Homeಮುಖಪುಟಉತ್ತರ ಪ್ರದೇಶ ಚುನಾವಣೆ: ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿಗಳಿವರು!

ಉತ್ತರ ಪ್ರದೇಶ ಚುನಾವಣೆ: ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿಗಳಿವರು!

- Advertisement -
- Advertisement -

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸುವ ಮೂಲಕ ಸತತ ಎರಡನೇ ಭಾರಿ ಅಧಿಕ್ಕಾರಕ್ಕೇರಿದೆ. ಆ ಮೂಲಕ 40 ವರ್ಷಗಳ ನಂತರ ಸತತ ಎರಡನೇ ಭಾರಿಗೆ ಆಯ್ಕೆಯಾದ ದಾಖಲೆ ಮಾಡಿದೆ. ಇದರ ಜೊತೆಗೆ ಪಕ್ಷದ ಹಲವು ಅಭ್ಯರ್ಥಿಗಳು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ದಾಖಲೆ ಬರೆದಿದ್ದಾರೆ. ಸಾಹಿಬಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಶರ್ಮಾ ಎಂಬುವವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಮದ ಗೆಲುವು ಸಾಧಿಸಿದ್ದಾರೆ. ಯುಪಿ ಸಿಎಂ ಆದಿತ್ಯನಾಥ್ ಸಹ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ವಿಜಯಿಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:

1. ಬಿಜೆಪಿಯ ಸಾಹಿಬಾಬಾದ್ ಕ್ಷೇತ್ರದ ಅಭ್ಯರ್ಥಿ ಸುನಿಲ್ ಕುಮಾರ್ ಶರ್ಮಾ ಅವರು ಸಮಾಜವಾದಿ ಪಕ್ಷದ ಅಮರ್ಪಾಲ್ ಶರ್ಮಾ ಅವರನ್ನು 2.14 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.

2. ಬಿಜೆಪಿಯ ಪಂಕಜ್ ಸಿಂಗ್ ಅವರು ತಮ್ಮ ನೋಯ್ಡಾ ಕ್ಷೇತ್ರದಲ್ಲಿ 1.81 ಲಕ್ಷ ಮತಗಳ ಅಂತರದಿಂದ ಸಮಾಜವಾದಿ ಪಕ್ಷದ ಸುನೀಲ್ ಚೌಧರಿ ಅವರನ್ನು ಸೋಲಿಸಿದ್ದಾರೆ.

3. ಮೀರತ್ ಕ್ಯಾಂಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅಮಿತ್ ಅಗರ್ವಾಲ್ 1.18 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಮನೀಶ್ ಅಲವತ್ ಕೇವಲ 43,960 ಮತಗಳನ್ನಷ್ಟೆ ಗಳಿಸಿದ್ದಾರೆ.

4. ಬಿಜೆಪಿಯ ಪುರುಷೋತ್ತಮ್ ಖಂಡೇಲ್ವಾಲ್ ಅವರು ಆಗ್ರಾ ಉತ್ತರ ಕ್ಷೇತ್ರದಲ್ಲಿ 1.12 ಲಕ್ಷ ಮತಗಳ ಅಂತರದಿಂದ ಬಿಎಸ್‌ಪಿಯ ಶಬ್ಬೀರ್ ಅಬ್ಬಾಸ್‌ರವರನ್ನು ಸೋಲಿಸಿದ್ದಾರೆ.

5. ಮೆಹ್ರೋನಿ ಸ್ಥಾನದಿಂದ ಬಿಜೆಪಿಯ ಮನೋಹರ್ ಲಾಲ್ 1.1 ಲಕ್ಷ ಮತಗಳ ಅಂತರದಿಂದ  ಗೆದ್ದಿದ್ದಾರೆ. ಇಲ್ಲಿ ಬಿಎಸ್‌ಪಿ ಎರಡನೇ ಸ್ಥಾನ ಪಡೆದಿದೆ.

6. ಮಥುರಾದಿಂದ ಬಿಜೆಪಿಯ ಶ್ರೀಕಾಂತ್ ಶರ್ಮಾ 1.08 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಎರಡನೇ ಸ್ಥಾನ ಪಡೆದಿದ್ದಾರೆ.

7. ಲಲಿತ್‌ಪುರದ ಬಿಜೆಪಿ ಅಭ್ಯರ್ಥಿ ರಾಮರತನ್ ಕುಶ್ವಾಹ 1.07 ಮತಗಳ ಅಂತರದಿಂದ ಬಿಎಸ್‌ಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

8. ಬಿಜೆಪಿಯ ಅತುಲ್ ಗರ್ಗ್ ಘಾಜಿಯಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ವಿರುದ್ಧ 1.05 ಮತಗಳ ಅಂತರದಿಂದ ಗೆದ್ದಿದ್ದಾರೆ.

9. ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದಿಂದ (ನಗರ) 1.03 ಲಕ್ಷ ಮತಗಳಿಂದ ಗೆದ್ದಿದ್ದಾರೆ.

10. ಬಿಜೆಪಿಯ ಅಂಜುಲಾ ಸಿಂಗ್ ಮಹೂರ್ ಅವರು ಹತ್ರಾಸ್‌ನಲ್ಲಿ ಬಿಎಸ್‌ಪಿಯ ಸಂಜೀವ್ ಕುಮಾರ್ ಅವರನ್ನು 1 ಲಕ್ಷ ಮತಗಳಿಂದ ಸೋಲಿಸಿದರು.


ಇದನ್ನೂ ಓದಿ: ಯುಪಿ ಫಲಿತಾಂಶ 2024ರ ಚುನಾವಣೆಗೆ ದಿಕ್ಸೂಚಿ ಎಂದ ಮೋದಿ: ಇದು ಸುಳ್ಳು ನಿರೂಪಣೆ ಎಂದ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...