Homeಅಂಕಣಗಳುಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

ಬಹುಜನ ಭಾರತ; ದಲಿತ ನಾಗರಾಜುವಿನ ಹತ್ಯೆ ಹಿಂದೆ ಹಲವು ಪ್ರಶ್ನೆಗಳಿವೆ..

- Advertisement -
- Advertisement -

ಮೊನ್ನೆ ಹೈದರಾಬಾದಿನ ಬೀದಿಯೊಂದರಲ್ಲಿ ದಲಿತ ಯುವಕ ನಾಗರಾಜುವನ್ನು ಮತಾಂಧ ಮುಸ್ಲಿಮನೊಬ್ಬ ಭೀಕರವಾಗಿ ಕೊಂದುಹಾಕಿದ. ಹದಿನೈದು ನಿಮಿಷಗಳ ಕಾಲ ನಡೆದ ಈ ಹಲ್ಲೆಯಿದು. ಕಬ್ಬಿಣದ ಸರಳಿನಿಂದ ಬಡಿದು ತಲೆ ಒಡೆಯಲಾಯಿತು. ಈ ಅಮಾನುಷ ಹತ್ಯೆ ಜರುಗಿದ್ದು ಧರ್ಮಕ್ಕಿಂತ ಹೆಚ್ಚಾಗಿ ಜಾತಿಯ ಕಾರಣಕ್ಕೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.

ಶಾಲಾದಿನಗಳಿಂದಲೂ ಪ್ರೀತಿಸುತ್ತಿದ್ದ ಅಶ್ರಿನ್ ಸುಲ್ತಾನಾ ಮತ್ತು ನಾಗರಾಜು ವಿವಾಹವಾಗಿ ಮೂರು ತಿಂಗಳು ಕಳೆದಿತ್ತು. ಈ ಮದುವೆಗೆ ಸುಲ್ತಾನಾ ಮನೆಯವರ ವಿರೋಧವಿತ್ತು. ನಾಗರಾಜು ದಲಿತ ಕುಲದಲ್ಲಿ ಹುಟ್ಟಿದ್ದೇ ಕೊಲ್ಲುವ ಕಡು ಹಗೆಗೆ ಕಾರಣ. ತನ್ನ ಪ್ರೀತಿಯನ್ನು ದಕ್ಕಿಸಿಕೊಂಡು ಬಾಳಲು ಬಯಸಿದ್ದ ನಾಗರಾಜು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಲು ಸಿದ್ಧನಿದ್ದ. ವಿವಾಹಕ್ಕೆ ಮುನ್ನ ಈ ಇರಾದೆಯನ್ನು ಅಶ್ರಿನ್ ಕುಟುಂಬಕ್ಕೆ ತಿಳಿಯಪಡಿಸಿ ಅವರ ಸಮ್ಮತಿ ಬಯಸಿದ್ದ. ಮತಾಂತರ ಹೊಂದಿದರೆ ಸಾಮಾನ್ಯವಾಗಿ ಮದುವೆಗೆ ಸಮ್ಮತಿ ದೊರೆತ ಪ್ರಕರಣಗಳು ಸಾಕಷ್ಟಿವೆ. ಆದರೆ ’ಹೊಲೆಯ’ನೊಂದಿಗೆ ರಕ್ತಸಂಬಂಧ ಬೆಳೆಸಲು ಅಶ್ರಿನ್ ಸೋದರ ಸಿದ್ಧನಿರಲಿಲ್ಲ. ಕುಟುಂಬದ-ಕುಲದ ’ಗರಿಮೆಗೆ ಕಳಂಕ’ ತಂದ ತಂಗಿಯನ್ನು ನೇಣುಹಾಕಿ ಕೊಲ್ಲಲು ಮದುವೆಗೆ ಮುಂಚೆಯೇ ಎರಡು ಸಲ ಪ್ರಯತ್ನಿಸಿದ್ದ. ಪರಾರಿಯಾಗಿ ಆರ್ಯಸಮಾಜ ಮಂದಿರದಲ್ಲಿ ಮದುವೆಯಾಗಿತ್ತು ಈ ಜೋಡಿ. ಆದರೆ ಪ್ರಾಣಾಪಾಯ ತಪ್ಪಿರಲಿಲ್ಲ. ಸೋದರ ಸಾಯಹೊಡೆಯುತ್ತಾನೆಂಬ ಎಚ್ಚರಿಕೆಯನ್ನು ಖುದ್ದು ಅಶ್ರಿನ್ ತಾಯಿಯೇ ನೀಡಿದ್ದಳು. ತಲೆಮರೆಸಿಕೊಂಡಿದ್ದ ಈ ಜೋಡಿ ತಮ್ಮ ಮೊಬೈಲುಗಳ ಸಿಮ್ ಕಾರ್ಡುಗಳನ್ನು ಕೂಡ ಬದಲಾಯಿಸಿದ್ದರು. ಪೊಲೀಸರಿಂದ ರಕ್ಷಣೆ ಕೋರಿದ್ದರು.

ಅಶ್ರಿನ್ ಕುಟುಂಬ ಸೈಯದ್ ಎಂಬ ಅಘೋಷಿತ ಕುಲೀನ ’ಜಾತಿ’ಗೆ ಸೇರಿದ್ದು. ಮೇಲುಕೀಳು- ಜಾತಿಭೇದವನ್ನು ಇಸ್ಲಾಂ ಬೋಧಿಸುವುದಿಲ್ಲ ನಿಜ. ಆದರೆ ಈ ಧರ್ಮದ ಅನುಯಾಯಿಗಳು ಬಹುತೇಕರು ಈ ತಾರತಮ್ಯವನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಆಚರಿಸುತ್ತಾರೆ. ಹಿಂದುವಿಗೆ ಅಸ್ಪೃಶ್ಯ ಎನಿಸುವ ವ್ಯಕ್ತಿ, ಮುಸಲ್ಮಾನನಿಗೂ ಅಸ್ಪೃಶ್ಯನೇ ಎಂದು ಬಾಬಾಸಾಹೇಬರು ಹೇಳಿದ್ದಾರೆ.

ನಾಗರಾಜು ಒಂದು ವೇಳೆ ದಲಿತನಾಗಿರದೆ ಹಿಂದು ಸವರ್ಣೀಯನಾಗಿದ್ದರೆ ಹತ್ಯೆಗೆ ಈಡಾಗುತ್ತಿದ್ದನೇ ಎಂಬುದಾಗಿ ಎದ್ದಿರುವ ಪ್ರಶ್ನೆ ಅತ್ಯಂತ ಪ್ರಸ್ತುತ. ಇದೇ ರೀತಿ ಹಿಂದು ಸವರ್ಣೀಯನಿಂದ ಹತ್ಯೆಗೀಡಾಗುವ ದಲಿತನ ಪರ ಏಳುವ ದನಿಗಳು ಅತಿ ಕ್ಷೀಣ. ನಾಗರಾಜುವಿನ ಹತ್ಯೆ ಮೂಲಭೂತವಾಗಿ ಜಾತಿಯ ಪ್ರಶ್ನೆ ಎಂಬುದನ್ನು ಆತನ ಪರ ಎದ್ದಿರುವ ಸಹಾನುಭೂತಿಯ ಬಹುಪಾಲು ದನಿಗಳು ಒಪ್ಪಲು ತಯಾರಿಲ್ಲ. ಈ ದನಿಗಳಿಗೆ ಮುಸ್ಲಿಮರನ್ನು ಖಳನಾಯಕರನ್ನಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಏಕೈಕ ಉದ್ದೇಶ. ಈ ಉದ್ದೇಶಕ್ಕೆ ಯಾರು ಒದಗಿ ಬಂದರೂ ಅವರನ್ನು ಬಳಸಿಕೊಂಡೇ ಸಿದ್ಧ.

ಹೆಣ್ಣು ಕುಟುಂಬದ ಆಸ್ತಿಪಾಸ್ತಿ ಎಂಬ ಪುರಾತನ ಪುರುಷಾಧಿಪತ್ಯ ಭಾರತೀಯ ಸಮಾಜದಲ್ಲಿ ಸಿಡಿಲಾಗಿ ಅಬ್ಬರಿಸಿದೆ. ಮಧ್ಯಯುಗದ ಅನಾಗರಿಕ ಮನಸ್ಥಿತಿಯಿದು. ಮನಸು ಬಯಸಿದ ಸಂಗಾತಿಯನ್ನು ಆರಿಸಿಕೊಂಡು ಬದುಕುವ ಸ್ವಾತಂತ್ರ್ಯವನ್ನು ಸಮಾನತೆಯನ್ನು ಆಕೆಗೆ ನಿರಾಕರಿಸಲಾಗಿದೆ. ಲಿಂಗ ತಾರತಮ್ಯದ ಮನುವಾದ, ಪುರುಷಾಧಿಪತ್ಯ, ಜಾತಿವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಹಲವು ಅಂಶಗಳು ಕಲೆತು ಬೆರೆತಿರುವ ಸಂಕೀರ್ಣ ವಿದ್ಯಮಾನವಿದು.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಕಾವೇರಿದ ಚರ್ಚೆ ನಡೆದಿದೆ. ನಾಗರಾಜುವಿಗೆ ನ್ಯಾಯ ಕೇಳುವವರು ಹೆಚ್ಚಿನ ಸಂಖ್ಯೆಯಲ್ಲಿ ಯಾಕಿದ್ದಾರೆಂದರೆ ನಾಗರಾಜುವಿನ ಹಂತಕ ಒಬ್ಬ ಮುಸಲ್ಮಾನ. ಒಬ್ಬ ಹಿಂದು ಬಲಿಷ್ಠ ಜಾತಿಯವನು ನಾಗರಾಜುವನ್ನು ಕೊಂದಿದ್ದರೆ ನ್ಯಾಯ ಕೇಳುವವರೇ ದಿಕ್ಕಿರುತ್ತಿರಲಿಲ್ಲ. ಜಾತಿ ಎಂಬುದು ಸಾಮಾಜಿಕ ಅನಿಷ್ಟ. ಅರಿವು, ಅಧಿಕಾರ, ಆಸ್ತಿಪಾಸ್ತಿ, ಸಂಪನ್ಮೂಲಗಳು, ಘನತೆ ಗೌರವ, ಲೈಂಗಿಕ ದೃಷ್ಟಿಕೋನದ ನಿಯಂತ್ರಣ ಮತ್ತು ವಿತರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪಿಡುಗು.

ಭಾರತೀಯ ಮುಸಲ್ಮಾನರೂ ಈ ಜಾತಿ ಆಧಾರಿತ ಏಣಿಶ್ರೇಣಿ ವ್ಯವಸ್ಥೆಯ ಬಲಿಪಶುಗಳು. ಈ ಶ್ರೇಣಿಯ ತುತ್ತತುದಿಯಲ್ಲಿರುವವರು ಅಶ್ರಫ್ ಮುಸ್ಲಿಮರು. ಸೈಯದ್, ಶೇಖ್, ಮುಘಲ್, ಪಠಾಣ್ ಎಂದು ಕರೆದುಕೊಳ್ಳುವವರು ತಮ್ಮ ಮೂಲ ಪಶ್ಚಿಮ ಅಥವಾ ಮಧ್ಯ ಏಷ್ಯಾ ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ. ಭಾರತದ ಬಲಿಷ್ಠ ಜಾತಿಗಳಿಂದ ಇಸ್ಲಾಮಿಗೆ ಮತಾಂತರ ಹೊಂದಿದವರು ತಮ್ಮನ್ನು ಮುಸ್ಲಿಮ್ ರಜಪೂತ, ತಾಗಾ ಅಥವಾ ತ್ಯಾಗಿ ಮುಸ್ಲಿಮ್, ಗಾಢೆ ಅಥವಾ ಗೌಡ್ ಮುಸ್ಲಿಮರೆಂದು ಹೇಳಿಕೊಳ್ಳುತ್ತಾರೆ. ಸೈಯದ್ ಎಂದು ಕರೆದುಕೊಳ್ಳುವವರು ಹಿಂದು ವರ್ಣವ್ಯವಸ್ಥೆಯ ಬ್ರಾಹ್ಮಣ ಜಾತಿಗೆ ಸರಿಸಮಾನ. ಈ ಅಸಮಾನತೆಯನ್ನು ’ಸೈಯದ್ ವಾದ’ ಎಂದು ಕರೆಯಲಾಗಿದೆ. ಈ ಅಶ್ರಫ್ ಯಜಮಾನಿಕೆಯ ವಿರುದ್ಧ ಕೆಳವರ್ಗದ ಅಜ್ಲಾಫ್ (ಹಿಂದುಳಿದವರು) ಮತ್ತು ಅರ್ಜಲ್ (ದಲಿತರು) ಮುಸಲ್ಮಾನರು ಹೋರಾಟ ನಡೆಸಿದ್ದಾರೆ. ಭಾರತೀಯ ಮುಸಲ್ಮಾನರ ಪೈಕಿ ಸವರ್ಣೀಯರ ಪ್ರಮಾಣ ಶೇ.15. ಉಳಿದವರು ಹಿಂದುಳಿದ, ದಲಿತ ಹಾಗು ಬುಡಕಟ್ಟು ಮುಸ್ಲಿಮರು. ಮುಸಲ್ಮಾನರಲ್ಲಿ ಅಸ್ಪೃಶ್ಯತೆ ಆಚರಣೆಯೂ ಉಂಟು. ಸ್ಟ್ಯಾಲಿನ್ ಪದ್ಮಾ ಎಂಬ ಪ್ರತಿಭಾವಂತ ನಿರ್ಮಿಸಿರುವ ಹೊಳಪಿನ ಸಾಕ್ಷ್ಯಚಿತ್ರ ’ಇಂಡಿಯಾ ಅನ್‌ಟಚ್ಡ್’ (India Untouched) ಈ ಮಾತಿಗೆ ಜೀವಂತ ಸಾಕ್ಷ್ಯ ನುಡಿಯುತ್ತದೆ.

ಧೋಬಿ, ಲೋಹಾರ-ಬಧಯಿ, ಧುನಿಯಾ- ಮನ್ಸೂರಿ, ಕಸಾಯಿ-ಖುರೇಶಿ, ಫಕೀರ್-ಆಲ್ವಿ, ಹಜ್ಜಾಮ್-ಸಲ್ಮಾನಿ, ಮೆಹ್ತಾರ್-ಹಲಾಲ್ಖೋರ್, ಗ್ವಾಲ-ಘೋಸಿ, ದರ್ಜಿ-ಇದ್ರಿಸಿ, ಕುಂಜ್ರೆ-ರಯೀನ್, ಜುಲಾಹೆ-ಅನ್ಸಾರಿ ಸಮುದಾಯಗಳು ’ಪಸ್ಮಾಂದ’ ಅಸ್ಮಿತೆಯಡಿ ಒಟ್ಟಾಗಿವೆ. ಪಸ್ಮಾಂದ ಎಂದರೆ ಹಿಂದುಳಿಸಲಾಗಿರುವವರು ಎಂದು ಅರ್ಥ.

ಮುಸ್ಲಿಮ್ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಕ್ಷೇತ್ರಗಳಲ್ಲಿ ಕುಲೀನ ಮುಸ್ಲಿಮರದೇ ಪ್ರಾಬಲ್ಯ. 1952ರಲ್ಲಿ ರಚಿತವಾದ ಒಂದನೆಯ ಲೋಕಸಭೆಯಿಂದ 2004ರ 14ನೆಯ ಲೋಕಸಭೆಯ ತನಕ ಲೋಕಸಭೆಗೆ ಆಯ್ಕೆಯಾದ ಮುಸಲ್ಮಾನ ಜನಪ್ರತಿನಿಧಿಗಳ ಒಟ್ಟು ಸಂಖ್ಯೆ 400. ಈ ಪೈಕಿ ಸವರ್ಣೀಯ ಅಶ್ರಫ್ ಮುಸಲ್ಮಾನರ ಸಂಖ್ಯೆ 340. ಈ ಹದಿನಾಲ್ಕು ಲೋಕಸಭೆಗಳಲ್ಲಿ ಆಯ್ಕೆಯಾದ ಪಸ್ಮಾಂದ ಮುಸಲ್ಮಾನರ ಸಂಖ್ಯೆ ಕೇವಲ 60.

2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಶ್ರಫ್ ಮುಸ್ಲಿಮರ ಪ್ರಮಾಣ ಶೇ.2.1. ಪಸ್ಮಾಂದ ಮುಸ್ಲಿಮರ ಪ್ರಮಾಣ ಶೇ.11.4. ಲೋಕಸಭೆಯಲ್ಲಿ ಅಶ್ರಫ್ ಮುಸಲ್ಮಾನರ ಪ್ರಾತಿನಿಧ್ಯ ಒಟ್ಟು ಪ್ರಾತಿನಿಧ್ಯದ ಶೇ.2.1ರಷ್ಟಿದ್ದರೆ, ಪಸ್ಮಾಂದ ಮುಸಲ್ಮಾನರ ಪ್ರಾತಿನಿಧ್ಯ ಶೇ.0.8.

ಭಾರತೀಯ ಮುಸಲ್ಮಾನರ ಜೊತೆ ಬೆರೆತು ಕೆಲಸ ಮಾಡುವ ಅನುಭವವೊಂದನ್ನು ಕಾನ್ಶೀರಾಮ್ ಅವರು ಹೀಗೆ ಬಣ್ಣಿಸಿದ್ದಾರೆ: “ಮುಸಲ್ಮಾನ ಸಮುದಾಯವನ್ನು ಅವರ ನಾಯಕರ ಮೂಲಕ ಸಂಪರ್ಕಿಸುವುದು ಮೇಲೆಂದು ಅಂದುಕೊಂಡೆ. ಸುಮಾರು 50 ಮಂದಿ ಮುಸ್ಲಿಮ್ ನಾಯಕರನ್ನು ಭೇಟಿ ಮಾಡಿದ ಬಳಿಕ ಅವರಲ್ಲಿನ ಬ್ರಾಹ್ಮಣ್ಯವನ್ನು ಕಂಡು ದಂಗಾದೆ. ಸಮಾನತೆಯನ್ನು ಸಾಧಿಸುವ ಮತ್ತು ಅನ್ಯಾಯದ ವಿರುದ್ಧ ಹೋರಾಡಬೇಕೆಂದು ಇಸ್ಲಾಮ್ ಹೇಳಿಕೊಡುತ್ತದೆ. ಆದರೆ ಮುಸ್ಲಿಮ್ ನಾಯಕತ್ವದಲ್ಲಿ ಸೈಯದ್‌ಗಳು, ಶೇಖ್‌ಗಳು, ಮುಘಲರು ಹಾಗೂ ಪಠಾಣರಂತಹ ಬಲಿಷ್ಠ ಜಾತಿಗಳದೇ ಪ್ರಾಬಲ್ಯ. ಅನ್ಸಾರಿಗಳು, ಧುನಿಯಾಗಳು, ಖುರೇಶಿಗಳಂತಹ ಅಧೀನ ಜಾತಿಗಳು ತಮ್ಮ ಸಮಾನಕ್ಕೆ ಏರುವುದನ್ನು ಈ ಪ್ರಬಲ ಜಾತಿಗಳು ಸಹಿಸುವುದಿಲ್ಲ. ಹೀಗಾಗಿ ಹಿಂದೂ ಪರಿಶಿಷ್ಟ ಸಮುದಾಯಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ಮುಸಲ್ಮಾನರನ್ನು (ಪಸ್ಮಾಂದ) ಮಾತ್ರವೇ ಪ್ರೋತ್ಸಾಹಿಸಿ ಬೆಳೆಸಲು ನಾನು ತೀರ್ಮಾನಿಸಿದೆ”. (’ಕಾನ್ಶೀರಾಮ್ ಕಿ ನೇಕ್ ಕಮಾಯಿ ಜಿಸ್ನೆ ಸೋಟಿ ಕ್ವಾಮ್ ಜಗಾಯಿ’ ಹೆಸರಿನ ಪುಸ್ತಕವೊಂದರಲ್ಲಿ ಸತ್ನಾಮ್ ಸಿಂಗ್ ಎಂಬ ಲೇಖಕರು ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ).

’ಹಿಂದೂ ಸಮಾಜದ ಅದೇ ಸಾಮಾಜಿಕ ಅನಿಷ್ಟಗಳು ಭಾರತೀಯ ಮುಸ್ಲಿಂ ಸಮಾಜಕ್ಕೂ ಬಡಿದುಕೊಂಡಿವೆ’ ಎಂಬ ಡಾ.ಅಂಬೇಡ್ಕರ್ ಅವರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹೈದರಾಬಾದ್ ಮಾರ್ಯಾದೆಹೀನ ಹತ್ಯೆ: ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಕ್ರಿಮಿನಲ್ ಕೃತ್ಯ – ಅಸಾದುದ್ದೀನ್ ಓವೈಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Hope this News is to get attention of anti communal minds.
    First off all know one is aware of arms act.
    They were using airguns which is permitted subject to permission from concerning authority.

    Some people fearing in kodagu.
    It’s so peaceful hear.

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...