಲಕನ ಮೇಲೆ ತುರ್ತು ಕ್ರಮ ಕೈಗೊಳ್ಳುವಂತೆ ಉಬರ್‌ ಸಂಸ್ಥೆ ಮತ್ತು ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ.

ನಡೆದಿದ್ದೇನು?

ಸರ್ಕಾರ್‌ರವರ ಹೇಳಿಕೆಯನ್ನು ಕವಿತಾ ಕೃಷ್ಣನ್‌ರವರು ಟ್ವೀಟ್‌ ಮಾಡಿದ್ದಾರೆ. ಅದರಂತೆ ಸರ್ಕಾರ್‌ ಎಂಬ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ಬುಧವಾರ ರಾತ್ರಿ 10:30ರ ಸುಮಾರಿಗೆ ಜುಹುನಿಂದ ಕುರ್ಲಾಕ್ಕೆ ಉಬರ್ ಕ್ಯಾಬ್ ತೆಗೆದುಕೊಂಡಿದ್ದಾರೆ. ಪ್ರಯಾಣದ ಸಮಯದಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ (ಮೊಬೈಲ್ ಫೋನ್‌ನಲ್ಲಿ) ದೆಹಲಿಯ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ “ಲಾಲ್ ಸಲಾಮ್” ಘೋಷಣೆಯು ಜನರಿಗೆ ಹೆಚ್ಚು ಒಪ್ಪಿತವಾಗಿಲ್ಲ ಎಂಬ ವಿಷಯದ ಕುರಿತು ಚರ್ಚಿಸುತ್ತಿದ್ದರು.

ಇದನ್ನು ಕೇಳುತ್ತಿದ್ದ ಚಾಲಕ, ಸರ್ಕಾರ್‌ಗೆ ತಾನು ಎಟಿಎಂನಿಂದ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಕಾರು ನಿಲ್ಲಿಸಿದ್ದಾರೆ. ಆದರೆ ಚಾಲಕ ಇಬ್ಬರು ಪೊಲೀಸರೊಂದಿಗೆ ಹಿಂತಿರುಗಿದ್ದಾನೆ. ಪೊಲೀಸರು ಸರ್ಕಾರ್ ಅವರನ್ನು “ದಫ್ಲಿ” (ತಾಳವಾದ್ಯ) ಏಕೆ ಸಾಗಿಸುತ್ತಿದ್ದೀರಿ ಎಂದು ಕೇಳಿದರು ಮತ್ತು ಅವರ ವಿಳಾಸವನ್ನೂ ಕೇಳಿದ್ದಾರೆ.

ಸರ್ಕಾರ್ ಅವರು ಜೈಪುರದವರು ಮತ್ತು ಸಿಎಎ ವಿರೋಧಿ “ಮುಂಬೈ ಬಾಗ್” ಪ್ರತಿಭಟನೆಗೆ ಭೇಟಿ ನೀಡಿದ್ದರು ಎಂದು ಹೇಳಿದರು. ಅವರು ಪ್ರತಿಭಟನೆಯಲ್ಲಿ ಹಾಡು ಮತ್ತು ಘೋಷಣೆ ಕೂಗಲು ಅವರ ವಾದ್ಯವನ್ನು ಹೊತ್ತೊಯ್ಯುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಆದರೆ ಕ್ಯಾಬ್‌ ಚಾಲಕ “ಅವನು ಕಮ್ಯುನಿಸ್ಟ್ ಎಂದು ಹೇಳಿಕೊಂಡಿದ್ದಾನೆ. ದೇಶವನ್ನು ಸುಡುವ ಬಗ್ಗೆ ಮತ್ತು ಮುಂಬೈನಲ್ಲಿ ಶಾಹೀನ್ ಬಾಗ್ ಮಾಡುವ ಬಗ್ಗೆ ಮಾತನಾಡುತ್ತಿದ್ದಾನೆ. ಹಾಗಾಗಿ ಆ ಪ್ರಯಾಣಿಕನನ್ನು ಬಂಧಿಸುವಂತೆ” ಪೊಲೀಸರನ್ನು ಕೇಳಿಕೊಂಡಿದ್ದಾನೆ. ತಾನು ಅವನ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಚಾಲಕ ಹೇಳಿಕೊಂಡಿದ್ದಾನೆ.

