Homeಮುಖಪುಟಅದಾನಿ ಗ್ರೂಪ್‌ನಲ್ಲಿ ಮಾರಿಷಸ್ ಫಂಡ್ ಬಗ್ಗೆ SEBI ತನಿಖೆ ಏಕಿಲ್ಲ? ರಘುರಾಮ್ ರಾಜನ್ ಪ್ರಶ್ನೆ

ಅದಾನಿ ಗ್ರೂಪ್‌ನಲ್ಲಿ ಮಾರಿಷಸ್ ಫಂಡ್ ಬಗ್ಗೆ SEBI ತನಿಖೆ ಏಕಿಲ್ಲ? ರಘುರಾಮ್ ರಾಜನ್ ಪ್ರಶ್ನೆ

- Advertisement -
- Advertisement -

ಅದಾನಿ ಗ್ರೂಪ್ ಸ್ಟಾಕ್‌ನಲ್ಲಿನ ಶೇಕಡ 90ರಷ್ಟು ಅಂದರೆ 6.9 ಬಿಲಿಯನ್ ಡಾಲರ್‌ನಷ್ಟು ಹೂಡಿಕೆ ಮಾಡಿರುವ ಮಾರಿಷಸ್ ಫಂಡ್ ಮಾಲೀಕರ ಬಗ್ಗೆ ಸೆಬಿ (SEBI) ಯಾಕೆ ಇನ್ನೂ ಪ್ರಶ್ನೆ ಮಾಡಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಕೇಳಿದ್ದಾರೆ.

ಎಲಾರಾ ಇಂಡಿಯ ಆಪೋರ್ಚಿನಿಟೀಸ್ ಫಂಡ್, ಕ್ರೆಸ್ಟಾ ಫಂಡ್, ಅಲ್ಬುಲಾ ಇನ್‌ವೆಸ್ಟ್‌ಮೆಂಟ್ ಫಂಡ್ ಮತ್ತು ಎಪಿಎಂಎಸ್ ಇನ್‌ವೆಸ್ಟ್‌ಮೆಂಟ್ ಫಂಡ್‌ ಸಂಸ್ಥೆಗಳು ಶೆಲ್ ಸಂಸ್ಥೆಗಳು ಎಂಬ ಆರೋಪದ ಬಳಿಕ ಕಣ್ಮರೆಯಾಗಿದ್ದವು. ಶೆಲ್‌ ಸಂಸ್ಥೆ ಎಂದರೆ ತೆರಿಗೆ ವಂಚಿಸುವುದಕ್ಕಾಗಿ ತೆರಿಗೆ ಮುಕ್ತ ರಾಷ್ಟ್ರಗಳಲ್ಲಿ ಬರೀ ಹೆಸರಿಗಿರುವ ಸಂಸ್ಥೆಯಾಗಿದೆ. ಅದಾನಿ ಸಮೂಹವು ತನ್ನ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿಕೊಳ್ಳಲು ಈ ಸಂಸ್ಥೆಗಳ ಮೂಲಕ ಹೂಡಿಕೆ ಮಾಡಿದ್ದಾರೆ ಎಂದು ಹಿಂಡನ್‌ಬರ್ಗ್ ವರದಿ ಆರೋಪಿಸಿದೆ.

ಉದ್ಯಮಿಗಳು ಮತ್ತು ಸರ್ಕಾರದ ನಡುವಿನ ಸಬಂಧದ ಕುರಿತು ಪಾರದರ್ಶಕತೆ ಇಲ್ಲದಿದ್ದಾಗ ಸೆಬಿಯಂತಹ ಸ್ವತಂತ್ರ ಸಂಸ್ಥೆಗಳು ತನಿಖೆ ನಡೆಸುವುದನ್ನು ಉತ್ತೇಜಿಸಬೇಕು. ಮಾರಿಷಸ್‌ನಿಂದ ಅದಾನಿ ಕಂಪನಿ ಷೇರುಗಳನ್ನು ಮಾರುತ್ತಿರುವ ಮತ್ತು ಹೋಲ್ಡಿಂಗ್ ಮಾಡುತ್ತಿರುವ ಕಂಪನಿಗಳ ಮಾಲೀಕರು ಯಾರು ಎಂಬುದನ್ನು ಏಕೆ ಸೆಬಿ ಪತ್ತೆ ಹಚ್ಚುತ್ತಿಲ್ಲ. ಏಕೆಂದರೆ ಅವುಗಳ ಮಾಲೀಕತ್ವ ನಿಗೂಢವಾಗಿದ್ದು, ಅದಾನಿ ಕುಟುಂಬದವರೆ ಆ ಕಂಪನಿಗಳನ್ನು ನಡೆಸುತ್ತಿವೆ ಎಂದು ಹಿಂಡೆನ್‌ ಬರ್ಗ್ ವರದಿ ಆರೋಪಿಸಿದೆ ಎಂದು ರಘುರಾಮ್ ರಾಜನ್ ಪ್ರಶ್ನಿಸಿದ್ದಾರೆ.

ಭಾರತದ ಆರ್ಥಿಕ ಬೆಳವಣಿಗೆಯ ದರ ಕುಸಿತ

ಭಾರತದ ಆರ್ಥಿಕ ಬೆಳವಣಿಗೆಯ ದರವು ಮೂರನೇ ತ್ರೈಮಾಸಿಕದಲ್ಲಿ ಮತ್ತಷ್ಟು ಕಡಿಮೆಯಾಗಿದೆ. ಭಾರತವು ಅಪಾಯಕಾರಿ ಹಂತದ ಹತ್ತಿರದಲ್ಲಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಕಳೆದ ತಿಂಗಳು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ)ಯು ಬಿಡುಗಡೆ ಮಾಡಿದ ಜಿಡಿಪಿ ಅಂಕಿಅಂಶಗಳು ತ್ರೈಮಾಸಿಕ ಬೆಳವಣಿಗೆಯಲ್ಲಿ ಅನುಕ್ರಮವಾದ ನಿಧಾನಗತಿಯನ್ನು ನೋಡಿದರೆ ಬಹಳ ಕಳವಳಕಾರಿಯಾಗಿದೆ ಎಂದು ರಾಜನ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ಯು ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) 4.4%ಕ್ಕೆ ಕಡಿಮೆಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) 6.3% ಮತ್ತು ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) 13.2% ಇತ್ತು. ಈ ರೀತಿ ಅನುಕ್ರಮವಾದ ನಿಧಾನಗತಿಯ ಬೆಳವಣಿಗೆಯು ಆತಂಕ ಸೃಷ್ಟಿಸುತ್ತದೆ ಎಂದಿದ್ದಾರೆ.

”ಆಶಾವಾದಿಗಳು GDP [ಒಟ್ಟು ದೇಶೀಯ ಉತ್ಪನ್ನ] ಹೆಚ್ಚಳದ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಅನುಕ್ರಮವಾದ ನಿಧಾನಗತಿಯ ಬಗ್ಗೆ ನಾನು ಚಿಂತಿತನಾಗಿದ್ದೇನೆ” ಎಂದು ರಾಜನ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

”ಖಾಸಗಿ ವಲಯವು ಹೂಡಿಕೆ ಮಾಡಲು ಇಷ್ಟವಿಲ್ಲದ ಕಾರಣ RBI ಇನ್ನೂ ದರಗಳನ್ನು ಹೆಚ್ಚಿಸುತ್ತಿದೆ ಮತ್ತು ಜಾಗತಿಕ ಬೆಳವಣಿಗೆಯು ವರ್ಷದ ನಂತರ ನಿಧಾನಗೊಳ್ಳುವ ಸಾಧ್ಯತೆಯಿದೆ. ಹೆಚ್ಚುವರಿ ಬೆಳವಣಿಗೆಯ ಆವೇಗವನ್ನು ನಾವು ಎಲ್ಲಿ ಕಂಡುಕೊಳ್ಳುತ್ತೇವೆ ಎಂದು ನನಗೆ ಖಚಿತವಿಲ್ಲ” ಎಂದು ಹೇಳಿದ್ದಾರೆ.

“ಈ ಹಂತದಲ್ಲಿ, ಮೂರು ವರ್ಷಗಳ ಹಿಂದೆ ಅಂದರೆ ಕೊರೊನಾ ಸಾಂಕ್ರಾಮಿಕ ಬರುವ ಮುಂಚೆ ಹೋಲಿಸಿದರೆ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಸರಾಸರಿ ವಾರ್ಷಿಕ ಬೆಳವಣಿಗೆಯು 3.7% ಆಗಿದೆ. ಇದು ದೇಶಕ್ಕೆ ಅಪಾಯಕಾರಿಯಾದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ, ಸಿದ್ದರಾಮಯ್ಯ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿದ ನಳೀನ್ ಕುಮಾರ್ ಕಟೀಲ್: ತೀವ್ರ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. MY OPINION …As Governer OF RBI this route WAS THERE via MAURITIOUS . AT HIS WATCH HE NEVER FOUND ANYTHING WRONG. WHY NOW? WHY WAS THIS ROUTE CREATED What was the need

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...