ಬಸವಕಲ್ಯಾಣ
SIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು.
ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ ವೀರಸಂಗಯ್ಯ, ಕರ್ನಾಟಕದಲ್ಲಿ SIR ನ್ನೂ ಉತ್ತರ ಭಾರತದ ಮಾದರಿಯಲ್ಲಿ ನಡೆಯಲು ಬಿಡುವುದಿಲ್ಲ. ಇದು ಶರಣರ ನಾಡು, ಪ್ರಪಂಚಕ್ಕೆ ಪ್ರಜಾಪ್ರಭುತ್ವವನ್ನು ಕಲಿಸಿದ ನಾಡು, ಸಮಾನತಾವಾದಿ, ಕ್ರಾಂತಿಕಾರಿ ಬಸವಣ್ಣ ಹುಟ್ಟಿದ ನಾಡು. ಈ ನಾಡಿನ ಜನರು ನಾವು ಘೋಷಿಸುತ್ತಿದ್ದೇವೆ. SIR ಎಂಬ ಷಡ್ಯಂತ್ರಕ್ಕೆ ನಾವು ತಡೆಯೊಡುತ್ತೇವೆ, ಆ ಮೂಲಕ ಬಸವಣ್ಣನ ತತ್ವಾದರ್ಶಗಳನ್ನು ಮರುಸ್ಥಾಪಿಸುತ್ತೇವೆ.
ಕರ್ನಾಟಕದಲ್ಲಿ ಚುನಾವಣಾ ಆಯೋಗವು ದೇಶದೆಲ್ಲೆಡೆ ನಡೆಸಿದಂತೆ ಅವೈಜ್ಞಾನಿಕ ಲಾಜಿಕಲ್ ಡಿಸ್ಕ್ರಿಪ್ಷನ್ ಮಾನದಂಡವನ್ನು ಅನುಸರಿಸಬಾರದು. ಕರ್ನಾಟಕ ಸರ್ಕಾರವು ಗ್ರಾಮಸಭೆಗಳನ್ನು ನಡೆಸಿ ಯಾರೆಲ್ಲ ಅರ್ಹ ಮತದಾರರ ಬಳಿ ದಾಖಲೆಗಳಿಲ್ಲವೋ ಅಂತಹ ವ್ಯಕ್ತಿಗಳಿಗೆ ಕೂಡಲೇ ಅಗತ್ಯ ದಾಖಲೆಗಳನ್ನು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಆರೆಸ್ಸೆಸ್ ಮತ್ತು ಬಿಜೆಪಿ ಚುನಾವಣೆಗಳನ್ನು ನೇರವಾಗಿ ಗೆಲ್ಲಲು ಸಾಧ್ಯವಾಗದೇ, SIR ಎಂಬ ಹಿಂಬಾಲಿನ ಮೂಲಕ ಗೆಲ್ಲಲು ಪ್ರಯತ್ನಿಸುತ್ತಿದೆ. ಇದು ಸಂವಿಧಾನದ ವಿರೋಧಿ ಕೃತ್ಯ. ಇದನ್ನು ಸಂವಿಧಾನ ಪ್ರೇಮಿಗಳಾದ ನಾವುಗಳು ಸೋಲಿಸಿ ಸಂವಿಧಾನವನ್ನು ಗೆಲ್ಲಿಸುತ್ತೇವೆ. ಎಂದು ಘೋಷಿಸಿದರು.
ಜೂನ್ 20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಬಸವಕಲ್ಯಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಲಾಯಿತು,
ಸಭೆಯಲ್ಲಿ ಸಂದೀಪ್ ಮುಕಿಂದೆ, ಇಕ್ರಾಂ ಖಾದಿವಾಲೆ, ರಿಯಾಸ್ ಪಟೇಲ್, ಖಾನ್ ಸಾಬ್, ಓಂ ಪ್ರಕಾಶ್ ರೊಟ್ಟೆ, ಲಕ್ಷ್ಮಣ್ ಮಂಡಲಗೇರಾ, ಆಕಾಶ್, ಹಾಗೂ ಇತರರು ಭಾಗವಹಿಸಿದ್ದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


