ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿ ಉತ್ತರ ಪ್ರದೇಶದ ಬಿಜೆಪಿ ನಾಯಕಿ ಪ್ರಿಯಂವದಾ ತೋಮರ್ ಅವರು ತಮ್ಮ ಸ್ಥಾನಕ್ಕೆ ನೀಡಿದ್ದಾರೆ.
ಉತ್ತರಪ್ರದೇಶದ ಮಹಿಳಾ ಆಯೋಗದ ಸದಸ್ಯೆಯಾಗಿರುವ ಡಾ. ಪ್ರಿಯಂವದಾ ತೋಮರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಿಯಂವದಾ ರಾಜೀನಾಮೆ ನೀಡಿ ರಾಜ್ಯದಲ್ಲಿ ಭ್ರಷ್ಟಾಚಾರ ಹರಡುತ್ತಿದ್ದಾರೆ ಮತ್ತು ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಜೊತೆಗೆ, ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿವೆ. ರೈತರ ಬಗ್ಗೆ ಸೂಕ್ಷ್ಮತೆಯಿಲ್ಲದೆ ವರ್ತಿಸುತ್ತಿವೆ ಎಂದು ಬಿಜೆಪಿ ರಾಜ್ಯ ಕಾರ್ಯನಿರ್ವಾಹಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಅಲ್ಲ ಅದಕ್ಕಿಂತ ದೊಡ್ಡದು ಬಂದರೂ ರೈತ ಹೋರಾಟ ನಿಲ್ಲದು- ರಾಕೇಶ್ ಟಿಕಾಯತ್
सरकार की किसानों के प्रति घोर उपेक्षा, हठधर्मिता एवं संवेदनहीनता के चलते मैं बेहद आहत हूँ, इसलिए अपनी अन्तरात्मा की आवाज़ पर भारतीय जनता पार्टी की प्रदेश कार्यकारिणी सदस्य ,प्राथमिक सदस्यता एवं अन्य सभी पदों से त्यागपत्र दे रही हूँ। pic.twitter.com/MUZmxryoGc
— Priyamvada Tomar (@DrPriyamvadaBjp) April 6, 2021
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕಿ ಪ್ರಿಯಂವದಾ ತೋಮರ್, “ರೈತರ ಬಗ್ಗೆ ಸರಕಾರದ ಸಂಪೂರ್ಣ ನಿರ್ಲಕ್ಷ್ಯ, ಸಿದ್ಧಾಂತ ಮತ್ತು ಸೂಕ್ಷ್ಮತೆಯಿಲ್ಲದ ಕಾರಣ ನನಗೆ ತೀವ್ರ ನೋವಾಗಿದೆ, ಆದ್ದರಿಂದ ನನ್ನ ಆತ್ಮಸಾಕ್ಷಿಯಿಂದ ರಾಜ್ಯ ಕಾರ್ಯನಿರ್ವಾಹಕ ಸದಸ್ಯ, ಪ್ರಾಥಮಿಕ ಸದಸ್ಯತ್ವ ಮತ್ತು ಭಾರತೀಯ ಜನತಾ ಪಕ್ಷದ ಎಲ್ಲಾ ಇತರ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿಯೂ ಇವು, ‘ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ, ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಪ್ರಿಯಂವದಾ ಬರೆದಿದ್ದಾರೆ.
ಇದನ್ನೂ ಓದಿ: ‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’

Good work hats up..medam…jai indian ..