Homeಮುಖಪುಟದೆಹಲಿಯಲ್ಲಿ 87 ವರ್ಷದ ವೃದ್ಧೆ ಮೇಲೆ ಅಪರಿಚಿತನಿಂದ ಅತ್ಯಾಚಾರ, ದೂರು ದಾಖಲು

ದೆಹಲಿಯಲ್ಲಿ 87 ವರ್ಷದ ವೃದ್ಧೆ ಮೇಲೆ ಅಪರಿಚಿತನಿಂದ ಅತ್ಯಾಚಾರ, ದೂರು ದಾಖಲು

- Advertisement -
- Advertisement -

ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ 87 ವರ್ಷದ ವೃದ್ಧೆ ಮೇಲೆ ಅಪರಿಚಿತನೊಬ್ಬ ಭಾನುವಾರ ಆಕೆಯ ಮನೆಯೊಳಗೆ ಅತ್ಯಾಚಾರವೆಸಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವೃದ್ಧೆ ಹಾಸಿಗೆ ಹಿಡಿದಿದ್ದು, ತನ್ನ 65 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಾರೆ. ಭಾನುವಾರ ಮಧ್ಯಾಹ್ನ ಮಗಳು ಹೊರಗೆ ಹೋಗಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಧ್ಯಾಹ್ನ 12.30ರ ಸುಮಾರಿಗೆ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ. ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬ ಮಾಡಿದರು ಮತ್ತು ದೂರು ಸ್ವೀಕರಿಸಲಿಲ್ಲ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.

’ಆರೋಪಿ ಭಾನುವಾರ ಮಧ್ಯಾಹ್ನ 12.30 ಕ್ಕೆ ಅವರ ಮನೆಗೆ ಬಂದು ಒಳಗಿನಿಂದ ಬಾಗಿಲು ಹಾಕಿದ್ದಾರೆ. ವೃದ್ಧೆ ವ್ಯಕ್ತಿಯನ್ನು ವಿಚಾರಿಸಿದಾಗ ತಾನು ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಯಾವುದೋ ಕೆಲಸಕ್ಕೆ ಮನೆಯವರು ಕರೆದಿರುವುದಾಗಿ ತಿಳಿಸಿದ್ದಾನೆ. ಆತನ ಚಟುವಟಿಕೆಯಿಂದ ಅನುಮಾನಗೊಂಡ ಮಹಿಳೆ ಸಹಾಯಕ್ಕಾಗಿ ಕಿರುಚಿದ್ದಾಳೆ. ನಂತರ ಆರೋಪಿ ಅವರ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಅವರ ಫೋನ್ ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ಸಂತ್ರಸ್ತೆಯ ಕುಟುಂಬ ತಿಳಿಸಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

“ಸಂತ್ರಸ್ತೆ ಮತ್ತು ಅವರ ಮಗಳು ಒಂಟಿಯಾಗಿ ವಾಸಿಸುತ್ತಿದ್ದಾರೆ. ಅವರ ವಯಸ್ಸಿನ ಕಾರಣದಿಂದ ಪ್ರಕರಣವನ್ನು ಮುಂದುವರಿಸಬಾರದು. ಇದರಿಂದ ಅವರಿಗೆ ಒತ್ತಡವನ್ನುಂಟುಮಾಡುತ್ತದೆ ಎಂದು ಪೊಲೀಸರು ಅವರಿಗೆ ಹೇಳಿದ್ದಾರೆ. ಪೊಲೀಸರು ಕಳ್ಳತನ ಪ್ರಕರಣವನ್ನು ಮಾತ್ರ ದಾಖಲಿಸಿದ್ದಾರೆ. ಅವರ ಮೊಮ್ಮಗಳು ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಕ್ಷಣವೇ ಇಲ್ಲಿಗೆ ಬರಲು ಸಾಧ್ಯವಿಲ್ಲ. ಪೊಲೀಸರು ಕ್ಯಾರೇ ಎನ್ನುತ್ತಿಲ್ಲ. ಚಿಕ್ಕಮ್ಮ ತನ್ನ ಸ್ವಂತ ಮನೆಯಲ್ಲಿಯೇ ಅಸುರಕ್ಷಿತರಾಗಿದ್ದಾರೆ” ಎಂದು ಸಂಬಂಧಿಯೊಬ್ಬರು ಹೇಳಿದರು.

ಇತ್ತ ಆರೋಪಗಳನ್ನು ನಿರಾಕರಿಸಿರುವ ಪೊಲೀಸರು, ಸಂತ್ರಸ್ತೆ ತಮ್ಮ ದೂರಿನಲ್ಲಿ ಕಳ್ಳತನವನ್ನು ಮಾತ್ರ ವರದಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

“13.02.22 ರಂದು, ಹಿರಿಯ ನಾಗರಿಕರೊಬ್ಬರ ಮಗಳಿಂದ ತಿಲಕ್ ನಗರದ ಮನೆಯಿಂದ ಮೊಬೈಲ್ ಫೋನ್ ಕಳ್ಳತನದ ಲಿಖಿತ ದೂರನ್ನು ಸ್ವೀಕರಿಸಲಾಗಿದೆ. ಈಗ ಮತ್ತೊಮ್ಮೆ, ಇಂದು ತನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಗಳು ದೂರು ನೀಡಿದ್ದಾರೆ. ಎಫ್‌ಐಆರ್ ಅನ್ನು ತ್ವರಿತವಾಗಿ ದಾಖಲಿಸಲಾಗಿದೆ” ಎಂದು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಪ್ರಶಾಂತ್ ಗೌತಮ್ ಹೇಳಿದ್ದಾರೆ.


ಇದನ್ನೂ ಓದಿ: ’ಮಹಿಳೆಯರು ಹಿಜಾಬ್ ಧರಿಸದಿರುವುದು ಅತ್ಯಾಚಾರ ಹೆಚ್ಚಾಗಲು ಕಾರಣ’: ಶಾಸಕ ಜಮೀರ್‌ ಅಹ್ಮದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...