Homeಮುಖಪುಟನಟಿ ರಶ್ಮಿಕಾ ಮಂದಣ್ಣ ವಿರುದ್ಧ ಟ್ರೋಲ್ ಏಕೆ?: ಪ್ರಜ್ಞಾವಂತರ ಆಕ್ಷೇಪ

ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಟ್ರೋಲ್ ಏಕೆ?: ಪ್ರಜ್ಞಾವಂತರ ಆಕ್ಷೇಪ

- Advertisement -
- Advertisement -

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳಷ್ಟೇ ದ್ವೇಷದ ಟ್ರೋಲ್‌ಗಳಿಂದ ಮನನೊಂದು “ನನ್ನ ಹೃದಯ ಘಾಸಿಯಾಗಿದೆ” ಎಂದು ರಶ್ಮಿಕಾ ಭಾವನಾತ್ಮಕ ಪೋಸ್ಟ್‌ ಒಂದನ್ನು ಹಾಕಿದ್ದರು. ಆದರೂ ಟ್ರೋಲಿಗರಿಗೆ ಅದು ತಟ್ಟಿಲ್ಲ. ಹಾಗಾಗಿ ಮತ್ತೆ ನಟಿ ವಿರುದ್ಧ ಮುಗಿಬಿದ್ದಿದ್ದಾರೆ. ಆದರೆ ಈ ಸಂದರ್ಭದಲ್ಲಿ ನೂರಾರು ಪ್ರಜ್ಞಾವಂತರು ನಟಿಯ ಪರ ನಿಂತಿದ್ದು, ದ್ವೇ‍ಷದ ಟ್ರೋಲ್‌ಗಳನ್ನು, ಅದರಿಂದಿರುವ ಪುರುಷಾಧಿಪತ್ಯದ ಮನೋಭಾವವನ್ನು ಖಂಡಿಸಿದ್ದಾರೆ.

ಟ್ರೋಲ್‌ಗೆ ಕಾರಣವೇನು?

ಇತ್ತೀಚಿಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದ ರಶ್ಮಿಕಾ ತಾವು ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದುದರ ಬಗೆಗೆ ಮಾತನಾಡಿದ್ದರು. ಕಾಲೇಜು ಓದುತ್ತಿದ್ದಾಗಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದುದು, ತನ್ನ ಫೋಟೊ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟವಾಗಿದ್ದು, ಸಿನಿಮಾದಲ್ಲಿ ನಟನೆಗೆ ಆಫರ್ ಬಂದಿದ್ದನ್ನು ನಂಬಲಾಗಲಿಲ್ಲ ಎಂದೆಲ್ಲಾ ಮಾತನಾಡಿದ್ದ ಅವರು ಆ ಸಂದರ್ಭದಲ್ಲಿ ತನ್ನ ಮೊದಲ ಚಿತ್ರದ ಹೆಸರು ಹೇಳುವ ಬದಲಿಗೆ ಎರಡೂ ಕೈಗಳಿಂದ ಕೋಟ್‌ ರೀತಿಯ ಸನ್ನೆ ಮಾಡಿದ್ದರು.

ಅಷ್ಟಕ್ಕೆ ಹಲವರು ರಶ್ಮಿಕಾ ವಿರುದ್ಧ ಮುಗಿಬಿದ್ದಿದ್ದಾರೆ. ತನ್ನ ಮೊದಲ ಚಿತ್ರ ಕಿರಿಕ್ ಪಾರ್ಟಿ ಎಂದೂ ಅದರ ನಿರ್ದೇಶಕ ರಿಷಬ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ ಎಂದು ಪ್ರೊಡಕ್ಷನ್ ಹೌಸ್‌ ಅನ್ನು ರಶ್ಮಿಕಾ ಉಲ್ಲೇಖಿಸದೆ ಸನ್ನೆ ಮಾಡುವ ಮೂಲಕ ಅವಮಾನ ಮಾಡಿದ್ದಾರೆ ಎಂಬುದು ಟ್ರೋಲಿಗರ ಆರೋಪವಾಗಿದೆ. ಅದಕ್ಕಾಗಿ ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣನವರನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ಒತ್ತಾಯಿಸಿ ಪೋಸ್ಟರ್ ಮಾಡಿ ಹಂಚುತ್ತಿದ್ದಾರೆ. ಅದನ್ನೆ ಕನ್ನಡ ಮಾಧ್ಯಮಗಳು ಸಹ ಬ್ಯಾನ್ ಎಂದು ಸುದ್ದಿ ಮಾಡುತ್ತಿವೆ.

ಆದರೆ ರಶ್ಮಿಕಾ ಮಂದಣ್ಣ ಕೈ ಸನ್ನೆ ಮಾಡಿದ್ದಕ್ಕೆ ಮಾತ್ರವೇ ಅವರೆ ಮೇಲೆ ಟ್ರೋಲ್ ಗಳಾಗುತ್ತಿವೆ ಎಂಬುದು ಸುಳ್ಳು. ಬದಲಿಗೆ ಅವರು ಮಹಿಳೆ ಎಂಬ ಕಾರಣಕ್ಕೆ, ಅದರಲ್ಲಿಯೂ ಯಶಸ್ವಿ ನಟಿ ಎಂಬ ಕಾರಣಕ್ಕೆ ಅವರ ಮೇಲೆ ನಿರಂತರ ದಾಳಿ ನಡೆಯುತ್ತಿವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ಬ್ಯಾನ್ ಎಂಬುದೆಲ್ಲ ಕಟ್ಟುಕತೆ: ಬಿ.ಎಂ ಗಿರಿರಾಜ್

ಕನ್ನಡ ಸಿನಿಮಾರಂಗದಿಂದ ನಟಿ ರಶ್ಮಿಕಾ ಮಂದಣ್ಣನವರನ್ನು ಬ್ಯಾನ್ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿರುವುದು ಸುಳ್ಳು. ನಿಜ ಏನೆಂದರೆ ರಶ್ಮಿಕಾ ಮಂದಣ್ಣನವರು ಕೇಳುವಷ್ಟು ಸಂಭಾವನೆ ಕೊಡಲು ಕನ್ನಡ ನಿರ್ಮಾಪಕರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ ಅಷ್ಟೆ ಎನ್ನುತ್ತಾರೆ ಕನ್ನಡ ನಿರ್ದೇಶಕ ಬಿ.ಎಂ ಗಿರಿರಾಜ್‌ರವರು.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಬ್ಯಾನ್ ಎಂದು ಗಾಳಿ ಸುದ್ದಿ ಹರಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ತೆಲುಗು ಮತ್ತು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಹೆಚ್ಚು ಸಂಭಾವನೆ ಸಿಗುತ್ತಿರುವ ಕಾರಣಕ್ಕೆ ಅಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಅಷ್ಟು ಸಂಭಾವನೆ ಕೊಟ್ಟು ಕನ್ನಡಕ್ಕೆ ಕರೆತಂದರೆ ತಮಗೆ ಗಿಟ್ಟುವುದಿಲ್ಲ ಎಂಬುದು ನಿರ್ಮಾಪಕರ ಅಭಿಪ್ರಾಯ. ಒಂದು ವೇಳೆ ಅವರು ಕಡಿಮೆ ಸಂಭಾವನೆಗೆ ಕನ್ನಡ ಚಿತ್ರಗಳಲ್ಲಿ ನಟಿಸಬೇಕು ಎಂದರೆ ಪಾತ್ರ ದೊಡ್ಡದಿರಬೇಕು ಅಥವಾ ಅವರಿಗೆ ಇಷ್ಟವಾದ ಪಾತ್ರವಿರಬೇಕು. ಅದು ಸಾಧ್ಯವಾಗದ ಕಾರಣ ಅವರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಇಷ್ಟೆ ವಿಷಯ” ಎಂದರು.

ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಎಂಬ ಪದ ಹೋಗಬೇಕೆಂದು ಪುನೀತ್‌ ರಾಜ್‌ಕುಮಾರ್‌ರವರು ಹೇಳಿದ್ದರು. “ನಮ್ಮಲ್ಲಿ ಯಾರನ್ನು ಬ್ಯಾನ್ ಮಾಡುವ ಮಾತನ್ನಾಡಬಾರದು. ಸಂವಿಧಾನದ ಪ್ರಕಾರ ಅತಿ ದೊಡ್ಡ ಅಪರಾಧವೆನಿಸದ ಹೊರತು ಯಾರನ್ನು ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ” ಎಂದು ಅಪ್ಪುರವರು ಹೇಳಿದ್ದರು. ಆದರೂ ಕೆಲವು ಟ್ರೋಲ್‌ ಮಾಡುವವರು ಬ್ಯಾನ್ ಮಾಡಬೇಕೆಂದು ಹೇಳುತ್ತಾರೆ. ಆದರೆ ಅದನ್ನು ಅಧಿಕೃತ ಎಂದು ಪ್ರಸಾರ ಮಾಡುವುದು ಮಾಧ್ಯಮಗಳ ಬೇಜವಬ್ದಾರಿತನವಾಗಿದೆ. ಯಾವುದಕ್ಕೆ ಮಹತ್ವ ಕೊಡಬೇಕು, ಯಾವುದಕ್ಕೆ ಕೊಡಬಾರದು ಎನ್ನುವ ಕನಿಷ್ಟ ತಿಳಿವಳಿಕೆ ಮಾಧ್ಯಮಗಳಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾನ್‌ ಅನ್ನುವ ಪದಕ್ಕೆ ಚಿತ್ರರಂಗದಲ್ಲಿ ಅವಕಾಶವೇ ಇಲ್ಲ- ಮಂಸೋರೆ

“ಬ್ಯಾನ್‌ ಅನ್ನುವ ಪದಕ್ಕೆ ಚಿತ್ರರಂಗದಲ್ಲಿ ಅವಕಾಶವೇ ಇಲ್ಲ. ರಶ್ಮಿಕಾ ಅವರು ವಾಣಿಜ್ಯ ಮಂಡಳಿಗೆ ಸಂಬಂಧಪಟ್ಟವರೂ ಅಲ್ಲ, ಕಲಾವಿದರ ಸಂಘದ ಸದಸ್ಯರೂ ಅಲ್ಲ. ವಾಣಿಜ್ಯ ಮಂಡಳಿಗೆ ಬ್ಯಾನ್ ಮಾಡಲು ಅಧಿಕಾರವಿಲ್ಲ. ಯಾವುದೇ ಹೆಣ್ಣುಮಗಳ ವೈಯಕ್ತಿಕ ವಿಚಾರಗಳನ್ನು ಮುಂದೆ ತಂದು ಅವಹೇಳನ ಮಾಡುವುದು ತಪ್ಪು” ಎನ್ನುತ್ತಾರೆ ಕನ್ನಡ ನಿರ್ದೇಶಕ ಮಂಸೋರೆಯವರು.

“ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದಲ್ಲಿ ಕೊಡುತ್ತಿರುವಷ್ಟು ಸಂಭಾವನೆಯನ್ನು ನಮ್ಮಲ್ಲಿ ನಟಿಯರಿಗೆ ಕೊಡುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ರಮ್ಯಾ ಅವರಷ್ಟು ಸಂಭಾವನೆ ಪಡೆದ ಮತ್ತೊಬ್ಬ ನಟಿ  ಸಿಗುವುದಿಲ್ಲ. ರಶ್ಮಿಕಾ ಅವರು ಈಗ ಬೇರೆ ಬೇರೆ ಚಿತ್ರರಂಗದಲ್ಲಿ ಒಂದು ಕೋಟಿ, ಎರಡು ಕೋಟಿಯಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇಷ್ಟು ಹಣವನ್ನು ಕೊಡಲು ಕನ್ನಡ ಚಿತ್ರರಂಗದವರು ಸಿದ್ಧವಿಲ್ಲ. ಇದು ವಾಸ್ತವ. ಎರಡು ವರ್ಷ ಬ್ಯುಸಿಯಾಗುವಷ್ಟು ಸಿನಿಮಾಗಳಿಗೆ ರಶ್ಮಿಕಾ ಈಗಾಗಲೇ ಸಹಿ ಹಾಕಿದ್ದಾರೆ” ಎಂದರು.

“ಬ್ಯಾನ್‌ ವಿಚಾರ ಮುನ್ನೆಲೆಗೆ ಬಂದಿರುವುದರಿಂದ ಕನ್ನಡ ಚಿತ್ರರಂಗ ರಶ್ಮಿಕಾ ಅವರನ್ನು ದೂರವಿಟ್ಟಿದೆ ಎಂಬ ಚರ್ಚೆಗಳೆಲ್ಲ ನಡೆಯುತ್ತಿರುವುದನ್ನು ನೋಡಿದೆ. ಅದ್ಯಾವುದಕ್ಕೂ ಆಧಾರವಿಲ್ಲ. ರಶ್ಮಿಕಾ ಅವರು ಕೇಳುವಷ್ಟು ಸಂಭಾವನೆಯನ್ನು ನೀಡಲು ಕನ್ನಡ ಚಿತ್ರರಂಗದವರು ಸಿದ್ಧವಿಲ್ಲ ಎಂಬುದಷ್ಟೆ ಸತ್ಯ” ಎಂದರು.

ಈ ಕುರಿತು ಲೇಖಕಿ ಪಲ್ಲವಿ ಇಡೂರುರವರು ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಆಕೆ ನಿಶ್ಚಿತಾರ್ಥ ಯಾವುದೇ ಕಾರಣಕ್ಕೆ ಮುರಿದುಕೊಂಡಿರಬಹುದು, ಆಕೆಯದೇ ನಿರ್ಧಾರವಾಗಿರಬಹುದು, ಅಥವಾ ಕುಟುಂಬದ್ದಾಗಿರಬಹುದು ಅಥವಾ ರಕ್ಷಿತ್ ರಶ್ಮಿಕಾ ಇಬ್ಬರದ್ದೂ ಆಗಿರಬಹುದು. ಅದು ಕೆರಿಯರ್ ಕಾರಣಕ್ಕೇ ಇರಬಹುದು ಅಥವಾ ಪರ್ಸನಲ್ ಕಾರಣಗಳಿಗೇ ಇರಬಹುದು. ಅದು ಅವರ ನಿರ್ಧಾರ. ಮದುವೆ, ಪ್ರೇಮ, ಪ್ರಣಯಗಳೆಲ್ಲ ವೈಯಕ್ತಿಕ ಆಯ್ಕೆಗಳು. ಯಾರ ನಿರ್ಧಾರಕ್ಕೂ ಯಾರ ಹೇಳಿಕೆಗೂ ಯಾರ ಒತ್ತಡಕ್ಕೂ ಸಂಬಂಧಿಸಿದ್ದಲ್ಲ. ಅಂತದ್ದರಲ್ಲಿ ನಿಶ್ಚಿತಾರ್ಥ ಮುರಿದುಕೊಂಡಿದ್ದಕ್ಕೆ ಆಕೆಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿ, ಆಕೆಯೊಬ್ಬಳನ್ನೇ ಹೊಣೆಯಾಗಿಸಿ, ಪ್ರತೀದಿನವೆಂಬಂತೆ ಆಕೆಗೆ ಮಾನಸಿಕ ಹಿಂಸೆ ಕೊಟ್ಟಿದ್ದು ಈ ರಾಜ್ಯದ ಮಾಧ್ಯಮಗಳೆಂಬ ಕೊಳಕು ತೊಟ್ಟಿಗಳು ಮತ್ತು ದುರಭಿಮಾನಿಗಳು” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮುಂದುವರಿದು “ಇಷ್ಟೆಲ್ಲ ಕಣ್ಮುಂದೆ ನಡೆಯುತ್ತಿರುವಾಗ ಅವೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದಿದ್ದು ತಾನೊಬ್ಬ ಭಗ್ನಪ್ರೇಮಿಯೆಂಬ ಪೋಸು ಕೊಟ್ಟ ರಕ್ಷಿತ್ ಶೆಟ್ಟಿ. ನಿಜವಾದ ಪ್ರೀತಿ ತಾನು ಪ್ರೀತಿಸಿದವರನ್ನು ಅವಮಾನಿಸೋದನ್ನ ಸಹಿಸೋದಿಲ್ಲ. ಆತ ಮಾಧ್ಯಮ ಮತ್ತು ಅಭಿಮಾನಿಗಳನ್ನು ಈ ಟ್ರೋಲ್ ನಿಲ್ಲಿಸುವಂತೆ ಕೇಳಿಕೊಳ್ಳಬಹುದಿತ್ತು. ಕೇಳದಿದ್ದರೆ ಪ್ರತಿಭಟಿಸಬಹುದಿತ್ತು. ಮಾಡಲಿಲ್ಲ. ಆಕೆ ಎಲ್ಲೂ ರಕ್ಷಿತ್ ಬಗ್ಗೆಯಾಗಲಿ, ಅವರ ಸ್ನೇಹಿತರ ಬಳಗದ ಬಗ್ಗೆಯಾಗಲಿ ಒಂದೂ ಮಾತಾಡಿಲ್ಲ. ಆದರೆ ಆಕೆಯನ್ನೂ ಇವತ್ತಿಗೂ ಟ್ರೋಲ್ ಮಾಡುವುದು ನೋಡಿದಾಗ ಕೋಪ, ಅಸಹ್ಯದ ಭಾವನೆ ಬರದಿದ್ದರೆ ಆಕೆ ಮನುಷ್ಯಳೇಗಾಗುತ್ತಾಳೆ. ಆ ಕಾರಣವೊ ಅಥವಾ ಅವರ ಮೇಲಿನ ಜಿಗುಪ್ಸೆಯ ಕಾರಣವೊ ಎಲ್ಲವೂ ಸೇರಿ ಆಕೆ ಹೆಸರು ಹೇಳದೇ ಸನ್ನೆಯಲ್ಲೇ ತನ್ನ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಬಗ್ಗೆ ಮಾತಾಡಿದರೆ ಪ್ಯಾನ್ ಇಂಡಿಯಾ ಸಕ್ಸಸ್ ಸಿನಿಮಾ ಮಾಡಿದ ದೊಡ್ಡ ಮನುಷ್ಯರಿಗೆಲ್ಲ ಯಾಕೆ ಉರಿಯಬೇಕು?! ಅವರ ಅಭಿಮಾನಿಗಳಿಗೇಕೆ ಉರಿಯಬೇಕು?!
ಹೆಣ್ಣನ್ನು ಖರೀದಿ ಮಾಡಿದ್ದೀರೊ? ಆಕೆ ಹೋದ ಮೇಲೂ ಹಗೆ ಯಾಕೆ?! ಅವಳಿಲ್ಲದ ಬದುಕು ಆ ಪರಿ ಬರಗೆಟ್ಟಿದೆಯೊ!! ಅಥವಾ ಗಂಡೆನ್ನುವ ಅಹಂ ಕಾರಣವೊ?! ಸ್ವಲ್ಪವಾದರೂ ಮರ್ಯಾದೆ ಬೇಡವೇ? ಆಕೆ ತನ್ನ ಕರಿಯರ್ ಕಟ್ಟಿಕೊಳ್ಳುತ್ತಿದ್ದಾಳೆ. ಈ ದೇಶದ ನೆಲ ಯಾರಪ್ಪನ ಮನೆಯ ಸೊತ್ತು? ಎಲ್ಲೊ ಯಾರಿಲ್ಲದೆಯೂ ಬದುಕು ರೂಪುಗೊಳ್ಳುತ್ತದೆ. ಬದುಕುವ ಛಲವಿರಬೇಕಷ್ಟೆ! ಈ ರೀತಿ ಆಕೆಯನ್ನು ಟ್ರೋಲ್ ಮಾಡುತ್ತಿರುವ ಪರಿ ನೋಡಿದರೆ ಗಂಡಸರು ಅದೆಷ್ಟು insecure! ಅದೆಷ್ಟು ಪರಾವಲಂಬಿಗಳು!!” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರದಲ್ಲಿ ಝೀ ಕನ್ನಡ ಚಾನೆಲ್‌ನ ಕಾಮಿಡಿ ಕಿಲಾಡಿಗಳು ಎಂಬ ಶೋನಲ್ಲಿ ರಶ್ಮಿಕಾ ಮಂದಣ್ಣನವರನ್ನು ಕೆಟ್ಟದಾಗಿ ಚಿತ್ರಿಸಲಾಗಿತ್ತು. ಪುಷ್ಪ ಸಿನಿಮಾದಲ್ಲಿ ಅವರ ಅಭಿನಯವನ್ನು ಹೀಯಾಳಿಸಲಾಗಿತ್ತು. ಆಗ ನಿರ್ದೇಶಕ ನಟ ಪ್ರೇಮ್ ಮತ್ತು ರಕ್ಷಿತಾ ಅತಿಥಗಳಾಗಿ ನಕ್ಕಿ ಅದನ್ನು ಆನಂದಿಸಿದ್ದರು. ಅದನ್ನೇಕೆ ಪ್ರಶ್ನಿಸಲಿಲ್ಲ? ಅಲ್ಲದೆ ರಶ್ಮಿಕಾ ಮಂದಣ್ಣ ಯಾವ ಸನ್ನೆ ಮಾಡಿದ್ದರೋ ಅದೇ ಸನ್ನೆಯನ್ನು ನಿರ್ದೇಶಕ, ನಟ ರಿಷಬ್ ಶೆಟ್ಟಿ ಸಹ ಮಂದಣ್ಣ ಕುರಿತಾಗಿ ಮಾಡಿದ್ದಾರೆ. ಆದರೆ ಅವರನ್ನು ಪ್ರಶ್ನಿಸುವವರಿಲ್ಲ, ಬದಲಿಗೆ ರಶ್ಮಿಕಾಗೆ ಬ್ಯಾನ್ ಮಾಡಿ ಎಂದು ಕೂಗುತ್ತಿರುವುದೇಕೆ ಎಂದು ಹಲವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಕಳೆದ ತಿಂಗಳು ರಶ್ಮಿಕಾ ಮಂದಣ್ಣ ಇದೇ ಟ್ರೋಲ್‌ಗಳಿಂದ ಬೇಸತ್ತು ಪೋಸ್ಟ್ ಮಾಡಿದ್ದರು.”ನಾನು ಆಯ್ಕೆ ಮಾಡಿದ ಜೀವನವು ಮೌಲ್ಯದೊಂದಿಗೆ ಕೂಡಿದೆ ಎಂದು ನನಗೆ ತಿಳಿದಿದೆ. ನಾನು ಪ್ರತಿಯೊಬ್ಬರ ಕಪ್‌ ಆಫ್‌ ಟೀ ಅಲ್ಲ. ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಯಿಂದಲೂ ಪ್ರೀತಿಸಲ್ಪಡಬೇಕೆಂದು ನಾನು ನಿರೀಕ್ಷಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ನೀವು ನನ್ನನ್ನು ಒಪ್ಪದ ಕಾರಣ ನೀವು ನಕಾರಾತ್ಮಕತೆಯನ್ನು ಹೊರಹಾಕಬಹುದು ಎಂಬುದು ಇದರ ಅರ್ಥವಲ್ಲ. ನೀವೆಲ್ಲರೂ ಖುಷಿಯಿಂದರಲು ನಾನು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ನನಗೆ ಮಾತ್ರ ತಿಳಿದಿದೆ. ನಾನು ಮಾಡಿದ ಕಾರ್ಯಕ್ಕೆ ನೀವು ಖುಷಿಯಾದಾಗ ನಾನು ಹೆಚ್ಚು ಕಾಳಜಿ ವಹಿಸುತ್ತೇನೆ. ನೀವು ಮತ್ತು ನಾನು ಹೆಮ್ಮೆಪಡುವ ವಿಷಯಗಳನ್ನು ಹಂಚಿಕೊಳ್ಳಲು ನಾನು ನಿಜವಾಗಿಯೂ ಪ್ರಯತ್ನಿಸುತ್ತಿದ್ದೇನೆ.” ಎಂದು ಬರೆದುಕೊಂಡಿದ್ದರು.

ನಾನು ಹೇಳದೆ ಇರುವ ವಿಷಯಗಳ ಕಾರಣಕ್ಕಾಗಿ ನನ್ನನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡಿದಾಗ ನನ್ನ ಹೃದಯ ಘಾಸಿಯಾಗುತ್ತದೆ. ಸಂದರ್ಶನಗಳಲ್ಲಿ ನಾನು ಹೇಳಿದ ಕೆಲವು ವಿಷಯಗಳು ನನ್ನ ವಿರುದ್ಧವೇ ಬಳಕೆಯಾಗುತ್ತಿವೆ ಎಂಬುದನ್ನು ಕಂಡುಕೊಂಡಿದ್ದೇನೆ. ಅಂತರ್ಜಾಲದಲ್ಲಿ ಫೇಕ್‌ ನೆರೆಟಿವ್‌ಗಳನ್ನು (ನಕಲಿ ನಿರೂಪಣೆಗಳನ್ನು) ಹರಡಲಾಗುತ್ತಿದೆ. ಇದರಿಂದ ನನಗೆ, ಹೊರಗಿನ ವೃತ್ತಿ ಬಾಂಧವ್ಯಗಳಿಗೆ ತುಂಬಾ ಹಾನಿಕಾರಕವಾಗಿದೆ. “ನಾನು ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇನೆ. ಏಕೆಂದರೆ ಇವುಗಳಿಂದ ನನ್ನನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಆದರೆ ನಕಾರಾತ್ಮಕತೆ ಮತ್ತು ದ್ವೇಷದಿಂದ ಏನು ಸಾಧ್ಯ? ಇದನ್ನು ನಿರ್ಲಕ್ಷಿಸುವಂತೆ ಹಿಂದೆಯೇ ಹೇಳಿದ್ದೇನೆ. ಆದರೆ ಪರಿಸ್ಥಿತಿ ಹದಗೆಟ್ಟಿದೆ. ನಾನು ಯಾರನ್ನೂ ಗೆಲ್ಲಲು ಪ್ರಯತ್ನಿಸುತ್ತಿಲ್ಲ. ನಾನು ಸ್ವೀಕರಿಸುತ್ತಿರುವ ಈ ದ್ವೇಷದ ಕಾರಣದಿಂದಾಗಿ ಬದಲಾಗಲು ಬಯಸುವುದಿಲ್ಲ” ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ನನ್ನ ಹೃದಯ ಘಾಸಿಯಾಗಿದೆ: ದ್ವೇಷದ ಟ್ರೋಲ್‌ಗಳಿಂದ ಮನನೊಂದು ರಶ್ಮಿಕಾ ಪೋಸ್ಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಕಾಂತಾರ ಶೆಟ್ಟಿ, ಚಾರ್ಲಿ ಶೆಟ್ಟಿಗಳೆಲ್ಲಾ ಪರಮ ಚಡ್ಡಿಗಳು. ಇವುಗಳ ಆರಾಧಕ ಲಂಭಕ್ತರ ಪಡೆ ರಶ್ಮಿಕಾ ಮೇಲೆ ಮುರಕೊಂಡು ಬಿದ್ದಿರೋದು ಶೆಟ್ಟಿದ್ವಯರ ಮೌನ ಸಮ್ಮತಿಯಿಂದ. ರಶ್ಮಿಕಾಗೆ ಅವಳಿಷ್ಟ ಪಟ್ಟಂತೆ ಬದುಕು ಕಟ್ಟಿಕೊಳ್ಳುವ ಹಕ್ಕಿದೆ.
    ಈ ಟ್ರೋಲಿಗ ಪುಂಡ ಪೋಕರಿಗಳದ್ದೇ ಒಂದು ಗ್ಯಾಂಗ್ ಇದೆ. ಕಾಶ್ಮೀರಿ ಪೈಲ್ಸ್, ಕಾಂತಾರ, 999 ಚಾರ್ಲಿ ಮೊದಲಾದ ಒಂದು ವರ್ಗದವರ (ಮೋದೀ ಆರಾಧಕರ) ಚಿತ್ರಗಳನ್ನಿವರು ಪ್ರಮೋಟ್ ಮಾಡುತ್ತಾ ರೆ. ಅದಕ್ಕೆ ಬಲಪಂಥೀಯ ರಾಜಕಾರಣಿಗಳು, ಸನ್ಯಾಸಿ -ಧರ್ಮಾಧಿಕಾರಿಗಳು ಇವರಿಗೆ ಸಹಕರಿಸುತ್ತಾರೆ. ಮತ್ತೊಂದೆಡೆ ಲಾಲ್ ಸಿಂಗ್ ಚಡ್ಡಾ, ಗಂಗೂಬಾಯಿ ಕಾಥಿಯಾವಾಡಿಯಂತಾ ಚಿತ್ರಗಳನ್ನು ಬಹಿಷ್ಕರಿಸಲು ಕರೆಕೊಡುತ್ತಾರೆ. ದ್ವೇಷ, ಕೋಮುವಾದ, ಮತಾಂಧತೆಯ ವಿಷ ವೇಗವಾಗಿ ಹರಡುತ್ತಿದೆ.

LEAVE A REPLY

Please enter your comment!
Please enter your name here

- Advertisment -

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...