ಸರ್ಕಾರ್ ಅವರನ್ನು ನಂತರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಹೇಳಿಕೆ ತಿಳಿಸಿದೆ. ಆಗ ಸರ್ಕಾರ್‌ ಸಂಭಾಷಣೆಯನ್ನು ಆಲಿಸುವಂತೆ ಪೊಲೀಸರಿಗೆ ಮನವಿ ಮಾಡಿದರು ಮತ್ತು ಆ ಸಂಭಾಷಣೆಯಲ್ಲಿ ಏನು ಅಪರಾಧವೆಂದು ಅವರು ಚಾಲಕನನ್ನು ಕೇಳಿದರು.

“ನೀವು ದೇಶವನ್ನು ನಾಶಪಡಿಸುತ್ತಿದ್ದಾಗ ನಾವು ಸುಮ್ಮನೆ ಕೈಕಟ್ಟಿ ನೋಡಬೇಕೆಂದು ನೀವು ನಿರೀಕ್ಷಿಸುತ್ತೀರಾ? ನಾನು ನಿಮ್ಮನ್ನು ಬೇರೆಲ್ಲಿಗೋ ಒಯ್ಯುವ ಬದಲು ಪೊಲೀಸ್ ಠಾಣೆಗೆ ಕರೆದೊಯ್ಯಿದ್ದೇನೆ. ಅದಕ್ಕೆ ನೀವು ಕೃತಜ್ಞರಾಗಿರಬೇಕು” ಎಂದು ಚಾಲಕ ಏರುದನಿಯಲ್ಲಿ ಬೆದರಿಸಿದ್ದಾನೆ.

ಕಾರು ಚಾಲಕನ ರೈಡ್-ಹೇಲಿಂಗ್ ಅಪ್ಲಿಕೇಶನ್‌ನಲ್ಲಿನ ಅವರ ಪ್ರೊಫೈಲ್ ವಿವರಣೆಯಲ್ಲಿ ಹೀಗೆ ಬರೆಯಲಾಗಿದೆ: “ನಾನು ಕಾರು ಚಾಲನ ವೃತ್ತಿ ಮಾಡುವುದು ಏಕೆಂದರೆ ಅದು ವಿಭಿನ್ನ ಪಾತ್ರಗಳು ಮತ್ತು ವ್ಯಕ್ತಿತ್ವಗಳನ್ನು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ”.

“ಆ ಸಮಯದಲ್ಲಿ ಸ್ವಲ್ಪ ಭಯದ ಭಾವನೆ ಮೂಡಿತು. ಅದು ತಕ್ಷಣದಲ್ಲಿಯೇ ಬಗೆಹರಿಯಲಿಲ್ಲ, ಮತ್ತು ರಾತ್ರಿಯಿಡೀ ಉಳಿದಿದೆ” ಎಂದು ಕವಿ-ಕಾರ್ಯಕರ್ತ ಸರ್ಕಾರ್‌ ತಿಳಿಸಿದ್ದಾರೆ.

ಪೊಲೀಸರು ಸರ್ಕಾರ್‌ರವರ ಸಿದ್ಧಾಂತ ಮತ್ತು ಅವರು ಓದಿದ ಜನರ ಬಗ್ಗೆ ಕೇಳಿದರು. ಸರ್ಕಾರ್ ಅವರ ಪ್ರಕಾರ, ಕೇವಲ ಅವನ ತಂದೆಯ ಸಂಬಳದಲ್ಲಿ ಮತ್ತು ಕೆಲಸವಿಲ್ಲದೆ ತಾನು ಹೇಗೆ ಬದುಕಲು ಸಾಧ್ಯ ಎಂಬಂತಹ “ಅಸಂಬದ್ಧ” ಪ್ರಶ್ನೆಗಳನ್ನು ಸಹ ಪೊಲೀಸರು ಕೇಳಿದರು. ಮತ್ತು ಅವರು “ದಫ್ಲಿ” ಯನ್ನು ಏಕೆ ಸಾಗಿಸುತ್ತಿದ್ದಾರೆಂದು ಪದೇ ಪದೇ ಕೇಳುತ್ತಲೇ ಇದ್ದರು.

ಪೊಲೀಸರು ಆತನೊಂದಿಗೆ ಸಭ್ಯರಾಗಿದ್ದರು ಮತ್ತು ಅವರ ಮತ್ತು ಚಾಲಕ ಇಬ್ಬರನ್ನೂ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಕೇಳಿಕೊಂಡರು.

ಮುಂಜಾನೆ 1 ಗಂಟೆ ಸುಮಾರಿಗೆ ಮತ್ತೊಬ್ಬ ಕಾರ್ಯಕರ್ತ ಎಸ್ ಗೋಹಿಲ್ ಪೊಲೀಸ್ ಠಾಣೆಗೆ ಬಂದ ನಂತರ ಸರ್ಕಾರ್ ಅವರಿಗೆ ಅಲ್ಲಿಂದ ಹೋಗಲು ಅನುಮತಿ ನೀಡಲಾಯಿತು.

ಕವಿತಾ ಕೃಷ್ಣನ್ ಅವರ ಟ್ವೀಟ್ ಹೇಳಿಕೆಯ ಪ್ರಕಾರ, ಸರ್ಫಾರ್‌ಗೆ ಡಫ್ಲಿ ಒಯ್ಯಬೇಡಿ ಮತ್ತು ಕೆಂಪು ಸ್ಕಾರ್ಫ್ ಧರಿಸಬೇಡಿ.  “ವಾತಾವರಣವು ಉತ್ತಮವಾಗಿಲ್ಲ ಮತ್ತು ಏನು ಬೇಕಾದರೂ ಆಗಬಹುದು” ಎಂದು ಪೊಲೀಸರು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ಘಟನೆಯು “ಎನ್‌ಪಿಆರ್ ಎನ್‌ಆರ್‌ಸಿ ಸಿಎಎ ಅಡಿಯಲ್ಲಿ ಭಯಾನಕ ಭಾರತದ ದರ್ಶನವಾಗಿದೆ, ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಇತರರನ್ನು ಅನುಮಾನಿಸಲು ಮತ್ತು ವಿಚಾರಣೆ ನಡೆಸಲು ಪ್ರೋತ್ಸಾಹಿಸಲಾಗುವುದು ಮತ್ತು ಪೊಲೀಸರು ಎಲ್ಲರಿಗೂ ಕಿರುಕುಳ ನೀಡಬಹುದು” ಎಂದು ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ. ಅವರು ಮುಂಬೈ ಪೊಲೀಸ್ ಮತ್ತು ಉಬರ್ ಅನ್ನು ಟ್ಯಾಗ್ ಮಾಡಿದ್ದಾರೆ.

“ನಾವು ನಿಮ್ಮನ್ನು ಫಾಲೋ ಮಾಡುತ್ತಿದ್ದೇವೆ. ದಯವಿಟ್ಟು ಡಿಎಂನಲ್ಲಿ ಪ್ರಕರಣದ ನಿಖರವಾದ ವಿವರಗಳನ್ನು ಹಂಚಿಕೊಳ್ಳಿ” ಎಂದು ಮುಂಬೈ ಪೊಲೀಸರು ಕೃಷ್ಣನ್‌ರವರ ಟ್ವೀಟ್‌ಗೆ ಉತ್ತರಿಸಿದ್ದಾರೆ.

ಟ್ವಿಟರ್ ಹ್ಯಾಂಡಲ್ ‘ಉಬರ್ ಇಂಡಿಯಾ ಸಪೋರ್ಟ್’ ಈ ಘಟನೆಗೆ ಸಂಬಂಧಿಸಿದೆ “ನಾವು ಇದನ್ನು ಆದ್ಯತೆಯ ಮೇರೆಗೆ ವಿಚಾರನೆ ನಡೆಸಲು ಬಯಸುತ್ತೇವೆ. ಪ್ರಯಾಣವನ್ನು ವಿನಂತಿಸಿದ ನೋಂದಾಯಿತ ವಿವರಗಳನ್ನು ದಯವಿಟ್ಟು ಹಂಚಿಕೊಳ್ಳಿ” ಎಂದು ಅದು ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನೈತಿಕ ಪೊಲೀಸ್ ಗಿರಿ ಮೆರೆದಿರುವ ಉಬರ್ ಚಾಲಕನ ವಿರುದ್ಧ ಉಬರ್ ಕಂಪನಿಯು ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

  2. Questionable act’s are harassment is very dangerous zone this is the encashment if BJP govt
    They doesn’t want to development of so many sectors
    They want to only got power and smashing all constional institutions
    This very condemned one and shame full to NDA givt

LEAVE A REPLY

Please enter your comment!
Please enter your name here

- Advertisment -

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...