PPE ಕೇಳಿದ ವೈದ್ಯರನ್ನು ದೂಷಿಸುವುದು ಸರಿಯಲ್ಲ: ಪ್ರಧಾನಿಗೆ ಪತ್ರ ಬರೆದ ಏಮ್ಸ್ ವೈದ್ಯರು

ಏಮ್ಸ್ ನ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ವೈಯಕ್ತಿಕ ರಕ್ಷಣಾ ಸಾಧನಗಳ ಲಭ್ಯತೆ,(ಪಿಪಿಇ) ಕೊವಿಡ್ -19 ಪರೀಕ್ಷಾ ಕಿಟ್‌ಗಳು ಮತ್ತು ಸಂಪರ್ಕತಡೆಯ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ​​ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈದ್ಯಕೀಯ ಕಾರ್ಯಕರ್ತರನ್ನು ಗುರಿಯಾಗಿಸುವುದನ್ನು ಖಂಡಿಸಿದ ಏಮ್ಸ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಆರೋಗ್ಯ ಕಾರ್ಯಕರ್ತರ ಮನವಿಗಳನ್ನು ರಚನಾತ್ಮಕ ನೆಲೆಯಲ್ಲಿ ನೋಡಬೇಕು. ಆರೋಗ್ಯ ಕಾರ್ಯಕರ್ತರೊಂದಿಗೆ ಆರೋಗ್ಯಕರ ಚರ್ಚೆ ಮತ್ತು ಸಂವಾದ ನಡೆಸಬೇಕೆಂದು ಕೋರಿದ್ದಾರೆ.

ಕೊವಿಡ್ -19 ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಮೋದಿಯವರ ಪ್ರಬಲ ನಾಯಕತ್ವವನ್ನು ಶ್ಲಾಘಿಸಿದ ಅಸೋಸಿಯೇಷನ್, ಆರೋಗ್ಯ ಸೌಲಭ್ಯಗಳು ಮತ್ತು ಲಾಕ್‌ಡೌನ್ ಘೋಷಣೆ ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಹೇಳಿದೆ.

“ಕೊರೊನಾ ವಿರುದ್ಧ ಮೂಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ನಮ್ಮ ಆರೋಗ್ಯ ಕಾರ್ಯಕರ್ತರು ವೈಯಕ್ತಿಕ ರಕ್ಷಣಾ ಸಲಕರಣೆಗಳ (ಪಿಪಿಇ) ಕುರಿತು, ಕೊವಿಡ್ ಪರೀಕ್ಷಾ ಕಿಟ್‌ಗಳ ಲಭ್ಯತೆ,  ಸಂಪರ್ಕತಡೆಯ ಸೌಲಭ್ಯಗಳ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಅಧಿಕಾರಿಗಳು ಈ ವಿಚಾರಗಳನ್ನು ರಚನಾತ್ಮಕವಾಗಿ ನೋಡಬೇಕು” ಎಂದು ಏಮ್ಸ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಆದರ್ಶ್ ಪ್ರತಾಪ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾಜ್‌ಕುಮಾರ್ ಟಿ ಪತ್ರದಲ್ಲಿ ತಿಳಿಸಿದ್ದಾರೆ.

“ರೋಗಿಗಳ ಕಲ್ಯಾಣಕ್ಕಾಗಿ ಅವರು ಮಾಡಿದ ಪ್ರಯತ್ನಗಳಿಗೆ ಶ್ಲಾಘನೆಯ ಬದಲು ಟೀಕೆ ಎದುರಿಸಬೇಕಾಗಿದೆ. ಕೊರೊನ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಆರೋಗ್ಯ ಕಾರ್ಯಕರ್ತರನ್ನು ಅವಮಾನಿಸುವ ಬದಲು ಅವರ ಅಭಿಪ್ರಾಯಗಳನ್ನು ಗೌರವಿಸುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದ್ದಾರೆ.

“ರಚನಾತ್ಮಕ ಉದ್ದೇಶಗಳಿಗಾಗಿ ಸಾಮಾಜಿಕ ಮಾಧ್ಯಮದ ಸಕ್ರಿಯ ಬಳಕೆದಾರರಾಗಿರುವುದರಿಂದ, ಈ ಪರಿಸ್ಥಿತಿಯಲ್ಲಿರುವ ವೈದ್ಯರನ್ನು ನೀವು ಅರ್ಥಮಾಡಿಕೊಳ್ಳಬಹುದು” ಎಂದು ಪತ್ರದಲ್ಲಿ ಬರೆಯಲಾಗಿದೆ.

“ನಾವು ಈ ಘಟನೆಗಳನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಆರೋಗ್ಯ ಕಾರ್ಯಕರ್ತರನ್ನು ಅಪಹಾಸ್ಯ ಮಾಡುವ ಬದಲು ಸರ್ಕಾರವು ಅವರೊಂದಿಗೆ ಆರೋಗ್ಯಕರ ಸಂವಾದ ಮತ್ತು ಚರ್ಚೆಗೆ ನಡೆಸಬೇಕು. ಅವರ ಮೇಲಿನ ಎಲ್ಲಾ ಶಿಕ್ಷೆಗಳನ್ನು ಹಿಂಪಡೆಯಬೇಕು ಮತ್ತು ಅವರ ಗೌರವವನ್ನು ಪುನಃಸ್ಥಾಪಿಸಬೇಕು ”ಎಂದು ಅಸೋಸಿಯೇಷನ್ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಸಫ್ದರ್ಜಂಗ್ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಹೆಸರಿನಲ್ಲಿ ಹರಿದಾಡುತ್ತಿರುವ ಸಾರ್ವಜನಿಕ ಪ್ರಕಟಣೆಯ ಪ್ರಕಾರ,  ವೈಯಕ್ತಿಕ ರಕ್ಷಣಾ ಸಾಧನಗಳು, ಎನ್ -95 ಮಾಸ್ಕುಗಳು, ಟ್ರಿಪಲ್ ಲೇಯರ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳ ದೇಣಿಗೆಯನ್ನು ಕೋರಿದೆ.

“ಸರ್ಕಾರವು ಸಹ ಈ ಉಪಕರಣಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಆದರೆ ಬೇಡಿಕೆಯು ಪೂರೈಕೆಗಿಂತಲೂ ಹೆಚ್ಚಿದೆ, ದಯವಿಟ್ಟು ಮೇಲೆ ತಿಳಿಸಿದ ಉಪಕರಣಗಳನ್ನು ಸಾಧ್ಯವಾದಷ್ಟು ಪ್ರಮಾಣದಲ್ಲಿ ದಾನ ಮಾಡಿ. ದಯವಿಟ್ಟು ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕಚೇರಿಯ ಮೂಲಕ ದೇಣಿಗೆ ನೀಡಬಹುದು” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಆದರೆ, ಆಸ್ಪತ್ರೆಯ ಆಡಳಿತವು ರಕ್ಷಣಾತ್ಮಕ ಸಾಧನಗಳ ಕೊರತೆಯನ್ನು ನಿರಾಕರಿಸಿದೆ. ಸಫ್ದರ್ಜಂಗ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಮನೀಶ್ “ವೈದ್ಯಕೀಯ ಉಪಕರಣಗಳನ್ನು ದಾನ ಮಾಡಲು ಆಸಕ್ತಿ ತೋರಿಸಿದ ಲಾಭ ರಹಿತ ಸಂಸ್ಥೆಗಳಿಗೆ ಈ ನೋಟಿಸ್ ಹೊರಡಿಸಲಾಗಿತ್ತು, ಆದರೆ ಅನೇಕ ಜನರು ನಮ್ಮ ನೋಟಿಸ್‌ನ ಸ್ವರೂಪವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ದೇಣಿಗೆಯ ಬ್ಯಾಂಕ್ ಖಾತಾ ಸಂಖ್ಯೆಯನ್ನು ತಪ್ಪಾಗಿ ಲಗತ್ತಿಸಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ” ಎಂದು ಹೇಳಿದ್ದಾರೆ.

ಸಫ್ದರ್ಜಂಗ್ ಆಸ್ಪತ್ರೆಗೆ ನಾವು ಯಾವತ್ತೂ ಹಣವನ್ನು ಕೇಳಲಿಲ್ಲ ಮತ್ತು ಬದಲಿಗೆ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಮೂಲಕ ಸರಿಯಾದ ಆಡಳಿತಾತ್ಮಕ ರೀತಿಯಲ್ಲಿ ವೈದ್ಯಕೀಯ ಉಪಕರಣಗಳನ್ನು ಮಾತ್ರ ದೇಣಿಗೆಯಾಗಿ ಕೇಳಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ, ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳ ಕೊರತೆಯಿಲ್ಲ, ಆದರೆ ಈ ಸಾಂಕ್ರಾಮಿಕ ರೋಗದ ಭವಿಷ್ಯದ ಹಾದಿಯು ಇನ್ನೂ ಅನಿಶ್ಚಿತವಾಗಿಯೇ ಉಳಿದಿದೆ. ಆದ್ದರಿಂದ ಅದಕ್ಕಾಗಿ ನಮ್ಮ ಸನ್ನದ್ಧತೆಯಲ್ಲಿ ನಾವು ಕಾರ್ಯಪ್ರವೃತ್ತರಾಗಿರಬೇಕು” ಎಂದು ಮನೀಶ್ ಹೇಳಿದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here