Homeಮುಖಪುಟಗ್ಯಾನೇಶ್ ಕುಮಾರ್ ವಿರುದ್ಧದ ಹಳೆಯ ಭ್ರಷ್ಟಾಚಾರದ ಕಡತ ತರಿಸಿಕೊಂಡ ಕೇರಳಂ ಸರ್ಕಾರ

ಗ್ಯಾನೇಶ್ ಕುಮಾರ್ ವಿರುದ್ಧದ ಹಳೆಯ ಭ್ರಷ್ಟಾಚಾರದ ಕಡತ ತರಿಸಿಕೊಂಡ ಕೇರಳಂ ಸರ್ಕಾರ

- Advertisement -
- Advertisement -

ದೇಶಾದ್ಯಂತ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ ‘ಇಂಡಿಯಾ’ (INDIA) ಒಕ್ಕೂಟವು ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರಿಗೆ ಭಾರಿ ಹಿನ್ನಡೆಯಾಗುವಂತಹ ರಾಜಕೀಯ ತಲ್ಲಣವೊಂದು ಕೇರಳದಲ್ಲಿ ಸಂಭವಿಸಿದೆ.

ಪ್ರಸ್ತುತ ಸಿಇಸಿ ಆಗಿರುವ ಗ್ಯಾನೇಶ್ ಕುಮಾರ್ ಅವರು 2006ರಲ್ಲಿ ಕೇರಳ ಸರ್ಕಾರದ ಲೋಕೋಪಯೋಗಿ ಇಲಾಖೆಯ (PWD) ಕಾರ್ಯದರ್ಶಿಯಾಗಿದ್ದಾಗ ಅವರ ವಿರುದ್ಧ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ್ದ ಪ್ರಾಥಮಿಕ ತನಿಖೆಯ ಹಳೆಯ ರಹಸ್ಯ ಕಡತಗಳನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ನೇತೃತ್ವದ ಕೇರಳ ಗೃಹ ಇಲಾಖೆಯು ತರಿಸಿಕೊಂಡಿದೆ ಎಂದು ‘ನ್ಯೂ ಇಂಡಿಯನ್ ಎಕ್ಸ್‌‌ಪ್ರೆಸ್’ ವರದಿ ಮಾಡಿದೆ.

ಸುಮಾರು ಎರಡು ದಶಕಗಳ ಹಿಂದೆ, ಬಹುಕೋಟಿ ರೂಪಾಯಿ ವೆಚ್ಚದ ಕೇರಳ ರಾಜ್ಯ ಸಾರಿಗೆ ಯೋಜನೆಯಡಿ (KSTP) ಎಂ.ಸಿ. ರಸ್ತೆಯ ಮೇಲ್ದರ್ಜೆಗೇರಿಸುವ ಪ್ರಮುಖ ಕಾಮಗಾರಿಯ ಹೊಣೆ ಹೊತ್ತಿದ್ದ ಇಂಡೋ-ಮಲೇಷ್ಯನ್ ಜಂಟಿ ಸಂಸ್ಥೆಯ ‘ಪಿಎಟಿಐ-ಬಿಇಎಲ್’ (PATI-BEL) ಮುಖ್ಯ ಯೋಜನಾ ವ್ಯವಸ್ಥಾಪಕರಾಗಿದ್ದ ಲೀ ಸೀ ಬೀನ್ ಎಂಬ ಮಲೇಷ್ಯನ್ ಸಿವಿಲ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸರ್ಕಾರಿ ಅಧಿಕಾರಿಗಳು ಕಾಮಗಾರಿಯ ಕೋಟ್ಯಂತರ ರೂಪಾಯಿ ಬಾಕಿ ಬಿಲ್‌ಗಳನ್ನು ಮಂಜೂರು ಮಾಡದೆ, ಭ್ರಷ್ಟಾಚಾರಕ್ಕಾಗಿ ಅಸಹಕಾರ ತೋರಿ ಕಿರುಕುಳ ನೀಡಿದ್ದರಿಂದ ಬೇಸತ್ತ ಬೀನ್, ಸ್ವದೇಶಕ್ಕೆ ಮರಳಿದ ಬಳಿಕ ಕೌಲಾಲಂಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 1988ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಜ್ಞಾನೇಶ್ ಕುಮಾರ್ ಹೆಸರು ಈ ಮಲೇಷ್ಯನ್ ಎಂಜಿನಿಯರ್ ಬರೆದಿಟ್ಟಿದ್ದ ಭೀಕರ ‘ಡೆತ್‌ನೋಟ್’‌ನಲ್ಲಿ ನೇರವಾಗಿ ಉಲ್ಲೇಖವಾಗಿತ್ತು.

