Homeಎಕಾನಮಿಪ್ರಸಕ್ತ ವರ್ಷದಲ್ಲಿ ಆರ್ಥಿಕ ದರ 6ಕ್ಕೆ ವೃದ್ದಿ: ಆರ್ಥಿಕ ಸಮೀಕ್ಷೆಯಲ್ಲಿ ಪ್ರತಿಪಾದನೆ

ಪ್ರಸಕ್ತ ವರ್ಷದಲ್ಲಿ ಆರ್ಥಿಕ ದರ 6ಕ್ಕೆ ವೃದ್ದಿ: ಆರ್ಥಿಕ ಸಮೀಕ್ಷೆಯಲ್ಲಿ ಪ್ರತಿಪಾದನೆ

- Advertisement -

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರ 6 ರಿಂದ 6.5ಕ್ಕೆ ಏರಿಕೆಯಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯನ್ ನೇತೃತ್ವದ ಆರ್ಥಿಕ ಸಮೀಕ್ಷೆ ಹೇಳಿದೆ. ಸಮೀಕ್ಷೆಯ ಪ್ರಕಾರ ಜಿಡಿಪಿ ದರ ಈಗ 5ರಷ್ಟಿದೆ.ಸದ್ಯದ ಪರಿಸ್ಥಿತಿಯಲ್ಲಿ ಜಿಡಿಪಿ ಬೆಳವಣಿಗೆಯನ್ನು ಪರಿಸ್ಕರಿಸಬೇಕಾದ ಅಗತ್ಯ ವರಲಿದೆ ಎಂದು ಸಮೀಕ್ಷೆ ತಿಳಿಸಿದೆ.

- Advertisement -

ಆರ್ಥಿಕ ವೃದ್ಧಿ ಹಣಕಾಸು ವಲಯದಲ್ಲಿ ಒಂದು ಚೌಕಟ್ಟಿನೊಳಗೆ ಚಕ್ರದ ಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಬೆಳವಣಿಗೆ ವೃದ್ಧಿಸುತ್ತಿದೆ. ಉತ್ಪಾದನೆಗೆ ಹೊಸ ಕಲ್ಪನೆ ನೀಡಿದೆ. ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಮೇಕ್ ಇಂಡಿಯಾ ಇದು ಉದ್ಯೋಗಗಳನ್ನು ಖಚಿತಪಡಿಸುತ್ತದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಿದೆ.

ರಫ್ತು ಉತ್ತೇಜಿಸಲು ಬಂದರುಗಳಲ್ಲಿ ರೆಡ್ ಟೇಪ್ ಅನ್ನು ತೆಗೆದುಹಾಕುವುದು, ವ್ಯವಹಾರದ ಪ್ರಾರಂಭಗಳನ್ನು ಸರಾಗಗೊಳಿಸುವ ಕ್ರಮಗಳು, ಆಸ್ತಿಯನ್ನು ನೋಂದಣಿ ಮಾಡಿಸಲು, ತೆರಿಗೆ ಪಾವತಿಸುವುದು ಮತ್ತು ಒಪ್ಪಂದಗಳನ್ನು ಜಾರಿಗೊಳಿಸುವ ಕ್ರಮಗಳನ್ನು ಸಮೀಕ್ಷೆ ತಿಳಿಸಿದೆ.

ಹಣದುಬ್ಬರವು 2019ರ ಏಪ್ರಿಲ್ ನಲ್ಲಿ ಶೇಕಡ 3.2 ರಿಂದ 2019ರ ಡಿಸೆಂಬರ್ ನಲ್ಲಿ ಅದು 2.5ಕ್ಕೆ ಇಳಿದಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಿದ್ದು ಇದು ಆರ್ತಿಕತೆಯನ್ನು ಬೇಡಿಕೆಯೊತ್ತಡವನ್ನು ದುರ್ಬಲಗೊಳಿಸುತ್ತದೆ ಎಂದಿದೆ.

ಸರಕುಗಳ ಬೆಲೆಯನ್ನು ಸ್ಥಿರಗೊಳಿಸಲು ಸರ್ಕಾರದ ಮಧ್ಯಸ್ಥಿಕೆಗಲು ಪರಿಣಾಮ ಬೀರಿಲ್ಲ. ಪ್ರಸ್ತುತ ಒಂದು ದಶಕದಲ್ಲಿ ತನ್ನ ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ಭಾರತ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆಯನ್ನು ಶೆ. 4.5ಕ್ಕೆ ಇಳಿಸಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...