HomeಮುಖಪುಟCAA, NRC, NPR ಕುರಿತು ಚರ್ಚೆಗೆ ಸಿದ್ಧನಿದ್ದೇನೆ: ಅಮಿತ್‌ ಶಾಗೆ ಪತ್ರಬರೆದ ಮಾಜಿ ಐಎಎಸ್‌ ಕಣ್ಣನ್‌...

CAA, NRC, NPR ಕುರಿತು ಚರ್ಚೆಗೆ ಸಿದ್ಧನಿದ್ದೇನೆ: ಅಮಿತ್‌ ಶಾಗೆ ಪತ್ರಬರೆದ ಮಾಜಿ ಐಎಎಸ್‌ ಕಣ್ಣನ್‌ ಗೋಪಿನಾಥನ್‌

- Advertisement -
- Advertisement -

CAA, NRC, NPR ಕುರಿತು ಗೃಹ ಸಚಿವ ಅಮಿತ್‌ ಶಾರವರು ಚರ್ಚೆಗೆ ಆಹ್ವಾನಿಸಿದ್ದರ ಕುರಿತು ಪತ್ರ ಬರೆದಿರುವ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್‌, ಭೇಟಿಗೆ ಸಮಯ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸಿಎಎ ಯಿಂದ ದೇಶಕ್ಕೆ ಯಾವುದೇ ಅಪಾಯಗಳಿಲ್ಲ. ಈ ಕುರಿತು ಯಾರಾದರೂ ನನ್ನೊಡನೆ ಬಹಿರಂಗ ಚರ್ಚೆಗೆ ಬರಬಹುದು. ಮೂರು ದಿನ ಸಮಯ ಕೊಡುತ್ತೇವೆ ನಮ್ಮ ಕಚೇರಿಯಲ್ಲಿಯೇ ಚರ್ಚಿಸಬಹುದು ಎಂದು ಗೃಹ ಸಚಿವ ಅಮಿತ್‌ ಶಾ ಈ ಹಿಂದೆ ಘೋಷಿಸಿದ್ದರು. ಈ ಕುರಿತು ಅವರಿಗೆ ಇಮೇಲ್‌ ಮೂಲಕ ಪತ್ರ ಬರೆದಿರುವ ಗೋಪಿನಾಥನ್‌ ಸಮಯ ತಿಳಿಸಿ ಎಂದು ಮನವಿ ಮಾಡಿದ್ದಾರೆ.

ಡಿಯರ್‌ ಸರ್‌, ನಮಸ್ಕಾರಗಳು. ಸಿಎಎ ಕುರಿತು ಚರ್ಚೆಗೆ ನೀವು ಆಹ್ವಾನಿಸಿದ್ದೀರಿ. ನಾನು ನಿಮ್ಮೊಡನೆ ಚರ್ಚೆಗೆ ಸಿದ್ಧನಿದ್ದೇನೆ. ದಯವಿಟ್ಟು ಭೇಟಿಗೆ ಸಮಯ ನೀಡಬೇಕು. ಸದ್ಯಕ್ಕೆ ನಾನು ದೆಹಲಿಯಲ್ಲಿಲ್ಲ. ಹಾಗಾಗಿ ಒಂದು ದಿನದ ನಂತರ ಸಮಯ ನಿಗಧಿ ಮಾಡಿದರೆ ನಾನು ಖಂಡಿತ ಚರ್ಚೆಗೆ ಬರುವೆ ಎಂದು ಗೋಪಿನಾಥನ್‌ ಮೇಲ್‌ ಮಾಡಿದ್ದಾರೆ.

ನಿನ್ನೆ ಕೂಡ ಅವರು, ಆತ್ಮೀಯ ಗೃಹ ಮಂತ್ರಿ ಅಮಿತ್‌ಶಾರವರೆ, ಸಿಎಎಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ನೀವು ಆಹ್ವಾನಿಸಿರುವುದನ್ನು ನೋಡಿದ್ದೇನೆ. ಅದರ ಬಗ್ಗೆ ಚರ್ಚೆಗೆ ಸಮಯ ನೀಡಲು ಗೃಹಕಚೇರಿಗೆ ಮನವಿ ಮಾಡುತ್ತೇನೆ. ಭರವಸೆಯಂತೆ 3 ದಿನಗಳಲ್ಲಿ ದಿನಾಂಕವನ್ನು ನಿರೀಕ್ಷಿಸುವುದು ಎಂದು ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ: ನಾನು ರಾಜಿನಾಮೆ ನೀಡಿದ್ದು ಏಕೆಂದರೆ… : ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಸಂದರ್ಶನ

ಕಾಶ್ಮೀರದ 370ನೇ ವಿಧಿ ರದ್ದತಿ ಮತ್ತು ಕಾಶ್ಮೀರದ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸಿದ್ದನ್ನು ವಿರೋಧಿಸಿ ಕಣ್ಣನ್‌ ಗೋಪಿನಾಥನ್‌ರವರು ತಮ್ಮ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

0
ಇವಿಎಂ ಮತ್ತು ವಿವಿಪ್ಯಾಟ್‌ಗಳ ಎಲ್ಲಾ (ಶೇ.100) ಮತಗಳನ್ನು ತಾಳೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ...