Homeಫ್ಯಾಕ್ಟ್‌ಚೆಕ್Fact Check: ಮುಸ್ಲಿಮರು ನಮಾಝ್ ಮುಗಿಸಿ ಬರುವ ಹಳೆಯ ವಿಡಿಯೋ ತಪ್ಪಾಗಿ ಹಂಚಿಕೆ

Fact Check: ಮುಸ್ಲಿಮರು ನಮಾಝ್ ಮುಗಿಸಿ ಬರುವ ಹಳೆಯ ವಿಡಿಯೋ ತಪ್ಪಾಗಿ ಹಂಚಿಕೆ

- Advertisement -
- Advertisement -

ರಂಝಾನ್ ಹಬ್ಬ ಅಥವಾ ಈದುಲ್ ಫಿತರ್ ದಿನದಂದು ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಈದ್ಗಾಗೆ ನಮಾಝ್‌ಗೆ ತೆರಳಿ ವಾಪಸ್‌ ಬರುತ್ತಿರುವ ಹಳೆಯ ವಿಡಿಯೋವೊಂದು ತಪ್ಪಾದ ಮಾಹಿತಿಯೊಂದಿಗೆ ಶೇರ್ ಆಗ್ತಿದೆ.

ಉತ್ತರಾಖಂಡದ ನೈನ್‌ತಾಲ್ ಜಿಲ್ಲೆಯ ಹಲ್ದ್ವಾನಿಯ ಬಂಭೂಲ್ಪುರದಲ್ಲಿ ಗುರುವಾರ (ಫೆ.8) ಸಂಜೆ ಮದ್ರಸಾ-ಮಸೀದಿ ತೆರವು ವೇಳೆ ಘರ್ಷಣೆ ನಡೆದ ಬಳಿಕ ಈ ವಿಡಿಯೋ ಮುನ್ನಲೆಗೆ ಬಂದಿದೆ.

ಬಲಪಂಥೀಯ ಎಕ್ಸ್‌ಖಾತೆ ‘We the people(@ajaychauhan41)’ ನಲ್ಲಿ ವಿಡಿಯೋವನ್ನು ಹಂಚಿಕೊಂಡು “ಹರಿದ್ವಾರ ಹಿಂದೂ ದೇವರುಗಳ ನಾಡು, ದೇವಭೂಮಿ ಎಂದು ಕರೆಯಲಾಗುತ್ತದೆ” ಬರೆಯಲಾಗಿದೆ. ಈ ಮೂಲಕ ಹಿಂದೂ ದೇವರುಗಳ ನಾಡಿನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗ್ತಿದೆ ಎಂಬರ್ಥದಲ್ಲಿ ಪರೋಕ್ಷವಾಗಿ ಕೋಮುದ್ವೇಷ ಕಾರಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ

‘Kreately.in'(@KreatelyMedia) ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ ಈ ವಿಡಿಯೋವನ್ನು ಹಂಚಿಕೊಂಡು “ಉತ್ತರಾಖಂಡದ ಹರಿದ್ವಾರಕ್ಕೆ ನಿಮಗೆ ಸುಸ್ವಾಗತ” ಎಂದು ಬರೆಯಲಾಗಿದೆ. ಇಲ್ಲಿಯೂ ಪರೋಕ್ಷವಾಗಿ ಕೋಮು ವೈಷಮ್ಯ ತೋರ್ಪಡಿಸಲಾಗಿದೆ.

ಫೋಸ್ಟ್ ಲಿಂಕ್ ಇಲ್ಲಿದೆ

‘शून्य’ (@Shunyaa00) ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ ಇತ್ತೀಚೆಗೆ ಈ ವಿಡಿಯೋ ಹಂಚಿಕೊಂಡು “ಹರಿದ್ವಾರ ಉತ್ತರಾಖಂಡ” ಎಂದು ಬರೆಯಲಾಗಿದೆ.

ಪೋಸ್ಟ್‌ ಲಿಂಕ್ ಇಲ್ಲಿದೆ

ಫ್ಯಾಕ್ಟ್ ಚೆಕ್‌ : ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹಿಂಸಾಚಾರ ಭುಗಿಲೆದ್ದಿರುವುದರಿಂದ ಈ ವಿಡಿಯೋ ಮಹತ್ವ ಪಡೆದುಕೊಂಡಿದೆ. ಹಳೆಯ ವಿಡಿಯೋವೊಂದನ್ನು ಇತ್ತೀಚೆಗೆ ತಪ್ಪಾದ ಮಾಹಿತಿಯೊಂದಿಗೆ ಪೋಸ್ಟ್‌ ಮಾಡುವ ಮೂಲಕ ಮುಸ್ಲಿಂ ಸಮುದಾಯದ ವಿರುದ್ದ ಕೋಮು ದ್ವೇಷಕ್ಕೆ ಪ್ರೇರೇಪಣೆ ನೀಡಲಾಗ್ತಿದೆ. ಹಾಗಾಗಿ, ನಾನುಗೌರಿ.ಕಾಂ ಈ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ಮಾಡಿದೆ.

ವಿಡಿಯೋ ಕುರಿತು ತಿಳಿಯಲು ಮೊದಲು ನಾವು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ಮೇ, 5, 2022ರಂದು ‘Dr Vijay Sharma'(@mahadev123456) ಎಂಬ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿರುವುದು ಕಂಡು ಬಂದಿದೆ.

ವಿಡಿಯೋ ಜೊತೆಗೆ “ಹರಿದ್ವಾರದ ಜ್ವಾಲಾಪುರ ಈದ್ಗಾದಲ್ಲಿ ನಮಾಝ್ ಬಳಿಕದ ದೃಶ್ಯ ನೋಡಿ. ಹರಿಯ ನಗರವು ಅಲ್ಲಾಹನ ನಗರ ಆಗಿದೆ. ಉತ್ತರಾಖಂಡದಲ್ಲಿ ಮುಸ್ಲಿಮರು ಎಲ್ಲಿಂದ ಬಂದರು ಎಂದು ಯೋಚಿಸುವುದು ಒಳಿತು. ಇಲ್ಲಿನ ಪೂರ್ವಜರು ಹಿಂದೂ ಬ್ರಾಹ್ಮಣರು, ಹಿಂದೂ ರಜಪೂತರು ಅಥವಾ ಹಿಂದೂ ಹರಿಜನರು” ಎಂದು ಬರೆಯಲಾಗಿದೆ. ಬಿಜೆಪಿ, ಸಿಎಂ ಪುಷ್ಕರ್ ಸಿಂಗ್ ಧಾಮಿಯವರಿಗೆ ಟ್ಯಾಗ್ ಮಾಡಲಾಗಿದೆ.

ಈ ಮೂಲಕ ನಮಗೆ ಗೊತ್ತಾಗಿದ್ದು, ಇತ್ತೀಚಿನದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ 2022ರ ಒಂದು ರಂಝಾನ್ ಹಬ್ಬದ ಸಂದರ್ಭದ್ದು, ಮುಸ್ಲಿಮರು ಹರಿದ್ವಾರದ ಜ್ವಾಲಾಪುರ ಈದ್ಗಾದಲ್ಲಿ ನಮಾಝ್ ಮುಗಿಸಿ ಬಂದ ದೃಶ್ಯವಿದು ಎಂದು.

ನಾವು ಮೇಲೆ ತಿಳಿಸಿದ ‘Dr Vijay Sharma’ ಎಂಬ ಎಕ್ಸ್ ಖಾತೆಯಲ್ಲೂ ವಿಡಿಯೋ ಪೋಸ್ಟ್ ಮಾಡಿರುವ ಉದ್ದೇಶ ಕೋಮುದ್ವೇಷ ಹರಡುವುದಾಗಿದೆ. ಆದರೆ, ಇಲ್ಲಿ ವಿಡಿಯೋ ಎಲ್ಲಿಯದ್ದು ಮತ್ತು ಯಾವಾಗದ್ದು ಎಂದು ನಿಜವಾದ ಮಾಹಿತಿ ಕೊಡಲಾಗಿದೆ.

ಹಿಂದಿ ಸುದ್ದಿ ವಾಹಿನಿ ‘ಭಾರತ್‌ವರ್ಷ್‌24×7’ನ ಫೇಸ್‌ಬುಕ್‌ ಖಾತೆಯಲ್ಲೂ ಮೇಲಿನ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, “ಮೇ 3,2022ರಂದು ಈದುಲ್‌ ಫಿತರ್ ಅಂಗವಾಗಿ ಮುಸ್ಲಿಮರು ನಮಾಝ್ ಮುಗಿಸಿ ಬರುವ ದೃಶ್ಯ” ಎಂದು ಬರೆಯಲಾಗಿದೆ. “ಹಿಂದೂಗಳು ಮುಸ್ಲಿಮರಿಗೆ ಆಹಾರ ವಿತರಿಸಿ, ಹಬ್ಬದ ಸುಭಾಶಯ ತಿಳಿಸಿ ಕೋಮು ಸೌಹಾರ್ದತೆ ಸಾರಿದ್ದಾರೆ” ಎಂದು ವರದಿ ಹೇಳಿದೆ.

ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದ ವಿಚಾರವೇನೆಂದರೆ, ಮುಸ್ಲಿಮರು ಗುಂಪಾಗಿ ಬರುತ್ತಿರುವ ವಿಡಿಯೋ ಮೇ 3,2022ರಂದು ಈದುಲ್ ಫಿತರ್ ಪ್ರಯುಕ್ತ ಉತ್ತರಾಖಂಡದ ಹರಿದ್ವಾರದ ಜ್ವಾಲಾಪುರ ಈದ್ಗಾದಲ್ಲಿ ನಮಾಝ್ ಮುಗಿಸಿ ಬಂದಿರುವುದಾಗಿ. ಇದು ಇತ್ತೀಚಿನ ವಿಡಿಯೋ ಅಲ್ಲ, ಯಾವುದೇ ಕೋಮು ಸಂಘರ್ಷ, ಪ್ರತಿಭಟನೆಗೆ ಸಂಬಂಧಿಸಿದಲ್ಲ.

ಇದನ್ನೂ ಓದಿ : Fact Check: ‘ಬಾಬ್ರಿ ಮಸೀದಿಯ ಜಾಗ ಮರಳಿ ಮುಸ್ಲಿಮರಿಗೆ ಸಿಗಲಿದೆ’ ಎಂದು ಗ್ರ್ಯಾಂಡ್ ಮುಫ್ತಿ ಎಪಿ ಉಸ್ತಾದ್ ಹೇಳಿದ್ರಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶನ: ದೆಹಲಿಯ ಮೆಕ್‌ಡೊನಾಲ್ಡ್ಸ್ ಹೊರಗೆ ಪ್ರತಿಭಟನೆ

ಪ್ಯಾಲೆಸ್ಟೈನ್ ಜೊತೆ ಒಗ್ಗಟ್ಟಿನ ಭಾರತೀಯ ಜನರು (ಐಪಿಎಸ್‌ಪಿ) ಗುಂಪಿನ ಸದಸ್ಯರು (ಏ.3) ಜನಪಥ್ ಪ್ರದೇಶದ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನ ಹೊರಗೆ ದಿಢೀರ್ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ಯಾಲೆಸ್ತೀನಿಯನ್ನರನ್ನು ಒಳಗೊಂಡ ನಡೆಯುತ್ತಿರುವ ಸಂಘರ್ಷದಲ್ಲಿ ಮೆಕ್‌ಡೊನಾಲ್ಡ್ಸ್ ಮತ್ತು ಕೋಕಾ-ಕೋಲಾದಂತಹ ಬಹುರಾಷ್ಟ್ರೀಯ...

‘ಇರಾನಿಯನ್ನರು ಸ್ಮಾರ್ಟ್ ಚೆಸ್ ಆಡುತ್ತಿದ್ದು, ಟ್ರಂಪ್ ಭ್ರಮಾಲೋಕದಲ್ಲಿದ್ದಾರೆ..’; ಮಾಜಿ ರಾಜತಾಂತ್ರಿಕ ಅಧಿಕಾರಿ ಕೆ.ಪಿ. ಫ್ಯಾಬಿಯನ್

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ ಭಾರತದ ಮಾಜಿ ರಾಯಭಾರಿ ಕೆ.ಪಿ. ಫ್ಯಾಬಿಯನ್, "ಇರಾನಿಯನ್ನರು ಸ್ಮಾರ್ಟ್ ಚೆಸ್ ಆಟವನ್ನು ಆಡುತ್ತಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು...

‘ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ’ : ಎಎಪಿ ಆರೋಪಗಳನ್ನು ತಳ್ಳಿ ಹಾಕಿದ ರಾಘವ್ ಚಡ್ಡಾ

ತನ್ನ ವಿರುದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಮಾಡಿರುವ ಎಲ್ಲಾ ಆರೋಪಗಳನ್ನು ರಾಘವ್ ಚಡ್ಡಾ ಶನಿವಾರ (ಏ.4) ಅಲ್ಲಗಳೆದಿದ್ದು, "ಅವೆಲ್ಲವೂ ಸುಳ್ಳು ಮತ್ತು ಸಂಘಟಿತ ಅಭಿಯಾನದ ಭಾಗ" ಎಂದಿದ್ದಾರೆ. "ಸಂಸತ್ತಿನಲ್ಲಿ ನನ್ನ ಉದ್ದೇಶ...

ಎಡರಂಗದಲ್ಲಿ ಎಡಪಂಥೀಯರೇ ಇಲ್ಲ; ದ್ವೇಷ ಹರಡುವ ಜನರೊಂದಿಗೆ ಪಿಣರಾಯಿ ಪಾಲುದಾರಿಕೆ ಹೊಂದಿದ್ದಾರೆ: ರಾಹುಲ್ ಗಾಂಧಿ

ಕೇರಳ ವಿಧಾನಸಭಾ ಚುನಾವಣೆ ಪ್ರಚಾರವು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ತೀಕ್ಷ್ಣವಾದ ರಾಜಕೀಯ ದಾಳಿಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸಿಪಿಐ-ಎಂ ನೇತೃತ್ವದ ಎಡಪಕ್ಷವು ತನ್ನ ಸೈದ್ಧಾಂತಿಕ ತಿರುಳನ್ನು ಕಳೆದುಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ. "ಎಲ್‌ಡಿಎಫ್...

ಬಿಜೆಪಿ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಅಂದಿದ್ದೆ : ಅಣ್ಣಾಮಲೈ

"ವಿಧಾನಸಭಾ ಚುನಾವಣೆಗೆ ಬಿಜೆಪಿ ನನಗೆ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಎಂದು ಮುಂಚಿತವಾಗಿ ಹೈಕಮಾಂಡ್‌ಗೆ ತಿಳಿಸಿದ್ದೆ" ಎಂದು ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ...

ಸುರಕ್ಷಿತವಾಗಿ ಹಾರ್ಮುಜ್ ದಾಟಿದ 7ನೇ ಎಲ್‌ಪಿಜಿ ಹಡಗು; ಸರದಿಯಲ್ಲಿ ಕಾಯುತ್ತಿವೆ ಭಾರತದ 17 ಟ್ಯಾಂಕರ್‌ಗಳು

ಭಾರತದ ಧ್ವಜ ಹೊಂದಿದ್ದ ಮತ್ತೊಂದು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಟ್ಯಾಂಕರ್, ಗ್ರೀನ್ ಸಾನ್ವಿ ಹೆಸರಿನ ಹಡಗು ಹಾರ್ಮುಜ್ ಜಲಸಂಧಿಯ ಪೂರ್ವಕ್ಕೆ ಯಶಸ್ವಿಯಾಗಿ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ನಡೆಯುತ್ತಿರುವ ಪಶ್ಚಿಮ...

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...