Homeಮುಖಪುಟಹೊಸ ಸಂಸತ್ತು ‘ಸೆಂಟ್ರಲ್‌ ವಿಸ್ಟಾ’ ನಿರ್ಮಾಣ ವೆಚ್ಚ ಯೋಜನೆಗಿಂತ 282 ಕೋಟಿ ರೂ. ಹೆಚ್ಚಳ

ಹೊಸ ಸಂಸತ್ತು ‘ಸೆಂಟ್ರಲ್‌ ವಿಸ್ಟಾ’ ನಿರ್ಮಾಣ ವೆಚ್ಚ ಯೋಜನೆಗಿಂತ 282 ಕೋಟಿ ರೂ. ಹೆಚ್ಚಳ

- Advertisement -
- Advertisement -

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಪ್ರಮುಖ ಯೋಜನೆಯಾದ ‘ಸೆಂಟ್ರಲ್‌ ವಿಸ್ಟಾ’ ನೂತನ ಸಂಸತ್ ಭವನಕ್ಕೆ, ಈ ಹಿಂದೆ ಯೋಜಿಸಿರುವುದಕ್ಕಿಂತ ಹೆಚ್ಚುವರಿಯಾಗಿ ಹೆಚ್ಚು 282 ಕೋಟಿ ರೂ ವೆಚ್ಚವಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

2020 ರ ಡಿಸೆಂಬರ್‌ನಲ್ಲಿ ಇದಕ್ಕೆ ಶಿಲಾನ್ಯಾಸ ಸಮಾರಂಭ ನಡೆದಿತ್ತು. ಆಗ ಈ ಯೋಜನೆಗೆ 977 ಕೋಟಿ ರೂ ವೆಚ್ಚವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಬಜೆಟ್ ವೆಚ್ಚದ ಮೇಲೆ 29% ರಷ್ಟು ಹೆಚ್ಚಳವಾಗಳಿದೆ ಎಂದು ವರದಿಯಾಗಿದೆ. ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಟಾಟಾ ಕಂಪೆನಿಯು, ಯೋಜನೆಯ ನಲವತ್ತು ಶೇಖಡದಷ್ಟು ಕೆಲಸವನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ:‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

ಆದಾಗ್ಯೂ, ಕಟ್ಟಡವು ಈ ಹಿಂದೆ ಹೇಳಿದ ಸಮಯಕ್ಕೆ ಮುಗಿಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತಾವಿತ ನಾಲ್ಕು ಅಂತಸ್ತಿನ ಕಟ್ಟಡ, 13 ಎಕರೆಗಳಲ್ಲಿ ಎದ್ದು ನಿಲ್ಲಲಿದೆ. ಈ ವರ್ಷದ ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಇದನ್ನು ಪೂರ್ಣಗೊಳಿಸಲಾಗುವುದು ಎಂದು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ಇದರ ನಂತರ ಈ ಗಡುವನ್ನು ವಿಸ್ತರಿಸಿ ಅಕ್ಟೋಬರ್‌‌ಗೆ ನಿಗದಿಪಡಿಸಲಾಯಿತು.

ಕೋವಿಡ್ ಕಾರಣದಿಂದ ವಿಧಿಸಲಾಗಿರುವ ನಿರ್ಬಂಧಗಳು ಈ ನಿರ್ಮಾಣ ಕಾರ್ಯಗಳಿಗೆ ಅನ್ವಯಿಸುವುದಿಲ್ಲ. ಈ ನಿರ್ಮಾಣವು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ನಂತರ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ:ಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

1927 ರಲ್ಲಿ ಕಟ್ಟಲಾಗಿರುವ ಈಗಿನ ಸಂಸತ್‌ ಭವನವು ಇಕ್ಕಟ್ಟಾಗಿದೆ. ಲೋಕಸಭೆ ಮತ್ತು ರಾಜ್ಯಸಭಾ ಸಭಾಂಗಣಗಳ ಆಸನ ವ್ಯವಸ್ಥೆಗಳು ತನ್ನ ಸಾಮರ್ಥ್ಯವನ್ನು ತಲುಪಿದೆ. ಕಟ್ಟಡವು ಭೂಕಂಪದಿಂದ ರಕ್ಷಣೆ ಹೊಂದಿಲ್ಲ ಅಥವಾ ಯಾವುದೇ ಅಗ್ನಿ ಸುರಕ್ಷತೆ ಮಾನದಂಡಗಳನ್ನು ಹೊಂದಿಲ್ಲ ಎಂದು ಅನೇಕ ಸಂಸದರು ಗಮನಸೆಳೆದಿದ್ದರು ಎನ್‌ಡಿಟಿವಿ ವರದಿ ಮಾಡಿದೆ.

ಹೊಸ ಸಂಸತ್‌ ಕಟ್ಟಡದ ಲೋಕಸಭೆಯ ಚೇಂಬರ್‌ನಲ್ಲಿ 888 ಸದಸ್ಯರು ಕುಳಿತುಕೊಳ್ಳುವ ನಿರೀಕ್ಷೆಯಿದೆ. ಜೊತೆಗೆ ಜಂಟಿ ಅಧಿವೇಶನಗಳ ಸಮಯದಲ್ಲಿ 1,224 ಸದಸ್ಯರು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಬಹುದಾದ ಆಯ್ಕೆಯನ್ನು ಹೊಂದಿದೆ. ರಾಜ್ಯಸಭಾ ಚೇಂಬರ್ 384 ಸದಸ್ಯರಿಗೆ ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದನ್ನೂ ಓದಿ:ಗಿರವಿ ಇರಿಸಿದ ಮೆದುಳುಗಳು ಮತ್ತು ಕಾಣೆಯಾದ ಹಸುಗೂಸು!: ಡಿ.ಉಮಾಪತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...