Homeಮುಖಪುಟಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಹಡಗಿಗೆ ಬಂದರಿನಲ್ಲಿ ನಿಲುಗಡೆ ನಿಷೇಧಿಸಿದ ಸ್ಪೇನ್

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಹಡಗಿಗೆ ಬಂದರಿನಲ್ಲಿ ನಿಲುಗಡೆ ನಿಷೇಧಿಸಿದ ಸ್ಪೇನ್

- Advertisement -
- Advertisement -

ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗನ್ನು ಸ್ಪೇನ್ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಗುರುವಾರ ಹೇಳಿದ್ದಾರೆ.

“ಇದೇ ಮೊದಲ ಬಾರಿಗೆ ನಾವು ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿಗೆ ಅನುಮತಿ ನಿರಾಕರಿಸಿದ್ದೇವೆ. ಏಕೆಂದರೆ, ಸ್ಪ್ಯಾನಿಷ್ ಬಂದರಿನಲ್ಲಿ ನಿಲುಗಡೆ ಬಯಸಿದ್ದ ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿನಲ್ಲಿ ಇದೇ ಮೊದಲ ಬಾರಿಗೆ ನಾವು ಶಸ್ತ್ರಾಸ್ತ್ರ ಪತ್ತೆ ಹಚ್ಚಿದ್ದೇವೆ” ಎಂದು ಅಲ್ಬರೆಸ್ ತಿಳಿಸಿದ್ದಾರೆ.

“ಇಸ್ರೇಲ್‌ಗೆ ಶಸ್ತ್ರಾಸ್ತ್ರ ಹೊತ್ತೊಯ್ಯುವ ಎಲ್ಲಾ ಹಡಗುಗಳಿಗೆ ಸ್ಪ್ಯಾನಿಷ್ ಬಂದರಿನಲ್ಲಿ ಇದೇ ನಿಯಮ ಅನ್ವಯಿಸಲಿದೆ. ವಿದೇಶಾಂಗ ಸಚಿವಾಲಯ ಒಂದು ಸ್ಪಷ್ಟ ಕಾರಣಕ್ಕಾಗಿ ಅಂತಹ ಹಡಗುಗಳ ನಿಲುಗಡೆಗೆ ಅವಕಾಶ ನಿರಾಕರಿಸಿದೆ. ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿಲ್ಲ, ಅಲ್ಲಿ ಶಾಂತಿ ನೆಲೆಸಬೇಕು” ಎಂದು ಅಲ್ಬರೆಸ್ ಹೇಳಿದ್ದಾರೆ.

ಅಲ್ಬರೆಸ್ ಅವರು ಹಡಗಿನ ಬಗ್ಗೆ ವಿವರಗಳನ್ನು ನೀಡಿಲ್ಲ. ಆದರೆ, ಸ್ಪೇನ್‌ನ ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಅವರು “ಮೇ 21 ರಂದು ಕಾರ್ಟೇಜಿನಾದ ಆಗ್ನೇಯ ಬಂದರಿನಲ್ಲಿ ನಿಲುಗಡೆಗೆ ‘ಮೇರಿಯಾನ್ನೆ ಡ್ಯಾನಿಕಾ’ ಎಂಬ ಹಡಗು ಅನುಮತಿ ಕೋರಿತ್ತು ಎಂದು ತಿಳಿಸಿದ್ದಾರೆ.

ಡ್ಯಾನಿಶ್ ಧ್ವಜ ಹೊಂದಿದ್ದ ಈ ಹಡಗು ಭಾರತದ ಚೆನ್ನೈನಿಂದ ಇಸ್ರೇಲ್‌ನ ಹೈಫಾ ಬಂದರಿಗೆ 27 ಟನ್ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿತ್ತು ಎಂದು ವರದಿಗಳು ಹೇಳಿವೆ.

ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಜ್ ಮತ್ತು ಅವರ ಸಮ್ಮಿಶ್ರ ಪಾಲುದಾರರಾದ ಎಡಪಂಥೀಯ ‘ಸುಮಾರ್ ಒಕ್ಕೂಟ’ ಶುಕ್ರವಾರ ಕಾರ್ಟೇಜಿನಾ ಬಂದರಿನಲ್ಲಿ ಶುಕ್ರವಾರ ನಿಲುಗಡೆ ಬಯಸಿದ್ದ ‘ಬೋರ್ಕಮ್’ ಎಂಬ ಮತ್ತೊಂದು ಹಡಗಿನ ಮೇಲೂ ಈ ಘೋಷಣೆ ಮಾಡಿದೆ.

‘ಬೋರ್ಕಮ್’ ಹಡಗು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿದೆ ಎಂದು ಪ್ಯಾಲೆಸ್ತೀನ್ ಪರ ಗುಂಪುಗಳು ಹೇಳಿವೆ. ಈ ಹಡಗಿಗೂ ನಿಲುಗಡೆ ನಿಷೇಧಿಸಬೇಕು ಎಂದು ‘ಸುಮಾರ್’ ಒಕ್ಕೂಟ ಒತ್ತಾಯಿಸಿದೆ. ಆದರೆ, ಬೋರ್ಕಮ್ ಹಡಗು ಮಿಲಿಟರಿ ವಸ್ತುಗಳನ್ನು ಜೆಕ್ ಗಣರಾಜ್ಯಕ್ಕೆ ಸಾಗಿಸುತ್ತಿದೆ, ಇಸ್ರೇಲ್ ಅಲ್ಲ ಎಂದು ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಹೇಳಿದ್ದಾರೆ.

ಗಾಝಾ ಮೇಲಿನ ಇಸ್ರೇಲ್ ಆಕ್ರಮಣವನ್ನು ಕಟುವಾಗಿ ಖಂಡಿಸಿದ ಯುರೋಪಿನ ಪ್ರಮುಖ ದೇಶಗಳಲ್ಲಿ ಸ್ಪೇನ್ ಮೊದಲ ಮುಂಬದಿಯದಲ್ಲಿದೆ. ಪ್ಯಾಲೆಸ್ತೀನ್‌ ದೇಶದ ಹಕ್ಕುಗಳನ್ನು ಬೆಂಬಲಿಸಲು ಇತರ ಯುರೋಪಿಯನ್ ದೇಶಗಳಲ್ಲಿ ಸ್ಪೇನ್ ಕರೆ ನೀಡಿವೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಆಕ್ರಮಣ ಪ್ರಾರಂಭಿಸಿದ ನಂತರ ಸ್ಪೇನ್ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮಾರಾಟವನ್ನು ನಿಲ್ಲಿಸಿದೆ. 2023ರ ಅಕ್ಟೋಬರ್‌ನಿಂದ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣದಲ್ಲಿ 35 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ. ಇಸ್ರೇಲ್ ಆಕ್ರಮಣ ಈಗಲೂ ಮುಂದುವರೆಯುತ್ತಿದೆ.

ತಂಬ್‌ನೈಲ್ ಚಿತ್ರ ಸಾಂದರ್ಭಿಕ

ಇದನ್ನೂ ಓದಿ : ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನೆ ವಿಳಾಸ ಬಹಿರಂಗ : ಹಿಂದುತ್ವ ಪೋರ್ಟಲ್‌ಗಳು, ಅಭಿಜಿತ್ ಅಯ್ಯರ್-ಮಿತ್ರ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಿಜೆಪಿಯ ಸೌರವ್ ದಾಸ್

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್ ಅವರು ಹಿಂದುತ್ವ ಡಿಜಿಟಲ್ ಮಾಧ್ಯಮ ಪೋರ್ಟಲ್‌ಗಳು, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಬಲಪಂಥೀಯ ರಾಜಕೀಯ ವಿಶ್ಲೇಷಕ ಅಭಿಜಿತ್ ಅಯ್ಯರ್-ಮಿತ್ರ ಅವರ ವಿರುದ್ಧ ದೆಹಲಿ...

ದಾಖಲೆಗಳಿದ್ದರೂ ಬಂಗಾಳಿ ಮಾತನಾಡುವ ಕಾರಣಕ್ಕೆ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿದ ಅಧಿಕಾರಿಗಳು?

ನವಿ ಮುಂಬೈನ 40 ವರ್ಷದ ಬಂಗಾಳಿ ಮಾತನಾಡುವ ಮಹಿಳೆಯೊಬ್ಬರನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂಬ ಶಂಕೆಯ ಮೇಲೆ ಬಂಧಿಸಿ, ಆಕೆ ಭಾರತದಲ್ಲೇ ಜನಿಸಿ ವಾಸಿಸುತ್ತಿದ್ದ ದಾಖಲೆಗಳನ್ನು ಕುಟುಂಬದವರು ಒದಗಿಸಿದರೂ, ಗಡಿಯಾಚೆಗೆ ಕಳುಹಿಸಲಾಗಿದೆ ಎಂದು...

ಬಾರ್ ಕೌನ್ಸಿಲ್ ಅಧ್ಯಕ್ಷರ ವಿರುದ್ಧ ₹150 ಕೋಟಿ ಅಕ್ರಮ ಆರೋಪ: ತಕ್ಷಣವೇ ರಾಜೀನಾಮೆ ನೀಡಲು ಒತ್ತಾಯ

ಭಾರತೀಯ ಬಾರ್ ಕೌನ್ಸಿಲ್ (BCI) ಉಪಾಧ್ಯಕ್ಷ ಮತ್ತು ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಅವರು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ರಾಜೀನಾಮೆಗೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ...

ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಮಾಧ್ಯಮಕ್ಕೆ ಅನ್ಯಾಯ : ಹೈಕೋರ್ಟ್‌ಗೆ ಅರ್ಜಿ

ಕರ್ನಾಟಕ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಮಾಧ್ಯಮ ಹಾಗೂ ಇತರ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಹುದ್ದೆಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನ ಧಾರವಾಡ ಪೀಠದ ಮುಂದೆ ಅರ್ಜಿ ಸಲ್ಲಿಕೆಯಾಗಿದೆ. ಉರ್ದು...

ಚುನಾವಣಾ ಆಯೋಗಕ್ಕೆ ನಕಲಿ ಆಕ್ಷೇಪಣೆ ಪತ್ರ ಸಲ್ಲಿಕೆ; ಉತ್ತರಾಖಂಡ್ ಹಾಲಿ ಕಾಂಗ್ರೆಸ್ ಶಾಸಕರ ಹೆಸರು ಡಿಲೀಟ್

ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಕೋರಿ ಸಲ್ಲಿಸಲಾದ ಆಕ್ಷೇಪಣೆಯನ್ನು (ಅರ್ಜಿ) ನಾನು ಸಲ್ಲಿಸಿಲ್ಲ ಎಂದು ವ್ಯಕ್ತಿಯೊಬ್ಬರು ನಿರಾಕರಿಸಿದ ನಂತರ, ಉತ್ತರಾಖಂಡ್ ಕಾಂಗ್ರೆಸ್ ಶಾಸಕ ಫುರ್ಕಾನ್ ಅಹಮದ್ ಅವರು ಮತದಾರರ ಪಟ್ಟಿಯ ವಿಶೇಷ ತೀವ್ರ...

RTI ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ: ₹24 ಲಕ್ಷ ದೇವಸ್ಥಾನದ ಕಾಣಿಕೆ ಹಣ ಮನೆಗೆ ಕೊಂಡೊಯ್ದಿದ್ದ ನರೇಶ್ ಶೆಣೈ

RTI ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಲನ ಮೂಡಿಸುವಂತಹ ಮಹತ್ವದ ದಾಖಲೆಯೊಂದು ಬಹಿರಂಗವಾಗಿದೆ. ಬಾಳಿಗಾ ಹತ್ಯೆ ನಡೆಯುವುದಕ್ಕೂ ಕೆಲವೇ ದಿನಗಳ ಮುನ್ನ, ಪ್ರಕರಣದ ಪ್ರಮುಖ ಆರೋಪಿ ನರೇಶ್...

ಸಿಜೆಪಿ ಪ್ರತಿಭಟನೆ: ಪೊಲೀಸ್ ದೌರ್ಜನ್ಯಗಳ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸುಪ್ರೀಂ ಆದೇಶ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ನಡೆಸಿದ ಅತಿಯಾದ ಬಲಪ್ರಯೋಗ, ಹಿಂಸಾಚಾರ ಮತ್ತು ಇತರ ಗಂಭೀರ ದುರ್ನಡತೆಯ ಆರೋಪಗಳ ತನಿಖೆಗೆ ಉನ್ನತ...

ನಕಲಿ ಔಷಧ ದಂಧೆ: ತನಿಖೆಗೆ ಕಾನೂನು ತೊಡಕು, ಎಸ್‌ಐಟಿಗೆ ವಿಶೇಷಾಧಿಕಾರಕ್ಕೆ ಬೇಡಿಕೆ

ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಬೆಳಕಿಗೆ ಬಂದಿರುವ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಬೃಹತ್ ನಕಲಿ ಔಷಧ ದಂಧೆಯ ತನಿಖೆಗೆ ಗಂಭೀರವಾದ ಕಾನೂನು ತೊಡಕು...

ಸಿಜೆಪಿ ಸ್ವಯಂ ಸೇವಕರ ಮೇಲೆ ದಾಳಿ | ರಾಜಸ್ಥಾನದ ಬಿಜೆಪಿ ಸರ್ಕಾರಕ್ಕೆ 3 ಬೇಡಿಕೆಗಳನ್ನು ಮುಂದಿಟ್ಟ ಅಭಿಜೀತ್ ದೀಪ್ಕೆ : ಈಡೇರಿಸಲು 48 ಗಂಟೆಗಳ ಗಡುವು

ಸರ್ಕಾರಿ ಶಾಲೆಯ ದುಃಸ್ಥಿತಿಯನ್ನು ಪರಿಶೀಲಿಸಲು ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಹ-ಸಂಘಟಕ ಆಶುತೋಷ್ ರಾಂಕಾ ಮತ್ತು ಇತರ ಸ್ವಯಂಸೇವಕರ ಮೇಲೆ ದಾಳಿ ನಡೆಸಿರುವುದನ್ನು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು...

ಸಾರ್ವಜನಿಕರ ಉಪಸ್ಥಿತಿಯಿಲ್ಲದ ಮುಚ್ಚಿದ ಸ್ಥಳದಲ್ಲಿ ಜಾತಿ ನಿಂದನೆ: ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ 

ಸಾರ್ವಜನಿಕ ಪ್ರವೇಶವಿಲ್ಲದ ಮತ್ತು ಸಾರ್ವಜನಿಕರ ಉಪಸ್ಥಿತಿಯಿಲ್ಲದ ನಾಲ್ಕು ಗೋಡೆಗಳ ನಡುವೆ ಅಥವಾ ಸುತ್ತುವರಿದ ಮುಚ್ಚಿದ ಜಾಗದಲ್ಲಿ ನಡೆದಿದೆ ಎನ್ನಲಾದ ಜಾತಿ ಆಧಾರಿತ ನಿಂದನೆ ಅಥವಾ ವಾಗ್ವಾದಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ...