Homeಮುಖಪುಟಚುನಾವಣಾ ಆಯೋಗವನ್ನು ಎಚ್ಚರಿಸಿದ ಮಾಜಿ ರಾಷ್ಟ್ರಪತಿ ಮತ್ತು ಮಾಜಿ ಚುನಾವಣಾ ಆಯುಕ್ತ

ಚುನಾವಣಾ ಆಯೋಗವನ್ನು ಎಚ್ಚರಿಸಿದ ಮಾಜಿ ರಾಷ್ಟ್ರಪತಿ ಮತ್ತು ಮಾಜಿ ಚುನಾವಣಾ ಆಯುಕ್ತ

ಬಿಜೆಪಿ ಪರವಾಗಿ ವರ್ತಿಸುತ್ತಿದ್ದಾರೆಂಬ ಆರೋಪದ ನಂತರ, ಚುನಾವಣಾ ಆಯೋಗದ ಮೇಲೆ ಸಂಶಯ ಮೂಡಿಸುತ್ತಿರುವ ಬೆಳವಣಿಗೆಗಳು

- Advertisement -
- Advertisement -

||ನಾನುಗೌರಿ ಡೆಸ್ಕ್||
ಇಂದು ಬೆಳಿಗ್ಗೆ ತಾನೇ ‘ಚುನಾವಣಾ ಆಯೋಗವನ್ನು ಪ್ರಶಂಸಿಸಿದ ಮಾಜಿ ರಾಷ್ಟ್ರಪತಿ’ ಎಂಬ ಸುದ್ದಿಯನ್ನು ಎಲ್ಲರೂ ನೋಡಿದ್ದರು. 1952ರಿಂದ ಇಲ್ಲಿಯವರೆಗೆ ಚುನಾವಣಾ ಆಯೋಗಗಳು ಅತ್ಯುತ್ತಮ ಕೆಲಸ ಮಾಡಿವೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದರು. ಆದರೆ, ಮಧ್ಯಾಹ್ನದ ಹೊತ್ತಿಗೆ, ಇವಿಎಂಗಳ ‘ಕಳ್ಳ ಸಾಗಾಟ’ದ ವಿಡಿಯೋಗಳು ಹೊರಬೀಳುತ್ತಿದ್ದಂತೆ ಸನ್ನಿವೇಶವೇ ಬದಲಾಯಿತು.

ಇದನ್ನೂ ಓದಿ: ಚುನಾವಣಾ ಆಯೋಗದೊಳಗೇ ಎದ್ದ ಪ್ರಶ್ನೆಗಳು
ಇದೇ ರೀತಿ ಬಹಳ ಗೌರವಯುತ ವ್ಯಕ್ತಿತ್ವದ, ಮಾಜಿ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿಯವರೂ ಚುನಾವಣಾ ಆಯೋಗವನ್ನು ಸುಖಾಸುಮ್ಮನೇ ಪ್ರಶ್ನಿಸುವವರಲ್ಲ ಮತ್ತು ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂಬುದನ್ನು ಒಪ್ಪುವವರಲ್ಲ.


ಆದರೆ, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಇವಿಎಂಗಳನ್ನು ಕಳ್ಳತನದ ಸಾಗಾಟ ಮಾಡಲಾಗುತ್ತಿರುವ ಕುರಿತು ವಿಡಿಯೋಗಳು ಹೊರಬಿದ್ದಿದ್ದು, ಅದರಲ್ಲಿ ಸ್ವತಃ ಜಿಲ್ಲಾ ಚುನಾವಣಾಧಿಕಾರಿಗಳು ಮಾತನಾಡಿರುವುದು ಕಂಡು ಬಂದಿತು. ಜವಾಬ್ದಾರಿಯುತ ವ್ಯಕ್ತಿಗಳಾದ ಈ ಇಬ್ಬರೂ ಟ್ವೀಟ್ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಚುನಾವಣಾ ಆಯೋಗವು ವೇಗವಾಗಿ ಇದನ್ನು ಸರಿಪಡಿಸಿ, ಆತಂಕವನ್ನು ಹೋಗಲಾಡಿಸಬೇಕೆಂದು ಹೇಳಿದರು.

 

ಹಾಲಿ ಚುನಾವಣಾ ಆಯುಕ್ತರ ನೇಮಕಾತಿಯಿಂದ ಹಿಡಿದು ಹಲವು ವಿಚಾರಗಳು ವಿವಾದಕ್ಕೀಡಾಗಿದ್ದವು ಮತ್ತು ನರೇಂದ್ರ ಮೋದಿಯವರ ಪರವಾಗಿ ಚುನಾವಣಾ ಪ್ರಕ್ರಿಯೆಯನ್ನು ತಿರುಚಿದ ಆರೋಪಗಳು ಅವರ ಮೇಲೆ ಬಂದಿದ್ದವು. ಆದರೆ, ಇದೀಗ ಇಬ್ಬರು ಮಾಜಿ ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರಿಂದ ತಾಕೀತು ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ಗಮನಾರ್ಹ.
ಇವೆಲ್ಲವೂ ನಂತರದಲ್ಲಿ ಇಡೀ ಚುನಾವಣೆಯೇ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂಬ ಆರೋಪ ಮಾಡಲು ಪುಷ್ಟಿ ಕೊಟ್ಟಿದೆ.

ಆದರೆ, ಚುನಾವಣಾ ಆಯೋಗವು ಸ್ಪಷ್ಟನೆ ನೀಡಿ, ಅಂಥದ್ದೇನೂ ಆಗಿಲ್ಲ ಎಂದು ಹೇಳಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...