Homeಮುಖಪುಟನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

ನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

- Advertisement -
- Advertisement -

ಮೊನ್ನೆಯಷ್ಟೇ 4ನೇ ಹಂತದ ಮತದಾನ ಮುಗಿದಿದೆ. ಮೋದಿ ಜನಪ್ರಿಯತೆ ಬಾಲಾಕೋಟ್ ವಾಯುದಾಳಿ ಕಾರಣದಿಂದಾಗಿ ಮತ್ತೆ ಮೊದಲಿನಷ್ಟು ಅಲ್ಲದಿದ್ದರೂ ಉತ್ತಮಗೊಂಡಿದೆ ಎಂದು ಸಮೀಕ್ಷಾ ವರದಿಯೊಂದು 3ನೇ ಹಂತದ ಮತದಾನಕ್ಕೂ ಮುಂಚೆ ಹೇಳಿತ್ತು. ಈ ಬಾಲಾಕೋಟ್ ವಾಯುದಾಳಿಯ ವಿಚಾರವೆಲ್ಲ ಹಳ್ಳಿಹಳ್ಳಿಗೆಲ್ಲ ಮುಟ್ಟಿತೆ? ಹಾಗಾಗಿದ್ದರೆ, ಈ ವಿಚಾರ ಪ್ರಸ್ತಾಪಿಸುತ್ತಲೇ ಇರುವ ಮೋದಿ ಸಹಿತ ಬಿಜೆಪಿ ನಾಯಕರ ಮಾತುಗಳನ್ನು ಪ್ರಚಾರ ಮಾಡಲು ಮಾತ್ರ ಒಂದು ದೊಡ್ಡ ಮಟ್ಟದ ವ್ಯವಸ್ಥಿತ ಯೋಜನೆ ನಡೆದಿದೆಯಲ್ಲವೇ? ಭಾರಿ ಮೊತ್ತವನ್ನು ವ್ಯಯಿಸದೇ ಅದು ಸಾಧ್ಯವೇ?

ಇಲ್ಲಿ ಮೋದಿ ವೇವ್ ಅಂದುಬಿಟ್ಟರೆ ಮುಗಿಯಲ್ಲ ಮಾಧ್ಯಮಗಳೇ, ಅದನ್ನು ಪುಶ್ ಮಾಡ್ತಾ ಇರೋದು ಮನಿ ವೇವ್… ಅಂದರೆ ಬಿಜೆಪಿ ನೀರಿನಂತೆ ಖರ್ಚು ಮಾಡುತ್ತಿರುವ ದುಡ್ಡು…ಈ ಸಲದ ಚುನಾವಣೆಯಲ್ಲಿ ಬಿಜೆಪಿಯ ವಿಪರೀತ ಪಾರ್ಟಿ ಫಂಡ್ ಬಗ್ಗೆ ಚರ್ಚೆಯೇ ಆಗಿಲ್ಲ… ಈ ಕುರಿತಾಗಿ ಒಂದು ನೋಟ ಇಲ್ಲಿದೆ….

ಇವತ್ತು ದೇಶದ ಎಲ್ಲ ಬಿಜೆಪಿಯೇತರ ಪಕ್ಷಗಳು ಚುನಾವಣೆಗಾಗಿ ವೆಚ್ಚ ಮಾಡುತ್ತಿರುವ ಒಟ್ಟು ಮೊತ್ತಕ್ಕಿಂತಲೂ ಹಲವು ಪಟ್ಟು ಮೊತ್ತವನ್ನು ಬಿಜೆಪಿ ಖರ್ಚು ಮಾಡುತ್ತಿದೆ. ಜೊತೆಗೆ ವಿವಿಧ ರೂಪದಲ್ಲಿ ‘ಅಗೋಚರ’ ಮೂಲಗಳು ಅದಕ್ಕೆ ಹಣಕಾಸಿನ ನೆರವು ಹರಿಸುತ್ತಲೇ ಇವೆ.
ಫಂಡ್ ರೈಸಿಂಗ್: ಬಿಜೆಪಿದು ಶೇ.75!

ಅಧಿಕೃತ ಅಂಕಿಅಂಶಗಳ ಪ್ರಕಾರವೇ, ದೇಶದ ಎಲ್ಲ ಪಕ್ಷಗಳಿಗೆ ದೊರೆತ ಪಾರ್ಟಿ ಫಂಡಿಗಿಂತಲೂ ಹಲವು ಪಟ್ಟು ಬಿಜೆಪಿಗೆ ಲಭಿಸಿದೆ. ಆಶ್ಚರ್ಯವೇನು ಬಂತು ಅಲ್ಲವೇ… ಕಾರ್ಪೋರೇಟ್ ನೀತಿಗಳನ್ನೇ ತನ್ನ ಉಸಿರಾಗಿಸಿಕೊಂಡ ಬಿಜೆಪಿಗೆ, ಆ ನೀತಿಗಳ ಅಕ್ರಮ ಫಲಾನುಭವಿಗಳು ಸಿಕ್ಕಾಪಟ್ಟೆ ಫಂಡ್ ಮಾಡದೇ ಇರುತ್ತಾರಾ?

ಚುನಾವಣೆ, ರಾಜಕೀಯ ವ್ಯವಹಹಾರಗಳ ಕುರಿತು ಅಧ್ಯಯನ ಮಾಡುವ ಅಶೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ (ಎ.ಡಿ.ಆರ್) ಸಂಸ್ಥೆ ಪಡೆದ ಅಧಿಕೃತ ಖಚಿತ ದಾಖಲೆಗಳ ಪ್ರಕಾರ, 2017-18ರಲ್ಲಿ ಈ ದೇಶದ ಪ್ರಮುಖ 7 ಪಕ್ಷಗಳ ಆದಾಯ (ಫಂಡ್) 1,397.90 ಕೋಟಿ ರೂಪಾಯಿ. ಇದರಲ್ಲಿ ಬಿಜೆಪಿಯ ಆದಾಯ 1,027.34 ಕೋಟಿ ರೂಪಾಯಿ. ಅಂದರೆ ಶೇ 73.5ರಷ್ಟು ಪಾರ್ಟಿ ಫಂಡ್ ಬಿಜೆಪಿಗೇ ಬಂದಿದೆ! ಇದು ಅಧಿಕೃತ ಮಾತ್ರ. ಅನಧಿಕೃತವಾಗಿ ಬಿಜೆಪಿಗೆ ಈ ಐದು ವರ್ಷಗಳಲ್ಲಿ ಸಾಕಷ್ಟು ‘ಪೇಮೆಂಟ್’ ಆಗಿಯೇ ಆಗಿದೆ.

ಬಿಜೆಪಿಯ ಆದಾಯ 1,027.34 ಕೋಟಿಯಲ್ಲಿ ದೇಣಿಗೆ ಮೂಲಕವೇ ಜಾಸ್ತಿ ಬಂದಿದ್ದು ಅದು 989 ಕೋಟಿ ರೂಪಾಯಿ! ಇದು ಕೇವಲ 2017-18ರ ಅಂಕಿಅಂಶ… ಕಪ್ಪುಹಣ ನಿರ್ನಾಮ ಮಾಡಿದೆವು ಎನ್ನುವ ಪ್ರಧಾನಿಯ ಪಾರ್ಟಿಗೆ ಬಂದ ಈ ದೇಣಿಗೆಗಳ ಮೂಲ ಬಿಳಿ ಹಣದ ವಹಿವಾಟು ಖಂಡಿತ ಇರಲಾರದು. ಕಾಂಗ್ರೆಸ್ ಏನ್ ಕಡಿಮೆಯಾ? ಅದಕ್ಕೂ 143 ಕೋಟಿ ರೂಪಾಯಿ ಅದೇ ವರ್ಷದಲ್ಲಿ ದೇಣಿಗೆ ರೂಪದಲ್ಲಿ ಬಂದು ಬಿದ್ದಿದೆ!

