Homeಅಂತರಾಷ್ಟ್ರೀಯಬೆಂಕಿಯ ಜೊತೆಗೆ ಸರಸ; ರಷ್ಯಾದಲ್ಲಿ ಖಾಸಗಿ ಸೈನ್ಯದ ತುಕಡಿಗಳ ಬಂಡಾಯ

ಬೆಂಕಿಯ ಜೊತೆಗೆ ಸರಸ; ರಷ್ಯಾದಲ್ಲಿ ಖಾಸಗಿ ಸೈನ್ಯದ ತುಕಡಿಗಳ ಬಂಡಾಯ

- Advertisement -
- Advertisement -

23 ಜೂನ್ 2023 ರಂದು, ರಷ್ಯನ್ ಸರ್ಕಾರ ಆರ್ಥಿಕ ಸಹಾಯ ನೀಡಿ ಬೆಳೆಸಿದ ಖಾಸಗಿ ಸೈನ್ಯದ ಸಂಸ್ಥೆ, ವಾಗ್ನರ್ ಗುಂಪು, ರಷ್ಯಾದ ರಕ್ಷಣಾ ಸಚಿವಾಲಯದ ವಿರುದ್ಧವೇ ಬಂಡಾಯವನ್ನು ಎಬ್ಬಿಸಿತು. ವಾಗ್ನರ್‌ನ ನಾಯಕ ಯೆವ್‌ಜೆನಿ ಪ್ರಿಗೊಜಿನ್, ಶೊಯಿಗು ಮತ್ತು ಗೆರಾಸಿಮೊವ್ ಎಂಬ ಪ್ರದೇಶಗಳನ್ನು ತಮ್ಮ ವಶಕ್ಕೆ ಕೊಟ್ಟುಬಿಡಬೇಕೆಂದು ಆಗ್ರಹಪಡಿಸಿದ. ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಾಗ್ನರ್‌ನ ಈ ನಡೆಯನ್ನು ದೇಶದ್ರೋಹ ಎಂದು ಖಂಡಿಸಿದ. ಈ ಬಂಡಾಯದ ಸಮಯದಲ್ಲಿ, ವಾಗ್ನರ್ ಸೈನ್ಯ ದಕ್ಷಿಣದ ಮಿಲಿಟರಿ ಜಿಲ್ಲೆಯ ಮುಖ್ಯ ಕಚೇರಿಯಿದ್ದ ರೊಸ್ಟೊವ್-ಆನ್-ಡಾನ್ ಅನ್ನು ವಶಪಡಿಸಿಕೊಂಡಿತು. ಅವರು ನಂತರ ರಷ್ಯದ ವಾಯುಸೇನಾದ ದಾಳಿಯನ್ನು ಹಿಮ್ಮೆಟ್ಟಿಸುತ್ತಾ ಮಾಸ್ಕೋದ ಕಡೆಗೆ ದಂಡೆತ್ತಿ ಹೋದರು. ಭೂ ಸೇನಾ ರಕ್ಷಣಾ ಪಡೆಗಳು ಮಾಸ್ಕೊ ಮೇಲೆಯೇ ತನ್ನ ಗಮನವನ್ನು ಕೇಂದ್ರೀಕರಿಸಿದ್ದವು. ಬೆಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಸಂಧಾನಕಾರನಾಗಿ ಇಬ್ಬರ ನಡುವೆಯೂ ಒಡಂಬಡಿಕೆಯಾಗುವಂತೆ ಪಾತ್ರವಹಿಸಿದ, ಪ್ರಿಗೊಜಿನ್ ಬಂಡಾಯವನ್ನು ಅಂತ್ಯಗೊಳಿಸಲು ಒಪ್ಪಿಕೊಂಡ.

ಈ ಬಂಡಾಯದ ಪರಿಣಾಮವಾಗಿ ಅನೇಕ ಸಾವುನೋವುಗಳು ಸಂಭವಿಸಿದವು. ಕಡೇ ಪಕ್ಷ ಹದಿಮೂರು ರಷ್ಯಾದ ಸೈನಿಕರುಗಳನ್ನು ಕೊಲ್ಲಲಾಯಿತು. ವಾಗ್ನರ್ ಸಂಸ್ಥೆಯ ಈ ಬಂಡಾಯವು ರಷ್ಯಾದ ಸೈನ್ಯದ ಆಂತರಿಕ ವ್ಯವಸ್ಥೆಯಲ್ಲಿನ ಬಿಗಿವಾತಾವರಣವನ್ನು ಹೊರಗೆಡಹಿತು ಮತ್ತು ಸರ್ಕಾರದ ಬೆಂಬಲದಿಂದ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸೈನಿಕ ಸಂಸ್ಥೆಗಳ ಕ್ರಿಯಾಶಕ್ತಿಯ ಬಗ್ಗೆ ಗಮನ ಹರಿಯುವಂತೆ ಮಾಡಿತು.

ಇದು ಹೇಗೆ ಪ್ರಾರಂಭವಾಯಿತು?

ಬಕ್ಮುಟ್‌ನ ಹೋರಾಟದ ಸಮಯದಲ್ಲಿ, ವಾಗ್ನರ್ ಗುಂಪು ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ಜೊತೆಯ ಬಿಗಿವಾತಾವರಣ ಉಲ್ಬಣಗೊಂಡಿತು. ರಷ್ಯಾ ಸರ್ಕಾರ ಅವರಿಗೆ ಸಾಕಷ್ಟು ಅಗತ್ಯವಸ್ತುಗಳನ್ನು ಸರಬರಾಜು ಮಾಡುತ್ತಿರಲಿಲ್ಲ ಎಂದು ಪ್ರಿಗೊಜಿನ್ ದೂರಿದ. ವಾಗ್ನರ್ ಗುಂಪಿನ ಯೋಧರ ಸಾವಿಗೆ ರಕ್ಷಣಾ ಮಂತ್ರಿ ಸರ್ಗೈ ಶೊಯಿಗು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ವೇಲರಿ ಜೆರಾಸಿಮೊವ್ ಕಾರಣಕರ್ತರು ಎಂದು ಆತ ದೂರಿದ. ಈ ಹೋರಾಟದಲ್ಲಿ ಬಹಳಷ್ಟು ಜನ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು ಮತ್ತು ಉಕ್ರೇನ್‌ನಲ್ಲಿ ಡಿಸೆಂಬರ್ 2022 ಮತ್ತು ಜೂನ್ 2023ರ ಅಂತರದಲ್ಲಿ ಸತ್ತ 20,000 ರಷ್ಯಾ ಪಡೆಯ ಸೈನಿಕರಲ್ಲಿ ಅರ್ಧದಷ್ಟು ಹೋರಾಟಗಾರರು ವಾಗ್ನರ್ ಗುಂಪಿಗೆ ಸೇರಿದವರಾಗಿದ್ದರು. ಬಕ್ಬುಟ್‌ನಲ್ಲಿ ರಷ್ಯಾದ ಗೆಲುವಿನ ನಂತರ ವಾಪಸ್ಸಾಗುವಾಗ ವಾಗ್ನರ್ ಮತ್ತು ರಕ್ಷಣಾ ಪಡೆಗಳ ನಡುವಿನ ಘರ್ಷಣೆ ನಡೆಯುತ್ತಲೇ ಇತ್ತು.

ಜೂನ್ 2023ರ ಮಧ್ಯಭಾಗದಲ್ಲಿ ರಷ್ಯಾದ ರಕ್ಷಣಾ ಸಚಿವಾಲಯ ವಾಗ್ನರ್‌ಗೆ ರಷ್ಯಾದ ಮಾಮೂಲಿ ಸೈನ್ಯದ ಆಜ್ಞಾಪನಾ ವ್ಯವಸ್ಥೆಯ ಜೊತೆಯಲ್ಲಿ ಏಕೀಕರಣಗೊಳ್ಳಬೇಕೆಂದು ಆಜ್ಞೆ ಹೊರಡಿಸಿತು. ಪ್ರಿಗೊಜಿನ್ ಇದನ್ನು ತಳ್ಳಿ ಹಾಕಿದ. ಪ್ರಿಗೊಜಿನ್ ರಕ್ಷಣಾ ಸಚಿವಾಲಯವನ್ನು ಟೀಕಿಸಿದ ಮತ್ತು ಅಧ್ಯಕ್ಷ ಪುಟಿನ್ ಸಚಿವಾಲಯದ ವಿರುದ್ಧ ತನ್ನ ಬಂಡಾಯವನ್ನು ಬೆಂಬಲಿಸುತ್ತಾನೆ ಎಂದು ನಂಬಿಕೊಂಡು ಶೊಯಿಗುನನ್ನು ಮರಣದಂಡನೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ.

ಜೂನ್ 23, 2023ರಂದು, ಪ್ರಿಗೊಜಿನ್, ರಕ್ಷಣಾ ಸಚಿವಾಲಯ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ. ಅವನು ಉಕ್ರೇನ್ ಜೊತೆಯಲ್ಲಿ ನಡೆಸುತ್ತಿರುವ ಈ ಯುದ್ಧ ರಷ್ಯದ ಗಣ್ಯವ್ಯಕ್ತಿಗಳ ಹಿತವನ್ನು ಕಾಪಾಡುವುದಕ್ಕೋಸ್ಕರ ಎಂದು ಹೇಳಿದ. ರಷ್ಯಾ ಸರ್ಕಾರದ ಉಕ್ರೇನ್‌ನ ಆಕ್ರಮಣದ ಬಗ್ಗೆ ನೀಡುತ್ತಿದ್ದ ಸಮಜಾಯಿಹಿಷಿಯನ್ನು ತಳ್ಳಿಹಾಕಿದ. ಪ್ರತಿದಿನದ ವಾಗ್ನರ್ ಹೋರಾಟಗಾರರ ಸಾವಿನ ಸಂಖ್ಯೆ ಸಾವಿರಕ್ಕೆ ಏರಿದೆ ಎಂದು ಅವನು ಪ್ರತಿಪಾದಿಸಿದ. ಅವನು ಇನ್ನೂ ಮುಂದುವರಿಯುತ್ತಾ, ಸೈನ್ಯದಲ್ಲಿನ ಅಧಿಕಾರಿ ವ್ಯವಸ್ಥೆ ಇದನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಮುಚ್ಚಿಟ್ಟಿದೆ ಎಂದು ಹೇಳಿದ.

ವಾಗ್ನರ್ ಬಿಡಾರದ ಮೇಲಿನ ಕ್ಷಿಪಣಿ ಆಕ್ರಮಣದ ನಂತರ ಉಂಟಾದ ಪರಿಣಾಮವನ್ನು ಈ ವೀಡಿಯೊ ತೋರಿಸಿತು. ಈ ಕ್ಷಿಪಣಿ ಆಕ್ರಮಣವನ್ನು ನಡೆಸಿದ್ದು ರಕ್ಷಣಾ ಸಚಿವಾಲಯವೇ ಎಂದದ್ದಲ್ಲದೆ, 2000 ವಾಗ್ನರ್ ಸೈನಿಕರನ್ನು ಅದು ಕೊಂದು ಹಾಕಿತು ಎಂದು ಪ್ರಿಗೊಜಿನ್ ಪ್ರತಿಪಾದಿಸಿದ. ಈ ವಿಡಿಯೋದ ಸಿಂಧುತ್ವವನ್ನು ಪ್ರಶ್ನಿಸಲಾಯಿತು ಮತ್ತು ಕೆಲವರು ಈ ವಿಡಿಯೊವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು. ಇದಾದ ನಂತರವೇ ಪ್ರಿಗೊಜಿನ್ ರಕ್ಷಣಾ ಮಂತ್ರಾಲಯದ ವಿರುದ್ಧ ಸಶಸ್ತ್ರ ಬಂಡಾಯ ಎದ್ದಿದ್ದು ಮತ್ತು ಈ ಬಂಡಾಯದಲ್ಲಿ ಬಿಡಿವ್ಯಕ್ತಿಗಳೂ ಸೇರಿಕೊಳ್ಳುವಂತೆ ಕರೆಕೊಟ್ಟಿದ್ದು. ಈ ಬಂಡಾಯವನ್ನು ಕಳಪೆಯಾಗಿ ಯೋಜಿಸಲಾಗಿತ್ತು ಮತ್ತು ಅನೇಕ ವಾಗ್ನರ್ ಸದಸ್ಯರುಗಳಿಗೆ ಈ ಬಂಡಾಯದ ಬಗ್ಗೆ ಅರಿವೇ ಇರಲಿಲ್ಲ.

ಈ ವಾಗ್ನರ್ ಗುಂಪು ಅಂದರೆ ಯಾರು?

ವಾಗ್ನರ್ ಗುಂಪು, ಅಧಿಕೃತವಾಗಿ ಕರೆಯಲಾಗುವ ಪಿ.ಎಮ್.ಸಿ. ವಾಗ್ನರ್, ರಷ್ಯಾ ಸರ್ಕಾರದಿಂದ ಹಣಸಹಾಯ ಪಡೆದ ಖಾಸಗಿ ಸೈನ್ಯ ಸಂಸ್ಥೆ. ಅದನ್ನು ದಿಮಿಟ್ರಿ ಯೂಟ್ಕಿನ್ ಎಂಬುವನಿಂದ 2014ರಲ್ಲಿ ಸ್ಥಾಪಿಸಲಾಯಿತು, ಅವನೊಬ್ಬ ಮಾಜಿ GRU (ರಷ್ಯಾ ಮಿಲಿಟರಿಯ ಒಂದು ಸಂಸ್ಥೆ) ಅಧಿಕಾರಿ, ಮತ್ತು ಪ್ರೊಗೊಜಿನ್ ಒಬ್ಬ ವ್ಯಾಪಾರಿ. ವಾಗ್ನರ್ ತನ್ನ ಪ್ರಖ್ಯಾತಿಯನ್ನು ಪಡೆದಿದ್ದು ಉಕ್ರೇನ್‌ನ ಡಾನ್‌ಬಾಸ್ ಯುದ್ಧದ ಸಮಯದಲ್ಲಿ, ಅದು ರಷ್ಯಾ ದೇಶದ ಪರವಾಗಿದ್ದ ಪ್ರತೇಕವಾದಿ ಶಕ್ತಿಗಳನ್ನು ಬೆಂಬಲಿಸಿತ್ತು. ಈ ಗುಂಪು ಪ್ರಪಂಚದಾದ್ಯಂತ ಎಲ್ಲಾ ಸಂಘರ್ಷಗಳಲ್ಲಿಯೂ ಸಕ್ರಿಯವಾಗಿತ್ತು, ಅದು ಸಿರಿಯ, ಲಿಬಿಯಾ, ಅಫ್ರಿಕಾದ ಮಧ್ಯ ಪ್ರಾಂತ ಪ್ರದೇಶ ಮತ್ತು ಮಾಲಿ ಒಳಗೊಂಡಂತೆ.

ಇದನ್ನೂ ಓದಿ: ಯುಎಸ್‌ಎ ಸುಪ್ರೀಂಕೋರ್ಟ್ ತೀರ್ಪು; ಜನಾಂಗೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಅವಕಾಶಗಳಿಗೆ ಹೊಡೆತ

ರಷ್ಯಾ ಸರ್ಕಾರ ಈ ವಾಗ್ನರ್ ಗುಂಪನ್ನು ಉಪಯೋಗಿಸಿಕೊಂಡು ಪರೋಕ್ಷ ಸಮರವನ್ನು ನಡೆಸಿ, ರಷ್ಯಾದ ಸೈನ್ಯದ ಭಾಗವಹಿಸುವಿಕೆಯ ಆಪಾದನೆಯನ್ನು ಅಲ್ಲಗಳೆಯುತ್ತಿತ್ತು. ಇದೊಂದು ಖಾಸಗಿ ಸಂಸ್ಥೆಯಾಗಿದ್ದುದರಿಂದ ವಾಗ್ನರ್‌ಗೆ ಇದ್ದ ಅನುಕೂಲವೆಂದರೆ ಅದು ಅಂತಾರಾಷ್ಟ್ರೀಯ ಮತ್ತು ರಷ್ಯಾದ ಕಾನೂನಿನ ವ್ಯಾಪ್ತಿಯಿಂದ ಹೊರಗಿರುತ್ತಿತ್ತು, ಮತ್ತು ರಷ್ಯಾದ ಸೈನಿಕ ಕಾರ್ಯಾಚರಣೆಗಳಿಗಿ ಬೆಲೆ ಕಟ್ಟಲಾರದಷ್ಟು ಸಹಾಯಕವಾಗಿರುತ್ತಿತ್ತು. ಆದರೂ ಕೂಡ ಉಕ್ರೇನ್ ಜೊತೆಯಲ್ಲಿನ ಸಂಘರ್ಷದ ನಂತರದ ದಿನಗಳಲ್ಲಿ, ಒಂದು ಖಾಸಗಿ ಸೈನಿಕ ಗುಂಪಿನಿಂದ ಬೆಂಬಲವನ್ನು ಪಡೆಯುವುದಕ್ಕೆ ಆಗುತ್ತಿದ್ದ ಖರ್ಚು ರಷ್ಯಾ ಸರ್ಕಾರಕ್ಕೆ ಬಹಳ ಹೆಚ್ಚೆಂದು ಅನಿಸತೊಡಗಿತು.

ವ್ಲಾಡಿಮಿರ್ ಪುಟಿನ್

ಒಂದು ಖಾಸಗಿ ಸೈನಿಕ ಸಂಸ್ಥೆಯಾಗಿ, ವಾಗ್ನರ್‌ಗೆ ಇದ್ದ ಆಸಕ್ತಿ ಖಾಸಗಿಯಾಗಿಯೇ ಉಳಿದುಬಿಟ್ಟಿತ್ತು ಮತ್ತು ಇದು ಬಂಡಾಯದ ಪರಿಸ್ಥಿತಿಗೆ ಎಡೆಮಾಡಿಕೊಟ್ಟಿತು. ವಾಗ್ನರ್‌ನ ಕಾರ್ಯಾಚರಣೆಯ ದಿಕ್ಕು ಬದಲಾಗಿದ್ದು ಖಾಸಗಿ ಸೈನ್ಯ ಸಂಸ್ಥೆಗೆ ಉಂಟಾಗಬಹುದಾದ ಅಪಾಯಗಳನ್ನು ತಪ್ಪಿಸುವುದಕ್ಕೋಸ್ಕರ.

ಸಿರಿಯ ದೇಶದಲ್ಲಿ ವಾಗ್ನರ್ ಗುಂಪು ಸಿರಿಯನ್ ಸೈನ್ಯದ ಜೊತೆಯಲ್ಲಿ ನಿಕಟವಾಗಿ ಕಾರ್ಯನಿರ್ವಹಿಸಿತು, ನಿರ್ದಿಷ್ಟವಾಗಿ ಐಎಸ್‌ಐಎಸ್ ವಿರುದ್ಧದ ಕಾರ್ಯಾಚರಣೆಯಲ್ಲಿ. ಸುಡಾನ್‌ನಲ್ಲಿ ವಾಗ್ನರ್ ಅಮೆರಿಕದ ಸೈನ್ಯದ ವಿರುದ್ಧ, ಅಂದರೆ ಸುಡಾನ್‌ನ ಗಣಿಗಾರಿಕೆಯ ಸ್ವಾಮ್ಯವನ್ನು, ಅದರಲ್ಲೂ ನಿರ್ದಿಷ್ಟವಾಗಿ ಚಿನ್ನ, ಯುರಾನಿಯಮ್ ಮತ್ತು ವಜ್ರದ ಗಣಿಗಾರಿಕೆಯನ್ನು ಅಮೆರಿಕ ಸೈನ್ಯ ವಶ ಪಡಿಸಿಕೊಳ್ಳುವುದರ ವಿರುದ್ಧವಾಗಿ ಕಾರ್ಯಾಚರಣೆ ನಡೆಸಿತು. ಸೆಂಟ್ರಲ್ ಆಫ್ರಿಕಾ ರಿಪಬ್ಲಿಕ್‌ನಲ್ಲಿ, ವಾಗ್ನರ್ ಗುಂಪು ಗಣಿಕ್ಷೇಪಗಳ ರಕ್ಷಣೆಗೋಸ್ಕರ ಕಾರ್ಯಾಚರಣೆ ನಡೆಸಿ ಅಲ್ಲಿನ ಸರ್ಕಾರದ ಬೆಂಬಲಕ್ಕೆ ನಿಂತಿತು. ಅನೇಕ ಸಂಘರ್ಷಗಳಲ್ಲಿ, ವಾಗ್ನರ್ ಗುಂಪು ಪ್ರಾಂತೀಯ ಸರ್ಕಾರಗಳ ಜೊತೆಗೂಡಿ ಹೋರಾಟ ಮಾಡಿತು ಮತ್ತು ಆ ಪ್ರದೇಶಗಳನ್ನು ಅದರಲ್ಲೂ ರಷ್ಯಾ ಬೆಂಬಲಿತ ಪ್ರದೇಶಗಳನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಹೋರಾಟ ಮಾಡಿತು. ಕೆಲವು ಬಾರಿ, ವಾಗ್ನರ್ ಗುಂಪಿಗೆ ಸ್ಥಳೀಯರ ಬೆಂಬಲವೂ ಸಿಗುತ್ತಿತ್ತು. ಒಂದು ವ್ಯವಸ್ಥಿತ ಖಾಸಗಿ ಗುಂಪಾಗಿ, ವಾಗ್ನರ್ ಗುಂಪು ರಷ್ಯಾ ಸರ್ಕಾರದ ಶಕ್ತಿಗಳಿಗೆ ಬೇರೆ ದೇಶಗಳ ಮೇಲೆ ಸ್ವಾಮ್ಯತೆಯನ್ನು ಸ್ಥಾಪಿಸಲು ಸಹಾಯ ಮಾಡಿತು ಮತ್ತು ರಷ್ಯಾ ಮಿಲಿಟರಿಯ ಹಸ್ತಕ್ಷೇಪದ ಬಗ್ಗೆ ನಿರಾಕರಣೆ ಮಾಡುವುದಕ್ಕೆ ಸಹಾಯವಾಗುವಂತೆ ಮಾಡಿತು.

ಇದನ್ನೂ ಓದಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

ಪ್ರಭುತ್ವಗಳ ಜೊತೆಜೊತೆಗೆ ಖಾಸಗಿ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆ ನಡೆಸುವುದೇನೂ ರಷ್ಯ ಒಂದಕ್ಕೇ ಸೀಮಿತವಾಗಿಲ್ಲ. ಹಣಕ್ಕಾಗಿಯೇ ಕೆಲಸ ಮಾಡುವ ಇಂತಹ ಗುಂಪುಗಳ ಪ್ರಯೋಜನವನ್ನು, ಅನೇಕ ಸರ್ಕಾರಗಳು ತಮ್ಮ ಕೈಲಿ ಆಗದೇ ಇರುವ ಕೆಲಸಗಳನ್ನು ಮಾಡಲು ಅಂದರೆ ಕಾನೂನು ವ್ಯವಸ್ಥೆಯನ್ನು ಬುಡಮೇಲು ಮಾಡುವ ಮತ್ತು ಪ್ರಜಾಪ್ರಭುತ್ವದ ಕಾರಣದಿಂದ ಉಂಟಾಗುವ ಹೊಣೆಗಾರಿಕೆಯಿಂದ ಪಾರುಮಾಡುವಂತಹ ಕೆಲಸಗಳಿಗೆ ಬಳಸಿಕೊಂಡಿವೆ. ರಷ್ಯಾ ಸರ್ಕಾರ ತನ್ನ ಅಪೇಕ್ಷೆಯಂತೆ ವಾಗ್ನರ್ ಗುಂಪನ್ನು ರಾಷ್ಟ್ರೀಕರಣಗೊಳಿಸಿ ರಷ್ಯಾ ಸರ್ಕಾರದ ಕೈಕೆಳಗೆ ಕೆಲಸ ಮಾಡಬಹುದು ಎಂದು ಎಣಿಸಿದಾಕ್ಷಣ, ವಾಗ್ನರ್ ಗುಂಪು, ರಷ್ಯ ಸರ್ಕಾರಕ್ಕೇ ಒಂದು ಬೆದರಿಕೆಯಾಗಿ ನಿಲ್ಲಬಹುದು. ಒಂದು ಸೈನಿಕ ಗುಂಪನ್ನು ನಿರ್ವಹಿಸಿ ಬೆಂಬಲಿಸುವುದು ಅಪಾಯಕಾರಿಯಾದ ನಡೆ. ಶೀತಲ ಸಮರದ ನಂತರ, ಅನೇಕ ದೇಶಗಳು ಈ ರೀತಿಯ ಗುಂಪನ್ನು ದೂರದ ಬೇರೇ ದೇಶಗಳ ಕಾರ್ಯಾಚರಣೆಗೆ ಮಾತ್ರ ಉಪಯೋಗಿಸಿಕೊಳ್ಳುವ ಮೂಲಕ ಅವುಗಳ ಅಪಾಯವನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿವೆ.

ಈ ರೀತಿಯ ಬೇರೆಬೇರೆ ಖಾಸಗಿ ಮಿಲಿಟರಿ ಸಂಸ್ಥೆಗಳು ಯಾವುವಿವೆ?

ಕೆಲವು ಪ್ರಮುಖವಾದ ಖಾಸಗಿ ಸೇನಾ ಸಂಸ್ಥೆಗಳು ಮತ್ತು ಅವುಗಳ ಜೊತೆಗೆ ಸಂಬಂಧ ಹೊಂದಿರುವ ದೇಶಗಳು ಇಂತಿವೆ:

DynCorp International: ಯುಎಸ್ ಮೂಲದ ಈ ಸಂಸ್ಥೆ ರಕ್ಷಣಾ ಸೇವೆಗಳನ್ನು ಒದಗಿಸುತ್ತದೆ. ವಿವಾದಾತ್ಮಕ ಅಬು ಘ್ರೈಬ್ ಹಗರಣ ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ಅಮೆರಿಕ ಈ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

G4S: ಇದೊಂದು ಬ್ರಿಟನ್ ಮೂಲದ ಸಂಸ್ಥೆ, ಮತ್ತು ಅದು ಅನೇಕ ಭದ್ರತಾ ಸೇವೆಗಳನ್ನು ನೀಡುತ್ತದೆ. ಅದು ವಿಶ್ವಾದ್ಯಂತ ಕೆಲಸ ಮಾಡುತ್ತದೆ, ಮತ್ತು ಅನೇಕ ದೇಶಗಳು ಅದರ ಸೇವೆಯನ್ನು ಪಡೆದುಕೊಂಡಿವೆ.

Executive outcomes: ಇದೊಂದು ಸೌತ್ ಆಫ್ರಿಕ ಮೂಲದ ಸಂಸ್ಥೆ ಮತ್ತು ಅದು ಆಂಗೋಲನ್ ಸಿವಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರ ಮೂಲಕ ಹೆಚ್ಚು ಪರಿಚಿತವಾಗಿದೆ. ಅದೂ ಕೂಡ ತನ್ನ ಸೇವೆಯನ್ನು ವಿಶ್ವದಾದ್ಯಂತ ಹಲವು ಸರ್ಕಾರಗಳಿಗೆ ಮತ್ತು ಉದ್ದಿಮೆಗಳಿಗೆ ನೀಡಿದೆ.

ಭಾರತದಲ್ಲಿ, ಖಾಸಗಿ ಸೈನಿಕ ಕಾರ್ಯಾಚರಣೆಯ ಸಂಸ್ಥೆಯನ್ನು ಸ್ಥಾಪಿಸಲು ಕಾನೂನು ರೂಪಗೊಂಡಿಲ್ಲ. ಖಾಸಗಿಯವರನ್ನು ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ದೇಶದ ಅನೇಕ ಭಾಗಗಳಲ್ಲಿ ಪ್ರಭುತ್ವ ಉಪಯೋಗಿಸಿಕೊಂಡಿರುವ ಉದಾಹರಣೆಗಳು ಚರಿತ್ರೆಯಲ್ಲಿವೆ. ಖಾಸಗಿ ಸೈನಿಕ ಸಂಸ್ಥೆಗಳನ್ನು ಸ್ಥಾಪಿಸಲು ಅನುಕೂಲಕಾರಿ ಪರಿಸ್ಥಿತಿಗಳೇನೋ ಇವೆ. ಮತ್ತು ಭಾರತದಲ್ಲಿ ಈ ಭದ್ರತಾ ವಿಭಾಗದಲ್ಲಿನ ಬೇಡಿಕೆ ಹೆಚ್ಚುತ್ತಲೇ ಇದೆ, ಮತ್ತು ಭಾರತದಲ್ಲಿ ಬೃಹತ್ತಾದ ಸೈನ್ಯವೂ ಇದೆ. ಈ ವ್ಯಾಪ್ತಿಯಲ್ಲಿ ಸೂಕ್ತವಾದ ಕಾರ್ಮಿಕ ಪಡೆಯನ್ನು ಸ್ಥಾಪಿಸಲು ಬೇಡಿಕೆಯೇನೊ ಇದೆ. ಆದರೂ ಕೂಡ ಈ ದಾರಿ ಅಪಾಯಕಾರಿಯಾದದ್ದು, ವಾಗ್ನರ್ ಸಂಸ್ಥೆಯ ವಿಷಯದಲ್ಲಿ ಈಗ ನಡೆದ ಘಟನೆಯ ಅದನ್ನು ಮನಗಾಣಿಸುವಂತಿದೆ.

ಕನ್ನಡಕ್ಕೆ: ಕೆ. ಶ್ರೀನಾಥ್

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ| ಗ್ರಾಮ ತೊರೆಯಿರಿ ಅಥವಾ ‘ಘರ್ ವಾಪ್ಸಿ’ಯಾಗಿ; ಹಿಂದುತ್ವ ಗುಂಪಿನಿಂದ ಕ್ರೈಸ್ತ ಕಟುಂಬಗಳಿಗೆ ಬೆದರಿಕೆ

ಬಿಹಾರದ ಭಾಗಲ್ಪುರ ಜಿಲ್ಲೆಯ ಗೋಪಾಲಪುರ ಗ್ರಾಮದ 42 ಕ್ರಿಶ್ಚಿಯನ್ ಕುಟುಂಬಗಳಿಗೆ ಹಿಂದುತ್ವ ಗುಂಪಿನ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು 'ಕ್ಲಾರಿಯನ್ ಇಂಡಿಯಾ' ನ್ಯೂಸ್‌ ಪೋರ್ಟ್ಲ್ ವರದಿ ಮಾಡಿದೆ. 'ಘರ್ ವಾಪ್ಸಿ'ಯಾಗಿ ಅಥವಾ ಗ್ರಾಮ...

ಭೂಮಾನಂದ ಹತ್ಯೆ: ಕೊಲೆಗಾರರ ಪರ ನಿಂತ ‘ವಾಲ್ಮೀಕಿ ನಾಯಕ ಸಂಘ’ದ ವಿರುದ್ಧ ಆಕ್ರೋಶ: ಆಗಸ್ಟ್ 15ಕ್ಕೆ ಕಪ್ಪುಪಟ್ಟಿ ಪ್ರದರ್ಶನ, ಬೈಕ್ ರ್ಯಾಲಿಗೆ ಕರೆ

ರಾಯಚೂರು: ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಹುಜನ ಮುಖಂಡ ಭೂಮಾನಂದ ಅವರ ಬರ್ಬರ ಕಗ್ಗೋಲೆಯನ್ನು ಖಂಡಿಸಿ, ಕೊಲೆಗಡುಕರ ಪರವಾಗಿ ನಿಂತಿರುವ ಸಂಘಟನೆಗಳು ಹಾಗೂ ಮೌನ ವಹಿಸಿರುವ ಜನಪ್ರತಿನಿಧಿಗಳ ವಿರುದ್ಧ 'ಬಹುಜನ ಮುಖಂಡ ಭೂಮಾನಂದನ...

SIR ಅವಾಂತರ: ನಟ ಪ್ರಕಾಶ್ ರಾಜ್ ಹೆಸರೇ ವೋಟರ್ ಲಿಸ್ಟ್‌ನಿಂದ ನಾಪತ್ತೆ, ನಾಳೆ ಬೆಂಗಳೂರಲ್ಲಿ ಮಹತ್ವದ ಪತ್ರಿಕಾಗೋಷ್ಠಿ

ರಾಜ್ಯದಲ್ಲಿ ನಡೆಯುತ್ತಿರುವ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಅವಾಂತರಗಳು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರೇ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ವರ್ಷಗಳಿಂದ ಮತದಾನ...

ಹಳೆ ಮತದಾರರಲ್ಲಿ ಫಾರ್ಮ್ ನಂ.6 ಕೇಳುವುದೇ ಕಾನೂನು ಬಾಹಿರ; ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧ!

"ASDDO ಪಟ್ಟಿಯಲ್ಲಿ ಹೆಸರು ಬಂದಿದ್ದರೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ, ಫಾರ್ಮ್ ನಂ.6 ಸಲ್ಲಿಸುವ ಮೂಲಕ ದಾಖಲೆಗಳನ್ನು ನೀಡಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು" ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ, ಹಳೆ...

SIR: ಅರ್ಹ ಮತದಾರರನ್ನು ಹೊರಗಿಟ್ಟು 1,848 ಹೊಸ ಮತಗಟ್ಟೆ ಸ್ಥಾಪಿಸಲು ಮುಂದಾದ ಚುನಾವಣಾ ಆಯೋಗ

ಒಂದೆಡೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಡಿಲೀಟ್‌ ಆಗುವ ಭೀತಿ ಎದುರಾಗಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಹೊಸದಾಗಿ 1,848 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಕೇಂದ್ರ ಚುನಾವಣಾ...

ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಷಣದ ಬೆನ್ನಲ್ಲೇ ವೇದಿಕೆ ‘ಶುದ್ಧೀಕರಣ’: ಕೇಂದ್ರ ಸರ್ಕಾರ ಹಾಗೂ ಬಿಜೆಪಿಗೆ ಪ್ರತಿಪಕ್ಷಗಳ ತೀವ್ರ ತರಾಟೆ 

ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿರುವ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೆಲವೇ ದಿನಗಳಲ್ಲಿ, ಬಲಪಂಥೀಯ...

ನೀಟ್ ಪೇಪರ್ ಲೀಕ್ ಪ್ರಕರಣದ ಚಾರ್ಜ್ ಶೀಟ್ ಲೀಕ್ : ಕೋರ್ಟ್ ಕಳವಳ

ನೀಟ್ ಯುಜಿ- 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆಗಾಗಿ ಸ್ಥಾಪಿಸಲಾದ ವಿಶೇಷ ಫಾಸ್ಟ್ ಟ್ರ್ಯಾಕ್ (ಶೀಘ್ರ ಗತಿ) ನ್ಯಾಯಾಲಯವು, 13 ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿರುವ ದೋಷಾರೋಪ...

ಕರ್ನಾಟಕ ಎಸ್‌ಐಆರ್: ಶಾಶ್ವತ ನಿವಾಸಿ ಪ್ರಮಾಣಪತ್ರಕ್ಕೆ ಬೆಂಗಳೂರು ನಗರದಲ್ಲೇ ಭಾರೀ ಬೇಡಿಕೆ: ಕಂದಾಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಡುವೆಯೇ, ಕಂದಾಯ ಇಲಾಖೆಗೆ ಸಲ್ಲಿಕೆಯಾಗುತ್ತಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ಅರ್ಜಿಗಳ ಸಂಖ್ಯೆಯಲ್ಲಿ ಬೆಂಗಳೂರು ನಗರ ಜಿಲ್ಲೆಯು...

ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...