HomeಅಂಕಣಗಳುKarnataka against SIRಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ಸರ್ಕಾರಕ್ಕೆ ‘ಪರಿಶೋಧನೆ ಹಾಗೂ ಪ್ರತಿರೋಧ ಜಾಥಾ’ ವರದಿ...

ಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ಸರ್ಕಾರಕ್ಕೆ ‘ಪರಿಶೋಧನೆ ಹಾಗೂ ಪ್ರತಿರೋಧ ಜಾಥಾ’ ವರದಿ ಸಲ್ಲಿಕೆ

- Advertisement -
- Advertisement -

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣಗಳನ್ನು ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ ಹಕ್ಕಿಗೆ ತೀವ್ರ ಧಕ್ಕೆಯುಂಟಾಗಿದೆ. ವಿಚಾರಣೆಯ ಹೆಸರಿನಲ್ಲಿ ಬಡವರು ತಮ್ಮ ಕೆಲಸ ಕೂಲಿ ಬಿಟ್ಟು ಬಿಎಲ್‌ಒಗಳ (BLO) ಮುಂದೆ ಗಂಟೆಗಟ್ಟಲೆ ನಿಲ್ಲುವ ದುಸ್ಥಿತಿ ನಿರ್ಮಾಣವಾಗಿದೆ.

ಈ ಅನ್ಯಾಯದ ವಿರುದ್ಧ ‘ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ’ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ ಜಾಥಾವು ಸೆಪ್ಟೆಂಬರ್ 30ರಂದು ಬೆಂಗಳೂರಿನ ಶಾಸಕರ ಭವನದಲ್ಲಿ (LH) ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವ ಮೂಲಕ ಸಮಾರೋಪಗೊಳ್ಳಲಿದೆ ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ತಿಳಿಸಿದೆ.

20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಚರಿಸಿ ಜನಾಭಿಪ್ರಾಯ ಸಂಗ್ರಹ

ಸೆಪ್ಟೆಂಬರ್ 22ರಿಂದ ಆರಂಭವಾದ ಈ ಪ್ರತಿರೋಧ ಜಾಥಾದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ನೂರ್ ಶ್ರೀಧರ್, ಕೆ.ಎಲ್. ಅಶೋಕ್, ಕುಮಾರ್ ಸಮತಳ ಸೇರಿದಂತೆ ಹಲವು ಮುಖಂಡರು ಸಕ್ರಿಯವಾಗಿ ಭಾಗವಹಿಸಿ, ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡ ತಂಡವು, ಎಸ್‌ಐಆರ್ ಅವಾಂತರದಿಂದಾಗಿ ತಮ್ಮದಲ್ಲದ ತಪ್ಪಿಗೆ ಮತಹಕ್ಕು ಕಳೆದುಕೊಂಡ 100 ಮತಗಟ್ಟೆಗಳ ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದೆ. ಕೊಡಗಿನಲ್ಲಿ ನಡೆದ ಸಂತ್ರಸ್ತರ ಬೃಹತ್ ಸಮಾವೇಶ (ಪಬ್ಲಿಕ್ ಹಿಯರಿಂಗ್) ಸೇರಿದಂತೆ ವಿವಿಧ ಸಾರ್ವಜನಿಕ ವಿಚಾರಣೆಗಳಲ್ಲಿ ಕ್ರೂಡೀಕರಿಸಲಾದ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುವ ಸಾಕ್ಷ್ಯಗಳು ಮತ್ತು ದೂರುಗಳ ವರದಿಯನ್ನು ನಾಳೆ (ಸೆಪ್ಟಂಬರ್ 30) ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದಿದೆ.

ರಾಷ್ಟ್ರಮಟ್ಟದ ಹೋರಾಕ್ಕೆ ಕರೆ:

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಮತದಾರರ ಹಕ್ಕುಗಳ ಕಸಿತವನ್ನು ಖಂಡಿಸಿ, ಸಂತ್ರಸ್ತರ ಹಕ್ಕುಗಳನ್ನು ಮರುಸ್ಥಾಪಿಸಲು ಈ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಅಕ್ಟೋಬರ್ 1ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸಂತ್ರಸ್ತ ರಾಜ್ಯಗಳ ಪ್ರತಿನಿಧಿಗಳ ಸಮಾವೇಶ ನಡೆಸಲಾಗುವುದು ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಮುಖ ಚಿಂತಕರಾದ ಯೋಗೇಂದ್ರ ಯಾದವ್ ಹಾಗೂ ಪರಕಾಲ ಪ್ರಭಾಕರ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ದೇಶಾದ್ಯಂತ ಹೋರಾಟ ರೂಪಿಸುವ ಕಾರ್ಯತಂತ್ರವನ್ನು ಪ್ರಕಟಿಸಲಾಗುವುದು ಎಂದಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ವಜಾಗೆ ತೀವ್ರಗೊಂಡ ಆಗ್ರಹ

ಮತ್ತೊಂದೆಡೆ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ, ಏಕಪಕ್ಷೀಯ ನಿರ್ಧಾರಗಳು ಮತ್ತು ಎಸ್‌ಐಆರ್ ಪ್ರಕ್ರಿಯೆಯ ಆಡಳಿತಾತ್ಮಕ ಅಕ್ರಮಗಳ ವಿರುದ್ಧ ಚುನಾವಣಾ ಆಯೋಗದ ಇನ್ನಿಬ್ಬರು ಆಯುಕ್ತರೇ ಸಾಲು ಸಾಲು ಆಕ್ಷೇಪವೆತ್ತಿರುವುದು ವಿವಾದವನ್ನು ತೀವ್ರಗೊಳಿಸಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ನಿಷ್ಪಕ್ಷಪಾತತೆಯನ್ನು ರಕ್ಷಿಸಲು ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂಬ ಆಗ್ರಹದೊಂದಿಗೆ ಸಾರ್ವಜನಿಕ ಹಾಗೂ ರಾಜಕೀಯ ಪ್ರತಿರೋಧದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹಕ್ಕು ಕಸಿಯುತ್ತಿರುವ SIR: ಸೆ.30 ರಂದು ‘SIR ಪರಿಶೋಧನಾ’ ವರದಿ ಬಿಡುಗಡೆ

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹೆಸರುಗಳು ತಾಂತ್ರಿಕ ಕಾರಣ ನೀಡಿ ಪಟ್ಟಿಯಿಂದ ಡಿಲೀಟ್ ಆಗುತ್ತಿದ್ದು, ನಾಗರಿಕರ ಮೂಲಭೂತ...

ಕರ್ನಾಟಕದಲ್ಲಿ ಇಂದಿನಿಂದ ಎಸ್‌ಐಆರ್ ‘ಕಚೇರಿ ವಿಚಾರಣೆ’ ಸ್ಥಗಿತ: ಚುನಾವಣಾ ಆಯೋಗದಿಂದ ಹೊಸ ಮಾರ್ಗದರ್ಶಿ!

ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಮತದಾರರು ಚುನಾವಣಾ ಕಚೇರಿಗಳಿಗೆ ನೇರವಾಗಿ ಹಾಜರಾಗುವ 'ಕಚೇರಿ ವಿಚಾರಣೆ' (Physical Hearing) ವ್ಯವಸ್ಥೆಯನ್ನು ಕರ್ನಾಟಕದ...

ಸಂವಿಧಾನ ಇಲ್ಲಿನ ಬಡವರ ಮನೆಗೆ ತಲುಪಿಲ್ಲ : ಕೆ. ಮೊಣ್ಣಪ್ಪ

"ಶೋಷಿತ ಸಮುದಾಯದಲ್ಲಿ ಹುಟ್ಟಿದ ನನ್ನ ತಂದೆಗೆ 12 ಜನ ಮಕ್ಕಳು. ಐದು ತಲೆಮಾರು ಬದಲಾದರೂ..ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಇಂದಿಗೂ ನಮ್ಮ ಜನರಿಗೆ ನೆಲೆ ಸಿಕ್ಕಿಲ್ಲ. ಭೂಮಾಲೀಕರು ಹೇಳಿದಂತೆ ಕೇಳಿದರೆ ಮಾತ್ರ...

ಕರ್ನಾಟಕ ಎಸ್ಐಆರ್: ‘ಕೊನೆಯ ಮತದಾರನಿಗೆ ತನ್ನ ಹಕ್ಕು ಸಿಗುವವರೆಗೂ ನನ್ನ ಹೋರಾಟ ನಿಲ್ಲಲ್ಲ’: ನಟ ಪ್ರಕಾಶ್‌ ರಾಜ್

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಬಡವರು, ಆದಿವಾಸಿಗಳು ಹಾಗೂ ದಾಖಲೆಗಳ ಕೊರತೆ ಹೊಂದಿರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿರುವ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್, ರಾಜ್ಯದ...

