Homeಮುಖಪುಟಉತ್ತರ ಪ್ರದೇಶ : ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್‌ ಮೇಲೆ ರಾಸಾಯನಿಕ ಎರಚಲು ಯತ್ನ

ಉತ್ತರ ಪ್ರದೇಶ : ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್‌ ಮೇಲೆ ರಾಸಾಯನಿಕ ಎರಚಲು ಯತ್ನ

- Advertisement -
- Advertisement -

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಬಂದಿದ್ದ  ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಮೇಲೆ ಲಕ್ನೋದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ರಾಸಾಯನಿಕ ಎರಚಲು ಪ್ರಯತ್ನಿಸಲಾಗಿದೆ.

ಕನ್ಹಯ್ಯ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರು. ವೇದಿಕೆಯತ್ತ ತೆರಳುತ್ತಿದ್ದಂತೆ ಯುವಕರ ಗುಂಪೊಂದು ಅವರ ಮೇಲೆ ರಾಸಾಯನಿಕದಂತಹ ದ್ರವವನ್ನು ಎಸೆದಿದೆ. ಕನ್ಹಯ್ಯ ಕುಮಾರ್ ಅವರ ಮೇಲೆ ಎಸೆದದ್ದು ಮಸಿ ಅಲ್ಲ, ಆದರೆ, ಒಂದು ರೀತಿಯ ಆಸಿಡ್ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

“ಆರೋಪಿಗಳು ಕನ್ಹಯ್ಯ ಕುಮಾರ್ ಮೇಲೆ ಆಸಿಡ್ ಎಸೆಯಲು ಪ್ರಯತ್ನಿಸಿದರು ಆದರೆ ವಿಫಲರಾದರು. ಆದರೆ, ಕೆಲವು ಹನಿಗಳು ಸಮೀಪದಲ್ಲಿ ನಿಂತಿದ್ದ 3-4 ಯುವಕರ ಮೇಲೆ ಬಿದ್ದವು ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆರೋಪಿಯನ್ನು ಹಿಡಿದಿದ್ದಾರೆ ಆದರೆ ಆತನ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿಸಿದ್ದಾರೆ. ಆದರೆ, ರಾಸಾಯನಿಕ ಎಸೆದವರನ್ನು ದೇವಾಂಶ್ ಬಾಜಪೇಯಿ ಎಂದು ಗುರುತಿಸಲಾಗಿದೆ. ಈ ರಾಸಾಯನಿಕ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

’ಕನ್ಹಯ್ಯ ದೇಶದ್ರೋಹಿ. ಆತನ ಕಾರ್ಯಕ್ರಮವನ್ನು ಲಕ್ನೋದಲ್ಲಿ ಏಕೆ ನಡೆಸಬೇಕು..? ದೇಶದವರಲ್ಲದವನು ನಮ್ಮವನಾಗುವುದು ಹೇಗೆ..?’ ಎಂದು ಹೇಳಿದ್ದಾನೆ ಎಂದು ದೈನಿಕ್ ಭಾಸ್ಕರ್‌ ವರದಿ ಮಾಡಿದೆ.

“ಹತ್ರಾಸ್, ಉನ್ನಾವೋ ಮತ್ತು ಲಖೀಂಪುರ್‌ ಖೇರಿ ಘಟನೆ ನಡೆದಾಗಿನಿಂದ ಕಾಂಗ್ರೆಸ್ ನ್ಯಾಯಕ್ಕಾಗಿ ಬೀದಿಗಿಳಿದಿದೆ‍. ದೇಶವನ್ನು ಸಹ ಕಟ್ಟದವರು ದೇಶವನ್ನು ಮಾರುತ್ತಿದ್ದಾರೆ. ಕಾಂಗ್ರೆಸ್ ಭಾರತವನ್ನು ನಿರ್ಮಿಸಿದೆ, ಆದ್ದರಿಂದ ಅಂತಹವರಿಂದ ದೇಶವನ್ನು ಉಳಿಸುತ್ತಿದೆ” ಎಂದು ಹೇಳಿದ್ದಾರೆ.

ಲಕ್ನೋದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಲು ಇಂದು (ಫೆ.1) ಕನ್ಹಯ್ಯ ಕುಮಾರ್ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದರು.

2018 ರಲ್ಲಿ ಗ್ವಾಲಿಯರ್‌ನಲ್ಲಿ “ಸಂವಿಧನ್ ಬಚಾವೋ” ಪ್ರತಿಭಟನೆಯ ಭಾಗವಾಗಿ ಚೇಂಬರ್ ಆಫ್ ಕಾಮರ್ಸ್ ಭವನದಲ್ಲಿ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಕುಮಾರ್ ಮೇಲೆ ವ್ಯಕ್ತಿಯೊಬ್ಬ ಶಾಯಿ ಎಸೆದಿದ್ದರು.


ಇದನ್ನೂ ಓದಿ: ‘ನೀವು ಬಿಜೆಪಿ ಏಜೆಂಟಾ?’- ಕನ್ಹಯ್ಯ ಪ್ರಶ್ನೆಗಳಿಗೆ ಪತ್ರಕರ್ತ ತಬ್ಬಿಬ್ಬು; ಕ್ಷಮೆಯಾಚಿಸಿದ ವರದಿಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...