Homeಮುಖಪುಟವಿಶ್ವಾಸಮತ ಗೆದ್ದ ಉದ್ಧವ್‌ ಠಾಕ್ರೆ: 169 ಶಾಸಕರ ಭಾರೀ ಬೆಂಬಲ

ವಿಶ್ವಾಸಮತ ಗೆದ್ದ ಉದ್ಧವ್‌ ಠಾಕ್ರೆ: 169 ಶಾಸಕರ ಭಾರೀ ಬೆಂಬಲ

- Advertisement -
- Advertisement -

ಬಿಜೆಪಿಯ ಗದ್ದಲ, ಗಲಾಟೆ ಪ್ರತಿಭಟನೆಯ ನಡುವೆ ನಡೆದ ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿಯ ವಿಶ್ವಾಸಮತ ಯಾಚನೆಯಲ್ಲಿ ಉದ್ಧವ್‌ ಠಾಕ್ರೆ ಬಹುಮತ ಸಾಧಿಸಿದ್ದು 169 ಶಾಸಕರು ಹೊಸ ಸರ್ಕಾರವನ್ನು ಬೆಂಬಲಿಸಿ ಮತಹಾಕಿದರು.

ಬಿಜೆಪಿಯು ಮೊದಲು ನಿಯಮಾನುಸಾರ ಸ್ಪೀಕರ್‌ರವರನ್ನು ಆಯ್ಕೆ ಮಾಡಿ ಆನಂತರ ವಿಶ್ವಾಸಮತ ಯಾಚನೆ ನಡೆಯಬೇಕು ಎಂದು ಪಟ್ಟು ಹಿಡಿಯಿತು. ಜೊತೆಗೆ ಗೌಪ್ಯ ಮತದಾನ ನಡೆಯಬೇಕೆಂದು ಸಹ ಒತ್ತಾಯಿಸಿತು.

ಆದರೆ ಇದಕ್ಕೊಪ್ಪದ ಮೈತ್ರಿಕೂಟ ಎನ್‌ಸಿಪಿಯ ದಿಲೀಪ್‌ ಪಾಟೀಲ್‌ರವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿ ವಿಶ್ವಾಸಮತಯಾಚನೆಗೆ ಚಾಲನೆ ನೀಡಿತು. ಆಗ ಬಿಜೆಪಿಯ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಮಾತನಾಡಿ ಇದು ಸಂವಿಧಾನಬಾಹಿರ ಎಂದು ಸದನದಿಂದ ಹೊರನಡೆದರು.

ಅದನ್ನು ಲೆಕ್ಕಿಸದೇ ಸ್ಪೀಕರ್‌ ವಿಶ್ವಾಸಮತ ಎಣಿಕೆ ಶುರು ಮಾಡಿದರು. ತಲೆ ಎಣಿಕೆಯಲ್ಲಿ ಹಾಜರಿದ್ದ ಸದಸ್ಯರಲ್ಲಿ 169 ಜನ ಮೈತ್ರಿ ಸರ್ಕಾರವನ್ನು ಬೆಂಬಲಿಸಿದರು. ನಾಲ್ಕು ಜನ ಶಾಸಕರು ತಟಸ್ಟರಾಗುಳಿದರು.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರು ಯಾವುದೇ ಸದನದ ಶಾಸಕರಾಗ ಕಾರಣ ಸದನದಲ್ಲಿ ಹಾಜರಿರಲಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....