Homeಕರ್ನಾಟಕಶಿವಮೊಗ್ಗ: 7 ವರ್ಷಗಳ ಹಿಂದೆ ಕೊಲೆಯಾದ ಬಜರಂಗದಳ ಕಾರ್ಯಕರ್ತನ ತಾಯಿ ಬದುಕು ಬೀದಿಪಾಲು!

ಶಿವಮೊಗ್ಗ: 7 ವರ್ಷಗಳ ಹಿಂದೆ ಕೊಲೆಯಾದ ಬಜರಂಗದಳ ಕಾರ್ಯಕರ್ತನ ತಾಯಿ ಬದುಕು ಬೀದಿಪಾಲು!

2015ರಲ್ಲಿ ವಿಶ್ವನಾಥ್ ಶೆಟ್ಟಿ ಕೊಲೆಯಾದಾಗ, ಆತನ ಕುಟುಂಬಕ್ಕೆ ನೆರವು ನೀಡುವ ಭರವಸೆ ಭರಪೂರ ಸಿಕ್ಕಿತು. ಅಂದು ಕೂಡ ಶಿವಮೊಗ್ಗ ಬಂದ್ ಆಗಿತ್ತು. ಆದರೆ 7 ವರ್ಷಗಳ ನಂತರ ತಿರುಗಿ ನೋಡಿದರೆ ವಿಶ್ವನಾಥ್ ತಾಯಿ ಮೀನಾಕ್ಷಮ್ಮ ಇಂದು ರಸ್ತೆ ಬದಿ ಚಿಂದಿ ಆಯುತ್ತಿದ್ದಾರೆ...

- Advertisement -
- Advertisement -

ಮುರಕಲು ಮನೆ, ಸುತ್ತಲು ಹಬ್ಬಿದ ಗಿಡಗಂಟಿ. ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ವಿದ್ಯುತ್‌ ಸಂಪರ್ಕವಿಲ್ಲ. ಹಿಂದುತ್ವಕ್ಕಾಗಿ ಹೋರಾಡುತ್ತಿದ್ದ ಮಗ ಕೊಲೆಯಾದ. ಸೊಸೆ ಸಾವಿಗೀಡಾದಳು. ಮಗಳು ಸತ್ತಳು. 12 ವರ್ಷದ ಮೊಮ್ಮಗನ ಶಿಕ್ಷಣ ಭಾರ ಹೊತ್ತ ಮುದುಕಿ, ಜೀವನಕ್ಕಾಗಿ ಆಯ್ದುಕೊಂಡಿದ್ದು ಚಿಂದಿ ಆಯುವ ಬದುಕು.- ಇದು ಶಿವಮೊಗ್ಗದ ಮೀನಾಕ್ಷಮ್ಮನ ನೋವಿನ ಕಥನ.

ಸಂಘಪರಿವಾರದ ರಾಜಕೀಯ ಮುಖಂಡರು ಬಡವರು, ದಲಿತಾದಿ ಶೂದ್ರರ ಮಕ್ಕಳನ್ನು ಹಿಂದುತ್ವದ ಗಲಭೆಗಳಿಗೆ ತಳ್ಳಿ, ಆ ಯುವಕರು ಅನ್ಯಕೋಮಿನಿಂದ ಕೊಲೆಯಾದಾಗ, ಆ ಸಾವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಾರೆಂಬ ಆರೋಪಗಳು ಸಾಮಾನ್ಯವಾಗಿವೆ. ಮಕ್ಕಳು ಬಲಿಪಶುಗಳಾದ ಮೇಲೆ ಪೋಷಕರು ಕಣ್ಣೀರಲ್ಲಿ ಕೈತೊಳೆಯುವಂತಾಗುತ್ತದೆ. ಇಂತಹದ್ದೇ ಮನಕಲಕುವ ಮತ್ತೊಂದು ಘಟನೆಗೆ ಶಿವಮೊಗ್ಗ ಜಿಲ್ಲೆ ಸಾಕ್ಷಿಯಾಗಿದೆ.

