Homeಕರ್ನಾಟಕನಕ್ಸಲ್  ವಿಕ್ರಂ ಗೌಡನದು ನಕಲಿ ಎನ್‌ಕೌಂಟರ್: ಸಿಪಿಐ (ಎಂಎಲ್) ಮಾಸ್ ಲೈನ್ ಖಂಡನೆ

ನಕ್ಸಲ್  ವಿಕ್ರಂ ಗೌಡನದು ನಕಲಿ ಎನ್‌ಕೌಂಟರ್: ಸಿಪಿಐ (ಎಂಎಲ್) ಮಾಸ್ ಲೈನ್ ಖಂಡನೆ

- Advertisement -
- Advertisement -

ಬೆಂಗಳೂರು: ಉಡುಪಿಯ ಕಬ್ಬಿನಾಲೆ ಸಮೀಪ, ನಕಲಿ ಎನ್ ಕೌಂಟರ್ ಮೂಲಕ ವಿಕ್ರಂ ಗೌಡ ನನ್ನು ಹತ್ಯೆ ಮಾಡಿರುವ ಪೋಲಿಸ್ ಇಲಾಖೆಯ ಕ್ರಮವನ್ನು   ಸಿಪಿಐ (ಎಂಎಲ್) ಮಾಸ್ ಲೈನ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಡಿ.ಹೆಚ್.ಪೂಜಾರ ರಾಜ್ಯ ಕಾರ್ಯದರ್ಶಿ ಹೇಳಿದ್ದಾರೆ.

ನಮ್ಮ ಸಿಪಿಐಎಂಎಲ್ ಮಾಸ್ ಲೈನ್ ಪಕ್ಷವು ನಕ್ಸಲ್ ರಾಜಕೀಯ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ  ಪ್ರಜಾತಾಂತ್ರಿಕ ಹಕ್ಕುಗಳನ್ನು ದಮನ  ಮಾಡುವ  ಮತ್ತು ಸರ್ಕಾದ   ಸಂವಿಧಾನ ವಿರೋಧಿ  ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಮಾಜವಾದಿ ಸಿದ್ದಾಂತದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಿಂದ ನಡೆದ ಈ ಹತ್ಯೆ ಕೆಲವರಿಗೆ ತೀವ್ರ  ಆಘಾತವಾಗಿದೆ ಎಂದು ಪಕ್ಷದ ವತಿಯಿಂದ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಂದು ವಾರದ ಹಿಂದೆ ಬಂಧಿಸಿ ಕೊಲೆ ಮಾಡಲಾಗಿದೆ ಎಂದು ರಾಜ್ಯದ ಅನೇಕ ಪ್ರಗತಿಪರರು ಅನುಮಾನ ವ್ಯಕ್ತಪಡಿಸಿದ್ದಾರೆ. ಎನ್ ಕೌಂಟರ್ ಕಾರ್ಯ ನಡೆದಿದ್ದರೆ, ಪೋಲಿಸ್ ರಿಗೆ ಗಾಯಗಳಾಗಬೇಕಿತ್ತು. ಸತತ ಒಂದು ವಾರದ ಬೆಳವಣಿಗೆಯನ್ನು ಗಮನಿಸಿದರೆ ನಕಲಿ ಎನ್ ಕೌಂಟರ್ ಎನ್ನುವುದ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.

ಕಳೆದ 10 ವರ್ಷಗಳಿಂದ ಕರ್ನಾಟಕದಲ್ಲಿ ನಕ್ಸಲ್ ಕಾರ್ಯಚಟುವಟಿಕೆಗಳು ಮತ್ತು ಹಿಂಸಾತ್ಮಕ ಕೃತ್ಯಗಳು ನಡೆದಿಲ್ಲ. ಈ ರೀತಿಯ ವ್ಯಕ್ತಿಗಳನ್ನು ಕೊಲ್ಲುವುದರೊಂದಿಗೆ ಪ್ರಜಾತಂತ್ರಿಕ ಚಳುವಳಿಗಾರರನ್ನು ಬೆದರಿಸುವ ರಾಜಕೀಯ ತಂತ್ರವನ್ನು ಪ್ರತಿಯೊಬ್ಬರು ಖಂಡಿಸಬೇಕು. ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಿ ಸತ್ಯಾಸತ್ಯತೆಯ ವಾಸ್ತವವನ್ನು ರಾಜ್ಯದ ಜನತೆಗೆ ತಿಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.

ನಕ್ಸಲರ ಹೋರಾಟದ ದಾರಿ ಸರಿ ಇಲ್ಲದಿರಬಹುದು, ಅವರ ಬೇಡಿಕೆಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಎಷ್ಟೋ ಬಾರಿ ಸರ್ಕಾರದ ಮುಖ್ಯಸ್ಥರುಗಳೇ ನಕ್ಸಲ್ ಚಳವಳಿಯ ಬದ್ದತೆಯನ್ನು ಶ್ಲಾಘಿಸಿದ್ದಿದೆ. “ನಕ್ಸಲರು ಎಂದರೆ ಅನ್ಯಾಯದ ವಿರುದ್ದ ಹೋರಾಡುವ ಪಡೆ” ಎಂದು ವಿಧಾನಸಭೆ ಅಧ್ಯಕ್ಷ ಪೀಠದಿಂದಲೇ ಕಾಗೋಡು ತಿಮ್ಮಪ್ಪನವರು ಹೇಳಿದ್ದರು‌. ನಕ್ಸಲ್ ಚಳವಳಿ ಎನ್ನುವುದು ಶೋಕಿಗಾಗಿಯೋ, ವೈಯುಕ್ತಿಕ ಲಾಭಕ್ಕಾಗಿಯೋ ನಡೆಸುವ ಅಪರಾಧ ಅಲ್ಲ. ನಕ್ಸಲರ ಬೇಡಿಕೆಗಳು ದಲಿತ, ಆದಿವಾಸಿಗಳ ‘ಕನಿಷ್ಠ ಘನತೆಯ ಬದುಕಿಗಾಗಿ’ ನಡೆಯುವ ಹೋರಾಟ. ಎನ್ ಕೌಂಟರ್ ಗಳನ್ನು ಸಂಭ್ರಮಿಸುವುದಕ್ಕೂ ಮೊದಲು ನಕ್ಸಲರು ಯಾರಿಗಾಗಿ, ಯಾಕಾಗಿ ಹೋರಾಟ ಮಾಡುತ್ತಾರೆ ಎಂಬುದನ್ನು ತಿಳಿಯಬೇಕು ಎಂದು ಪೂಜಾರ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅರಣ್ಯದಲ್ಲಿ ವಾಸಿಸುವ ಆದಿವಾಸಿ, ದಲಿತರು ತಮ್ಮ ವಾಸಿಸುವ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಅವರನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಕಾರಣಕ್ಕಾಗಿ ಒಕ್ಕಲೆಬ್ಬಿಸುತ್ತಿದ್ದಾರೆ. ಆದಿವಾಸಿಗಳನ್ನು ಹೊರಹಾಕಿ ರೆಸಾರ್ಟ್, ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡುತ್ತದೆ. ನಾಗರಿಕ ಸಮಾಜದಿಂದ ನಿರ್ಲಕ್ಷಿತವಾಗಿರುವ ಆದಿವಾಸಿ ಸಮುದಾಯದ ಹಕ್ಕುಗಳಿಗಾಗಿ ನಕ್ಸಲರು ಹೋರಾಡುತ್ತಾರೆ. ಅರಣ್ಯವಾಸಿ ದಲಿತ, ಬುಡಕಟ್ಟುಗಳ ಬಹಳಷ್ಟು ಜಮೀನುಗಳನ್ನು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ತೆಗೆದುಕೊಂಡಿರುವುದರಿಂದ ಅವರ ಬದುಕು ದುಸ್ಥರವಾಗಿದೆ. ಈಗ ಆದಿವಾಸಿಗಳು ಅರಣ್ಯದಲ್ಲಿ ಕೃಷಿ ಮಾಡುವಂತಿಲ್ಲ, ಅರಣ್ಯ ಉತ್ಪತ್ತಿ ಸಂಗ್ರಹಿಸುವಂತಿಲ್ಲ. ಬಡತನ ಮತ್ತು ಸಮಾನತೆ ಕೊರತೆಯ ವಿರುದ್ಧ ನಕ್ಸಲರು ಹೋರಾಟವನ್ನು ನಡೆಸಿದ್ದಾರೆ. ಅದು ಅವರಿಗೆ ಸ್ಥಳೀಯ ಜನರಿಂದ ಕೆಲವು ಮಟ್ಟದ ಬೆಂಬಲವನ್ನು ತಂದುಕೊಟ್ಟಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಲೆನಾಡು ಪ್ರದೇಶದಲ್ಲಿ ತೋಟದ ಕಾರ್ಮಿಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ನೂರಾರು, ಸಾವಿರಾರು ಎಕರೆ ತೋಟ ಹೊಂದಿರುವ ಭೂಮಾಲಕರು ತೋಟದ ಕಾರ್ಮಿಕರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಾರೆ. ಅದರ ವಿರುದ್ದದ ಜನಚಳವಳಿಯನ್ನೂ ನಕ್ಸಲರು ನಡೆಸುತ್ತಾರೆ.  ಮೂಲನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು‌. ಶತಶತಮಾನದಿಂದ ಬಾಳಿ ಬದುಕಿರುವ ಭೂಮಿ ಅವರದ್ದಾಗಬೇಕು. ರಸ್ತೆ, ನೀರು, ವಿದ್ಯುತ್ ಒದಗಿಸಬೇಕು. ಮಲೆನಾಡು ಭಾಗದಲ್ಲಿ ಇನ್ನೂ ಜಮೀನ್ದಾರಿ ಪದ್ದತಿ ಜಾರಿಯಲ್ಲಿದೆ. ಒಬ್ಬೊಬ್ಬ ಜಮೀನ್ದಾರನೂ ಸಾವಿರಾರು ಎಕರೆ ಭೂಮಿ ಹೊಂದಿದ್ದಾನೆ. ಆತ ದುಡಿಮೆಯ ಹಣದಿಂದ ಅಷ್ಟೊಂದು ಪ್ರಮಾಣದ ಭೂಮಿ ಖರೀಧಿಸಿಲ್ಲ. ವಂಶಪಾರಂಪರ್ಯವಾಗಿ ಸಾವಿರಾರು ಎಕರೆ ಭೂಮಿ ಬಂದಿದೆ. ಅದು ಜಮೀನ್ದಾರಿ ಪದ್ದತಿಯ ಮುಂದುವರಿಕೆ ಆಗುತ್ತದೆ. ಹಾಗಾಗಿ ಅಂತಹ ಭೂಮಿಗಳನ್ನು ಸಮಾನ ಹಂಚಿಕೆ ಮಾಡಿ ಜಮೀನ್ದಾರಿ ಪದ್ದತಿಯನ್ನು ಕೊನೆಗಾಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ...ಹೃದಯಹೀನ ಸರ್ಕಾರದ ನೀತಿ, ಕ್ರಾಂತಿಯ ಅಪ್ರಯೋಗಿಕ ಹಾದಿ ವಿಕ್ರಂ ಗೌಡ ದುರಂತ ಅಂತ್ಯಕ್ಕೆ ಕಾರಣ: ನೂರು ಶ್ರೀಧರ್ ಮ

ರಾಜಕಾರಣಿಗಳು ಮತ್ತು ವ್ಯವಸ್ಥೆಯು ಆದಿವಾಸಿ, ದಲಿತರು, ಅಲ್ಪಸಂಖ್ಯಾತರ ಬದುಕಿನ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಬೇಕೇ ಹೊರತು ಕೋಮುವಾದದ ಮೂಲಕ ಜನರನ್ನು ಒಡೆದು ಆಳಬಾರದು. ಈ ಬೇಡಿಕೆಗಳಿಗೆ ನಕ್ಸಲರನ್ನು ಎನ್ ಕೌಂಟರ್ ಮಾಡುವುದು ಪರಿಹಾರವೇ ? ನಕ್ಸಲರ ಕೊಲೆಯಿಂದ ಜನರ ಈ ಸಮಸ್ಯೆ ಬಗೆಹರಿಯುತ್ತದೆಯೇ ? 2015 ಫೆಬ್ರವರಿ 03 ರಂದು ನಡೆದ ವಿಧಾನಸಭೆ ಕಲಾಪದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ನಕ್ಸಲ್ ನಿಗ್ರಹಕ್ಕೆ ಬಹಳ ಸರಳವಾದ ಪರಿಹಾರ ಸೂಚಿಸುತ್ತಾರೆ. “ಕಾಡಿನ ನಿವಾಸಿಗಳಿಗೆ ಹಕ್ಕುಪತ್ರ, ನೀರು, ವಿದ್ಯುತ್, ರಸ್ತೆ ಒದಗಿಸಿ. ಅರಣ್ಯಾಧಿಕಾರಿಗಳು, ಪೊಲೀಸರು ರಾಜರಂತೆ ವರ್ತಿಸುವುದು ನಿಲ್ಲಿಸಿ. ನಕ್ಸಲ್ ಸಮಸ್ಯೆ ಪರಿಹಾರ ಆಗುತ್ತದೆ” ಎಂದು ಸರ್ಕಾರಕ್ಕೆ ಸ್ಪೀಕರ್ ಸೂಚಿಸುತ್ತಾರೆ. ಇಷ್ಟೇ ಆಗಬೇಕಿರೋದು. ನಕ್ಸಲರ ಸಾವು ನಕ್ಸಲ್ ಸಮಸ್ಯೆಗೆ ಪರಿಹಾರ ಅಲ್ಲ ಎಂಬುದನ್ನು ಸರ್ಕಾರಗಳು ಮನಗಾಣಬೇಕು ಎಂದು ತಮ್ಮ ಹೇಳಿಕೆಯಲ್ಲಿ ಪೂಜಾರ ಅವರು ಸರಕಾರಕ್ಕೆ ತಿಳಿ ಹೇಳಿದ್ದಾರೆ.

ಇದನ್ನೂ ಓದಿ….ಉಡುಪಿ : ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...