ಸಂಭಲ್ ಚುನಾವಣೆ ವಿವಾದ: ಸಿಇಸಿ ಅಳಿಯನ ವರದಿ ಆಧರಿಸಿ ದೂರು ವಜಾ? ಎದ್ದುನಿಂತ ‘ಸ್ವಹಿತಾಸಕ್ತಿ ಸಂಘರ್ಷ’ದ ಪ್ರಶ್ನೆ!

ಭಾರತೀಯ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಕಾರ್ಯವೈಖರಿಯ ಪಾರದರ್ಶಕತೆಯ ಕುರಿತು ‘ಸ್ಕ್ರಾಲ್.ಇನ್’ (Scroll.in) ಡಿಜಿಟಲ್ ಮಾಧ್ಯಮ ಸಂಸ್ಥೆ ಪ್ರಕಟಿಸಿರುವ ಸರಣಿ ತನಿಖಾ ವರದಿಯೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. 2024ರ ಲೋಕಸಭಾ ಚುನಾವಣೆ...

SIR | ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ : ನಟ ಪ್ರಕಾಶ್ ರಾಜ್ ಮುಂದೆ ನೋವು ತೋಡಿಕೊಂಡ ಹಾಡಿ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) 'ಪರಿಶೋಧನೆ ಮತ್ತು ಪ್ರತಿರೋಧ ಜಾಥಾ'ದ ಭಾಗವಾಗಿ ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್‌ ನೇತೃತ್ವದಲ್ಲಿ ಮಂಗಳವಾರ (ಸೆ.29) ಕೊಡಗಿನ ಪಾಲೆಮಾಡಿನಲ್ಲಿ 'ಬೃಹತ್ ಪಬ್ಲಿಕ್ ಹಿಯರಿಂಗ್'...

ದೆಹಲಿ-ಎನ್‌ಸಿಆರ್‌ನಲ್ಲಿ ಸರಣಿ ಅತ್ಯಾಚಾರ: ‘ವ್ಯವಸ್ಥಿತ ವೈಫಲ್ಯ’ ಎಂದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ‘ಅಪಾಯದ ವಲಯ’ವಾಗಲು ಬಿಡಲಾಗದು

ನವದೆಹಲಿ: ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಸರಣಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳು ಕೇವಲ ಪ್ರತ್ಯೇಕ ಅಪರಾಧಗಳಾಗಿ ನೋಡಲು ಸಾಧ್ಯವಿಲ್ಲ ಎಂದು...

ಎಲ್‌ಪಿಯು ಕ್ಯಾಂಪಸ್‌ ಹಿಂಸಾಚಾರ: ಹೆಣ್ಣುಮಕ್ಕಳಿಗೆ ‘ಹಾಸ್ಟೆಲ್‌ನೊಳಗೂ ಸುರಕ್ಷತೆ ಇಲ್ಲದಿದ್ದರೆ ಅದು ಗಂಭೀರ ಸಮಸ್ಯೆ’: ಅಭಿಜೀತ್ ದೀಪ್ಕೆ 

ಫಾಗ್ವಾರಾ: ಪಂಜಾಬ್‌ನ ಫಾಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ (ಎಲ್‌ಪಿಯು) ಕ್ಯಾಂಪಸ್‌ನಲ್ಲಿ ವಾರಾಂತ್ಯದಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಘಟನೆಗಳ ಬೆನ್ನಲ್ಲೇ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ...

ಉಜ್ಜಯಿನಿ ಶಾಹಿ ಮಸೀದಿ ವಿವಾದ: ರಸ್ತೆ ಅಗಲೀಕರಣಕ್ಕಾಗಿ ಭಾಗಶಃ ಕೆಡವುವಿಕೆಯ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ 

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಸೋಮವಾರ, ಸೆಪ್ಟೆಂಬರ್ 28ರಂದು ವಿಲೇವಾರಿ ಮಾಡಿದೆ. ಮಸೀದಿ...

ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಗ್ಯಾನೇಶ್ ಕುಮಾರ್‌ ಅಮಾನತುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಇತರ ಪರಿಹಾರಗಳ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅದರ ಮುಖ್ಯಸ್ಥರು ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುವುದಾಗಿ ಘೋಷಿಸಬೇಕು...