Homeಎಕಾನಮಿಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

ಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

- Advertisement -
- Advertisement -

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಎಂಬುದರಲ್ಲಿ ಅಧಿಕಾರಸ್ಥರ ಪಾವತಿ ಕೂಲಿಗಳು (ಟ್ರಾಲ್ ಸೇನೆ) ಬಿಟ್ಟರೆ ಬೇರಾರಿಗೂ ಎಲ್ಲೂ ಯಾರಿಗೂ ಸಂಶಯ ಉಳಿದಂತಿಲ್ಲ. ಸ್ವತಃ ಹಣಕಾಸು ಸಚಿವೆ ಎಲ್ಲವೂ ಸರಿಯಿಲ್ಲ, ಆದರೆ ಪೂರ್ಣ ಕೆಟ್ಟಿಲ್ಲ ಎಂದು ಸಂಸತ್ತಿನಲ್ಲೇ ದಾಖಲಿಸಿಯಾಗಿದೆ. ಸಾರ್ವಜನಿಕ ಅಭಿಪ್ರಾಯಗಳೂ ಈ ನಿಟ್ಟಿನಲ್ಲಿ ಹರಳುಗಟ್ಟಿವೆ.

ಮೊನ್ನೆ ಡಿಸೆಂಬರ್ ಒಂದರಂದು ಎಕನಾಮಿಕ್ ಟೈಮ್ಸ್ ಕಾನ್‍ಕ್ಲೇವ್‍ನಲ್ಲಿ ವೇದಿಕೆಯ ಮೇಲಿದ್ದ ಗೃಹ ಸಚಿವ ಅಮಿತ್ ಷಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೇ ಸಚಿವ ಪಿಯೂಷ ಗೋಯಲ್ ಅವರನ್ನುದ್ದೇಶಿಸಿ ಬಜಾಜ್ ಗುಂಪಿನ ಮುಖ್ಯಸ್ಥ ರಾಹುಲ್ ಬಜಾಜ್ ಅವರು, ಸರ್ಕಾರದ ವಿರುದ್ಧ ಕುತೂಹಲಕರ ಟೀಕೆಯೊಂದನ್ನು ಮಾಡುತ್ತಾರೆ. “ಯುಪಿಎ -2 ಆಳ್ವಿಕೆಯಲ್ಲಿ ನಾವು (ಉದ್ಯಮಿಗಳು) ಯಾರನ್ನು ಬೇಕಿದ್ದರೂ ಟೀಕಿಸಬಹುದಿತ್ತು. ಆದರೆ ನೀವೀಗ ಅದನ್ನು (ಟೀಕೆಯನ್ನು) ಸ್ವೀಕರಿಸುತ್ತೀರಿ ಎಂಬ ವಿಶ್ವಾಸ ಇಲ್ಲ. ನಾನು ಹೇಳುತ್ತಿರುವುದು ತಪ್ಪಿರಬಹುದು, ಆದರೆ ಎಲ್ಲರಲ್ಲೂ ಈ ಭಾವನೆ ಇದೆ.”

ಅಸಹನೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಾಗ ಹುಲ್ಲುಕಡ್ಡಿಯಂತೆ ಕಾಣಿಸಿಕೊಂಡ ಈ ಟೀಕೆಯನ್ನು ಎಲ್ಲರೂ ಗಪ್ಪೆಂದು ಹಿಡಿದು ಕುಳಿತಿರುವ ರೀತಿ – ಹಲವಾರು ವ್ಯಥೆಗಳನ್ನು ಒಟ್ಟಾಗಿ ಹೇಳುತ್ತಿದೆ. ಅಲ್ಲಿ ದೇಶದ ಹಲವು ಮಂದಿ ಪ್ರಮುಖ ಕಾರ್ಪೋರೇಟ್ ಧಣಿಗಳು ಹಾಜರಿದ್ದರು.

ಅಧಿಕಾರಸ್ಥರ ಪ್ರತಿಕ್ರಿಯೆ
ಮೊದಲನೆಯದಾಗಿ ಬಜಾಜ್ ಟೀಕೆಗೆ ಅಲ್ಲೇ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಷಾ , ನರೇಂದ್ರ ಮೋದಿ ಸರ್ಕಾರ ಅತ್ಯಂತ ಹೆಚ್ಚು ಟೀಕೆಗೊಳಗಾಗಿರುವ ಸರ್ಕಾರ ಎಂದರಲ್ಲದೇ ಬಿಜೆಪಿಗೆ ಸತ್ಯ ತಿಳಿಸುವ ಕುರಿತು ಇನ್ನೂ ಜನರಲ್ಲಿ ಭಯ ಇದ್ದರೆ, ಅದನ್ನು ಹೋಗಲಾಡಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ಇತ್ತರು. ಇದು ಸರ್ಕಾರದ ಕಡೆಯಿಂದ ಬಂದ ತಕ್ಷಣದ ಪ್ರತಿಕ್ರಿಯೆ.

ಅದಾದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮರುದಿನ, ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿ, ಪ್ರಶ್ನೆ ಕೇಳಿ ಉತ್ತರ ಪಡೆಯುವ ಬದಲು, ಅಭಿಪ್ರಾಯಗಳನ್ನು ಹರಡುತ್ತಾ ಹೋದರೆ ಆ ಅಭಿಪ್ರಾಯ ಜನಪ್ರಿಯವಾಗತೊಡಗಿದೊಡನೆ ದೇಶದ ಹಿತಾಸಕ್ತಿಗೆ ಹಾನಿ ಆಗಬಹುದೆಂದು ಎಚ್ಚರಿಸಿದರು.

ಅದೇದಿನ ಅಧಿಕಾರಸ್ಥರ ಮುಖವಾಣಿ ಸ್ವರಾಜ್ಯ ಮ್ಯಾಗಝೀನಿನ ಸಂಪಾದಕ ಆನಂದ್ ರಂಗನಾಥನ್ ಅವರು ಒಂದು ಟ್ವೀಟ್‍ನಲ್ಲಿ “ಬಜಾಜ್‍ಗೆ ಪ್ರಜ್ಞೆ ಬರಬೇಕೆಂದರೆ (ಅವರ ಸ್ಕೂಟರಿನಂತೆ) ಎರಡು ಬಾರಿ ಬಗ್ಗಿಸಿ ಕಿಕ್ ಒದೆಯಬೇಕು. ಓಆಂ ಸರ್ಕಾರ ಎದುರಿಸಿದಷ್ಟು ಟೀಕೆಗಳನ್ನು ಯಾರೂ ಎದುರಿಸಿಲ್ಲ. ಅವರು ಯಾವ ಲೋಕದಲ್ಲಿದ್ದಾರೆ? ಭೂಲೋಕದಲ್ಲಂತೂ ಅಲ್ಲ” ಎಂದು ವ್ಯಂಗ್ಯವಾಗಿ ಹೇಳಿದರು.

ಕಳೆದ ಆರು ವರ್ಷಗಳಲ್ಲಿ ಹಾಲೀ ಕೇಂದ್ರ ಸರ್ಕಾರದ ಮತ್ತವರ ಸಮರ್ಥಕರ ಕಾರ್ಯವೈಖರಿಯನ್ನು ಅರಿತಿರುವವರಿಗೆ ಈ ಮೂರು ಪ್ರತಿಕ್ರಿಯೆಗಳು ಸ್ತರವಾರು ಏನನ್ನು ಧ್ವನಿಸುತ್ತಿವೆ ಎಂಬುದನ್ನು ವಿವರಿಸಬೇಕಾಗಿಲ್ಲ.

ಉದ್ಯಮಿಗಳೇಕೆ ಹೀಗೆ?

ಇಲ್ಲಿ ನಿಜಕ್ಕೂ ಅಚ್ಚರಿ ಪಡಬೇಕಾಗಿರುವುದು ರಾಹುಲ್ ಬಜಾಜ್, ಕಿರಣ್ ಮಜುಂದಾರ್ ಅವರಂತಹ ದೊಡ್ಡ ಉದ್ಯಮಪತಿಗಳ ಈ ಚಹಾಕಪ್ಪಿನ ಹಠಾತ್ ಕ್ರಾಂತಿಯ ಬಗ್ಗೆ. ಯಾಕೆಂದರೆ, ಹಾಲೀ ಕೇಂದ್ರ ಸರ್ಕಾರ ಕಳೆದ ಆರು ವರ್ಷಗಳಲ್ಲಿ, ಅದರಲ್ಲೂ ನೋಟು ರದ್ಧತಿಯ ಬಳಿಕ, ಉದ್ದಿಮೆಗಳಿಗೆ ಕೊಟ್ಟಿರುವಷ್ಟು ಸವಲತ್ತುಗಳನ್ನು ಬೇರಾರಿಗೂ ಕೊಟ್ಟಿಲ್ಲ. ಆದರೂ ಹೀಗೇಕೆ?

