Homeಮುಖಪುಟಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ನಾಲ್ಕು ಪಾಲಿಕೆಗಳಲ್ಲೂ ಟಿಎಂಸಿ ಭರ್ಜರಿ ಗೆಲುವು

ಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ನಾಲ್ಕು ಪಾಲಿಕೆಗಳಲ್ಲೂ ಟಿಎಂಸಿ ಭರ್ಜರಿ ಗೆಲುವು

- Advertisement -
- Advertisement -

ಪಶ್ಚಿಮ ಬಂಗಾಳದ ಸಿಲಿಗುರಿ, ಬಿಧಾನನಗರ, ಅಸನ್ಸೋಲ್ ಮತ್ತು ಚಂದರ್‌ನಾಗೂರ್ ಮುನ್ಸಿಪಲ್ ಕಾರ್ಪೊರೇಶನ್‌ಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ನಾಲ್ಕೂ ಪಾಲಿಕೆಗಳಲ್ಲಿ ರಾಜ್ಯದ ಆಡಳಿತಾರೂಢ ಟಿಎಂಸಿ ಜಯಗಳಿಸಿದೆ.

ವಿಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಭಾರೀ ಮುಖಭಂಗವನ್ನು ಅನುಭವಿಸಿವೆ. ಸಿಎಂ ಮಮತಾ ಬ್ಯಾನರ್ಜಿ ಅವರು ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬಿಧಾನಗರ್ ಪಾಲಿಕೆಯ ಒಟ್ಟು 41 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆದ್ದು ಟಿಎಂಸಿ ಅಧಿಕಾರವನ್ನು ಉಳಿಸಿಕೊಂಡಿದೆ. ಕಾಂಗ್ರೆಸ್‌ ಒಂದು ಸ್ಥಾನವನ್ನು ಗೆದಿದ್ದು, ಮತ್ತೊಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಮತ್ತು ಸಿಪಿಐ(ಎಂ) ಖಾತೆ ತೆರೆಯುವಲ್ಲಿ ವಿಫಲವಾಗಿವೆ.

ಚಂದರ್‌ನಾಗೂರ್ ಮುನ್ಸಿಪಲ್ ಕಾರ್ಪೊರೇಷನ್‌ನ ಒಟ್ಟು 32 ಸ್ಥಾನಗಳಲ್ಲಿ ಟಿಎಂಸಿ 31 ಸ್ಥಾನಗಳನ್ನು ಗೆದ್ದುಕೊಂಡರೆ, ಸಿಪಿಐ(ಎಂ) ಒಂದು ವಾರ್ಡ್‌ನಲ್ಲಿ ಗೆದ್ದಿದೆ.

ಅಸನ್ಸೋಲ್‌ನಲ್ಲಿ 106 ಸ್ಥಾನಗಳ ಪೈಕಿ 90ರಲ್ಲಿ ಟಿಎಂಸಿ ಜಯಭೇರಿ ಬಾರಿಸಿದರೆ, ಬಿಜೆಪಿ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮೂರು, ಎಡಪಕ್ಷಗಳು ಎರಡು ಮತ್ತು ಇತರರು ಮೂರು ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಸಿಪಿಐ(ಎಂ) ನೇತೃತ್ವದ ಎಡರಂಗ ಅಧಿಕಾರದಲ್ಲಿದ್ದ ಸಿಲಿಗುರಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ)ಅನ್ನು ಟಿಎಂಸಿ ಕಸಿದುಕೊಂಡಿದೆ. ಒಟ್ಟು 47 ಸ್ಥಾನಗಳ ಪೈಕಿ ಟಿಎಂಸಿ 37 ಸ್ಥಾನಗಳನ್ನು ಗೆದ್ದಿದೆ. ಐದು ಸ್ಥಾನಗಳನ್ನು ಬಿಜೆಪಿ ಪಡೆದಿವೆ. ಕಳೆದ ಬಾರಿ ಆಡಳಿತದಲ್ಲಿದ್ದ ಎಡಪಕ್ಷಗಳು ಕೇವಲ ನಾಲ್ಕು ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿವೆ.

ಸಿಲಿಗುರಿ ಪಾಲಿಕೆಗೆ ಟಿಎಂಸಿ ನಾಯಕ ಗೌತಮ್ ದೇಬ್ ಅವರು ಮುಂದಿನ ಮೇಯರ್ ಆಗಲಿದ್ದಾರೆ ಎಂದು ಸಿಎಂ ಬ್ಯಾನರ್ಜಿ ಶೀಘ್ರ ಘೋಷಿಸಿದ್ದಾರೆ. ದೇಬ್ ಅವರು ಚುನಾವಣೆಯಲ್ಲಿ 3000 ಮತಗಳ ಅಂತರದಿಂದ ಗೆದ್ದಿದ್ದಾರೆ.

ಬಿಧಾನನಗರ, ಅಸನ್ಸೋಲ್, ಸಿಲಿಗುರಿ ಮತ್ತು ಚಂದರ್‌ನಾಗೂರ್ ಮುನ್ಸಿಪಲ್ ಕಾರ್ಪೊರೇಷನ್‌ಗಳಿಂದ ಒಟ್ಟು 953 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಕಾರ್ಪೊರೇಶನ್‌ಗಳಿಗೆ ಫೆಬ್ರವರಿ 12 ರಂದು ಮತದಾನ ನಡೆದಿತ್ತು.


ಇದನ್ನೂ ಓದಿರಿ: ‘ನಾನು ಮತ್ತೆ ಗೆದ್ದರೆ ಮುಸ್ಲಿಮರು ತಿಲಕ ಧರಿಸುವರು’- ಯುಪಿ ಬಿಜೆಪಿ ಶಾಸಕನಿಂದ ಕೋಮು ಪ್ರಚೋದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...