Homeಅಂತರಾಷ್ಟ್ರೀಯಕೊರೊನಾ ವಿರುದ್ದದ ಹೋರಾಟ: ಕೇರಳದ ಆರೋಗ್ಯ ಮಂತ್ರಿಗೆ ವಿಶ್ವಸಂಸ್ಥೆಯಿಂದ ಗೌರವ

ಕೊರೊನಾ ವಿರುದ್ದದ ಹೋರಾಟ: ಕೇರಳದ ಆರೋಗ್ಯ ಮಂತ್ರಿಗೆ ವಿಶ್ವಸಂಸ್ಥೆಯಿಂದ ಗೌರವ

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಸಮರ್ಪಕವಾಗಿ ನಿಭಾಯಿಸಿದ್ದಕ್ಕೆ ಕೇರಳದ ಕಮ್ಯುನಿಷ್ಟ್ ಸರ್ಕಾರದ ಆರೋಗ್ಯ ಮಂತ್ರಿ ಕೆ.ಕೆ. ಶೈಲಜಾ ಅವರನ್ನು ವಿಶ್ವಸಂಸ್ಥೆಯ ‘ಸಾರ್ವಜನಿಕ ಸೇವಾ ದಿನಾಚರಣೆ’ಯಲ್ಲಿ ಭಾಷಣಕ್ಕಾಗಿ ಆಹ್ವಾನಿಸಿ ಗೌರವಿಸಲಾಗಿದೆ.

ಈ ಸಮಾರಂಭದಲ್ಲಿ ಆಹ್ವಾನಿತಗೊಂಡ ಭಾರತದ ಏಕೈಕ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ. ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

ಕೊರೊನಾ ವಿರುದ್ದದ ಹೋರಾಟದಲ್ಲಿ ಕೇರಳವನ್ನು ಅಂತರಾಷ್ಟ್ರೀಯ ಮಟ್ಟದ ಪತ್ರಿಕೆಗಳು ಹಾಗೂ ಮಾಧ್ಯಮಗಳು ಗುರುತಿಸಿದೆ.

ಸಭೆಯಲ್ಲಿ ಮಾತನಾಡಿದ ಆರೋಗ್ಯಮಂತ್ರಿ ಕೆ.ಕೆ. ಶೈಲಾಜಾ, ನಿಫಾ ವೈರಸ್ ಅನ್ನು ನಿಭಾಯಿಸಿದ ಅನುಭವಗಳು, ಆರೋಗ್ಯ ವಲಯವು ನಿರ್ಣಾಯಕ ಪಾತ್ರ ವಹಿಸಿರುವ 2018 ಮತ್ತು 2019ರ ಎರಡು ಪ್ರವಾಹಗಳು ಕೊರೊನಾವನ್ನು ಸಮಯೋಚಿತವಾಗಿ ನಿಭಾಯಿಸಲು ಸಹಾಯ ಮಾಡಿದೆ ಎಂದರು.

“ವುಹಾನ್‌ನಲ್ಲಿ ಕೊರೊನಾ ಪ್ರಕರಣಗಳು ವರದಿಯಾದ ಸಮಯದಿಂದಲೇ, ಕೇರಳವೂ WHO ನೀಡಿದ ಜಾಡು ಹಿಡಿದು ಅಂತರರಾಷ್ಟ್ರೀಯ ಮಟ್ಟದ ಪ್ರತಿ ಪ್ರಮಾಣಿತ ಆಪರೇಟಿಂಗ್ ಪ್ರೋಟೋಕಾಲ್‌ಗಳು ಅನುಸರಿಸಿತು. ಇದರಿಂದಾಗಿ ಸಂಪರ್ಕ ಹರಡುವಿಕೆಯ ಪ್ರಮಾಣವನ್ನು ಶೇಕಡಾ 12.5 ಕ್ಕಿಂತ ಹಾಗೂ ಮರಣ ಪ್ರಮಾಣವು ಶೇಕಡಾ 0.6 ಕ್ಕೆ ಕಡಿಮೆ ಇರಿಸಿಕೊಳ್ಳಲು ನಮಗೆ ಸಾಧ್ಯವಾಗಿದೆ”ಎಂದು ಅವರು ಹೇಳಿದರು.


ಓದಿ: ಕೇರಳದ ಆನೆ ಸಾವಿನ ಬಗೆಗಿನ ಸುಳ್ಳಿಗಾಗಿ ಕ್ಷಮೆ ಕೇಳಿದ ಪತ್ರಕರ್ತ ‘ದೀಪಕ್ ಚೌರಾಸಿಯ’


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಬಿಜೆಪಿ, ಕಾಂಗ್ರೆಸ್‌ಗೆ ಚು.ಆಯೋಗ ಸೂಚನೆ

0
ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್‌ ಸೂಚನೆಯನ್ನು ನೀಡಿದೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು...