Homeಮುಖಪುಟನಾಗೇಂದ್ರ ರಾಜೀನಾಮೆ: ಬಡಿಗೆ ಕೊಟ್ಟು ಹೊಡೆಸಿಕೊಂಡಂತಾಯ್ತು ಕಾಂಗ್ರೆಸ್ ಪರಿಸ್ಥಿತಿ

ನಾಗೇಂದ್ರ ರಾಜೀನಾಮೆ: ಬಡಿಗೆ ಕೊಟ್ಟು ಹೊಡೆಸಿಕೊಂಡಂತಾಯ್ತು ಕಾಂಗ್ರೆಸ್ ಪರಿಸ್ಥಿತಿ

- Advertisement -
- Advertisement -

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಕ್ಕಿದ 136 ಸ್ಥಾನಗಳ ಅಭೂತಪೂರ್ವ ಬಹುಮತಕ್ಕೆ ಪ್ರಮುಖ ಕಾರಣ ‘40% ಸರ್ಕಾರ’ ಮತ್ತು ‘ಪೇ ಸಿಎಂ’ ಅಭಿಯಾನಗಳು. ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರವಾಗಿಸಿಕೊಂಡು ಆಡಳಿತ ಹಿಡಿದ ಕಾಂಗ್ರೆಸ್‌ಗೆ, ಈಗ ಅದೇ ಭ್ರಷ್ಟಾಚಾರದ ಆರೋಪಗಳು ಹಾಗೂ ಸಚಿವ ಸಂಪುಟ ಸೇರ್ಪಡೆಯಲ್ಲಾದ ಎಡವಟ್ಟುಗಳು ಈಗ ತಿರುಗು ಬಾಣವಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಎದುರಿಸಿ ಜುಲೈ 2024 ರಲ್ಲಿ ರಾಜೀನಾಮೆ ನೀಡಿದ್ದ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರನ್ನು, ಮತ್ತೆ ಸಂಪುಟಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮರುಸೇರ್ಪಡೆಯಾದ ಕೇವಲ 25 ದಿನಗಳ ಅಂತರದಲ್ಲಿ, ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಗೆ ಮಣಿದು ಅವರು ಮತ್ತೆ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಆಡಳಿತಾರೂಢ ಕಾಂಗ್ರೆಸ್‌ ಅನ್ನು ತೀವ್ರ ಮುಜುಗರಕ್ಕೆ ಈಡುಮಾಡಿದೆ.

ಬಳ್ಳಾರಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಶಿಷ್ಟ ಪಂಗಡ (ST) ಸಮುದಾಯದ ಬಲವರ್ಧನೆಗೆ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ನಾಗೇಂದ್ರ ಅವರ ಸಂಪುಟ ಸೇರ್ಪಡೆ ಅಗತ್ಯವಾಗಿತ್ತು ಎಂಬುದು ಪಕ್ಷದ ಆಂತರಿಕ ಲೆಕ್ಕಾಚಾರವಾಗಿತ್ತು.

ಎರಡನೇ ಬಾರಿಗೆ ರಾಜೀನಾಮೆ ನೀಡುವಾಗ ಭಾವುಕರಾದ ನಾಗೇಂದ್ರ, “ನಾನು ಯಾವುದೇ ತಪ್ಪು ಮಾಡಿಲ್ಲ, ಬೇಕೆಂದೇ ನನ್ನ ವಿರುದ್ಧ ರಾಜಕೀಯ ಸಂಚು ರೂಪಿಸಲಾಗಿದೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಂತಹ ಆರೋಪ ಹೊತ್ತಿರುವ ಬಿಜೆಪಿ ನಾಯಕರು ನನ್ನ ವಿರುದ್ಧ ಮಾತನಾಡುವುದು ವಿಪರ್ಯಾಸ,” ಎಂದು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ‘ಜನತಾ ನ್ಯಾಯಾಲಯ’ಕ್ಕೆ ಹೋಗಲು ಸಿದ್ಧ ಎಂಬ ಸವಾಲನ್ನು ಎಸೆದಿದ್ದಾರೆ.

