Homeಮುಖಪುಟಮತದಾರ ಚೀಟಿ ಸಂಖ್ಯೆಯ ಸಮಸ್ಯೆ 3 ತಿಂಗಳೊಳಗೆ ಪರಿಹರಿಸುತ್ತೇವೆ: ಚುನಾವಣಾ ಆಯೋಗ

ಮತದಾರ ಚೀಟಿ ಸಂಖ್ಯೆಯ ಸಮಸ್ಯೆ 3 ತಿಂಗಳೊಳಗೆ ಪರಿಹರಿಸುತ್ತೇವೆ: ಚುನಾವಣಾ ಆಯೋಗ

- Advertisement -
- Advertisement -

ಎಲ್ಲಾ ಮತದಾರರಿಗೆ ವಿಶಿಷ್ಟವಾದ ರಾಷ್ಟ್ರೀಯ EPIC ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮೂರು ತಿಂಗಳೊಳಗೆ ವಿವಿಧ ರಾಜ್ಯಗಳಲ್ಲಿ ಒಂದೇ ರೀತಿಯ ಮತದಾರರ ಗುರುತಿನ ಸಂಖ್ಯೆಗಳನ್ನು ನೀಡಲಾಗುತ್ತಿರುವ ಸಮಸ್ಯೆಯನ್ನು ಪರಿಹರಿಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಮತದಾರ ಚೀಟಿ

EPIC ಅಥವಾ ಮತದಾರರ ಫೋಟೋ ಗುರುತಿನ ಚೀಟಿಯನ್ನು ಚುನಾವಣಾ ಆಯೋಗವು ನೀಡುತ್ತದೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಾಗರಿಕರು ಚುನಾವಣೆಯಲ್ಲಿ ಮತ ಚಲಾಯಿಸಲು ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. EPIC ಸಂಖ್ಯೆ ಮತದಾರರ ಗುರುತಿನ ಚೀಟಿ ಸಂಖ್ಯೆಯಾಗಿದೆ. ಮತದಾರ ಚೀಟಿ

100 ಕ್ಕೂ ಹೆಚ್ಚು ಮತದಾರರ ಮಾದರಿ ವಿಚಾರಣೆಯಲ್ಲಿ ಒಂದೇ ರೀತಿ EPIC ಸಂಖ್ಯೆಗಳನ್ನು ಹೊಂದಿರುವ ಮತದಾರರು “ನಿಜವಾದ ಮತದಾರ”ರಾಗಿದ್ದು ಅವರು ನಕಲಿ ಮತದಾರರಲ್ಲ ಎಂದು ತಿಳಿದುಬಂದಿದೆ ಎಂದು ಚುನಾವಣಾ ಆಯೋಗ ಹೇಳಿದೆ.

“2000 ನೇ ಇಸವಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ EPIC ಸರಣಿಯನ್ನು ಹಂಚಿಕೆ ಮಾಡಿದಾಗಿನಿಂದ, ಕೆಲವು ERO ಗಳು [ಚುನಾವಣಾ ನೋಂದಣಿ ಅಧಿಕಾರಿಗಳು] ಸರಿಯಾದ ಸರಣಿಯನ್ನು ಬಳಸಲಿಲ್ಲ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

“ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತದಾರರ ಪಟ್ಟಿಯ ಡೇಟಾಬೇಸ್‌ಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುವುದರಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ತಪ್ಪಾದ ಸರಣಿಗಳಿಂದಾಗಿ ಒಂದೆ ರೀತಿಯ ಸಂಖ್ಯೆಗಳ ಹಂಚಿಕೆಯ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.” ಎಂದು ಅದು ಹೇಳಿದೆ.

ಒಂದೇ ರೀತಿಯ ಸಂಖ್ಯೆಯಿದ್ದರೂ ಕೂಡಾ, ಮತದಾರರು ತಮ್ಮ ಮತಗಳನ್ನು ಬೇರೆ ಕ್ಷೇತ್ರಗಳಲ್ಲಿ ಚಲಾಯಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿಕೊಂಡಿದೆ.

ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಬಿಜೆಪಿಯು ಚುನಾವಣಾ ಆಯೋಗದೊಂದಿಗೆ ಒಪ್ಪಂದ ಮಾಡಿಕೊಂಡು ಮತದಾರರ ಪಟ್ಟಿಗೆ ನಕಲಿ ಮತದಾರರನ್ನು ಸೇರಿಸುತ್ತಿದೆ ಎಂದು ಫೆಬ್ರವರಿ 27 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಆರೋಪಿಸಿದ್ದರು.

ಬಿಜೆಪಿಯು ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ನಿವಾಸಿಗಳನ್ನು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಸೇರಿಸಲು ಅಸೋಸಿಯೇಷನ್ ​​ಆಫ್ ಬಿಲಿಯನ್ ಮೈಂಡ್ಸ್ ಮತ್ತು ಇಂಡಿಯಾ 360 ಎಂಬ ಎರಡು ಸಂಸ್ಥೆಗಳನ್ನು ನೇಮಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. 2026 ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ನಡೆಯಲಿದೆ.

ವಿವಿಧ ರಾಜ್ಯಗಳಲ್ಲಿ ನೀಡಲಾದ ಮತದಾರರ ಗುರುತಿನ ಚೀಟಿ ಸಂಖ್ಯೆಗಳು ಒಂದೇ ರೀತಿಯಲ್ಲಿ ಇದ್ದರೆ ಅದರ ಅರ್ಥ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ಎಂದಲ್ಲ ಎಂದು ಚುನಾವಣಾ ಆಯೋಗ ಮಾರ್ಚ್ 2 ರಂದು ಹೇಳಿತ್ತು. ರಾಜ್ಯಗಳು ಒಂದೇ ಆಲ್ಫಾನ್ಯೂಮರಿಕ್ ಸರಣಿಯನ್ನು ಬಳಸುವುದರ ಪರಿಣಾಮವಾಗಿದೆ ಒಂದಕ್ಕಿಂತ ಹೆಚ್ಚು ಮತದಾರರಿಗೆ ಒಂದೇ ಸಂಖ್ಯೆಯ ಹಂಚಿಕೆಯಾಗಿದೆ ಎಂದು ಅದು ಹೇಳಿತ್ತು.

“…ಕೆಲವು ಮತದಾರರ EPIC ಸಂಖ್ಯೆಗಳು ಒಂದೇ ಆಗಿರಬಹುದು, ಜನಸಂಖ್ಯಾ ವಿವರಗಳು, ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆ ಸೇರಿದಂತೆ ಇತರ ವಿವರಗಳು ಒಂದೇ EPIC ಸಂಖ್ಯೆಯನ್ನು ಹೊಂದಿರುವ ಮತದಾರರಿಗೆ ವಿಭಿನ್ನವಾಗಿರುತ್ತವೆ.” ಎಂದು ಚುನಾವಣಾ ಆಯೋಗವು ಹೇಳಿತ್ತು. ಮತದಾರರು ತಮ್ಮ EPIC ಸಂಖ್ಯೆಯನ್ನು ಲೆಕ್ಕಿಸದೆ, ತಮ್ಮ ನೋಂದಾಯಿತ ಕ್ಷೇತ್ರಗಳಲ್ಲಿ ಗೊತ್ತುಪಡಿಸಿದ ಮತಗಟ್ಟೆಯಲ್ಲಿ ಮಾತ್ರ ಮತ ಚಲಾಯಿಸಬಹುದು ಎಂದು ಅದು ಹೇಳಿದೆ.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಎನ್ಇಪಿ, ಕ್ಷೇತ್ರ ಪುನರ್ವಿಂಗಡನೆ, ವಕ್ಫ್‌ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಭೆ

ಎನ್ಇಪಿ, ಕ್ಷೇತ್ರ ಪುನರ್ವಿಂಗಡನೆ, ವಕ್ಫ್‌ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಭೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ ಎಸ್‌ಐಆರ್ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.9) ಹಲವಾರು ನಿರ್ದೇಶನಗಳನ್ನು ನೀಡಿದೆ. ಚುನಾವಣಾ ಆಯೋಗವು ನಿಯೋಜಿಸಿರುವ ಮೈಕ್ರೋ-ಅಬ್ಸರ್ವರ್‌ಗಳ (ಸೂಕ್ಷ್ಮ ವೀಕ್ಷಕರು) ಬದಲಿಗೆ ಗ್ರೂಪ್...

ಮುಸ್ಲಿಮರಿಗೆ ಗುಂಡಿಕ್ಕುವಂತೆ ವಿಡಿಯೋ ಹಂಚಿಕೆ: ಅಸ್ಸಾಂ ಸಿಎಂ ವಿರುದ್ಧ ಓವೈಸಿ ದೂರು: ದ್ವೇಷ ಭಾಷಣ ಆದೇಶ ಉಲ್ಲೇಖ 

ಅಸ್ಸಾಂ ಬಿಜೆಪಿ ಘಟಕದ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಮತ್ತು ಈಗ ಅಳಿಸಲಾದ ವೀಡಿಯೊದಲ್ಲಿ, ಮುಸ್ಲಿಮರ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವುದನ್ನು ತೋರಿಸಲಾಗಿದೆ ಎಂದು ಆರೋಪಿಸಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ...

ನರವಾಣೆ ಪುಸ್ತಕಕ್ಕೆ ಹೆದರಿ ಪ್ರಧಾನಿ ಲೋಕಸಭೆಗೆ ಬರುತ್ತಿಲ್ಲ : ರಾಹುಲ್ ಗಾಂಧಿ

ಪ್ರತಿಪಕ್ಷಗಳು ಎತ್ತಿರುವ ವಿಷಯಗಳಿಂದ, ವಿಶೇಷವಾಗಿ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಪುಸ್ತಕದ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಯಗೊಂಡಿದ್ದಾರೆ. ಹಾಗಾಗಿ, ಅವರು ರಾಷ್ಟ್ರಪತಿಯ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ...

ಡಿಜಿಟಲ್ ‘ಡಕಾಯಿತಿ’: 54,000 ಕೋಟಿಗೂ ಹೆಚ್ಚಿನ ಹಣ ವಂಚನೆ: ಎಸ್‌ಒಪಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ

ನವದೆಹಲಿ: ಡಿಜಿಟಲ್ ವಂಚನೆಯಿಂದ 54,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸುವುದು ಸಂಪೂರ್ಣ "ದರೋಡೆ ಅಥವಾ ಡಕಾಯಿತಿ" ಎಂದು ಸುಪ್ರೀಂ ಕೋರ್ಟ್ ಸೋಮವಾರ ಬಣ್ಣಿಸಿದೆ ಮತ್ತು ಅಂತಹ ಪ್ರಕರಣಗಳನ್ನು ನಿಭಾಯಿಸಲು ಆರ್‌ಬಿಐ, ಬ್ಯಾಂಕುಗಳು...

ಪಾಕಿಸ್ತಾನ ನಂಟು : ಸಿಎಂ ಶರ್ಮಾ ಆರೋಪ ನಿರಾಧಾರ, ಸಿ-ಗ್ರೇಡ್ ಸಿನಿಮಾ ಎಂದ ಗೌರವ್ ಗೊಗೊಯ್

ತಮಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆರೋಪಗಳನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಳ್ಳಿಹಾಕಿದ್ದು, ಎಸ್‌ಐಟಿ ವರದಿಯು ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಳಿಯೇ ಇದೆ....

ಪಂಜಾಬ್: ತರಗತಿಯೊಳಗೆ ವಿದ್ಯಾರ್ಥಿನಿಯನ್ನು ಕೊಂದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ

ಚಂಡೀಗಢ: ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಶಾಲಾ ಕೋಣೆಯೊಳಗೆ ವಿದ್ಯಾರ್ಥಿನಿಯ ತಲೆಗೆ ಗುಂಡು ಹಾರಿಸಿ ಕೊಂದ ಘಟನೆ ಸೋಮವಾರ ನಡೆದಿದೆ. ಸಹಪಾಠಿಗಳು ಭಯಭೀತರಾಗಿ ನೋಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು...

ಅಸ್ಸಾಂ ಸಿಎಂ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ : ಗೌರವ್ ಗೊಗೊಯ್

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಸ್ಲಿಮರ ವಿರುದ್ದ ದ್ವೇಷ ಹರಡುತ್ತಿದ್ದಾರೆ, ಅವರ ಜನಾಂಗೀಯ ಹತ್ಯೆಗೆ ಪ್ರಚೋದಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹಾಗೂ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ. ಅಸ್ಸಾಂ...

‘ಎಂಡಿಎಂಎ ಡ್ರಗ್ಸ್ ಕೇಂದ್ರವಾಗಿ ಮಾರ್ಪಟ್ಟ ಮಧ್ಯಪ್ರದೇಶ-ರಾಜಸ್ಥಾನ ಗಡಿ’: 13ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು. 

ಭೋಪಾಲ್: ದೇಶದ ಅಫೀಮು ಕೃಷಿ ಮತ್ತು ಕಳ್ಳಸಾಗಣೆ ಮಾರ್ಗವಾಗಿ ದೀರ್ಘಕಾಲದಿಂದ ಕುಖ್ಯಾತಿ ಗಳಿಸಿರುವ ಪಶ್ಚಿಮ ಮಧ್ಯಪ್ರದೇಶ ಮತ್ತು ಪಕ್ಕದ ಆಗ್ನೇಯ ರಾಜಸ್ಥಾನದ ಜಿಲ್ಲೆಗಳು ಈಗ MDMA ಸಂಶ್ಲೇಷಿತ ಡ್ರಗ್ಸ್ ಅಕ್ರಮ ಉತ್ಪಾದನೆ ಮತ್ತು...

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ವಿರೋಧ ಪಕ್ಷಗಳು: ವರದಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವಿಪಕ್ಷ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 'ಅನಿರೀಕ್ಷಿತ ಕೃತ್ಯ' ಎಸಗಲು ಸಂಚು...

ಮೆಟಾ-ವಾಟ್ಸಾಪ್ ಗೌಪ್ಯತೆ ನೀತಿ ಪ್ರಕರಣ: ಸುಪ್ರೀಂ ಕೋರ್ಟ್ ವಿಚಾರಣೆ ಫೆಬ್ರವರಿ 23ಕ್ಕೆ ಮುಂದೂಡಿಕೆ 

ನವದೆಹಲಿ: ಗೌಪ್ಯತೆ ನೀತಿಯ ಮೇಲೆ 213.14 ಕೋಟಿ ರೂ. ದಂಡ ವಿಧಿಸಿದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶದ ವಿರುದ್ಧ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಮತ್ತು ವಾಟ್ಸಾಪ್ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್...