ಆ ಸಮಯದಲ್ಲಿ ಯೋಜನೆ ಅನುಷ್ಠಾನದಲ್ಲಿದ್ದ ಭ್ರಷ್ಟಾಚಾರದ ಜಾಲ ಮತ್ತು ಕಮಿಷನ್ ದಂಧೆಯನ್ನು ಲೀ ಅವರ ಆತ್ಮಹತ್ಯಾ ಪತ್ರವು ಬೆತ್ತಲೆಗೊಳಿಸಿತ್ತು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿವಾದ ಸೃಷ್ಟಿಸಿದ ಬಳಿಕ ತನಿಖೆಗೆ ಆದೇಶಿಸಲಾಗಿತ್ತು. ಆದರೆ, ಪ್ರಭಾವಿ ಅಧಿಕಾರಿಗಳ ಕೈವಾಡದಿಂದಾಗಿ ಈ ತನಿಖೆಯು ನನೆಗುದಿಗೆ ಬಿದ್ದು ಸ್ಥಗಿತಗೊಂಡಿತ್ತು. ಪ್ರಮುಖ ದಾಖಲೆಗಳು ಮತ್ತು ಕಡತಗಳು ಪತ್ತೆಯಾಗದಂತೆ ಮುಚ್ಚಿಹಾಕಲಾಗಿತ್ತು. ಆದರೆ, ಇದೀಗ ದೇಶಾದ್ಯಂತ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಮತದಾರರ ಪಟ್ಟಿ ಅಕ್ರಮದ ಜನಾಕ್ರೋಶ ಮುಗಿಲುಮುಟ್ಟಿರುವ ಬೆನ್ನಲ್ಲೇ, ಸತೀಶನ್ ನೇತೃತ್ವದ ಕೇರಳದ ಯುಡಿಎಫ್ ಸರ್ಕಾರವು ಈ ಹಳೆಯ ಭ್ರಷ್ಟಾಚಾರ ಮತ್ತು ಆತ್ಮಹತ್ಯೆ ಪ್ರಕರಣದ ಫೈಲ್‌ಗಳನ್ನು ಮತ್ತೆ ತರಿಸಿಕೊಂಡು ಮರುಪರಿಶೀಲನೆಗೆ ಮುಂದಾಗಿರುವುದು ಕೇಂದ್ರಕ್ಕೆ ಮತ್ತು ಆಯೋಗಕ್ಕೆ ಭಾರಿ ಬಿಸಿ ಮುಟ್ಟಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ; ಮುಂಬೈನ ಶಿವಾಜಿ ಪಾರ್ಕ್‌ಗೆ ಹರಿದುಬಂದ ಪ್ರತಿಭಟನಾಕಾರರು

ಮುಂಬೈನಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರೂ ಸಹ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರಾಚ್ ಜನತಾ ಪಾರ್ಟಿ' (ಸಿಜೆಪಿ) ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಶುಕ್ರವಾರ (ಅ.2)...

ಫೇಸ್‌ಬುಕ್ ಪೋಸ್ಟ್ ವಿವಾದ: ಉದ್ಯಮಿ ದೂರು ಆಧರಿಸಿ ‘ಮೊಹಮ್ಮದ್’ ದೀಪಕ್ ಬಂಧನ; ಕೋಟ್‌ದ್ವಾರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

ಉತ್ತರಾಖಂಡದ ಕೋಟ್‌ದ್ವಾರದಲ್ಲಿ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಸ್ಥಳೀಯ ಉದ್ಯಮಿ ಸಂಜೀವ್ ಟೋಂಕ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೀಪಕ್ ಕುಮಾರ್ ಅವರನ್ನು ಅಕ್ಟೋಬರ್ 1ರಂದು ಬಂಧಿಸಿದ್ದಾರೆ.  ಜನವರಿ 26ರಂದು ಮುಸ್ಲಿಂ...

ದಾಖಲೆ ಇಲ್ಲದ ಮಾತ್ರಕ್ಕೆ ಜಾನುವಾರು ಸಾಗಾಟ ‘ವಧೆಗಾಗಿ’ ಎಂದು ಊಹಿಸಲಾಗದು: ಸುಪ್ರೀಂ ಕೋರ್ಟ್

ಜಾನುವಾರುಗಳನ್ನು ಸಾಗಿಸುವಾಗ ಸೂಕ್ತ ದಾಖಲೆಗಳು ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಅವುಗಳನ್ನು ವಧೆಯ ಉದ್ದೇಶಕ್ಕಾಗಿಯೇ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 32 ಎತ್ತುಗಳನ್ನು ವಧೆಗಾಗಿ...

ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಎರಡೇ ದಿನಗಳಲ್ಲಿ ಇಬ್ಬರು ಬಲಿ

ಗಾಳಿಪಟ ಹಾರಿಸುವ ಸಂಭ್ರಮವು ಬೆಳಗಾವಿ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ನಗರದಲ್ಲಿ ಅಪಾಯಕಾರಿ ಮಾಂಜಾ ದಾರ ಮತ್ತು ಗಾಳಿಪಟದ ಹುಚ್ಚಾಟಕ್ಕೆ ಕೇವಲ ಎರಡೇ ದಿನಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಭೀಕರ...

‘ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು..’; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

"ಬಿರಿಯಾನಿ ತಿನ್ನಲು ಹುಟ್ಟಿದವರು ಪ್ರಾಣಿಗಳು," ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುರುವಾರ ಹೇಳಿದ್ದಾರೆ. ಭಗವಂತ ತಮ್ಮನ್ನು ಈ ಜಗತ್ತಿಗೆ ಈ ಖಾದ್ಯವನ್ನು ಸವಿಯಲು ಕಳುಹಿಸಿದ್ದಾನೆ ಎಂಬ ಕಾಂಗ್ರೆಸ್ ಸಂಸದ ರಕೀಬುಲ್...

ಹೈದರಾಬಾದ್‌ ಎಸ್‌ಐಆರ್ ಪ್ರಕ್ರಿಯೆ; ಸುಮಾರು 5,000 ‘ಫಾರ್ಮ್- 7’ ಅರ್ಜಿ ಸಲ್ಲಿಕೆ

ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್), ಹೈದರಾಬಾದ್‌ನಲ್ಲಿ ಸುಮಾರು 5,000 ‘ಫಾರ್ಮ್ 7’ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಮಾಧ್ಯಮ ವರದಿಗಳ...

ಎಸ್‌ಐಆರ್ ಅಕ್ರಮ ವಿರೋಧಿ ಪ್ರತಿಭಟನೆಗೆ ಪೊಲೀಸ್ ತಡೆ: ನವದೆಹಲಿಯಲ್ಲಿ ಸೆಕ್ಷನ್ 163 ಜಾರಿ, 11 ಮೆಟ್ರೋ ನಿಲ್ದಾಣ ಬಂದ್!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಗಾಂಧಿ ಜಯಂತಿಯ ದಿನವಾದ ಇಂದು (ಅಕ್ಟೋಬರ್...

ಮತಹಕ್ಕು ನಿರಾಕರಣೆಗೆ 1924ರಲ್ಲೇ ಮಹಾತ್ಮ ಗಾಂಧೀಜಿ ನೀಡಿದ್ದ ಪ್ರತಿಕ್ರಿಯೆ ಇಂದಿಗೂ ಪ್ರಸ್ತುತ

ಭಾರತವು ತನ್ನ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಮೌಲ್ಯಗಳನ್ನು ಹಾಗೂ ತನ್ನ ಶ್ರೇಷ್ಠ ನಾಯಕರು ಎತ್ತಿಹಿಡಿದ ತತ್ವಗಳನ್ನು ಕಳೆದುಕೊಳ್ಳುವ ಅಂಚಿನಲ್ಲಿದೆ. ನಮ್ಮ ಸಾಮೂಹಿಕ ಜೀವನದಲ್ಲಿ ಅವುಗಳನ್ನು ತಕ್ಷಣವೇ ರಕ್ಷಿಸಿ ಮರುಸ್ಥಾಪಿಸಬೇಕಾಗಿದೆ. ಗಾಂಧೀಜಿಯವರು ನಮಗೆ ಕೇವಲ...

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು: ಎಸ್‌ಐಆರ್ ಅಕ್ರಮ ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದಿಂದ ಇಂದಿನಿಂದ ರಾಷ್ಟ್ರವ್ಯಾಪಿ ‘ಪ್ರಜಾಪ್ರಭುತ್ವ ರಕ್ಷಿಸಿ’ ಅಭಿಯಾನ!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಅಕ್ರಮಗಳು ಹಾಗೂ ಮತದಾರರ ಪಟ್ಟಿಯಿಂದ ಅರ್ಹ ನಾಗರಿಕರ ಹೆಸರು ರದ್ದುಗೊಳಿಸಿರುವುದನ್ನು ಖಂಡಿಸಿ 'ಇಂಡಿಯಾ' ಮೈತ್ರಿಕೂಟ ಮತ್ತು ವಿವಿಧ ಪ್ರಜಾಸತ್ತಾತ್ಮಕ ಸಂಘಟನೆಗಳು ಗಾಂಧಿ ಜಯಂತಿಯಾದ...

SIR: ಭಾಲ್ಕಿಯಲ್ಲಿ 3,244 ಮತದಾರರ ಹೆಸರು ಡಿಲೀಟ್‌ಗೆ ಸುಳ್ಳು ಫಾರಂ-7 ಸೃಷ್ಟಿ, 32 ಜನರ ವಿರುದ್ಧ FIR

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಬಡವರು, ಅಲ್ಪಸಂಖ್ಯಾತರು ಹಾಗೂ ಅವಿದ್ಯಾವಂತ ಮತದಾರರ ಹೆಸರುಗಳನ್ನು ಯೋಜಿತವಾಗಿ ಡಿಲೀಟ್ ಮಾಡಲು ಹೊರಟ ಬೃಹತ್ ಜಾಲವೊಂದು ಬೀದರ್ ಜಿಲ್ಲೆಯಲ್ಲಿ ಬಯಲಾಗಿದೆ....