“ರಾಮಾಯಣದ ಉತ್ತರಕಾಂಡದಲ್ಲಿ ಶಂಬೂಕನ ಹತ್ಯೆ ಮಾಡಲಾಗಿದೆ. ಆದರೆ ಈ ಯುಗದಲ್ಲಿ ಶಂಬೂಕನ ಹತ್ಯೆ ನಡೆಸಲಾಗದು, ಅವರ ರಕ್ಷಣೆಗಾಗಿಯೇ ಸಂವಿಧಾನವಿದೆ, ನ್ಯಾಯದೇವತೆ ಇದ್ದಾಳೆ ಎಂದು ನಾನು ಭಾವಿಸುತ್ತೇನೆ. ಇಂದು ಶಂಬೂಕನ ಹತ್ಯೆ ಮಾಡಲಾಗದು ಎಂದು ನಾನು ವಿಪಕ್ಷಗಳ ಗಮನಕ್ಕೆ ತರಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

“ಶೂದ್ರರು, ದಲಿತರು, ಮಹಿಳೆಯರು, ಮುಖ್ಯವಾಗಿ ಆದಿವಾಸಿಗಳು, ಅಲ್ಪಸಂಖ್ಯಾತರು ಸ್ವತಂತ್ರವಾಗಿ ಬದುಕಲೇ ಬಾರದು ಎಂಬ ಮನುಸ್ಮೃತಿಯ ಒಂದು ಪದ್ಧತಿಯನ್ನು ಇಟ್ಟುಕೊಂಡವರು ಬಿಜೆಪಿಗರು, ಆದರೆ ಇಂತಹ ಯುಗದಲ್ಲಿ ಅಂತಹ ಕೃತ್ಯಕ್ಕೆ ಅವಕಾಶ ಕೊಡುವುದಿಲ್ಲ. ಸಂವಿಧಾನ ನಮ್ಮ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆಯಿದೆ” ಎಂದಿದ್ದಾರೆ.

ಬಿ.ನಾಗೇಂದ್ರ ಅವರು ಈಗ ರಾಜೀನಾಮೆ ನೀಡಿ ಮಾಧ್ಯಮದವರ ಮುಂದೆ ಇದನ್ನೆಲ್ಲ, ಬಾಬಾ ಸಾಹೇಬ್, ಸಂವಿಧಾನ ಎಂಬ ಮಾತುಗಳನ್ನು ಹೇಳುವ ಬದಲು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮ ಪಕ್ಷ ಹಿರಿಯ ನಾಯಕರ ಬಳಿ ನಾನು ಶಾಸಕನಾಗಿಯೇ ಮುಂದುವರೆಯುತ್ತೇನೆ, ನನಗೆ ಸಚಿವ ಸ್ಥಾನ ಬೇಡ, ಪಕ್ಷದ ಈ ನಿರ್ಧಾರದಿಂದ ಪ್ರತಿಪಕ್ಷಕ್ಕೆ ಲಾಭವಾಗಲಿದೆ, ನಾನು ಜನರ ಮೇಲೆ ವಿಶ್ವಾಸ ಇಟ್ಟಿದ್ದೇನೆ. ಅವರು ನನ್ನ ಕೈಬಿಡುವುದಿಲ್ಲ ಎಂದು ಹೇಳಿದ್ದರೆ ಇಷ್ಟೆಲ್ಲಾ ನಡೆಯುತ್ತಿರಲೇ ಇಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿಗೆ ಅಸ್ತ್ರವಾದ ಬಿ.ನಾಗೇಂದ್ರ ವಿಚಾರ:

ಪ್ರತಿಪಕ್ಷ ಬಿಜೆಪಿಗೆ ಬಿ.ನಾಗೇಂದ್ರ ಅವರ ಸಂಪುಟ ಮರುಸೇರ್ಪಡೆಯೇ ಪ್ರಮುಖ ಅಸ್ತ್ರವಾಗಿ ದೊರೆಯಿತು ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದಿದ್ದರೆ, ಇತ್ತೀಚಿನ ಅಧಿವೇಶನವು ಅತ್ಯಂತ ಸುಗಮವಾಗಿ ನಡೆಯುವ ಸಾಧ್ಯತೆಯಿತ್ತು. ಆದರೆ, ಈ ನಿರ್ಧಾರದಿಂದಾಗಿ ಇಡೀ ಅಧಿವೇಶನ ಗದ್ದಲ, ಸಭಾತ್ಯಾಗ ಮತ್ತು ಗೊಂದಲಗಳಲ್ಲೇ ಮುಕ್ತಾಯವಾಯಿತು. ಈ ವಿಫಲತೆಗೆ ಪ್ರತಿಪಕ್ಷ ಬಿಜೆಪಿಯಷ್ಟೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವೂ ಸಮಾನ ಹೊಣೆಯಾಗಿದೆ.

ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪಕ್ಷಕ್ಕೆ, ಪ್ರಕರಣದ ತನಿಖೆ ಸಂಪೂರ್ಣಗೊಳ್ಳುವ ಮುನ್ನವೇ ಸಚಿವ ಸ್ಥಾನ ನೀಡಿದ್ದು ನೈತಿಕ ನೆಲೆಗಟ್ಟಿನಲ್ಲಿ ಸಾರ್ವಜನಿಕ ಸಮ್ಮತಿಯನ್ನು ಕಳೆದುಕೊಳ್ಳುವಂತೆ ಮಾಡಿತು. ರಾಜಕೀಯ ವಿಶ್ಲೇಷಕರ ಪ್ರಕಾರ, ತನಿಖಾ ಹಂತದಲ್ಲಿದ್ದ ಮತ್ತು ಇಡೀ ಆಡಳಿತಕ್ಕೆ ಕಪ್ಪುಚುಕ್ಕೆಯಾಗಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಮತ್ತೆ ಸಂಪುಟಕ್ಕೆ ತಂದದ್ದು ಕಾಂಗ್ರೆಸ್ ತನ್ನ ಕೈಯಾರೆ ತಾನೇ ಮಾಡಿಕೊಂಡ ಸ್ವಯಂಕೃತ ಅಪರಾಧ.

ಮಹಿಳೆಯರಿಗಿಲ್ಲ ಸಚಿವ ಸ್ಥಾನ:

ಸಂಪುಟ ವಿಸ್ತರಣೆ ಮತ್ತು ನಿಗದಿ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಎಸಗಿದ ಮತ್ತೊಂದು ದೊಡ್ಡ ಪ್ರಮಾದವೆಂದರೆ ಮಹಿಳಾ ನಾಯಕತ್ವದ ಕಡೆಗಣನೆ. ಸಂಸತ್‌ನಲ್ಲಿ ಮಹಿಳಾ ಮಸೂದೆಗೆ ದೊಡ್ಡ ಧ್ವನಿಯಾಗಿರುವ ಕಾಂಗ್ರೆಸ್, ಕರ್ನಾಟಕ ಸರ್ಕಾರದ 34 ಸಚಿವರ ಸಂಪುಟದಲ್ಲಿ ಒಬ್ಬೇ ಒಬ್ಬ ಮಹಿಳಾ ಶಾಸಕಿಗೆ ಸಚಿವೆ ಸ್ಥಾನ ನೀಡದಿರುವುದು ಮಹಿಳಾ ಪರ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಅರ್ಹ ಮತ್ತು ಅನುಭವಿ ಮಹಿಳಾ ಶಾಸಕಿಯರಿದ್ದರೂ, ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅವರಿಗೆ ಮಂತ್ರಿಗಿರಿ ನೀಡದೆ, ಆರೋಪ ಎದುರಿಸುತ್ತಿದ್ದ ಶಾಸಕನಿಗೆ ಆದ್ಯತೆ ನೀಡಿದ್ದು ಸಾರ್ವಜನಿಕವಾಗಿ ಮತ್ತು ಮಹಿಳಾ ಸಂಘಟನೆಗಳ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ತನ್ನದೇ ಆಡಳಿತಾವಧಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ದಾರಿ ತಪ್ಪಿದೆ. ಸಂಪುಟದಲ್ಲಿ ಸೂಕ್ತ ಮಹಿಳಾ ಪ್ರಾತಿನಿಧ್ಯ ನೀಡದಿರುವುದು ಒಂದೆಡೆಯಾದರೆ, ಭ್ರಷ್ಟಾಚಾರ ಆರೋಪಿತ ನಾಯಕರನ್ನು ಧಾವಂತದಿಂದ ಮತ್ತೆ ಮಂತ್ರಿ ಮಾಡಿ ಅಧಿವೇಶನ ಬಲಿಯಾಗುವಂತೆ ಮಾಡಿದ್ದು ಕಾಂಗ್ರೆಸ್ ಮಾಡಿಕೊಂಡ ಮತ್ತೊಂದು ಎಡವಟ್ಟು.

ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ, ಈಗಲಾದರೂ ಬಿ.ನಾಗೇಂದ್ರ ಅವರಿಂದ ತೆರವಾಗಿರುವ ಸ್ಥಾನಕ್ಕೆ ಮಹಿಳೆಯರಿಗೆ ಅವಕಾಶ ಕೊಡುವ ಮೂಲಕ, ಕಾಂಗ್ರೆಸ್ ಎದುರಿಸುತ್ತಿರುವ ಅಪವಾದಗಳಿಂದ ಸ್ವಲ್ಪ ಮಟ್ಟಿಗಾದರೂ ಹೊರಬರಲು ಪ್ರಯತ್ನಿಸಬೇಕಿದೆ. ಇಲ್ಲದಿದ್ದರೆ ಸಾರ್ವಜನಿಕ ವಲಯದಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರವನ್ನು “ನಮಸ್ತೆ ಸದಾ ವತ್ಸಲೆ ಮಾತೃಭೂಮೇ” ಸಿದ್ದಾಂತ ಮತ್ತೊಂದು ಮಾದರಿ ಎಂದು ಹೇಳುತ್ತಿರುವುದನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡತಾಗುತ್ತದೆ. ಈ ವಿಷಯದಲ್ಲಿ KPCCಯ ಮೌನ ಸಮಂಜಸವಲ್ಲ ಅನ್ನಿಸುತ್ತಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಕ್ಕಿದ 136 ಸ್ಥಾನಗಳ ಅಭೂತಪೂರ್ವ ಬಹುಮತಕ್ಕೆ ಪ್ರಮುಖ ಕಾರಣ ‘40% ಸರ್ಕಾರ’ ಮತ್ತು ‘ಪೇ ಸಿಎಂ’ ಅಭಿಯಾನಗಳು. ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರವಾಗಿಸಿಕೊಂಡು ಆಡಳಿತ ಹಿಡಿದ ಕಾಂಗ್ರೆಸ್‌ಗೆ ಈಗ ಅದೇ ಭ್ರಷ್ಟಾಚಾರದ ಆರೋಪಗಳು ಹಾಗೂ ಸಚಿವ ಸಂಪುಟ ಸೇರ್ಪಡೆಯಲ್ಲಾದ ಎಡವಟ್ಟುಗಳು ತಿರುಗು ಬಾಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕುತಂತ್ರ: 43.81 ಲಕ್ಷ ಜನರ ಮನೆ ಬಾಗಿಲಿಗೆ ನೋಟಿಸ್‌ ಬಿಸಿ, ಪೌರತ್ವ ಸಾಬೀತುಪಡಿಸಲು ನಾಗರಿಕರು ಅಲೆಯಬೇಕೇ ?

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೀಗ ಲಕ್ಷಾಂತರ ನಾಗರಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.ಚುನಾವಣಾ ಆಯೋಗವು ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಪೈಕಿ ಸುಮಾರು 1.08...

ದಿಮಾಗಿ ನಕ್ಸಲ್: ರೈತ, ವಿದ್ಯಾರ್ಥಿ ಹೋರಾಟಗಳೂ ದೇಶದ್ರೋಹವೇ? RSS ಪತ್ರಿಕೆಯ ವಿವಾದಾತ್ಮಕ ಪ್ರತಿಪಾದನೆ

ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿ ಮಾದರಿಗೆ ತೀವ್ರ ಸ್ವರೂಪದ ಸುಧಾರಣೆಗಳ ಅಗತ್ಯವಿದೆ. ಆದರೆ ಈ ಸಮಸ್ಯೆಗಳು ಕಳೆದ ಹನ್ನೆರಡು ವರ್ಷಗಳಲ್ಲಿ ಹುಟ್ಟಿಕೊಂಡಿದ್ದಲ್ಲ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳಿಗಷ್ಟೇ ಸೀಮಿತವಾಗಿಲ್ಲ. ಹಿಂದುತ್ವವನ್ನು ದಮನಕಾರಿ...

ಅಹಮದಾಬಾದ್‌ನಲ್ಲಿ ಪುಸ್ತಕ ಓದುಗರ ಮೇಲೆ ಭಜರಂಗದಳ ದೌರ್ಜನ್ಯ: ಮಲಾಲಾ, ಆನ್ ಫ್ರಾಂಕ್ ಕೃತಿಗಳಿಗೆ ವಿರೋಧಿಸಿ ಬೆದರಿಕೆ!

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾಹಿತ್ಯಾಭಿಮಾನಿಗಳ ಮೇಲೆ ಭಜರಂಗದಳ ಕಾರ್ಯಕರ್ತರು ಭೀಕರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಗರದ ಸಾರ್ವಜನಿಕ ಉದ್ಯಾನವನವೊಂದರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜೈ ಹಾಗೂ ವಿಶ್ವಪ್ರಸಿದ್ಧ ಲೇಖಕಿ ಆನ್...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ

2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಹಿಂದಿನ ಪ್ರಮುಖ ಸಂಚುಕೋರರು ಎಂದು ಆರೋಪಿಸಿರುವ ದೆಹಲಿ ಪೊಲೀಸರು, ಕಾರಾಗೃಹದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದೆಹಲಿ...

‘ಆರ್‌ಎಸ್‌ಎಸ್-ಬಿಜೆಪಿಯ ರಕ್ತನಾಳಗಳಲ್ಲಿ ತಾರತಮ್ಯ ಹರಿಯುತ್ತಿದೆ’: ಖರ್ಗೆ ರ್ಯಾಲಿ ಸ್ಥಳದ ‘ಶುದ್ಧೀಕರಣ’ ಸಮರ್ಥಿಸಿಕೊಂಡ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ಕಾಂಗ್ರೆಸ್ ಕಿಡಿ

ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ನಂತರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಸ್ಥಳೀಯ ‘ಶುದ್ಧೀಕರಣ’ ಸಮಾರಂಭದ ಸುತ್ತಲಿನ ರಾಜಕೀಯ ವಿವಾದವು ತೀವ್ರ ಸ್ವರೂಪ...

ಯುಜಿಸಿಇಟಿ ಸೀಟು ರದ್ದುಗೊಳಿಸಲು ರೂ.5,000 ಶುಲ್ಕ; ಕೆಇಎ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಯುಜಿಸಿಇಟಿ 2026ರ ಎರಡನೇ ಹಂತದ ಕೌನ್ಸಿಲಿಂಗ್‌ನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಗೊಳಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ರೂ.5,000 ದಂಡ ವಿಧಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಮಲ್ಲೇಶ್ವರದಲ್ಲಿರುವ ಕೆಇಎ...

162 ವರ್ಷಗಳ ಇತಿಹಾಸದಲ್ಲೇ ಪ್ರಥಮ: ಬಾಂಬೆ ಹೈಕೋರ್ಟ್ ವಕೀಲರ ಸಂಘಕ್ಕೆ ಮಹಿಳಾ ಅಧ್ಯಕ್ಷೆ! 

ಮುಂಬೈ: ಭಾರತೀಯ ನ್ಯಾಯಾಂಗ ರಂಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ನಿರ್ಧಾರವೊಂದನ್ನು ಬಾಂಬೆ ಹೈಕೋರ್ಟ್‌ನ ಪ್ರತಿಷ್ಠಿತ ವಕೀಲರ ಸಂಘಟನೆಯಾದ 'ಅಸೋಸಿಯೇಷನ್‌ ಆಫ್‌ ಅಡ್ವೊಕೇಟ್ಸ್‌ ಆಫ್‌ ವೆಸ್ಟರ್ನ್ ಇಂಡಿಯಾ' (AAWI) ಕೈಗೊಂಡಿದೆ ಎಂದು...

ಫ್ರೀಡಂ ಪಾರ್ಕ್‌: ಧರಣಿಗೆ 1 ಲಕ್ಷ ರೂ. ಶುಲ್ಕ? ಜಿಬಿಎ ನಡೆಗೆ ಹೋರಾಟಗಾರರ ಆಕ್ರೋಶ

ಬೆಂಗಳೂರಿನ ಐತಿಹಾಸಿಕ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಾಗೂ ಧರಣಿ ನಡೆಸಲು ದಿನಕ್ಕೆ 1 ಲಕ್ಷ ರೂ. ಶುಲ್ಕ ಮತ್ತು 10,000 ರೂ. ಮುಂಗಡ ಠೇವಣಿ ವಿಧಿಸಲಾಗುತ್ತಿದೆ ಎಂಬ ಸುದ್ದಿ ಸಾರ್ವಜನಿಕ ಹಾಗೂ ಹೋರಾಟಗಾರರ...

ಅಧಿಕಾರದಲ್ಲಿರುವವರ ವಿರುದ್ಧ ಮಾತನಾಡುವ ಭಯವನ್ನು ನೀಟ್ ಚಳವಳಿ ಹೋಗಲಾಡಿಸಿದೆ: ನೇಹಾ ಬೋರಾ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ 'ಜೆನ್ ಜಿ' ಚಳವಳಿಯು ಜನರಲ್ಲಿದ್ದ ಭಯವನ್ನು ಹೋಗಲಾಡಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಆರ್‌ಎಸ್‌ಎಸ್‌ನವರು ವಿದ್ಯಾರ್ಥಿ ಮತ್ತು ಯುವಜನರನ್ನು ತಲುಪುವಂತೆ ಮಾಡಿದೆ ಎಂದು ಆಲ್...

Karnataka SIR : ನಿರ್ದೋಷಿ ಜನರೇಕೆ ದಾಖಲೆಗಾಗಿ ಅಲೆದಾಡಬೇಕು? ಲಾಜಿಕಲ್ ಡಿಸ್ಕ್ರಿಪೆನ್ಸಿ ನೋಟಿಸ್‌ಗೆ ನಾಗರಿಕ ಸಂಘಟನೆಗಳ ಆಕ್ಷೇಪ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಭಾಗವಾಗಿ ಮತದಾರರಿಗೆ ನೋಟಿಸ್ ನೀಡಲು ಮುಂದಾಗಿರುವ ಚುನಾವಣಾ ಆಯೋಗದ ಕ್ರಮವನ್ನು ನಾಗರಿಕ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಆಗಸ್ಟ್ 25ರಂದು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ...