ಸಾರ್ವಜನಿಕ ಆರೋಗ್ಯ

98) ಗುರಿ: ಸಾರ್ವಜನಿಕ ಆರೋಗ್ಯ ಮತ್ತು ರೋಗ ಪ್ರತಿಬಂಧಕ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸುವುದು.
ಸಾಧನೆ: ಸಾರ್ವಜನಿಕ ಆರೋಗ್ಯದ ಸುಧಾರಣೆಗೆ ಸರ್ಕಾರ ತಲಾ ಎಷ್ಟು ವೆಚ್ಚ ಮಾಡಿದೆ ಮತ್ತು ಅದು ದೇಶದ GDPಯಲ್ಲಿ ಯಾವ ಪ್ರಮಾಣದ್ದು ಎಂಬ ಮಾಹಿತಿ, ವ್ಯವಸ್ಥೆಯಲ್ಲಿ ಏನು ಬದಲಾಯಿತು ಎಂಬುದರ ಚಿತ್ರಣ ನೀಡುತ್ತದೆ.

2025ಕ್ಕೆ GDPಯ ಶೇಕಡಾವಾರು ಪ್ರಮಾಣವನ್ನು 2.5%ಗೆ ಏರಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು 20-21 ಬಜೆಟ್ ಭಾಷಣದಲ್ಲಿ ಪ್ರಕಟಿಸಲಾಗಿದೆ.

(ಮಾಹಿತಿ ಮೂಲ: ನ್ಯಾಷನಲ್ ಹೆಲ್ತ್ ಪ್ರೊಫೈಲ್ 2019)

99) ಗುರಿ: 50% ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC), 70% ಸಮುದಾಯದ ಆರೋಗ್ಯ ಕೇಂದ್ರಗಳಲ್ಲಿ (CHC) ಮತ್ತು 100% ಜಿಲ್ಲಾಸ್ಪತ್ರೆಗಳಲ್ಲಿ (DH) AYUSH ಸೇವೆಗಳು ಲಭ್ಯವಾಗುವಂತೆ ಮಾಡುವುದು.
ಸಾಧನೆ: 2020 ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ, ದೇಶದ 34% ಸಾರ್ವಜನಿಕ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಮಾತ್ರ AYUSH ಸೇವೆ ಒದಗಿಸಲು ಸಾಧ್ಯ ಆಗಿದೆ ಎಂದು ಹೇಳಿ ಲೆಕ್ಕಾಚಾರ ಒಪ್ಪಿಸಿದೆ.

ಕೇಂದ್ರದ ವಿವಿಧ ದೇಶದಲ್ಲಿರುವ ಒಟ್ಟು ಕೇಂದ್ರಗಳ ಸಂಖ್ಯೆ ಆಯುಷ್ ಸೇವೆ ಲಭ್ಯ ಇರುವ ಕೇಂದ್ರಗಳು

DH 779 498
CHC 5624 2776
PHC 25650 7623

(ಮಾಹಿತಿ ಮೂಲ: ಲೋಕಸಭೆ ಚುಕ್ಕಿ ಗುರುತಿನ ಪ್ರಶ್ನೆ 96, 07-02-2020)

100) ಗುರಿ: ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ನಿರ್ವಹಣೆಯ ಕೇಡರ್ ಸ್ಥಾಪಿಸುವುದು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ.

101) ಗುರಿ: ಕೇಂದ್ರ ಮತ್ತು ರಾಜ್ಯಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಒಂದು ಗುರಿಬಿಂದುವನ್ನು ರೂಪಿಸುವುದು.
ಸಾಧನೆ: ರೋಗ ಸರ್ವೇಕ್ಷಣೆ, ಆರೋಗ್ಯ ನೀತಿಗಳ ಪರಿಣಾಮಗಳ ಮಾಹಿತಿ ಸಂಗ್ರಹ, ದತ್ತಾಂಶ ಸಂಸ್ಕರಣೆ, ಮಾಹಿತಿ ಅರಿವು ಮೊದಲಾದ ಕೆಲಸಗಳಿಗೆ ಸೂಕ್ತವಾಗುವಂತೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವನ್ನು (NCDC) ಮೇಲ್ದರ್ಜೆಗೇರಿಸುವ ವಿಚಾರ ಇನ್ನೂ ಚಿಂತನೆಯ ಹಂತದಲ್ಲಿದೆ.

ಸಾಂದರ್ಭಿಕ ಚಿತ್ರ

ಪ್ರಾಥಮಿಕ ಆರೋಗ್ಯ ಆರೈಕೆ

102) ಗುರಿ: ಸಮಗ್ರ ಪ್ರಾಥಮಿಕ ಆರೋಗ್ಯ ಸುಧಾರಣೆಗೆ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮೂಲಕ ಹೊಸ ಕಾಣ್ಕೆಯನ್ನು ರೂಪಿಸುವುದು
ಸಾಧನೆ: ರಾಷ್ಟ್ರೀಯ ಆರೋಗ್ಯ ನೀತಿ 2017ರನ್ವಯ ದೇಶದಲ್ಲಿ 1.5ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು (Health and Wellness Centre -HWC) ಸ್ಥಾಪಿಸಲು (PHC ಮತ್ತು SC ಗಳನ್ನು ಪರಿವರ್ತಿಸುವುದು) ಉದ್ದೇಶಿಸಲಾಗಿತ್ತು. ರೋಗ ಪತ್ತೆ, ಚಿಕಿತ್ಸೆ, ಪುನರುಜ್ಜೀವನ ಮತ್ತು ಶಾಮಕ ಚಿಕಿತ್ಸೆಗಳನ್ನು ಈ ಕೇಂದ್ರಗಳ ಮೂಲಕ ಜನರ ಬಳಿಗೆ ಒಯ್ಯುವುದು ಸರ್ಕಾರದ ಉದ್ದೇಶವಾಗಿತ್ತು.

103) ಗುರಿ: ದೇಶದೊಳಗೆ ಒಂದೂವರೆ ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು (HWC) ವೇಗವಾಗಿ ಸ್ಥಾಪಿಸುವುದು
ಸಾಧನೆ: ಇಲ್ಲಿಯತನಕ 1,04,860 ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು (AB-HWC) ಸರ್ಕಾರ ಮಂಜೂರು ಮಾಡಿದ್ದು, ಅವುಗಳಲ್ಲಿ 50,927 ಕಾರ್ಯರೂಪಕ್ಕೆ ಬಂದಿವೆ. (ಮಾಹಿತಿ ಮೂಲ: ಕೇಂದ್ರ ಆರೋಗ್ಯ ಇಲಾಖೆಯ ವಾರ್ಷಿಕ ವರದಿ 2020-21)

104) ಗುರಿ: ಆರೋಗ್ಯಕ್ಕಿರುವ ಸಾಮಾಜಿಕ ಸವಾಲುಗಳನ್ನು ಎದುರಿಸಲು ವ್ಯವಸ್ಥೆಯನ್ನು ರೂಪಿಸುವುದು.
ಸಾಧನೆ: ಚಿಂತನೆಯ ಹಂತದಲ್ಲೇ ಇದೆ.

105) ಗುರಿ: ಆರೋಗ್ಯವಂತ ಭಾರತಕ್ಕಾಗಿ ಸ್ವಸ್ಥ ಭಾರತ್ ಜನಾಂದೋಲನಕ್ಕೆ ಜನರನ್ನು ಪ್ರೇರಿಸುವುದು.
ಸಾಧನೆ: ಪ್ರಧಾನಮಂತ್ರಿಗಳ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆಯನ್ನು (Prime Minister AtmanirbharSwasth Bharat Yojana) ಹಣಕಾಸು ಸಚಿವರು 20-21 ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದಾರೆ.

ಆರೋಗ್ಯಕ್ಕಾಗಿ ಮಾನವ ಸಂಪನ್ಮೂಲಗಳು

106) ಗುರಿ: ವೈದ್ಯ-ರೋಗಿ ಅನುಪಾತವನ್ನು 1:1400ಗೆ ಮತ್ತು ದಾದಿಯರು-ರೋಗಿ ಅನುಪಾತವನ್ನು 1:500ಗೆ ಏರಿಸುವುದು.
ಸಾಧನೆ: 135 ಕೋಟಿ ಜನಸಂಖ್ಯೆಗೆ ಭಾರತದಲ್ಲಿ ಇರುವ ನೋಂದಾಯಿತ ವೈದ್ಯರ ಸಂಖ್ಯೆ ಈ ಕೆಳಗಿನಂತಿದೆ.

(ಮಾಹಿತಿ ಮೂಲ: ಇಂಡಿಯನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್)

107) ಗುರಿ: ವೈದ್ಯಕೀಯ, ನರ್ಸಿಂಗ್, ದಂತ ವೈದ್ಯಕೀಯ, ಫಾರ್ಮಸಿ ಮಂಡಳಿಗಳ ಆಡಳಿತದಲ್ಲಿ ಸುಧಾರಣೆ.
ಸಾಧನೆ: 2019 ಆಗಸ್ಟ್ ತಿಂಗಳಲ್ಲಿ ರಾಷ್ಟ್ರಪತಿಗಳ ಅಂಕಿತದೊಂದಿಗೆ ರಾಷ್ಟ್ರೀಯ ವೈದ್ಯಕೀಯ ಕಮಿಷನ್ ಕಾಯಿದೆ 2019 ಜಾರಿಗೆ ಬಂದಿದೆ.

108) ಗುರಿ: ಸಮಗ್ರ ವೈದ್ಯಕೀಯ ವ್ಯವಸ್ಥೆಗೆ ಪ್ರೋತ್ಸಾಹ.
ಸಾಧನೆ: ವಿಭಿನ್ನ ಚಿಕಿತ್ಸಾ ಪದ್ಧತಿಗಳನ್ನು ಒಟ್ಟುಗೂಡಿಸಿ ಒಂದು ಸಮಗ್ರ ವೈದ್ಯಕೀಯ ವ್ಯವಸ್ಥೆಯನ್ನು ತರುವ ಚಿಂತನೆ ಸರ್ಕಾರದ ಮುಂದಿದೆ. ಪ್ರಧಾನಮಂತ್ರಿಗಳೂ ಈ ಬಗ್ಗೆ ತಮ್ಮ ಭಾಷಣಗಳಲ್ಲಿ ಹೇಳಿದ್ದಿದೆ.

109) ಗುರಿ: ರಾಜ್ಯಗಳಲ್ಲಿ ಆರೋಗ್ಯಕ್ಕಾಗಿ ಮಾನವ ಸಂಪನ್ಮೂಲ (HRH)
ಸಾಧನೆ: 2019ರ ಒಳಗೆ ಆರೋಗ್ಯ ಮಾನವ ಸಂಪನ್ಮೂಲಗಳ ರಿಯಲ್ ಟೈಮ್ ಡೇಟಾ ಹೊಂದುವ ವ್ಯವಸ್ಥೆ ಆಗಬೇಕೆಂಬ ಉದ್ದೇಶ ಇತ್ತು. ಆದರೆ ಅದು ಇನ್ನೂ ಚಿಂತನೆಯ ಹಂತದಲ್ಲೇ ಉಳಿದಿದೆ.

ಸಾರ್ವತ್ರಿಕ ಆರೋಗ್ಯ ವಿಮೆ

110) ಗುರಿ: PM-JAY ಪ್ಲಾಟ್ಫಾರ್ಮ್ ಮೂಲಕ ದೇಶದ 75% ಜನಸಂಖ್ಯೆಗೆ ವಿಮಾ ರಕ್ಷಣೆ ನೀಡುವುದು.
ಸಾಧನೆ: ಮಾರ್ಚ್ 2018ರಲ್ಲಿ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ (AB-PMJAY) ಆರಂಭಿಸಿದ್ದು, ಅದರ ಲಾಭವನ್ನು ಈಗ ಅಂದಾಜು 50 ಕೋಟಿ ಜನ ಪಡೆಯುತ್ತಿದ್ದಾರೆ. ಅಂದರೆ ಈ ವಿಮಾರಕ್ಷಣೆ ಇನ್ನೂ 30-40% ಜನರನ್ನು ಮಾತ್ರ ತಲುಪಿದೆ.

111) ಗುರಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು. ಜಿಲ್ಲಾಸ್ಪತ್ರೆಗಳ
ರ್‍ಯಾಂಕಿಂಗ್‌ಅನ್ನು ಸಾಂಸ್ಥೀಕರಿಸುವುದು.
ಸಾಧನೆ: ದೇಶದ ಸಾರ್ವಜನಿಕ ಆರೋಗ್ಯ ಗುಣಮಟ್ಟದ ಬಗ್ಗೆ ಸೂಚ್ಯಂಕಗಳನ್ನು (IPHS ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟಾಂಡರ್ಡ್ಸ್) 2007ರಲ್ಲಿ ಸಿದ್ಧಪಡಿಸಲಾಗಿದ್ದು, ಅದನ್ನು 2012ರಲ್ಲಿ ಪರಿಷ್ಕರಿಸಲಾಗಿದೆ. ಇನ್ನುಳಿದಂತೆ ಸಂಗತಿಗಳು ಚಿಂತನೆಯ ಹಂತದಲ್ಲೇ ಇವೆ.

112) ಗುರಿ: ಆಸ್ಪತ್ರೆಗಳ ಎಂಪ್ಯಾನೆಲ್‌ಮೆಂಟಿಗೆ ಪ್ರೋತ್ಸಾಹಗಳನ್ನು ಪ್ರಕಟಿಸುವ ಮೂಲಕ ಕೊರತೆ ಇರುವ ಸ್ಥಳಗಳಲ್ಲಿ ಖಾಸಗಿ ಹೂಡಿಕೆಗೆ ಪ್ರೇರಣೆ ನೀಡುವುದು.
ಸಾಧನೆ: ಸರ್ಕಾರಿ ವೈದ್ಯರಿಗೆ ಅರ್ಧ ಸಂಬಳ ಇನ್ನರ್ಧ ಗುರಿ ಆಧರಿತ ಪ್ರೋತ್ಸಾಹಧನ ಆದಾಯದ ವ್ಯವಸ್ಥೆ (ಬ್ಲೆಂಡೆಡ್ ಕ್ಯಾಪಿಟೇಷನ್ ಮೋಡ್) ಇನ್ನೂ ಚಿಂತನೆಯ ಹಂತದಲ್ಲಿದೆ. ಜಿಲ್ಲಾಸ್ಪತ್ರೆಗಳ ಖಾಸಗೀಕರಣದ ಪ್ರಕ್ರಿಯೆಗೆ ಅಲ್ಲಲ್ಲಿ ಚಾಲನೆ ಕೊಡಲಾಗಿದೆ.

113) ಗುರಿ: ಆದ್ಯತೆಯ ರೋಗ ಕ್ಷೇತ್ರಗಳಲ್ಲಿ ಸಂಶೋಧನೆಗೆ ಕನ್ಸಾರ್ಟಿಯಂಗಳನ್ನು ರೂಪಿಸುವುದು.
ಸಾಧನೆ: ದೇಶದಾದ್ಯಂತ ಕನಿಷ್ಟ 20 ಸಂಶೋಧನಾ ಕೇಂದ್ರಗಳನ್ನು ಗುರುತಿಸಿ, ಅಲ್ಲಿ ಪ್ರತಿವರ್ಷ ಕನಿಷ್ಟ 500 ವೈದ್ಯರಿಗೆ ತರಬೇತಿ ಸಿಗುವಂತೆ ನೋಡಿಕೊಳ್ಳುವುದು; ಪ್ರತೀ ರಾಜ್ಯದಲ್ಲಿ ಕನಿಷ್ಟ ಒಂದು ಮಾದರಿ ಗ್ರಾಮೀಣ ಆರೋಗ್ಯ ಸಂಶೋಧನಾ ಕೇಂದ್ರ ಸ್ಥಾಪಿಸುವುದು; ಪ್ರತೀ ವರ್ಷ ಕನಿಷ್ಟ 15 ಲಕ್ಷ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಇರುವ ಪ್ರಯೋಗಾಲಯ ಜಾಲವನ್ನು ಏರ್ಪಡಿಸುವುದೇ ಮೊದಲಾದ ಚಿಂತನೆಗಳು ಇನ್ನೂ ಕಾಗದದಲ್ಲೇ ಉಳಿದಿವೆ. ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಪ್ರಯೋಗಾಲಯ ಸ್ಥಾಪನೆಯಂತಹ ಕೆಲಸಗಳು ವೇಗ ಪಡೆದುಕೊಂಡವು.

ಲಿಂಗ ತಾರತಮ್ಯ

114) ಗುರಿ: ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯ (FLFP) ದರವನ್ನು ಕನಿಷ್ಟ 30% ಕ್ಕೆ ಏರಿಸುವುದು, ಅಡ್ಡಿ-ತಡೆಗಳಿಲ್ಲದ ದುಡಿಮೆಯ ವಾತಾವರಣ ನಿರ್ಮಿಸುವುದು.
ಸಾಧನೆ: ಭಾರತದಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ತೀವ್ರ ಇಳಿತ ಕಾಣಿಸಿಕೊಂಡಿದೆ.

(ಮಾಹಿತಿ ಮೂಲ: ವಿಶ್ವ ಬ್ಯಾಂಕಿನ ILO ಡೇಟಾಬೇಸ್)

115) ಗುರಿ: ಮಹಿಳೆಯರಿಗೆ ತಾರತಮ್ಯ ನಿವಾರಿಸಲು ಕಾನೂನಿನ ಚೌಕಟ್ಟನ್ನು ಬಲಪಡಿಸುವುದು.
ಸಾಧನೆ: 1961ರ ತಾಯ್ತನದ ಕಾಯಿದೆ ತಿದ್ದುಪಡಿ ಮಾಡಿ, ತಾಯ್ತನದ (ತಿದ್ದುಪಡಿ) ಕಾಯಿದೆ 2016 ಜಾರಿಗೆ ಬಂದಿದೆ.

ಲೈಂಗಿಕ ಕಿರುಕುಳದ ವಿರುದ್ಧ The Sexual Harassment of Women at Work Place (Prevention, Prohibition and Redressal) Act 2013 ಈಗಾಗಲೇ ಜಾರಿಯಲ್ಲಿದೆ

116) ಗುರಿ: ಲಿಂಗವಾರು ಡೇಟಾ ಪ್ರತ್ಯೇಕಿಸಿ ನೋಡುವುದು ಮತ್ತು ಪ್ರಮುಖ ಮಾನದಂಡಗಳನ್ನಾಧರಿಸಿ ರಾಜ್ಯಗಳಿಗೆ ರ್‍ಯಾಂಕಿಂಗ್ ನೀಡುವುದು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ. ಈ ಗುರಿ ತಲುಪುವ ಗೋಲ್‌ಪೋಸ್ಟ್‌ಅನ್ನು 2030ಕ್ಕೆ ಮುಂದೂಡಲಾಗಿದೆ (ಮಾಹಿತಿ ಮೂಲ: PIB Release ID: 1679131)

117) ಗುರಿ: ಹೊಸದಾಗಿ ರೂಪುಗೊಳ್ಳುತ್ತಿರುವ ನಗರಗಳಲ್ಲಿ, ಮಹಾನಗರಗಳಲ್ಲಿ ಲಿಂಗಸ್ನೇಹಿ ಸೌಲಭ್ಯಗಳನ್ನು ಒದಗಿಸುವುದು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ.

ಸಾಮಾಜಿಕ ಒಳಗೊಳ್ಳುವಿಕೆ-1

118) ಗುರಿ: ಆರ್ಥಿಕ ಅಭಿವೃದ್ಧಿಯಲ್ಲಿ ಹಿರಿಯ ನಾಗರಿಕರು, ದೈಹಿಕ ವೈಕಲ್ಯಗಳಿರುವವರು ಮತ್ತು ಟ್ರಾನ್ಸ್ ಲಿಂಗಿಗಳಿಗೆ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವುದು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ.

119) ಗುರಿ: ವಯಸ್ಕರಿಗೆ ರಾಷ್ಟ್ರೀಯ ನೀತಿಯಲ್ಲಿ ಬದಲಾವಣೆ ಮತ್ತು ವಯಸ್ಕರು ವೃದ್ಧಾಪ್ಯವನ್ನು ತಮ್ಮ ಮನೆಗಳಲ್ಲೇ ಕಳೆಯಲು ಒತ್ತು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ. 1999ರ ವಯಸ್ಕರ ರಾಷ್ಟ್ರೀಯ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

120) ಗುರಿ: ದೈಹಿಕ ವೈಕಲ್ಯಗಳಿರುವವರ ಪ್ರತ್ಯೇಕಿತ ಡೇಟಾ ಸಿದ್ಧಪಡಿಸುವುದು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ.

121) ಗುರಿ: ಸರ್ಕಾರಿ, ಸರ್ಕಾರೇತರ ದಾಖಲೆಗಳಲ್ಲಿ ಟ್ರಾನ್ಸ್ ಲಿಂಗಿಗಳನ್ನು ಗುರುತಿಸುವ ಅವಕಾಶ ಕಲ್ಪಿಸುವುದು.
ಸಾಧನೆ: ಟ್ರಾನ್ಸ್ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ 2019ಕ್ಕೆ 2019ರ ಡಿಸೆಂಬರಿನಲ್ಲಿ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಸಾಮಾಜಿಕ ಒಳಗೊಳ್ಳುವಿಕೆ-2

122) ಗುರಿ: SC, ST, OBC, DNT, NT, SNT ಮತ್ತು ಅಲ್ಪಸಂಖ್ಯಾತ ವರ್ಗಗಳ ಅಭಿವೃದ್ಧಿಗೆ ಧನಾತ್ಮಕ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಿ ವೇಗ ನೀಡುವುದು
ಸಾಧನೆ: ಉದ್ದೇಶಿತ ಬೇಸ್‌ಲೈನ್ ಸರ್ವೇ, ಸೋಷಿಯಲ್ ಆಡಿಟ್, ನ್ಯಾಷನಲ್ ಟ್ರೈಬಲ್ ಇನ್‌ಸ್ಟಿಟ್ಯೂಟ್ ರಚನೆ, ಶಾಶ್ವತ ಕಮಿಷನ್‌ಗಳ ರಚನೆ – ಇಂತಹ ನಿರ್ದಿಷ್ಟವಾಗಿ ಸೂಚಿಸಿದ್ದ ಯೋಜನಗೆಳಲ್ಲಿ ಹೆಚ್ಚಿನ ಬೆಳವಣಿಗೆಗಳು ಆಗಿಲ್ಲ.

123) ಗುರಿ: ನಿರ್ದಿಷ್ಟ ಸಮುದಾಯಕ್ಕೆ ಸೂಕ್ತವೆನ್ನಿಸುವ ರೀತಿಯಲ್ಲಿ ಯೋಜನೆಗಳನ್ನು ವಿನ್ಯಾಸ ಮಾಡುವುದು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ.

124) ಗುರಿ: ಇನ್ನೂ ಇಲ್ಲದಿರುವಲ್ಲಿ ವಸತಿಶಾಲೆಗಳ ನಿರ್ಮಾಣ ಮತ್ತು ಅಲ್ಲಿ ವೃತ್ತಿ ತರಬೇತಿಗೆ ವ್ಯವಸ್ಥೆ.
ಸಾಧನೆ: ಏಕಲವ್ಯ ಮಾದರಿ ವಸತಿ ಶಾಲೆಯನ್ನು (EMRS) 2021 ಜುಲೈ ಕೊನೆಯಲ್ಲಿ ಪ್ರಕಟಿಸಲಾಗಿದೆ. ಈಗಾಗಲೇ 367 ಅಂತಹ ಶಾಲೆಗಳು ದೇಶದಲ್ಲಿ ಕಾರ್ಯಾಚರಣೆ ಆರಂಭಿಸಿವೆ (ಮಾಹಿತಿ ಮೂಲ: PIB Release ID: 1737786)

125) ಗುರಿ: ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಕಾರ್ಯಗತಗೊಳ್ಳುತ್ತಿರುವ ಹೆಚ್ಚಿನ ಯೋಜನೆಗಳೂ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ (MoMA) ಬಳಿ ಇದ್ದು, ಅದನ್ನು ಅದಕ್ಕೆ ಸಂಬಂಧಿತ ಸಚಿವಾಲಯಗಳಿಗೆ ಒಪ್ಪಿಸುವುದು. ಆ ಸಚಿವಾಲಯಗಳು ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ನಿಗದಿ ಮಾಡುವಾಗ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸುವುದು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ.

ಆಸ್ಪಿರೇಷನಲ್ ಜಿಲ್ಲೆಗಳು

126) ಗುರಿ: ಅಭಿವೃದ್ಧಿಯ ಮಾನದಂಡಗಳಲ್ಲಿ ಹಿಂದುಳಿದಿರುವ 115 ಜಿಲ್ಲೆಗಳನ್ನು ಮೇಲೆತ್ತುವುದು.
ಸಾಧನೆ: 117 ಆಸ್ಪಿರೇಷನಲ್ ಜಿಲ್ಲೆಗಳನ್ನು ಗುರುತಿಸಿ, 2018ರ ಜನವರಿಯಲ್ಲಿ ಆರಂಭಿಸಿದ ಆಸ್ಪಿರೇಷನಲ್ ಡಿಸ್ಟ್ರಿಕ್ಟ್ ಪ್ರೋಗ್ರಾಂ (ADP) ಅನ್ವಯ ವಿವಿಧ ಅಭಿವೃದ್ಧಿ ಚಟುವಟಿಕೆಗಳು ಇನ್ನೂ ನಡೆದಿವೆ. ಇದನ್ನು ಅಭಿವೃದ್ಧಿಯ ಅತ್ಯುತ್ತಮ ಮಾಡೆಲ್ ಎಂದು UNDP ಶ್ಲಾಘಿಸಿದೆ ಎಂದು ಸರ್ಕಾರ ಹೇಳಿದೆ. (ಮಾಹಿತಿ ಮೂಲ: PIB Release ID: 1730344)

127) ಗುರಿ: ಅಭಿವೃದ್ಧಿಯನ್ನು ಜನಸಮುದಾಯದ ಚಳವಳಿ ಆಗಿ ರೂಪಿಸುವ ಮೂಲಕ ಧನಾತ್ಮಕ ನರೇಟಿವ್ ಕಟ್ಟುವುದು.
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ.

128) ಗುರಿ: ಡೇಟಾ ಬಳಸಿ ಮಾಹಿತಿಯುತ ನಿರ್ಧಾರಗಳು ಮತ್ತು ಜಿಲ್ಲೆಗಳ ನಡುವೆ ಸ್ಪರ್ಧಾತ್ಮಕ ಮನೋಭಾವ ಏರ್ಪಡಿಸುವುದು.
ಸಾಧನೆ: 2018ರಿಂದೀಚೆಗೆ ನೀತಿ ಆಯೋಗವು ಪ್ರತೀವರ್ಷ 49 ಕಾರ್ಯ ಸಾಮರ್ಥ್ಯ ಸೂಚಕಗಳು ಮತ್ತು 81 ಡೇಟಾ ಅಂಶಗಳನ್ನಾಧರಿಸಿ, ಆಸ್ಪಿರೇಷನಲ್ ಜಿಲ್ಲೆಗಳಿಗೆ ರ್‍ಯಾಂಕಿಂಗ್ ಬಿಡುಗಡೆ ಮಾಡುತ್ತಿದೆ.

129) ಗುರಿ: ಕೇಂದ್ರ-ರಾಜ್ಯ-ಜಿಲ್ಲೆಗಳ ನಡುವೆ ತಂಡವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸುವುದು.
ಸಾಧನೆ: ರಾಜ್ಯಗಳಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ಅಭಿವೃದ್ಧಿ ಕಾರ್ಯಕ್ರಮದ ಸುಗಮ ಸಂಯೋಜನೆಗಾಗಿ ’ಪ್ರಭಾರಿ’ಗಳನ್ನಾಗಿ ಪ್ರತೀ ಜಿಲ್ಲೆಗೆ ನೇಮಕ ಮಾಡುವ ಕೆಲಸ ನಡೆದಿದೆ.

ಈಶಾನ್ಯದ ರಾಜ್ಯಗಳು

130) ಗುರಿ: ವಾಣಿಜ್ಯ ವ್ಯವಹಾರ ಹೆಚ್ಚಳಕ್ಕೆ ಭೌತಿಕ ಸಂಪರ್ಕಕ್ಕಾಗಿ ಜಲಮಾರ್ಗಗಳ ನಿರ್ಮಾಣ, ಆರ್ಥಿಕ ಒಳಗೊಳ್ಳುವಿಕೆ.
ಸಾಧನೆ: ಬ್ರಹ್ಮಪುತ್ರ ನದಿಗೆ 891ಕಿಮೀ, ಬಾರಾಕ್ ನದಿಗೆ 127ಕಿಮೀ ರಾಷ್ಟ್ರೀಯ ಜಲಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

131) ಗುರಿ: ಪ್ರತೀ ಈಶಾನ್ಯ ರಾಜ್ಯಕ್ಕೆ ಅಭಿವೃದ್ಧಿಯ ನೀಲಿನಕಾಶೆ ರಚನೆಗೆ ಪ್ರೋತ್ಸಾಹ.
ಸಾಧನೆ: ಈಶಾನ್ಯ ರಾಜ್ಯಗಳಿಗೆ ಈಶಾನ್ಯದ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ (NESIDS) ಮೂಲ ಸೌಕರ್ಯಗಳಿಗೆ ಕಳೆದ ಐದು ವರ್ಷಗಳಲ್ಲಿ 2452.62 ಕೊಟಿ ರೂ.ಗಳ 99 ಯೋಜನೆಗಳನ್ನು ಮಂಜೂರು ಮಾಡಲಾಗಿದೆ. (ಮಾಹಿತಿ ಮೂಲ: PIB Release ID: 1742776)

132) ಗುರಿ: ಕನೆಕ್ಟಿವಿಟಿ ಸಮಸ್ಯೆಗಳ ಪರಿಹಾರ; ನೆರೆಹೊರೆಯ ಜೊತೆ ಟ್ರಾನ್ಸಿಟ್ ಒಪ್ಪಂದಗಳು.
ಸಾಧನೆ: ಈಶಾನ್ಯದ ರಾಜ್ಯಗಳ ಜೊತೆ ಸಂಪರ್ಕಕ್ಕಾಗಿ ವಾಯುಮಾರ್ಗ, ಜಲಮಾರ್ಗ, ರಸ್ತೆ ಮಾರ್ಗ ಮತ್ತು ರೈಲು ಮಾರ್ಗಗಳ ಸಂಪರ್ಕದ ಯೋಜನೆಗಳು ವಿವಿಧ ಹಂತದಲ್ಲಿವೆ. ಇಂಟರ್ನೆಟ್ ಸಂಪರ್ಕಕ್ಕಾಗಿ ಕೂಡ ಯೋಜನೆಯನ್ನು ಮಂಜೂರು ಮಾಡಲಾಗಿದೆ.

133) ಗುರಿ: ಇಕೊ ಟೂರಿಸಂ, ಸಾಹಸ ಟೂರಿಸಂಗಳಿಗೆ ಪ್ರೋತ್ಸಾಹ, ನೀರಾವರಿ ಯೋಜನೆಗಳನ್ನು ಕ್ಷಿಪ್ರವಾಗಿ ಪೂರೈಸುವುದು.
ಸಾಧನೆ: ಡೆಸ್ಟಿನೇಶನ್ ನಾರ್ತ್ ಈಸ್ಟ್ -2020 ಕಾರ್ಯಕ್ರಮವನ್ನು ಸೆಪ್ಟಂಬರ್ 27, 2020ರಂದು ಈಶಾನ್ಯ ರಾಜ್ಯಗಳ ಮಂಡಳಿಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವರು ಉದ್ಘಾಟಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ನೆರೆ ನಿಯಂತ್ರಣ ಮತ್ತು ನೀರಾವರಿಗಾಗಿ 162 ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಕಾನೂನು, ನ್ಯಾಯ ಮತ್ತು ಪೊಲೀಸ್ ಸುಧಾರಣೆ

134) ಗುರಿ: ಜನರ ಸುರಕ್ಷೆ ಮತ್ತು ಪರಿಣಾಮಕಾರಿ ನ್ಯಾಯಾಂಗ ವ್ಯವಸ್ಥೆಗೆ ಆದ್ಯತೆ.
ಸಾಧನೆ: ಕೇಂದ್ರ ಸರ್ಕಾರ ಈಗಾಗಲೇ ಹಳೆಯ ಮತ್ತು ಅಪ್ರಸ್ತುತವಾದ 1420 ಕಾನೂನುಗಳನ್ನು ರದ್ದುಪಡಿಸಿದೆ. ಸಿವಿಲ್ ಪ್ರೊಸೀಜರ್ ಕೋಡ್ 1908 ಮರುಪರಿಶೀಲನೆ ಮಾಡುವ ಉದ್ದೇಶ ಇತ್ತು. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಲಾಕ್‌ ಡೌನ್

135) ಗುರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಕಾನೂನುಗಳ ರಿಪಾಸಿಟರಿ ರಚನೆ.
ಸಾಧನೆ: ಕಾನೂನುಗಳ ರಿಪಾಸಿಟರಿ ಇನ್ನೂ ಚಿಂತನೆಯ ಹಂತದಲ್ಲಿದೆ.

136) ಗುರಿ: ಕೆಲಸದ ಹೊರೆಯನ್ನು (2.7 ಕೋಟಿ ಬಾಕಿ ಪ್ರಕರಣಗಳು) ರೆಗ್ಯುಲರ್ ನ್ಯಾಯಾಲಯಗಳಿಂದ ಹೊರ ಹಂಚುವ ಮೂಲಕ ಹಳೆ ಪ್ರಕರಣಗಳ ಹೊರೆ ಇಳಿಸುವುದು.
ಸಾಧನೆ: ದೇಶದಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆ ಈ ಕೆಳಗಿನಂತಿದೆ (ಮಾಹಿತಿ ಮೂಲ: ನ್ಯಾಷನಲ್ ಜುಡಿಷಿಯಲ್ ಡೇಟಾ ಗ್ರಿಡ್ನಲ್ಲಿ ದಿನಾಂಕ 05-09-2021 ರಂದು).

ಒಟ್ಟು 40170251

137) ಗುರಿ: ಸಿಬ್ಬಂದಿ ಕೌಶಲ ಹೆಚ್ಚಳಕ್ಕೆ ಕ್ರಮ ಮತ್ತು ಮೂಲ ಕೆಲಸಗಳಲ್ಲದವನ್ನು ಹೊರಗುತ್ತಿಗೆ ನೀಡುವುದು.
ಸಾಧನೆ: ವಾಣಿಜ್ಯ ನ್ಯಾಯಾಲಯಗಳ ಕಾಯಿದೆ, 2015ನ್ನು 2016ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ದಿಲ್ಲಿ, ಮುಂಬಯಿ, ಕೋಲ್ಕತಾ ಮತ್ತು ಬೆಂಗಳೂರುಗಳಲ್ಲಿ ಡೆಡಿಕೇಟೆಡ್ ವಾಣಿಜ್ಯ ನ್ಯಾಯಾಲಯಗಳನ್ನು ತೆರೆಯಲಾಗಿದೆ. ಫೊರೆನ್ಸಿಕ್, ಬಾಲಿಸ್ಟಿಕ್, ನಾರ್ಕೋಟಿಕ್, ಸೈಕೊಟ್ರೋಪಿಕ್ ತಪಾಸಣೆಗಳನ್ನು ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ವರ್ಗಾಯಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸಿವಿಲ್ ಸರ್ವೀಸ್ ಸುಧಾರಣೆ

138) ಗುರಿ: ಸಿವಿಲ್ ಸರ್ವೀಸ್‌ಗಳಿಗೆ ಪರಿಷ್ಕೃತ ನೇಮಕಾತಿ, ತರಬೇತಿ, ಕೆಲಸದ ಮೌಲ್ಯಮಾಪನ ವ್ಯವಸ್ಥೆ.
ಸಾಧನೆ: National Programme for Civil Services Capacity Building (NPCSCB) ಆರಂಭಿಸಲಾಗಿದೆ. ಖಾಸಗಿ ರಂಗದಿಂದ ನೇಮಕಾತಿ ಮಾಡಿಕೊಳ್ಳಲು ’ಲ್ಯಾಟರಲ್ ಎಂಟ್ರಿ’ಗೆ ಅವಕಾಶ ನೀಡಲಾಗಿದೆ. ಬಿಡಿಬಿಡಿಯಾಗಿ ಹಲವು ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ.

139) ಗುರಿ: ಅಧಿಕಾರಿ ಆಧರಿತ ಸಂಸ್ಕೃತಿಗೆ ಪ್ರೋತ್ಸಾಹ ಮತ್ತು ಅಧಿಕಾರಿಗಳ ಸಂಖ್ಯೆ ಹೆಚ್ಚಳ.
ಸಾಧನೆ: 1.1.2020 ರಂದು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸ್ಥಾನ ಮತ್ತು ಖಾಲಿ ಇರುವ ಜಾಗಗಳು ಹೀಗಿವೆ.

ವಿಭಾಗ ಹುದ್ದೆಗಳು ಖಾಲಿ ಇರುವುದು
ಐ ಎ ಎಸ್ 6715 1510
ಐ ಪಿ ಎಸ್ 4982 908

(ಮಾಹಿತಿ ಮೂಲ: PIB Release ID: 1707273)

140) ಗುರಿ: ಫಲಿತಾಂಶ ಆಧರಿತ ಗುರಿಗಳಿರುವ ತರಬೇತಿ ವ್ಯವಸ್ಥೆ ರೂಪಿಸುವುದು.
ಸಾಧನೆ: ಕೇಂದ್ರ ಸರ್ಕಾರವು ಸಿವಿಲ್ ಸರ್ವೀಸ್‌ಗಳ ಸಾಮರ್ಥ್ಯ ವೃದ್ಧಿಗಾಗಿ ’ಮಿಷನ್ ಕರ್ಮಯೋಗಿ’ ಯೋಜನೆಯನ್ನು 2020 ಸೆಪ್ಟಂಬರ್‌ನಲ್ಲಿ ಆರಂಭಿಸಿದೆ.

141) ಗುರಿ: ವಾರ್ಷಿಕ ಗೌಪ್ಯ ವರದಿಯ ಬದಲು ಸ್ಟೇಕ್ ಹೋಲ್ಡರ್‌ಗಳ ಅಭಿಪ್ರಾಯ ಆಧರಿತ ವ್ಯವಸ್ಥೆ.
ಸಾಧನೆ: ಇನ್ನೂ ಚಿಂತನೆಗಳ ಹಂತದಲ್ಲಿದೆ.

ನಗರಾಡಳಿತ

142) ಗುರಿ: ನಗರಗಳನ್ನು ಆರ್ಥಿಕವಾಗಿ ಚಟುವಟಿಕೆಯ ಮತ್ತು ಸುಸ್ಥಿರ ಪರಿಸರದ ಬದುಕುವ ಸ್ಥಳಗಳಾಗಿ ರೂಪಿಸುವುದು.
ಸಾಧನೆ: ವಿವಿಧ ಇಲಾಖೆಗಳ ಮೂಲಕ ಹಲವು ಕಾರ್ಯಕ್ರಮಗಳು ಬಿಡಿಬಿಡಿಯಾಗಿ ಆರಂಭಗೊಂಡಿವೆ.

143) ಗುರಿ: ಪ್ರತೀ ಜಿಲ್ಲೆಯನ್ನು ಅನನ್ಯ ಆರ್ಥಿಕ ಕೇಂದ್ರವಾಗಿ ರೂಪಿಸುವುದು ಮತ್ತು ತ್ರೈಮಾಸಿಕ ವಿಶ್ಲೇಷಣೆ ನಡೆಸುವುದು.
ಸಾಧನೆ: ನಿರ್ದಿಷ್ಟವಾಗಿ ಯಾವುದೇ ಚಟುವಟಿಕೆ ಆಗಿಲ್ಲ. ಬಿಡಿಬಿಡಿಯಾಗಿ ಚಟುವಟಿಕೆಗಳು ನಡೆದಿವೆ.

144) ಗುರಿ: ನಗರಾಡಳಿತಕ್ಕೆ ಹೊಸ ಚೌಕಟ್ಟಿನ ನಿರ್ಮಾಣ
ಸಾಧನೆ: ನಿರ್ದಿಷ್ಟವಾಗಿ ಯಾವುದೇ ಚಟುವಟಿಕೆ ಆಗಿಲ್ಲ. ಬಿಡಿಬಿಡಿಯಾಗಿ ಚಟುವಟಿಕೆಗಳು ನಡೆದಿವೆ. ನ್ಯಾಷನಲ್ ಅರ್ಬನ್ ಡಿಜಿಟಲ್ ಮಿಷನ್ (NUDM), ಇಂಡಿಯಾ ಅರ್ಬನ್ ಡೇಟಾ ಎಕ್ಸ್ಚೇಂಜ್ (IUDX), ಇತ್ಯಾದಿಗಳು ಆರಂಭಗೊಂಡಿವೆ.

145) ಗುರಿ: ನಗರಗಳ ಭೌಗೋಳಿಕ ಯೋಜನೆಗೆ ಹೊಸ ರಾಷ್ಟ್ರೀಯ ಆಧುನಿಕ ಚೌಕಟ್ಟು.
ಸಾಧನೆ: ಜಿಯೊ ಸ್ಪೇಷಿಯಲ್ ಮ್ಯಾನೇಜ್ಮೆಂಟ್ ಇನ್ಫಾರ್ಮೇಷನ್ ಸಿಸ್ಟಮ್ (GMIS) ಆರಂಭಿಸಲಾಗಿದ್ದು, ಸ್ಮಾರ್ಟ್ ಸಿಟಿ ಮಿಷನ್‌ಗಳಿಗೆ ಹೊಸರೂಪ ಕೊಡುವ ಕೆಲಸ ನಡೆದಿದೆ

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-4

ಇದನ್ನೂ ಓದಿ: ಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1

ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-2

ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-3

LEAVE A REPLY

Please enter your comment!
Please enter your name here