Homeಮುಖಪುಟಶೇ.33 ಹಾಲಿ ರಾಜ್ಯಸಭಾ ಸಂಸದರ ಮೇಲಿದೆ ಕ್ರಿಮಿನಲ್ ಕೇಸ್: ವರದಿ

ಶೇ.33 ಹಾಲಿ ರಾಜ್ಯಸಭಾ ಸಂಸದರ ಮೇಲಿದೆ ಕ್ರಿಮಿನಲ್ ಕೇಸ್: ವರದಿ

- Advertisement -
- Advertisement -

ರಾಜ್ಯಸಭೆಯ 225 ಹಾಲಿ ಸದಸ್ಯರ ಪೈಕಿ, ಶೇಕಡಾ 33ರಷ್ಟು ಜನರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಹಾಲಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹19,602 ಕೋಟಿಗಳಷ್ಟಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌(ಎಡಿಆರ್)ನ ವಿಶ್ಲೇಷಣೆ ತಿಳಿಸಿದೆ.

ಇಬ್ಬರು ರಾಜ್ಯಸಭಾ ಹಾಲಿ ಸದಸ್ಯರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಾಲ್ವರು ಸದಸ್ಯರ ಮೇಲೆ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಒಟ್ಟು ಸದಸ್ಯರ ಪೈಕಿ 31 ಮಂದಿ, ಅಂದರೆ ಶೇ.14ರಷ್ಟು ಜನರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

ರಾಜ್ಯಸಭೆಯ 225 ಹಾಲಿ ಸಂಸದರ ಪೈಕಿ 75 (ಶೇ. 33) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ. 40 (ಶೇ. 18) ಮಂದಿ ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಎಡಿಆರ್ ವಿಶ್ಲೇಷಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಎಷ್ಟು ಜನ ರಾಜ್ಯಸಭಾ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂಬುವುದನ್ನು ತಿಳಿಸಿದೆ. ಅದರಂತೆ, ಬಿಜೆಪಿಯ 90 (ಶೇ.23), ಕಾಂಗ್ರೆಸ್‌ನ 28 (ಶೇ. 50) ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಟಿಎಂಸಿಯ 13 ರಾಜ್ಯಸಭಾ ಸದಸ್ಯರ ಪೈಕಿ 5 (ಶೇ. 38), ಆರ್‌ಜೆಡಿಯ 6 ಸದಸ್ಯರಲ್ಲಿ 4 (ಶೇ. 67), ಸಿಪಿಐಎಂನ 5 ಸದಸ್ಯರಲ್ಲಿ 4 (ಶೇ.80), ಎಎಪಿಯ 10 ಸದಸ್ಯರ ಪೈಕಿ 3 (ಶೇ.10), ವೈಎಸ್‌ಆರ್‌ಸಿಪಿಯ 11 ಸದಸ್ಯರ ಪೈಕಿ 4 (ಶೇ.36) ಮತ್ತು ಡಿಎಂಕೆಯ 10 ಸದಸ್ಯರಲ್ಲಿ 2 (ಶೇ.20) ಮಂದಿ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ಎಡಿಆರ್‌ ವಿಶ್ಲೇಷಣೆ ತಿಳಿಸಿದೆ.

ಬಿಜೆಪಿಯ 90 ಸದಸ್ಯರ ಪೈಕಿ 10 (ಶೇ.11), ಕಾಂಗ್ರೆಸ್‌ನ 28 ಸದಸ್ಯರ ಪೈಕಿ 9 (ಶೇ.32), ಟಿಎಂಸಿಯ 13 ಸದಸ್ಯರ ಪೈಕಿ 3 (ಶೇ.23), ಆರ್‌ಜೆಡಿಯ 6 ಸದಸ್ಯರ ಪೈಕಿ 2 (ಶೇ.33) ಸಿಪಿಐಎಂನ 5 ಸದಸ್ಯರ ಪೈಕಿ 2 (ಶೇ. 40), ಎಎಪಿಯ 10 ಸದಸ್ಯರ ಪೈಕಿ 1 (ಶೇ.10), ವೈಎಸ್‌ಆರ್‌ಸಿಪಿಯ 11 ಸದಸ್ಯರ ಪೈಕಿ 3(ಶೇ.27) ಮತ್ತು ಡಿಎಂಕೆಯ 10 ಸದಸ್ಯರ ಪೈಕಿ ಒಬ್ಬರು (ಶೇ.10) ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯವಾರು ಸಂಸದರ ವಿಶ್ಲೇಷಣೆ ನೋಡುವುದಾದರೆ, ಮಹಾರಾಷ್ಟ್ರದ 18 ಸಂಸದರಲ್ಲಿ 11 (ಶೇ.61), ಬಿಹಾರದ 16 ಸಂಸದರಲ್ಲಿ 8 (ಶೇ.50), ಉತ್ತರ ಪ್ರದೇಶದ 31 ಸಂಸದರಲ್ಲಿ 9 (ಶೇ.29), ತಮಿಳುನಾಡಿನ 18 ಸಂಸದರ ಪೈಕಿ 6 (ಶೇ.33), ಕೇರಳದ 9 ಸಂಸದರ ಪೈಕಿ 6 (ಶೇ.67) ಮತ್ತು ಪಶ್ಚಿಮ ಬಂಗಾಳದ 16 ಸಂಸದರ ಪೈಕಿ 7(ಶೇ.44) ಮಂದಿ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ.

ವಿಶ್ಲೇಷಣೆಯು 233 ರಾಜ್ಯಸಭಾ ಸದಸ್ಯರ ಪೈಕಿ 225 ಮಂದಿಯನ್ನು ಒಳಗೊಂಡಿದೆ. ಮಹಾರಾಷ್ಟ್ರದಿಂದ ಒಂದು ಸ್ಥಾನ ಖಾಲಿಯಾಗಿದೆ, ಜಮ್ಮು ಕಾಶ್ಮೀರದ ನಾಲ್ವರನ್ನು ವಿಶ್ಲೇಷಣೆಗೆ ಒಳಪಡಿಸಿಲ್ಲ. ಕರ್ನಾಟಕ, ಪುದುಚ್ಚೇರಿ ಮತ್ತು ಅಸ್ಸಾಂನ ತಲಾ ಒಬ್ಬ ಸಂಸದರ ಅಫಿಡವಿಟ್‌ಗಳ ಅಲಭ್ಯತೆಯಿಂದಾಗಿ ವಿಶ್ಲೇಷಣೆ ಮಾಡಿಲ್ಲ ಎಂದು ಎಡಿಆರ್ ಹೇಳಿದೆ.

ಕ್ರಿಮಿನಲ್ ಪ್ರಕರಣಗಳ ಜೊತೆಗೆ ರಾಜ್ಯಸಭಾ ಸದಸ್ಯರ ಆಸ್ತಿ ಮೌಲ್ಯವನ್ನೂ ವಿಶ್ಲೇಷಿಸಲಾಗಿದೆ. ಪ್ರತಿ ಸಂಸದರ ಸರಾಸರಿ ಆಸ್ತಿ ಮೌಲ್ಯ ₹87.12 ಕೋಟಿಗಳಷ್ಟಿದೆ ಎಂದು ತಿಳಿದು ಬಂದಿದೆ. ದತ್ತಾಂಶಗಳನ್ನು ಮತ್ತಷ್ಟು ವಿಭಜಿಸಿ ವಿಶ್ಲೇಷಿಸಿದಾಗ ವಿವಿಧ ರಾಜಕೀಯ ಪಕ್ಷಗಳ ಸದಸ್ಯರ ಆಸ್ತಿ ಮೌಲ್ಯಗಳ ನಡುವೆ ಗಮನಾರ್ಹ ವ್ಯತ್ಯಾಸಗಳು ಕಂಡು ಬಂದಿವೆ.

ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿಯ 90 ಸದಸ್ಯರಲ್ಲಿ 9 (ಶೇ.10), ಕಾಂಗ್ರೆಸ್‌ನ 28 ಸದಸ್ಯರಲ್ಲಿ 4 (ಶೇ.14), ವೈಎಸ್‌ಆರ್‌ಸಿಪಿಯ 11 ಸದಸ್ಯರಲ್ಲಿ 5 (ಶೇ.45), ಎಎಪಿಯ 10 ಸದಸ್ಯರಲ್ಲಿ 2 (ಶೇ.20) ಟಿಆರ್‌ಎಸ್‌ನ 4 ಸದಸ್ಯರಲ್ಲಿ 3 (ಶೇ.75) ಮತ್ತು ಆರ್‌ಜೆಡಿಯ 6 ಸದಸ್ಯರಲ್ಲಿ 2 (ಶೇ.33) ಮಂದಿ ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪ್ರಮುಖ ಪಕ್ಷಗಳ ಸಂಸದರ ಸರಾಸರಿ ಆಸ್ತಿ ಮೌಲ್ಯ ಹೀಗಿದೆ : ಬಿಜೆಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹37.34 ಕೋಟಿ, ಕಾಂಗ್ರೆಸ್ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹40.70 ಕೋಟಿ, ಟಿಎಂಸಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹10.25 ಕೋಟಿ, ವೈಎಸ್‌ಆರ್‌ಸಿಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹357.68 ಕೋಟಿ, ಟಿಆರ್‌ಎಸ್ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹1,383.74 ಕೋಟಿ, ಡಿಎಂಕೆ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹6.37 ಕೋಟಿ ಮತ್ತು ಎಎಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹114.81 ಕೋಟಿಯಾಗಿದೆ. ಇದಲ್ಲದೆ, ವಿಶ್ಲೇಷಿಸಲಾದ ರಾಜ್ಯಸಭೆಯ ಹಾಲಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹19,602 ಕೋಟಿಗಳಷ್ಟಿದೆ

ಪಕ್ಷವಾರು ವಿಂಗಡಿಸಿದಾಗ ವಿಶ್ಲೇಷಿಸಿದ ಸಂಸದರ ಒಟ್ಟು ಆಸ್ತಿ ಮೌಲ್ಯ ಹೀಗಿದೆ : ಬಿಜೆಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹3,360 ಕೋಟಿ, ಕಾಂಗ್ರೆಸ್ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹1,139 ಕೋಟಿ, ವೈಎಸ್‌ಆರ್‌ಸಿಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹3,934 ಕೋಟಿ, ಬಿಆರ್‌ಎಸ್ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹5,534 ಕೋಟಿ ಆಸ್ತಿ ಮತ್ತು ಎಎಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹ 1,148 ಕೋಟಿ.

ಇದನ್ನೂ ಓದಿ : ಬಿಜೆಪಿಯ ಚುನಾವಣಾ ಬಾಂಡ್‌ ವಂಚನೆ ಪ್ರಕರಣ: ದೂರು ಹಿಂಪಡೆದ ಜಡ್ಜ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನಲ್ಲಿ ತಿರಂಗ ಯಾತ್ರೆಗೆ ಪೊಲೀಸರ ಷರತ್ತುಬದ್ಧ ಅನುಮತಿ: ಪ್ರತಿಭಟನೆ, ಘೋಷಣೆಗಳಿಗೆ ನಿರ್ಬಂಧ

ಬೆಂಗಳೂರು: ದೆಹಲಿಯಲ್ಲಿ ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆ ವಿಚಾರವಾಗಿ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಅಕ್ಟೋಬರ್ 16ರಂದು ಟೌನ್ ಹಾಲ್‌ನಿಂದ ಬನ್ನಪ್ಪ ಪಾರ್ಕ್‌ನಲ್ಲಿರುವ ಕ್ವಿಟ್ ಇಂಡಿಯಾ ಸ್ಮಾರಕದವರೆಗೆ ಹಮ್ಮಿಕೊಂಡಿರುವ ತಿರಂಗ...

ಸುಪ್ರೀಂ ವಿಚಾರಣೆಗೆ ಸಜ್ಜಾಗುತ್ತಿದ್ದಂತೆ ಸಿಜೆಪಿಯ ತಿರಂಗಾ ಮೆರವಣಿಗೆ ಆರಂಭ; ಪೊಲೀಸರ ನೋಟಿಸ್ ಧಿಕ್ಕರಿಸಿ ತೆರಳುತ್ತಿದ್ದ ಅಭಿಜೀತ್ ದೀಪ್ಕೆ ವಶಕ್ಕೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಜ್ಜಾಗುತ್ತಿದ್ದ ಬೆನ್ನಲ್ಲೇ, ದೆಹಲಿ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ‘ಲೆಹ್ರಾ ದೋ ತಿರಂಗಾ’...

‘ದಿಮಾಗಿ ನಕ್ಸಲ್’, ‘ದೇಶದ್ರೋಹಿ’ ಎಂದು ಪಟ್ಟ ಕಟ್ಟುವುದು ಅಧಿಕಾರ ಕಳೆದುಕೊಳ್ಳುವ ಭೀತಿಯ ಸಂಕೇತ”: ಮೋದಿ-ಅಮಿತ್ ಶಾ ವಿರುದ್ಧ ಪವನ್ ಖೇರಾ ವಾಗ್ದಾಳಿ!

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ತನ್ನ ನೀತಿಗಳು ಮತ್ತು ನಡೆಯನ್ನು ಪ್ರಶ್ನಿಸುವ ನಾಗರಿಕರಿಗೆ ‘ರಾಷ್ಟ್ರವಿರೋಧಿ’, ‘ಎಡಪಂಥೀಯ’ ಹಾಗೂ ‘ದಿಮಾಗಿ ನಕ್ಸಲ್’ ಎಂದು ಪಟ್ಟ ಕಟ್ಟುತ್ತಿರುವುದು ಅದರ ಅಧಿಕಾರ ಕಳೆದುಕೊಳ್ಳುವ ಭೀತಿಯನ್ನು ತೋರಿಸುತ್ತದೆ ಎಂದು...

ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಹೆಚ್ಚಿದ ನಿರ್ಬಂಧ: 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಸಿಜೆಪಿಯ ತಿರಂಗಾ ಮೆರವಣಿಗೆ: ಸೆಂಟ್ರಲ್ ಪಾರ್ಕ್ ಮುಚ್ಚುವಿಕೆ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕಾಕ್ರೋಚ್ ಜನತಾ ಪಾರ್ಟಿ...

ದೆಹಲಿ ಬಿಟ್ಟು ರಿಲಯನ್ಸ್ ರಿಫೈನರಿ ಇರುವ ಜಾಮ್‌ನಗರಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಮುಂಬರುವ ಭಾರತ ಭೇಟಿ ಹಾಗೂ ವಿದೇಶಾಂಗ ಸಚಿವಾಲಯದ ನಿರ್ಧಾರಗಳ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ...

ದೆಹಲಿ ಪ್ರತಿಭಟನೆ: ‘ತಿರಂಗ ಹಾರಿಸಿದ್ದಕ್ಕೆ ಜೈಲಿಗೆ ಹೋಗಲೂ ಸಿದ್ಧ’: ಮೋದಿ ಸರ್ಕಾರದ ವಿರುದ್ಧ ಅಭಿಜೀತ್ ದೀಪ್ಕೆ ತೀವ್ರ ವಾಗ್ದಾಳಿ

ನವದೆಹಲಿ: ರಾಷ್ಟ್ರಧ್ವಜ ಹಾರಿಸುವುದನ್ನೇ ಅಪರಾಧವೆಂದು ಪರಿಗಣಿಸುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆಯೇ ಎಂದು ಪ್ರಶ್ನಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ತಿರಂಗ ಹಾರಿಸಿದ್ದಕ್ಕಾಗಿ ಜೈಲಿಗೆ ಹೋಗಬೇಕಾದರೂ ಸಿದ್ಧ ಎಂದು ಘೋಷಿಸಿದ್ದಾರೆ....

“ಅಮೆರಿಕ-ಪಾಕಿಸ್ತಾನ್ ಯುದ್ಧವಾದರೆ ನಾವು ಪಾಕ್ ಪರ ನಿಲ್ಲುತ್ತೇವೆ”: ರಾಜಸ್ಥಾನ ಬಿಜೆಪಿ ಅಧ್ಯಕ್ಷರಿಂದ ವಿವಾದಾತ್ಮಕ ಹೇಳಿಕೆ!

"ಒಂದು ವೇಳೆ ಇಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನ ನಮ್ಮ ನೆರೆಹೊರೆಯ ದೇಶವಾಗಿರುವುದರಿಂದ ನಾವು ಅದರ ಜೊತೆ ಇರುತ್ತೇವೆ" ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ...

ಗ್ಯಾನೇಶ್ ಕುಮಾರ್ ರಕ್ಷಣೆಗಾಗಿ ದೆಹಲಿಯನ್ನೇ ಭಾರತ-ಪಾಕ್ ಗಡಿಯನ್ನಾಗಿ ಪರಿವರ್ತಿಸಿದ ಮೋದಿ: ಅಭಿಜೀತ್ ದಿಪ್ಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ನಡೆದಿರುವ ಅಕ್ರಮಗಳನ್ನು ವಿರೋಧಿಸಿ, ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಚರ್ಚಿಸಲು ವಿದ್ಯಾರ್ಥಿ ಸಂಘಟನೆಗಳು,...

ಸಹಪಾಠಿಗಳ ಜಾತಿ, ಪ್ರವೇಶದ ವರ್ಗ, ರ‍್ಯಾಂಕ್ ಕೇಳಬೇಡಿ: ದರ್ಶನ್, ಸಾಹಿಲ್ ಸಾವುಗಳ ಬೆನ್ನಲ್ಲೇ ತಾರತಮ್ಯ ವಿರೋಧಿ ನಿಯಮ ನೆನಪಿಸಿದ ಐಐಟಿ ಬಾಂಬೆ

ಮುಂಬೈ: ಸಹಪಾಠಿಗಳ ಜಾತಿ, ಪ್ರವೇಶದ ವರ್ಗ ಅಥವಾ ಪ್ರವೇಶ ಪರೀಕ್ಷೆಯ ರ‍್ಯಾಂಕ್‌ಗಳ ಬಗ್ಗೆ ಪ್ರಶ್ನಿಸುವುದು ತಾರತಮ್ಯಕ್ಕೆ ಕಾರಣವಾಗಬಹುದು. ಇಂತಹ ಪ್ರಶ್ನೆಗಳನ್ನು ಕೇಳಬಾರದು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ ತನ್ನ ವಿದ್ಯಾರ್ಥಿಗಳಿಗೆ...