ಒಂದು ಮಗ್ಗುಲಿನಿಂದ ನೋಡಿದಾಗ, ಇದು ಅಧಿಕಾರಸ್ಥರಿಗೆ ಹತ್ತಿರ ಇರುವ ಉದ್ದಿಮೆಗಳ (ಉದಾಹರಣೆಗೆ ಎಲ್ಲ ಆರ್ಥಿಕ ಹೊಡೆತಗಳ ಹೊರತಾಗಿಯೂ ಅಸ್ವಾಭಾವಿಕ ಎಂಬಷ್ಟು ಬೆಳವಣಿಗೆ ಕಂಡಿರುವ ಅದಾನಿ, ಅಂಬಾನಿ ಇತ್ಯಾದಿ ಕಾರ್ಪೋರೇಟ್ ಗಳು) ವಿರುದ್ಧ ಸ್ವಲ್ಪ ದೂರದಲ್ಲಿರುವವರ ಅಸಹಾಯಕ ಅಸಹನೆಯಂತೆ ಕಾಣಿಸುತ್ತದೆ.
ಎರಡನೆಯದಾಗಿ ತಮ್ಮ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ, ಸರ್ಕಾರಿ ವ್ಯವಸ್ಥೆ ಬಳಸಿಕೊಂಡು ಉದ್ದಿಮೆಗಳವರ ಬೆನ್ನು ಮುರಿಯಲು ನಾವು ಹಿಂಜರಿಯಲಾರೆವು ಎಂಬ ಸರ್ಕಾರದ ಪರೋಕ್ಷ ಎಚ್ಚರಿಕೆಗೆ ಉದ್ಯಮಿ ವರ್ಗದ ಭಯ-ಆತಂಕದ ಪ್ರತಿಕ್ರಿಯೆಯೂ ಇದಾಗಿರಬಹುದು.

ಇದಲ್ಲದೇ ಬೇರೆ ಕಾರಣಗಳೂ ಇದ್ದಿರಬಹುದು. ಆದರೆ ಕಾರಣಗಳಿಗಿಂತ ಹೆಚ್ಚಾಗಿ ಇದೊಂದು ಸುಯೋಜಿತ ತಂತ್ರವಾಗಿರಬಹುದು ಎಂಬ ಸಂಶಯ ಮೂಡಿದರೂ ಅಚ್ಚರಿ ಇಲ್ಲ.

ಮಾರುಕಟ್ಟೆಯ ವಾಸ್ತವಗಳು

ಆದರೆ ಸೇವಾ ಉದ್ಯಮವನ್ನೇ 65%ರಷ್ಟು ನೆಚ್ಚಿಕೊಂಡಿರುವ ಭಾರತದಂತಹ ದೇಶವೊಂದರಲ್ಲಿ ಮೂಲಸೌಕರ್ಯ, ಆಟೊ ಮೊಬೈಲ್‍ನಂತಹ ಉದ್ಯಮಗಳು ಬದಿಗೆ ಸರಿಯತೊಡಗಿದ್ದು ಹೊಸ ಬೆಳವಣಿಗೆಯೇನಲ್ಲ. ಇದು 90ರ ದಶಕದ ಕೊನೆಯಲ್ಲಿ ನಡೆದ “ಐಟಿ ಕ್ರಾಂತಿ”ಯ ಫಲ.

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ, ಮಾರುಕಟ್ಟೆಯಲ್ಲಿ ಬೇರೆ ದೇಶಗಳ ಬುಡ ಕತ್ತರಿಸುವ ಸ್ಪರ್ಧೆ ಹಾಗೂ ಮೂರನೇ ಹಂತದ ಐಟಿ ಕ್ರಾಂತಿ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇತ್ಯಾದಿ) ಆರಂಭಗೊಂಡಿರುವುದರಿಂದ, ಅದಕ್ಕೆ ಸನ್ನದ್ಧಗೊಂಡಿರದ ಭಾರತದ ಐಟಿ ಉದ್ಯಮ ಥಂಡಾ ಹೊಡೆಯುತ್ತಿದೆ. ಪರ್ಯಾಯ ಇಂಧನ ಮೂಲಗಳ ಗಲಾಟೆಯಲ್ಲಿ ಆಟೊಮೊಬೈಲ್ ಉದ್ಯಮ ಕೂಡ ದಾರಿಕಾಣದೆ ನಿಂತಿದೆ.

ಇತ್ತ ಡಿಮಾನೆಟೈಸೇಷನ್‍ನಿಂದಾಗಿ ದೇಶದ ಹಣಕಾಸು ವ್ಯವಸ್ಥೆಗೆ “ಸಾಸಿವೆ ಡಬ್ಬಿಯ ಶಾಪ” ತಗುಲಿದೆ. ಒಂದು ಪುಟ್ಟ ಗಲ್ಲಿಯ ಆರ್ಥಿಕತೆಯ ಮೇಲೆ ಇದರಿಂದ ಬಿದ್ದಿರುವ ಹೊಡೆತ ಹಂತಹಂತವಾಗಿ ಮೇಲೆದ್ದು, ಎಲ್ಲವನ್ನೂ ನುಂಗಿ ನೊಣೆಯುತ್ತಾ, ಬಹುತೇಕ ಎಲ್ಲ ಮೂಲಸೌಕರ್ಯ ಉದ್ದಿಮೆಗಳ ಮೇಲೂ ದುಷ್ಪರಿಣಾಮ ಬೀರಿದೆ.

ನೋಟುರದ್ಧತಿಯ ಬಳಿಕ ಕೇಂದ್ರ ಸರ್ಕಾರ ತನ್ನಲ್ಲಿ ಆರೋಗ್ಯವಂತ ಯೋಜನೆಯೊಂದು ಇದ್ದಿದ್ದರೆ, ತನ್ನ ಮರುನಿರ್ಮಾಣ ಕೆಲಸವನ್ನು ದೇಶದ ಕೃಷಿಭೂಮಿಗಳಿಂದ ಆರಂಭಿಸಬೇಕಿತ್ತು. ಅದನ್ನು ಬಿಟ್ಟು ಕೃಷಿ ಭೂಮಿಗಳನ್ನು ಈಗ ಕೆಲಸ ಇಲ್ಲದೆ ಕುಳಿತಿರುವ ಕಾರ್ಪೋರೇಟ್ ಗಳಿಗೆ ಹಸ್ತಾಂತರಿಸುವ ಹಠ ಹಿಡಿದು ಕಾರ್ಯಾಚರಿಸುತ್ತಿದೆ. ಏನೆಲ್ಲ ಇದೆಯೋ ಅದನ್ನೆಲ್ಲ ಕಾರ್ಪೋರೇಟ್ ಗಳಿಗೆ ದಾನ ಕೊಡುವುದೇ ತನ್ನ ಉದ್ಯೋಗ ಎಂದು ತಿಳಿದಂತಿದೆ.

ಒಟ್ಟು ಅರ್ಥ ಏನು?

ಇಂತಹದೊಂದು ಗಂಭೀರ ಸನ್ನಿವೇಶದಲ್ಲಿ ಕೈಗಾರಿಕೆಗಳ ಪ್ರತಿನಿಧಿಯೊಬ್ಬರು ಸರ್ಕಾರವನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಾಗ ಅದನ್ನು ದೇಶದ ನಾಗರಿಕ ಹೇಗೆ ಗ್ರಹಿಸಬೇಕು?

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ಸಾವಿರಾರು ರೈತರು ದಿಲ್ಲಿ ಚಲೋ ಮಾಡಿದಾಗಲಾಗಲೀ, ಬ್ಯಾಂಕ್ ನೌಕರರು-ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ನಡೆಸಿದ ಹೋರಾಟಕ್ಕಾಗಲೀ, ಯಾವತ್ತೂ ಮಣೆ ಹಾಕದ ಮಾಧ್ಯಮಗಳು ಇದೊಂದು ಒಂಟಿಧ್ವನಿಗೆ ಈ ಮಹತ್ವ ಯಾಕೆ ಕೊಟ್ಟವು?!

ಸದ್ಯಕ್ಕೆ ಚಹಾಕಪ್ಪಿನಲ್ಲಿ ನಡೆದುಹೋದ ಈ ಕ್ರಾಂತಿ ಅಲ್ಲಿಂದ ಹೊರಜಗತ್ತಿಗೆ ಚೆಲ್ಲಿ ಬಿರುಗಾಳಿ ಮೂಡಿಸೀತೇ ಎಂಬುದು ಸ್ಪಷ್ಟವಾಗಲು ಇನ್ನೂ ಸ್ವಲ್ಪ ಸಮಯ ಕಾದುನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...