ಈ ಬೇನಾಮಿ ಹಣದ ಮೂಲ ಯಾವುದು?
2017ರಲ್ಲಿ ಬಿಜೆಪಿ ಸರ್ಕಾರದಿಂದ ಜಾರಿಗೆ ಬಂದ ಚುನಾವಣಾ ಬಾಂಡ್ ( ಈ ಕುರಿತಾಗಿ ಪರ-ವಿರೋಧ ವಾದ ಇದ್ದೇ ಇದೆ) ನಿಯಮ ಬಿಜೆಪಿಗೇ ಹೆಚ್ಚು ‘ಲಾಭ’ದಾಯಕವಾಗಿದೆ. ಬಾಂಡ್‍ಗಳ ಮೂಲಕ ಪಾರ್ಟಿ ಫಂಡ್ ನೀಡುವವರ ವಿವರವೇ ಗೊತ್ತಾಗುವುದಿಲ್ಲ. ಈ ‘ಅನಾಮಧೇಯ’ ಮೂಲಗಳು ಎಲ್ಲ ಪ್ರಮುಖ ಪಕ್ಷಗಳಿಗೂ ದೇಣಿಗೆ ನೀಡುತ್ತವೆ. ಆದರೆ, ದೇಶದ ಇತಿಹಾಸದಲ್ಲೇ ಈ ಸಲ ಭಾರಿ ಎನ್ನುವಂತಹ ಫಂಡ್ ಸಿಕ್ಕಿದ್ದು ಬಿಜೆಪಿಗೇ! ಒಂದು ಉದಾಹರಣೆ: 2017-18ರಲ್ಲಿ ಆರ್‍ಬಿಐ 215 ಕೋಟಿ ಮೊತ್ತದ ಚುನಾವಣಾ ಬಾಂಡ್‍ಗಳನ್ನು ಇಶ್ಯೂ ಮಾಡಿತು. ಅದರಲ್ಲಿ ಬಿಜೆಪಿ ಶೇರು 210 ಕೋಟಿ ರೂಪಾಯಿ, ಅಂದರೆ ಶೇ.98! ಈ ದೇಶದ ಉದ್ಯಮಪತಿಗಳಿಗೆ ತಲೆ ಕೆಟ್ಟಿದೆಯೇ? ಖಂಡಿತ ಇಲ್ಲ, ಮೋದಿ ಸರ್ಕಾರ ಅವರಿಗೆ ಬೇಕಾದುದನ್ನೆಲ್ಲ ನಮ್ಮ ತೆರಿಗೆ ಹಣದಲ್ಲಿ ಒದಗಿಸುತ್ತ ಬರುತ್ತಿದೆ. ಹೀಗಾಗಿ ಕೊಳ್ಳೆ ಹೊಡೆದ ನಮ್ಮ ತೆರಿಗೆ ಹಣದಲ್ಲಿ ಒಂದು ಪಾಲನ್ನು ಅವರು ಬಿಜೆಪಿಗೆ ನೀಡುತ್ತಿದ್ದಾರಷ್ಟೇ!

ಚುನಾವಣೆ ಹತ್ತಿರ ಬಂದಂತೆ ಈ ‘ಅನಾಮಧೇಯ’ರ ಫಂಡ್ ನೀಡುವಿಕೆ ಹೆಚ್ಚುತ್ತಲೇ ಹೋಗಿದೆ. ಮಾರ್ಚ್ ತಿಂಗಳ ಮೊದಲ ಎರಡು ವಾರಗಳಲ್ಲಿ 1,366 ಕೋಟಿ ಫಂಡ್ ಬಂದಿದೆ. ಇದೆಲ್ಲ ಆಲ್‍ಮೋಸ್ಟ್ ಬಿಜೆಪಿಯ ಬುಟ್ಟಿಗೆ ಬಿದ್ದಿದೆ!

ಇದಲ್ಲದೇ ಎಲ್ಲ ಪ್ರಮುಖ ಪಾರ್ಟಿಗಳಿಗೂ ಬಾಂಡ್ ಅಲ್ಲದೇ ಗುಪ್ತವಾಗಿ ನೂರಾರು ಕೋಟಿ ಬೇನಾಮಿ ದುಡ್ಡು ಹರಿದು ಬರುತ್ತಲೇ ಇದೆ. ಅದರಲ್ಲಿ ಬಿಜೆಪಿಗೆ ಶೇ. 90ಕ್ಕೂ ಹೆಚ್ಚು ಸಿಗುತ್ತಿದೆ! ಈ ಹಣದಲ್ಲೇ ಬಿಜೆಪಿಯ ಪ್ರಚಾರ ಇವತ್ತು ಜೋರಾಗಿದೆ. ಜಾಹಿರಾತು, ಪ್ರಾಯೋಜನೆ ಹೆಸರಲ್ಲಿ ಮತ್ತು ಗುಪ್ತವಾಗಿಯೂ ಅದು ದೇಶದ ಪ್ರಮುಖ ಮಾಧ್ಯಮಗಳಿಗೆ ಈ ಬೇನಾಮಿ ದುಡ್ಡಿನ ಒಂದು ಪಾಲನ್ನು ನೀಡುತ್ತಿದೆ.
ಸುಮ್ಮನೇ ಮೋದಿ ವೇವ್! ಅದನ್ನೆಲ್ಲ ಪುಶ್ ಮಾಡ್ತಾ ಇರೋದು ಕಳ್ಳ ಉದ್ಯಮಿಗಳ ಬೇನಾಮಿ ಹಣ! ಅದಕ್ಕೇ ಇದು ‘MONEY WAVE’ ಅಲ್ಲವೇ?

(ಆಧಾರ: thewire.in )

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read