Homeಮುಖಪುಟಹಿಜಾಬ್: ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ, ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿಲ್ಲ - ರಾಜೇಂದ್ರ...

ಹಿಜಾಬ್: ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ, ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿಲ್ಲ – ರಾಜೇಂದ್ರ ಚೆನ್ನಿ

ಸರಕಾರವನ್ನು ಓಲೈಸಲು ಅನೇಕ ಜಿಲ್ಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಯಲದ ಮಧ್ಯಂತರ ಆದೇಶದ ವಿರುದ್ಧ ನಡೆದುಕೊಂಡಿದ್ದಾರೆ.

- Advertisement -
- Advertisement -

ನಾನು ಒಂದು ದೃಶ್ಯ ಮತ್ತು ಒಂದು ವರದಿಯ ಬಗ್ಗೆ ಬರೆಯುತ್ತಿದ್ದೇನೆ. ನ್ಯಾಯಾಲಯಗಳಿಗೆ ಸಂಬಂಧಪಟ್ಟ ಯಾವುದೇ ವಿದ್ಯಮಾನದ ಬಗ್ಗೆ, ವಿಶೇಷವಾಗಿ ನ್ಯಾಯಾಲಯದ ತೀರ್ಪುಗಳ ಬಗ್ಗೆ ಬರೆಯಬಾರದೆಂದು ಹೇಳಲಾಗುತ್ತದೆ. ಸಂವಿಧಾನವು ಈ ಬಗ್ಗೆ ಖಚಿತವಾಗಿ ಏನು ಹೇಳಿದೆ ಎಂದು ನನಗೆ ಗೊತ್ತಿಲ್ಲ, ಆದ್ದರಿಂದ ಏನೇ ಇರಲಿ, ನಾನು ವಿಮರ್ಶೆಯ ಬದಲಾಗಿ ಒಬ್ಬ ನಾಗರೀಕನಾಗಿ ನನಗೆ ಅನ್ನಿಸಿದ ಗೊಂದಲಗಳ ಬಗ್ಗೆ ಬರೆಯುತ್ತಿದ್ದೇನೆ.

ಮೊದಲನೆಯದಾಗಿ ಒಂದು ದೃಶ್ಯ ಚಿಕ್ಕಮಗಳೂರಿನ ಪ್ರಥಮದರ್ಜೆ ಕಾಲೇಜಿನ ಗೇಟಿನ ಬಳಿ ತಗೆದ ವೀಡಿಯೋ, ಇದನ್ನು ನಾನು ಸಾಮಾಜಿಕ ತಾಣಗಳಲ್ಲಿ ನೋಡಿದೆ. ಹಿಜಾಬ್ ಹಾಕಿದ ಕೆಲವು ವಿದ್ಯಾರ್ಥಿನಿಯರು ಅವರಿಗೆ ಆಂತರಿಕ ಪರೀಕ್ಷೆ ಬರೆಯಲು ಅಥವಾ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಒಳಗೆ ಬಿಟ್ಟಿಲ್ಲವೆಂದು ಅಳುತ್ತಿರುವ ದೃಶ್ಯ. ಪ್ರಾಚಾರ್ಯರು ಉಚ್ಚನ್ಯಾಯಾಲಯದ ಮಧ್ಯಂತರ ಆಜ್ಞೆ ಇದೆ ನೀವು ಜಿಲ್ಲಾಧಿಕಾರಿಗಳನ್ನು ಕೇಳಿ ಎಂದರಂತೆ. ಅವರೂ ಅದೇ ಉತ್ತರವನ್ನು ಕೊಟ್ಟರಂತೆ. ನಮಗೆ ಬೇರೆ ಕೊಠಡಿಯಲ್ಲಿ ಕುಳಿತು ಬರೆಯಲು ಅವಕಾಶ ಕೊಡಬೇಕಿತ್ತು ಎಂದು ಈ ವಿದ್ಯಾರ್ಥಿನಿಯರು ಅಳುತ್ತಿದ್ದರು. ಮನುಷ್ಯರಾದ ಯಾರಿಗಾದರೂ ಕರುಳು ಮಿಡಿಯುವಂಥ ದೃಶ್ಯವಿದಾಗಿತ್ತು. ತಪ್ಪು ಒಪ್ಪು ಚರ್ಚಿಸೋಣ, ಆದರೆ ಮಕ್ಕಳೂ ಹೀಗೆ ಅಸಹಾಯಕರಾಗಿ ಅಳುವುದು ಯಾವ ಸಮಾಜಕ್ಕೂ ಕಳಂಕವೆ.

ಈಗ ಒಂದು ವರದಿ. ಕರ್ನಾಟಕದ ಉಚ್ಛನ್ಯಾಯಾಲಯವು ವಯಸ್ಕಳಲ್ಲದ ಹುಡುಗಿಯೊಬ್ಬಳನ್ನು ರೇಪ್ ಮಾಡಿದ ಆರೋಪವಿರುವ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕೆಂದು ಆದೇಶ ನೀಡಿದೆ. (ಇಂದು 11/03/22 ಪತ್ರಿಕೆಗಳಲ್ಲಿ ವರದಿಯಾಗಿದೆ). ವರದಿಯ ಪ್ರಕಾರ ಮಾನ್ಯ ನ್ಯಾಯಮೂರ್ತಿಯವರು, “ಆರೋಪವಿದ್ದರೂ ವಿಚಾರಣೆ ನಡೆಯುತ್ತಿರುವ ಕಾರಣಕ್ಕಾಗಿ ವಿದ್ಯಾರ್ಥಿಯು ಪರೀಕ್ಷೆ ಬರೆಯುವುದನ್ನು ನಿರ್ಬಂಧಿಸಲಾಗದು” ಎಂದು ಹೇಳಿದ್ದಾರೆ. ಇದು ನ್ಯಾಯದ ದೃಷ್ಟಿಯಿಂದ ಸರಿಯೆಂದು ತೋರುತ್ತದೆ. ಅಲ್ಲದೆ ಈಗ ಪರೀಕ್ಷೆಗೆ ನಿರ್ಬಂಧಿಸಿದರೆ ಮುಂದೆ ಒಂದು ವೇಳೆ ಆರೋಪಿಯು ಅಪರಾಧಿಯಲ್ಲ ಎಂದು ಸಾಬೀತಾದರೆ ಅದು ಅವನಿಗೆ ಅನ್ಯಾಯವಾಗುತ್ತದೆ ಎನ್ನುವ ಸರಿಯಾದ ತರ್ಕವೂ ಇಲ್ಲಿದೆ.

ಹಾಗಿದ್ದರೆ ಹಿಜಾಬ್ ಪ್ರಕರಣದಲ್ಲಿ ಯಾರೂ ಆರೋಪಿಗಳಿಲ್ಲ. ಈ ವಿದ್ಯಾರ್ಥಿನಿಯರು ಆರೋಪಿಗಳಲ್ಲ. ಉಚ್ಛನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣವು ಧಾರ್ಮಿಕ ಸಂಕೇತಗಳು ಹಾಗೂ ಶಿಕ್ಷಣ ಸಂಸ್ಥೆಗಳ ಬಗ್ಗೆ ಅಪರಾಧದ ಬಗ್ಗೆ ಅಲ್ಲ. ನ್ಯಾಯಾಲಯದ ಮಧ್ಯಂತರ ಆದೇಶವು ಪರಿಸ್ಥಿತಿಯನ್ನು ನಿಭಾಯಿಸಲು ಅವಶ್ಯಕವಾಗಿರಬಹುದು. ಆದರೆ ಪದೇ ಪದೇ ಸ್ಪಷ್ಟೀಕರಣದ ನಂತರವೂ ಶಿಕ್ಷಣ ಸಂಸ್ಥೆಗಳು ತಪ್ಪಾಗಿ, ಕ್ರೂರವಾಗಿ ವರ್ತಿಸಿವೆ. ಘನತೆವೆತ್ತ ನ್ಯಾಯಾಲಯವು ಮಾನವೀಯವಾದ ಉದ್ದೇಶದ ವಿರುದ್ಧ ನಡೆದುಕೊಂಡಿವೆ. ಸರಕಾರವನ್ನು ಓಲೈಸಲು ಅನೇಕ ಜಿಲ್ಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಯಲದ ಮಧ್ಯಂತರ ಆದೇಶದ ವಿರುದ್ಧ ನಡೆದುಕೊಂಡಿದ್ದಾರೆ. ಘನವಾದ ಸಂಪ್ರದಾಯವಿರುವ ಉಚ್ಛನ್ಯಾಯಾಲಯದ ಆದೇಶದ Spirit ಅನ್ನು ವಿಕೃತಿಗೊಳಿಸಿದ್ದಾರೆ.

ಈಗ ಈ ದೃಶ್ಯ ಈ ವರದಿಯನ್ನು ಒಟ್ಟಿಗೆ ನೋಡೋಣ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಆರೋಪಿಗಳಲ್ಲ. ಅವರಿಗೆ ಆಂತರಿಕ ಪರೀಕ್ಷೆ ಅಥವಾ ಪ್ರಾಯೋಗಿಕ ಪರೀಕ್ಷೆಗೆ ನಿರ್ಬಂಧಿಸಿದರೆ ಅದು natural justice ಹೇಗೆ ಆಗುತ್ತದೆ? ಈಗ ಉಚ್ಛನ್ಯಾಯಾಲಯವು ಕಾಯ್ದಿರಿಸಿದ ತೀರ್ಪನ್ನು ಇನ್ನು ಮುಂದೆ ಪ್ರಕಟಿಸಿದಾಗ ಒಂದು ವೇಳೆ ಆ ತೀರ್ಪು ಹಿಜಾಬ್ ಪರವಾಗಿ ಬಂದರೆ, ಅಥವಾ ಪರೀಕ್ಷೆಗೆ ನಿರ್ಬಂಧವಿರಬಾರದೆಂದು ಬಂದರೆ? ಕೊನೇಪಕ್ಷ ಕಾಯ್ದು ನೋಡೋಣ, ನಿಮಗೆ ಅವಕಾಶ ಸಿಕ್ಕಬಹುದು ಎಂದು ಹೇಳಬಹುದಾಗಿತ್ತು. ಘನತೆವೆತ್ತ ನ್ಯಾಯಾಧೀಶರಿಗಿಂತ ತಾವು ದೊಡ್ಡವರು ಎಂದು ತಿಳಿದಿರುವ ಮಂತ್ರಿಗಳು ‘ಇಲ್ಲವೇ ಇಲ್ಲ, ಇನ್ನೊಂದು ಅವಕಾಶವೇ ಇಲ್ಲ’ ಎಂದು ಯಾವ ಆಧಾರದ ಮೇಲೆ ಹೇಳಿದ್ದಾರೆ? ತಾವೇ ತೀರ್ಪು ಬರೆದುಬಿಟ್ಟಿದ್ದೇನೆ ಎಂದುಕೊಂಡಿದ್ದಾರೆಯೆ? ಇರಲಿ, ಈಗ ಇದೇ ನ್ಯಾಯಾಲಯವು ಆರೋಪಿಗೆ ಕೂಡ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಆದೇಶಿಸುವಾಗ ಹಿಜಾಬ್ ಧರಿಸಿದ ವಿರ್ದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಅವಕಾಶ ಮಾಡಿಕೊಡಿ ಅಥವಾ ಪರ್ಯಾಯ ಪರೀಕ್ಷೆಗೆ ಅವಕಾಶವಿರಲಿ ಎಂದು ಅದು ಹೇಳುವುದು ಸಹಜ ನ್ಯಾಯವಾಗಬಹುದು. ಇದು ಕಾನೂನು ತಜ್ಞರಲ್ಲದವರಿಗೆ ಸರಿ ಎನ್ನಿಸುತ್ತದೆ. ಇದು ನನಗೆ ಅನ್ನಿಸಿರುವ ಗೊಂದಲ. ನನಗೆ ನ್ಯಾಯಾಲಯ ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ. ಹಾಗೂ ಗೌರವ ಇದೆ. ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಬಗ್ಗೆ ಇವೆರಡೂ ಇಲ್ಲ.

  • ಪ್ರೊ. ರಾಜೇಂದ್ರ ಚೆನ್ನಿ
ಪ್ರೊ.ರಾಜೇಂದ್ರ ಚೆನ್ನಿ

ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು.


ಇದನ್ನೂ ಓದಿ; ಕರ್ನಾಟಕದಲ್ಲಿ ಹಿಜಾಬ್ ಧರಿಸಿದ್ದಕ್ಕಾಗಿ ತೊಂದರೆಗೊಳಗಾದ ವಿದ್ಯಾರ್ಥಿನಿಯರಿಗೆ ಸಲಹೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Sir, no loss if these girls would go to school/college without hijab for 2-3 hours. Nor was an obstacle to their exams. Nor an
    Infidelity to their religion. Deliberately went to college with hijab knowingly in violation of interim order in operation that attracts contempt proceedings. We must see humanity in following Court VERDICT and it’s execution. Coming to the point of humanity your view is correct. But…

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...