Homeಮುಖಪುಟವಿಶ್ವ ಹ್ಯಾಪಿನೆಸ್ಸ್‌ ವರದಿ: ಭಾರತ 136ನೇ ರ್‍ಯಾಂಕ್‌‌; ಅಫ್ಘಾನ್ ಕೊನೆಯ 146ನೇ ರ್‍ಯಾಂಕ್‌‌!

ವಿಶ್ವ ಹ್ಯಾಪಿನೆಸ್ಸ್‌ ವರದಿ: ಭಾರತ 136ನೇ ರ್‍ಯಾಂಕ್‌‌; ಅಫ್ಘಾನ್ ಕೊನೆಯ 146ನೇ ರ್‍ಯಾಂಕ್‌‌!

ಭಾರತದ ನಂತರದ ಸ್ಥಾನ ಪಡೆದ ಕೊನೆಯ ಹತ್ತು ದೇಶಗಳಲ್ಲಿ ಎಂಟು ದೇಶಗಳು ಆಫ್ರಿಕಾ ಖಂಡದ ದೇಶಗಳಾಗಿವೆ.

- Advertisement -
- Advertisement -

ಮಾರ್ಚ್ 20ರಂದು ‘ಅಂತಾರಾಷ್ಟ್ರೀಯ ಹ್ಯಾಪಿನೆಸ್‌ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಇದರ ಕೆಲವೇ ದಿನಗಳ ಮೊದಲು ವಿಶ್ವ ಸಂಸ್ಥೆಯು ತನ್ನ 10ನೇ ವರ್ಷದ ‘ವಿಶ್ವ ಹ್ಯಾಪಿನೆಸ್ಸ್‌ ವರದಿ’ಯನ್ನು ಬಿಡುಗಡೆ ಮಾಡಿದೆ. 146 ದೇಶಗಳ ಈ ಪಟ್ಟಿಯಲ್ಲಿ ಭಾರತವು 136ನೇ ಸ್ಥಾನವನ್ನು ಪಡೆದಿದೆ. ಪಟ್ಟಿಯಲ್ಲಿ ಕೊನೆಯ ದೇಶವಾಗಿ ಅಪಘಾನಿಸ್ತಾನ 146 ಸ್ಥಾನ ಪಡೆದಿದ್ದು, ವಿಶ್ವದ ಅತೃಪ್ತ ದೇಶವಾಗಿ ಹೊಮ್ಮಿದೆ. ಉಳಿದಂತೆ ಭಾರತದ ನೆರೆಯ ದೇಶಗಳಾದ ಚೀನಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್‌‌ ಮತ್ತು ಶ್ರೀಲಂಕಾ ದೇಶಗಳು ಪಟ್ಟಿಯಲ್ಲಿ ಭಾರತಕ್ಕಿಂತ ಮೇಲೆ ಇವೆ.

ಫಿನ್‌ಲ್ಯಾಂಡ್‌ ದೇಶವು ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಸತತ ಐದನೇ ವರ್ಷವೂ ಹೆಸರಿಸಲ್ಪಟ್ಟಿದೆ. ಈ ಪಟ್ಟಿಯಲ್ಲಿ ಡೆನ್ಮಾರ್ಕ್ ಎರಡನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಐಸ್‌ಲ್ಯಾಂಡ್‌, ಸ್ವಿಟ್ಜರ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ ಇವೆ.

ಇದನ್ನೂ ಓದಿ: ಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1

ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ದೇಶಗಳ ಜಾಗತಿಕ ಸಂತೋಷದ ಶ್ರೇಯಾಂಕವನ್ನು ಹೊಂದಿರುವ ‘ವರ್ಲ್ಡ್ ಹ್ಯಾಪಿನೆಸ್ ವರದಿ’ಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್‌ವರ್ಕ್‌ನಿಂದ ಪ್ರತಿ ವರ್ಷ ಬಿಡುಗಡೆಯಾಗುತ್ತದೆ.

“ದೇಶವೊಂದರ ಸರ್ಕಾರಗಳು ತಮ್ಮ ಜನರ ಮೇಲೆ ಹೇಗೆ ಕಾಳಜಿ ವಹಿಸುತ್ತವೆ ಎಂಬುದರ ಮೇಲೆ ದೇಶಗಳು ರ್‍ಯಾಂಕಿಂಗ್ ಪಡೆಯುತ್ತದೆ. ನಿರ್ದಿಷ್ಟ ದೇಶದ ಜನರ ಸಂತೃಪ್ತಿಯ ಜೀವನ ಆ ದೇಶದ ಉನ್ನತ ರೇಟಿಂಗ್‌ಗಳಿಗೆ ಕಾರಣವಾಗುತ್ತದೆ” ಎಂದು ಆಲ್ಟೊ ವಿಶ್ವವಿದ್ಯಾಲಯದ ತಜ್ಞ ಫ್ರಾಂಕ್ ಮಾರ್ಟೆಲಾ ಹೇಳುತ್ತಾರೆ.

ಸಂಖ್ಯಾಶಾಸ್ತ್ರಜ್ಞರು ಗ್ಯಾಲಪ್‌ ವಲ್ಡ್‌ ಪೋಲ್‌ ಮತ್ತು ತಲವಾರು GDP, ಜೀವಿತಾವಧಿ, ಆರೋಗ್ಯಕರ ಜೀವಿತಾವಧಿ, ಭ್ರಷ್ಟಾಚಾರದ ಗ್ರಹಿಕೆಗಳು, ಉದಾರತೆ, ಜೀವನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ, ಆರೋಗ್ಯಕರ ಜೀವಿತಾವಧಿ, ಸಾಮಾಜಿಕ ಬೆಂಬಲ ಅಂಶಗಳ ಡೇಟಾದ ಮೇಲೆ ಶ್ರೇಯಾಂಕವನ್ನು ಆಧರಿಸಿ ಈ ವರದಿಯನ್ನು ತಯಾರಿಸುತ್ತಾರೆ.

ಜಗತ್ತು ಕೊರೊನಾದ ಮೂರನೇ ವರ್ಷಕ್ಕೆ ಪ್ರವೇಶಿಸುತ್ತಿರುವ ಈ ಸಮಯದಲ್ಲಿ, ವರದಿಯು 2022ರಲ್ಲಿ ಮೂರು ಕ್ಷೇತ್ರಗಳನ್ನು ಕೇಂದ್ರೀಕರಿಸಿದೆ: ಹಿಂತಿರುಗಿ ನೋಡುವುದು; ಕೋವಿಡ್-19 ರ ಸಂದರ್ಭದಲ್ಲಿ ಜನರು ಮತ್ತು ದೇಶಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನೋಡುವುದು; ಮತ್ತು ಭವಿಷ್ಯದಲ್ಲಿ ಯೋಗಕ್ಷೇಮದ ವಿಜ್ಞಾನವು ಹೇಗೆ ವಿಕಸನಗೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಎದುರು ನೋಡುವುದು.

ಈ ವರ್ಷದ ವರದಿಯು ಗ್ಯಾಲಪ್ ವರ್ಲ್ಡ್ ಪೋಲ್‌ನಲ್ಲಿ ಮೇಲ್ವಿಚಾರಣೆ ಮಾಡಲಾದ ಈ ಎಲ್ಲಾ ಮೂರು ಕಾರ್ಯಗಳಲ್ಲಿ ವಿಶ್ವಾದ್ಯಂತ ಗಮನಾರ್ಹ ಬೆಳವಣಿಗೆಯನ್ನು ಕಂಡುಕೊಂಡಿದೆ. “2021 ರಲ್ಲಿ ಅಪರಿಚಿತರಿಗೆ ಸಹಾಯ ಮಾಡುವುದು, ಸ್ವಯಂ ಸೇವೆ ಮತ್ತು ದೇಣಿಗೆಗಳು ಪ್ರಪಂಚದ ಪ್ರತಿಯೊಂದು ಭಾಗದಲ್ಲಿ ತೀವ್ರವಾಗಿ ಹೆಚ್ಚಿವೆ” ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವರ್ಲ್ಡ್ ಹ್ಯಾಪಿನೆಸ್ ಸಂಪಾದಕ ಜಾನ್ ಹೆಲ್ಲಿವೆಲ್ ಹೇಳಿದ್ದಾರೆ.

ಈ ವರ್ಷದ ರ್‍ಯಾಂಕಿಂಗ್‌ನಲ್ಲಿ ಭಾರತದ ನಂತರದ ಸ್ಥಾನ ಪಡೆದ ಕೊನೆಯ ಹತ್ತು ದೇಶಗಳಲ್ಲಿ ಎಂಟು ದೇಶಗಳು ಆಫ್ರಿಕಾ ಖಂಡದ ದೇಶಗಳಾಗಿವೆ. ಉಳಿದ ಎರಡು ದೇಶಗಳಲ್ಲಿ ಒಂದು ಮಧ್ಯಪ್ರಾಚ್ಯ ದೇಶವಾದ ಲೆಬನಾನ್ ಆಗಿದ್ದು, ಅಲ್ಲಿ ಕಳೆದ ವರ್ಷ ನಾಗರಿಕ ದಂಗೆ ನಡೆದಿತ್ತು. ಮತ್ತೊಂದು ದೇಶ ಅಪಘಾನಿಸ್ತಾನವಾಗಿದ್ದು, ಕಳೆದ ವರ್ಷ ಅಲ್ಲಿನ ಆಡಳಿತವನ್ನು ತಾಲಿಬಾನ್ ಸಂಘಟನೆಯು ವಹಿಸಿಕೊಂಡಿತ್ತು.

ಈ ವರ್ಷದ ಪಟ್ಟಿಯಲ್ಲಿ ಭಾರತ ಮತ್ತು ನಮ್ಮ ನೆರೆಯ ದೇಶಗಳ ರ್‍ಯಾಂಕಿಂಗ್‌ ಹೀಗಿದೆ.

ವಿಶ್ವಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಈ ಪಟ್ಟಿಯನ್ನು ನೀಡುತ್ತಿದೆ. 2015ರ 158 ದೇಶಗಳ ಹ್ಯಾಪಿನೆಸ್‌ ರಿಪೋರ್ಟ್‌‌ನಲ್ಲಿ ಭಾರತವು 117ನೇ ಸ್ಥಾನಗಳಲ್ಲಿ ಇತ್ತು. 2018ರ ಹೊತ್ತಿಗೆ ಭಾರತದ ರ್‍ಯಾಂಕಿಂಗ್‌ 133ಕ್ಕೆ ಇಳಿದಿದ್ದು, ಈ ವೇಳೆ ವಿಶ್ವಸಂಸ್ಥೆಯು 156 ದೇಶಗಳನ್ನು ಪಟ್ಟಿ ಮಾಡಿತ್ತು. ಕೊರೊನಾ ನಂತರದ ಭಾರತದ ರ್‍ಯಾಂಕಿಂಗ್ ಮತ್ತಷ್ಟು ಇಳಿದಿದ್ದು, 146 ದೇಶಗಳ ಪಟ್ಟಿಯಲ್ಲಿ 136ನೇ ರ್‍ಯಾಂಕ್‌ ಪಡೆದಿದೆ.

ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-5

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...