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದನು. (ಕೊಲೆಯ ಕಾರಣ ಇನ್ನೂ ಬಹಿರಂಗವಾಗಿಲ್ಲ.) ನಿಷೇದಾಜ್ಞೆಯ ನಡುವೆ ಹರ್ಷನ ಮೃತ ಶರೀರವನ್ನು ಮೆರವಣಿಗೆ ಮಾಡಿದಾಗ ಹಲವು ಅಹಿತಕರ ಘಟನೆಗಳೂ ನಡೆದಿವೆ. ಕೆಲವು ಬಿಜೆಪಿ ನಾಯಕರು ಶವ ಮೆರವಣಿಗೆಯ ಮುಂದಾಳತ್ವ ವಹಿಸಿದ್ದರು. ಅಲ್ಲದೆ ಹರ್ಷ ಕೊಲೆಯನ್ನು ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳಾಗಿವೆ. ಹರ್ಷ ಸಾವನ್ನು ಕಾರಣವಾಗಿಟ್ಟುಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಕೆಲವರು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಹರ್ಷನ ಕುಟುಂಬಕ್ಕೆ ನೆರವು ಕೂಡ ಹರಿದು ಬರುತ್ತಿದೆ. ಆದರೆ 2015ರಲ್ಲಿ ಕೊಲೆಯಾದ ಹಿಂದುತ್ವ ಕಾರ್ಯಕರ್ತ ವಿಶ್ವನಾಥ ಶೆಟ್ಟಿಯ ಕುಟುಂಬ ಏನಾಯಿತೆಂದು ಯೋಚಿಸಿದ್ದಾರಾ? ವಿಶ್ವನಾಥ್ ಅವರ ತಾಯಿ ಮೀನಾಕ್ಷಮ್ಮ ಅನಾಥರಾಗಿ, ಚಿಂದಿ ಆಯುತ್ತ ಬದುಕುವಂತಾಯಿಲ್ಲತ್ತಲ್ಲ, ಇದಕ್ಕೆ ಹೊಣೆ ಯಾರು?

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: BJP ಮತ್ತು ಅದರ ನಾಯಕರನ್ನು ಟೀಕಿಸುತ್ತಿರುವ ಈ ವ್ಯಕ್ತಿ ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ‘ಹರ್ಷ’ ಅಲ್ಲ

ತಮ್ಮ ಮುರುಕಲು ಮನೆಯ ಮುಂದೆ ಮೀನಾಕ್ಷಮ್ಮ

ಶಿವಮೊಗ್ಗ ನಗರದಲ್ಲಿ 2015ರಲ್ಲಿ ನಡೆದ ಪಿಎಫ್‌ಐ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಕೆಲವರು ಗಾಜನೂರು ಬಳಿ ಆಲ್ಕೊಳದ ವಿಶ್ವನಾಥ ಶೆಟ್ಟಿ ಅವರನ್ನು ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಕೊಲೆಯಾದಾಗ ಹಿಂದುತ್ವ ಸಂಘಟನೆಗಳು ಶಿವಮೊಗ್ಗ ನಗರವನ್ನು ಬಂದ್ ಮಾಡಿದ್ದವು. ಭಾರೀ ಪ್ರತಿಭಟನೆ ನಡೆಸಿದ್ದವು. ವಿಶ್ವನಾಥ್‌ ಕುಟುಂಬವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.

“ನಿಮಗೆ ನಾವು ಮಕ್ಕಳಾಗಿ ಇರುತ್ತೇವೆ. ನಿಮ್ಮನ್ನು ಕಡೆಯವರೆಗೂ ನೋಡಿಕೊಳ್ಳುತ್ತೇವೆ” ಎಂದು ವೀರಾವೇಶದಿಂದ ಮಾತನಾಡಿದ ಯಾವ ಮುಖಂಡನೂ ಮೀನಾಕ್ಷಮ್ಮನ ಸಹಾಯಕಕ್ಕೆ ಬಂದಿಲ್ಲ. ಮೀನಾಕ್ಷಮ್ಮನವರು ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಅಕ್ಕಿ ಪಡೆದು ಜೀವನ ಸಾಗಿಸುತ್ತಿದ್ದಾರೆ. ಅಲ್ಲಿ ಇಲ್ಲಿ ಪುಳ್ಳೆ ಆಯ್ದು ತಂದು ಅಡುಗೆ ಮಾಡಿಕೊಳ್ಳುತ್ತಿದ್ದಾರೆ.

ವಿಶ್ವನಾಥ್‌ ಅವರ ಹೆಂಡತಿ ಕಾಯಿಲೆ ಬಿದ್ದರು. ಸರ್ಕಾರ ನೀಡಿದ್ದ ಐದು ಲಕ್ಷ ರೂ. ಪರಿಹಾರ ಹಣ ವಿಶ್ವನಾಥ್‌ ಅವರ ಪತ್ನಿಯ ಆಸ್ಪತ್ರೆಯ ಖರ್ಚಿಗಾಯಿತು. ಜಾಂಡೀಸ್ ಆಗಿ ಅವರು ತೀರಿಕೊಂಡ ಬಳಿಕ ಪುಟಾಣಿ ಆದಿತ್ಯನ ಭಾರ ಮೀನಾಕ್ಷಮ್ಮನ ಅವರ ಹೆಗಲ ಮೇಲೆ ಬಿತ್ತು. ಮಗಳು ಕೂಡ ತೀರಿಕೊಂಡ ಬಳಿಕ ಮೀನಾಕ್ಷಮ್ಮ ಅನಾಥೆಯಾದರು. ಮಗುವನ್ನು ಓದಿಸುವ ಭಾರಹೊತ್ತಿಕೊಂಡ ಅಜ್ಜಿ, ಚಿಂದಿ ಆಯುತ್ತ ಬದುಕು ಸವೆಸುತ್ತಿದ್ದಾರೆ.

ಇದನ್ನೂ ಓದಿರಿ: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ, ಮೃತನ ಪೋನ್ ನಾಪತ್ತೆ

“ಸರಕಾರದಿಂದ ಕೊಡುವ ಸಂಧ್ಯಾ ಸುರಕ್ಷಾ ಪಿಂಚಣಿ ಸಿಗುತ್ತಿಲ್ಲ. ಜೀವ ಇರುವವರೆಗೆ ಹೊಟ್ಟೆ ತುಂಬಿಸಿಕೊಳ್ಳಬೇಕಲ್ವಾ? ನ್ಯಾಯಬೆಲೆ ಅಂಗಡಿಯಿಂದ ತಿಂಗಳಿಗೆ 10 ಕೆ.ಜಿ. ಅಕ್ಕಿ ಕೊಡುತ್ತಾರೆ. ಪ್ರತಿದಿನ ಬೆಳಿಗ್ಗೆ ರಸ್ತೆ, ತಿಪ್ಪೆಗಳಲ್ಲಿ ಪ್ಲಾಸ್ಟಿಕ್‌ ಆಯುವುದರಿಂದ 10ರಿಂದ 20 ರೂಪಾಯಿ ಬರುತ್ತದೆ. ಅದರಲ್ಲಿ ತರಕಾರಿ, ದಿನಸಿ, ಮಾತ್ರೆ ಎಲ್ಲವನ್ನೂ ಸರಿದೂಗಿಸಬೇಕು ಎನ್ನುವಾಗ ಆ ತಾಯಿ ಕಣ್ಣೀರು ಸುರಿಸಿದರು” ಎಂದು ‘ವಿಜಯಕರ್ನಾಟಕ’ ವರದಿ ಮಾಡಿದೆ.

“ಮಗನಿಲ್ಲ, ಮಗಳಿಲ್ಲ, ಸೊಸೆ ಇಲ್ಲ. ಮಗ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಎರಡು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದರೂ ಪಿಂಚಣಿ ಸಿಕ್ಕಿಲ್ಲ. ಕರೆಂಟ್ ಬಿಲ್ ಕಟ್ಟಿಲ್ಲವೆಂದು ಮೂರು ವರ್ಷದ ಹಿಂದೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಮನೆಯಲ್ಲಿ ಬೆಳಕಿಲ್ಲ. ನೀರಿನ ಬಿಲ್‌ ಕಟ್ಟಿಲ್ಲವೆಂದು ನೀರಿನ ಸಂಪರ್ಕವಿಲ್ಲ”- ಹೀಗೆ ‘ಇಲ್ಲ’ಗಳ ಪಟ್ಟಿಯ ನಡುವೆ ಇಳಿಜೀವದ ಮೀನಾಕ್ಷಮ್ಮನ ಬದುಕು ಹಿಂಡಿ ಹಿಪ್ಪೆಯಾಗಿದೆ.

“ಹರ್ಷ ಕುಟುಂಬಕ್ಕೆ ಹಲವರು ನೆರವು ನೀಡಿದ್ದಾರೆ. ಒಂದು ಕೋಟಿ ರೂ. ಕುಟುಂಬಕ್ಕೆ ಹರಿದುಬಂದಿದೆ. ಆದರೆ ವಿಶ್ವನಾಥ್ ಅವರ ತಾಯಿ ಮಾತ್ರ ಪುಟ್ಟ ಮನೆಯಲ್ಲಿ ಕತ್ತಲೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ” ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.

ಶಿವಮೊಗ್ಗ ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್ ಅವರು ಮೀನಾಕ್ಷಮ್ಮನವರನ್ನು ಭೇಟಿಯಾಗಿ ನೆರವು ನೀಡಿದರು.

ವಿಶ್ವನಾಥ್‌ ತಾಯಿಯವರನ್ನು ಭೇಟಿಯಾಗಿ ನೆರವು ನೀಡಿರುವ ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್‌ ಅವರು ‘ನಾನುಗೌರಿ.ಕಾಂ’ನೊಂದಿಗೆ ಮಾತನಾಡಿ, “ಮೀನಾಕ್ಷಮ್ಮನವರ ಸ್ಥಿತಿ ನೋಡಿದರೆ ಬಹಳ ನೋವಾಗುತ್ತದೆ. ಕುಡಿಯಲು ನೀರಿನ ಸಂಪರ್ಕವಿರಲಿಲ್ಲ. ಮನೆಯಂತೂ ಬಹಳ ದುಸ್ಥಿತಿಯಲ್ಲಿದೆ. ಕರೆಂಟ್‌ ಬಿಲ್ ಕಟ್ಟಿಲ್ಲವೆಂದು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ತುರ್ತಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡಲು ಕ್ರಮ ವಹಿಸಿದೆ. ನೀರಿನ ವ್ಯವಸ್ಥೆ ಮಾಡಿಕೊಡಲಾಗಿದೆ. ಮನೆಗೆ ಸುಣ್ಣ ಬಣ್ಣ ಬಳಿಸಲಾಗುವುದು. ವಿಷಯ ತಿಳಿದ ಅನೇಕ ಸಂಘಟನೆಗಳು ಮೀನಾಕ್ಷಮ್ಮನವರಿಗೆ ನೆರವು ನೀಡಲು ಮುಂದಾಗಿವೆ. 12 ವರ್ಷದ ಮೊಮ್ಮಗನನ್ನು ಸಾಕಲು ಆ ತಾಯಿ ಬಹಳ ಕಷ್ಟಪಡುತ್ತಿದ್ದಾರೆ. ಈ ಕಷ್ಟ ಯಾರಿಗೂ ಬರಬಾರದು” ಎಂದರು.

ಮೀನಾಕ್ಷಮ್ಮನವರಿಗೆ ನೆರವು ನೀಡಲು ಬಯಸುವವರು ಈ ಖಾತೆಗೆ ಹಣ ಕಳುಹಿಸಬಹುದು.

ಮೀನಾಕ್ಷಮ್ಮನವರ ಬ್ಯಾಂಕ್‌ ಅಕೌಂಟ್‌ ವಿವರ. ಧನಸಹಾಯ ಮಾಡುವವರು ಈ ಖಾತೆಗೆ ಹಣ ಜಮೆ ಮಾಡಬಹುದು.

ಇದನ್ನೂ ಓದಿರಿ: ‘ಬಾಳಿಗ ಕೊಲೆಯ ಬಗ್ಗೆ ಬಾಯಿಬಿಡದವರು, ದಲಿತ ವ್ಯಕ್ತಿ ಕೊಲೆಯಾದದ್ದು ಖಂಡಿಸುತ್ತಾರಾ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...

ಜಾರ್ಖಂಡ್: ರಾಮನವಮಿ ಘರ್ಷಣೆಗೆ ಸಂಬಂಧಿಸಿದ 19 ಜನರನ್ನು ಬಂಧಿಸಿ, ಕೈಕೋಳ ಹಾಕಿ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ಕನಿಷ್ಠ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ನಂತರ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್...

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...