Homeಮುಖಪುಟಕಳ್ಳತನ ಆರೋಪ: ದಲಿತ ಬಾಲಕ, ವೃದ್ಧೆಗೆ ಅಮಾನವೀಯವಾಗಿ ಥಳಿಸಿದ ರೈಲ್ವೆ ಪೊಲೀಸರು

ಕಳ್ಳತನ ಆರೋಪ: ದಲಿತ ಬಾಲಕ, ವೃದ್ಧೆಗೆ ಅಮಾನವೀಯವಾಗಿ ಥಳಿಸಿದ ರೈಲ್ವೆ ಪೊಲೀಸರು

- Advertisement -
- Advertisement -

ಮಧ್ಯಪ್ರದೇಶದ ಕಟ್ನಿಯಲ್ಲಿರುವ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸರ ಗುಂಪು ಹದಿಹರೆಯದ ಯುವಕ ಮತ್ತು ಆತನ ಅಜ್ಜಿಯನ್ನು ಅಮಾನವೀಯವಾಗಿ ಥಳಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

15 ವರ್ಷದ ದಲಿತ ಬಾಲಕ ಮತ್ತು ಆತನ ಅಜ್ಜಿಯನ್ನು ಅಧಿಕಾರಿಗಳು ಥಳಿಸಿದ ವಿಡಿಯೋ ವೈರಲ್ ಆದ ಬಳಿಕ, ವಿವಾದದ ನಡುವೆಯೇ ಒಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

2023 ರ ಅಕ್ಟೋಬರ್‌ನದ್ದು ಎನ್ನಲಾದ ವಿಡಿಯೊದಲ್ಲಿ ಜಬಲ್‌ಪುರದ ಕಟ್ನಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ನಿಲ್ದಾಣದ ಉಸ್ತುವಾರಿ ಅಧಿಕಾರಿ ಅರುಣಾ ವಗಾನೆ ಅವರು ಮಹಿಳೆ ಕುಸುಮ್ ವಂಸ್ಕರ್‌ ಮತ್ತು ಆಕೆಯ ಮೊಮ್ಮಗನನ್ನು ಕೋಲಿನಿಂದ ಹೊಡೆದು ನೆಲಕ್ಕೆ ಬೀಳಿಸಿ, ಕಾಲಿನಿಂದ ಒದೆಯುವುದನ್ನು ಕಾಣಬಹುದಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಪೊಲೀಸ್ ಅಧಿಕಾರಿಗಳ ಗುಂಪು ಬಾಲಕನನ್ನು ಥಳಿಸುತ್ತಿರುವುದನ್ನು ಮತ್ತು ಒದೆಯುತ್ತಿರುವುದನ್ನು ದಾಖಲಾಗಿದೆ.

ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ವಿವಾದದ ಬೆನ್ನಲ್ಲೇ ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ.

ರಾಜ್ಯದಲ್ಲಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿದ ಕಾಂಗ್ರೆಸ್ ನಾಯಕರು, ಈ ಘಟನೆಯನ್ನು ‘ದಲಿತರ ಮೇಲಿನ ದಬ್ಬಾಳಿಕೆ’ಗೆ ಉದಾಹರಣೆ ಎಂದು ಉಲ್ಲೇಖಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ದಲಿತರ ದಬ್ಬಾಳಿಕೆಯು ಬಿಜೆಪಿಯ ದೊಡ್ಡ ಅಸ್ತ್ರವಾಗಿದೆ” ಎಂದು ಆರೋಪಿಸಿ, ರಾಜಕೀಯ ದುರುದ್ದೇಶದ ಈ ಆಟ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು “ಭೀಕರ ಘಟನೆ” ಎಂದು ಕರೆದ ಅವರು, “ಬಿಜೆಪಿಯ ದುರಾಡಳಿತದಲ್ಲಿ ಮಧ್ಯಪ್ರದೇಶದ ದಲಿತರು ಭೀಕರ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯದ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರೆ.

ಮಧ್ಯಪ್ರದೇಶ ಯುವ ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಸರ್ಕಾರವನ್ನು ಗುರಿಯಾಗಿಸಿದೆ, ಪೊಲೀಸರು “ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಮೂಲಕ ಜನರನ್ನು ಕೊಲ್ಲುತ್ತಿದ್ದಾರೆ” ಎಂದು ಹೇಳಿದರು.

ಅಧಿಕಾರಿ ಅರುಣಾ ವಾಗನೆ ಪ್ರಕಾರ, ಕುಸುಮ್ ವಂಸ್ಕರ್ ಅವರ ಮಗ ಮತ್ತು ದೀಪಕ್ ಅವರ ತಂದೆ ದೀಪಕ್ ವಂಸ್ಕರ್ ವಿರುದ್ಧ 19 ಪ್ರಕರಣಗಳಿವೆ. ಅವರು ರೈಲ್ವೆ ಪೊಲೀಸರಿಗೆ ಬೇಕಾಗಿದ್ದಾರೆ, ಅವನನ್ನು ಸೆರೆಹಿಡಿಯಲು 10,000 ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ಅವನ ಇಡೀ ಕುಟುಂಬವು ಕಳ್ಳತನದಲ್ಲಿ ಬೆಂಬಲ ನೀಡುತ್ತಿತ್ತು, ಆದ್ದರಿಂದ ಅವನ ಕುಟುಂಬ ಸದಸ್ಯರನ್ನು ವಿಚಾರಣೆಗಾಗಿ ಕರೆತರಲಾಯಿತು ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ನಂತರ, ದೀಪಕ್ ವಾಂಸ್ಕರ್ ಅವರನ್ನು ಬಂಧಿಸಲಾಗಿದ್ದು, ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.

ಆಕ್ರೋಶದ ನಂತರ, ಜಬಲ್‌ಪುರ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಆರ್‌ಪಿ) ಅವರು ಸ್ಟೇಷನ್ ಇನ್‌ಚಾರ್ಜ್ ಅನ್ನು ಅಮಾನತುಗೊಳಿಸಿದ್ದಾರೆ. ಇಲಾಖಾ ಪೊಲೀಸ್ ವರಿಷ್ಠಾಧಿಕಾರಿ ಅಡಿಯಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ದೀಪಕ್ ವಂಸ್ಕರ್ ಕಳ್ಳತನ ಹಿನ್ನೆಲೆ ವ್ಯಕ್ತಿಯಾಗಿದ್ದು, 2017 ರಿಂದ ಕಣ್ಗಾವಲಿನಲ್ಲಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ದೂರು ದಾಖಲಾದರೆ ಪೊಲೀಸ್ ವಿಚಾರಣೆ ನಡೆಸಲಾಗುವುದು ಎಂದು ಕಟ್ನಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸೆಹ್ರಿಯಾ ತಿಳಿಸಿದ್ದಾರೆ.

“ವಿವಿಧ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ವೀಡಿಯೊವೊಂದು ವೈರಲ್ ಆಗಿದ್ದು, ಮೇಲ್ನೋಟಕ್ಕೆ ಇದು ಜಿಆರ್‌ಪಿ ಕಟ್ನಿ ಪ್ರಕರಣವೆಂದು ತೋರುತ್ತದೆ.. ಈ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ ಮತ್ತು ದೂರು ದಾಖಲಿಸಿದರೆ, ತನಿಖೆ ನಡೆಸಲಾಗುವುದು” ಎಂದು ಎಎಸ್‌ಪಿ ಸೆಹ್ರಿಯಾ ಹೇಳಿದರು.

ಇದನ್ನೂ ಓದಿ; ಜಾರ್ಖಂಡ್ ಮುಕ್ತಿ ಮೋರ್ಚಾದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ ಮಾಜಿ ಸಿಎಂ ಚಂಪೈ ಸೊರೇನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್: ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ.

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ...

ತಮಿಳುನಾಡು| ಮರ್ಯಾದೆಗೇಡು ಹತ್ಯೆ ಶಂಕೆ; 25 ವರ್ಷದ ದಲಿತ ಯುವಕನ ಭೀಕರ ಕೊಲೆ

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮರ್ಯಾದೆಗೇಡು ಕೊಲೆಯ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 16 ರಂದು ರಾತ್ರಿ ಚೆಂಗಲ್ಪಟ್ಟುವಿನ ಕೇಳಂಬಾಕ್ಕಂ ನಿವಾಸಿ ಪ್ರವೀಣ್ ಅವರ ಮೇಲೆ ದಾಳಿಕೋರರಾದ...

44 ಲಕ್ಷ ಮತದಾರರಿಗೆ ನೋಟಿಸ್: BLA ಗಳಿಗೆ ಪಟ್ಟಿ ನೀಡಿ, ಪಾರದರ್ಶಕತೆ ಕಾಯ್ದುಕೊಳ್ಳಲು ‘ಜಾಗೃತ ಕರ್ನಾಟಕ’ ಒತ್ತಾಯ

ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಪ್ರಕಟಗೊಳ್ಳುತ್ತಿರುವ ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಹಾಗೂ ನೋಟಿಸ್ ಪ್ರಕ್ರಿಯೆಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ಆಗ್ರಹಿಸಿ ‘ಜಾಗೃತ...

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ...

ಮತ್ತೆ ಜೈಲಿನಿಂದ ಹೊರಬಂದ ಅತ್ಯಾಚಾರಿ ರಾಮ್ ರಹೀಮ್! 6 ವರ್ಷದಲ್ಲಿ 17ನೇ ಬಾರಿ ಪೆರೋಲ್

ನವದೆಹಲಿ/ರೋಹ್ಟಕ್: ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಪುನಃ...

ಎಸ್‌ಐಆರ್‌ ಕರಡು ತಿರಸ್ಕರಿಸಿದ ನಾಗರಿಕ ಸಂಘಟನೆಗಳು; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ

ಆಗಸ್ಟ್ 24 ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಎಸ್‌ಐಆರ್‌ ಕರಡು ಪಟ್ಟಿಯನ್ನು ಕರ್ನಾಟಕದ ನಾಗರಿಕ ಸಂಘಟನೆಗಳು ತಿರಸ್ಕರಿಸಿದ್ದು, ಲಕ್ಷಾಂತರ ಮತದಾರರಿಗೆ ನೋಟಿಸ್‌ ಕೊಡಲು ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ...

‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ...

ಪತ್ರಕರ್ತ ಅಭಿಷೇಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಆದೇಶ

ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು,...

2027ರ ಜನಗಣತಿಯಲ್ಲಿ ಪೋಷಕರ ಧರ್ಮ, ಜನ್ಮಸ್ಥಳದ ವಿವರ ಏಕೆ? ಕೇಂದ್ರದ ವಿರುದ್ಧ ಸಿಪಿಐ(ಎಂ) ಆಕ್ರೋಶ

2027ರ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಧರ್ಮ ಹಾಗೂ ಜನ್ಮಸ್ಥಳದ ಕುರಿತಾದ ವಿವರಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದರ ವಿರುದ್ಧ ಸಿಪಿಐ(ಎಂ) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕ್ರಮವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವ...

ಟಿಎಂಸಿ ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಶಾಕ್: 20 ಎಂಪಿಗಳಿಗೆ ನೋಟಿಸ್ ಜಾರಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಜನಪ್ರಿಯವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟವನ್ನು ಸೇರಿಕೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಟಿಎಂಸಿ ಪ್ರಧಾನ...