“ಇವರಿಗಿಂತ ಪ್ರಬಲವಾಗಿದ್ದ ಶತ್ರುಗಳನ್ನೂ ಹೊಡೆದೋಡಿಸಿದ್ದೇವೆ; ಇನ್ನು ಇವರು ಯಾವ ಲೆಕ್ಕ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಅಭಿಯಾನದ ಅಂಗವಾಗಿ ದಕ್ಷಿಣ ತಮಿಳುನಾಡಿನಲ್ಲಿ ಎರಡನೇ ದಿನ ಪ್ರವಾಸ ಮಾಡುತ್ತಿರುವ ರಾಹುಲ್ ಗಾಂಧಿ, ತಿರುನಲ್ವೇಲಿಯ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ‘ಎಜುಕೇಟರ್ಸ್ ಮೀಟ್’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
“ಇವರಿಗಿಂತಲೂ ದೊಡ್ಡ ಶತ್ರುಗಳನ್ನು ಸೋಲಿಸಿದ್ದೇವೆ. ಆದರೆ ನಾವು ಪ್ರೀತಿ ಮತ್ತು ಅಹಿಂಸೆಯ ಮೂಲಕ ಪ್ರಧಾನಿಯನ್ನು ಸೋಲಿಸುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: ಮಹಾಪಂಚಾಯತ್‌ನಲ್ಲಿ ಎಬಿಪಿ ನ್ಯೂಸ್‌ಗೆ ರಾಜೀನಾಮೆ ನೀಡಿದ ಪತ್ರಕರ್ತನ ಮಾತುಗಳು
GOI has turned noble professions like farming, education & healthcare into financial commodities for the benefit of a few cronies.
We’re fighting this without any anger, hatred or violence.
And non-violence always wins. pic.twitter.com/iRchenkxWV
— Rahul Gandhi (@RahulGandhi) February 28, 2021
ದೇಶದ ಸ್ವಾತಂತ್ರ್ಯ ಚಳವಳಿಯನ್ನು ನೆನಪಿಸಿಕೊಂಡ ಅವರು, ಪ್ರಧಾನಿ ಮೋದಿಗಿಂತಲೂ ಬ್ರಿಟಿಷರು ಹೆಚ್ಚು ಶಕ್ತಿಶಾಲಿಯಾಗಿದ್ದರು ಎಂದು ಹೇಳಿದರು.
“ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೋಲಿಸಿದರೆ ನರೇಂದ್ರ ಮೋದಿ ಯಾವ ಲೆಕ್ಕ? ಏನೂ ಅಲ್ಲ. ಈ ದೇಶದ ಜನರು ಬ್ರಿಟಿಷ್ ಸಾಮ್ರಾಜ್ಯವನ್ನೇ ಹಿಂದಕ್ಕೆ ಕಳುಹಿಸಿದ್ದಾರೆ. ಅದೇ ರೀತಿಯಲ್ಲಿ ನಾವು ನರೇಂದ್ರ ಮೋದಿಯವರನ್ನು ಮತ್ತೆ ನಾಗಪುರಕ್ಕೆ ಕಳುಹಿಸುತ್ತೇವೆ (ಮಹಾರಾಷ್ಟ್ರದ ಆರ್‌ಎಸ್‌ಎಸ್ ಪ್ರಧಾನ ಕಚೇರಿ)” ಎಂದು ರಾಹುಲ್ ಗಾಂಧಿ ಹೇಳಿದರು.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದೂ ಧರ್ಮವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿದೆ. ಆದರೆ ವಾಸ್ತವದ ಹಿಂದೂ ಧರ್ಮಕ್ಕೂ ಬಿಜೆಪಿಯ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದುತ್ವ ಯಾವ ಜನರನ್ನೂ ಅವಮಾನಿಸಿ ಎಂದು ಹೇಳುವುದಿಲ್ಲ. ಕೊಲ್ಲುವುದನ್ನು ಹೊಡೆಯುವುದನ್ನು ಬೋಧಿಸುವುದಿಲ್ಲ. ಎಲ್ಲಾ ಧರ್ಮಗಳ ಮೂಲ ತತ್ವವೆಂದರೆ ಪ್ರೀತಿ” ಎಂದು ಹೇಳಿದರು.
ಇದನ್ನೂ ಓದಿ: ನಭಕ್ಕೆ ಜಿಗಿದ ಮೋದಿ ಫೋಟೊ, ಭಗವದ್ಗೀತೆ ಕಾಪಿ: ಇಲ್ಲೇ ಉಳಿದ ‘ಆನಂದ್’ ಉಪಗ್ರಹ!